ಸೃಜನಶೀಲತೆಗೆ ಹೆಸರುವಾಸಿಯಾದ ಮೀನ ರಾಶಿಯವರ ಗುಣ ಸ್ವಭಾವ ಹೇಗಿದೆ ಗೊತ್ತಾ?
ಮೀನ ರಾಶಿಯವರು ದಯೆ, ಪ್ರೀತಿ, ಪ್ರಾಮಾಣಿಕತೆ ಹಾಗೂ ಸಹಾನುಭೂತಿಯುಳ್ಳವರು. ವಿನಯಶೀಲರೂ, ಸಹಾಯ ಮಾಡುವ ಗುಣದವರು ಹಾಗೂ ಮಾನವೀಯತೆಯುಳ್ಳವರಾಗಿದ್ದಾರೆ. ಸರಳ ಮತ್ತು ಶಾಂತ ಸ್ವಭಾದವರಾದ ಇವರು ತಮ್ಮಸುತ್ತಮುತ್ತಲೂ ಸುರಕ್ಷತೆ ಹಾಗೂ ಸ್ನೇಹಶೀಲತೆಯ ಭಾವನೆಯನ್ನು ಹೊಂದಲು ಹಾಗೂ ಬೆಳೆಸಲು ಬಯಸುತ್ತಾರೆ. ಇವರ ಸ್ವಭಾವದ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ.
ದಶ ರಾಶಿಗಳಲ್ಲಿ ಕೊನೆಯ ರಾಶಿ ಅಂದರೆ ಹನ್ನೆರಡನೇ ರಾಶಿಯೇ ಮೀನ ರಾಶಿ. ಉಳಿದ ಹನ್ನೊಂದು ರಾಶಿಗಳಿಗಿಂತ ಭಿನ್ನವಾದ ವ್ಯಕ್ತಿತ್ವ ಇವರದ್ದು. ಕನಸು ಹಾಗೂ ಪ್ರಣಯದ ಸಂಕೇತವಾದ ಈ ರಾಶಿಯವರು ತಮ್ಮ ಸೃಜನಶೀಲತೆಗೆ ಹೆಸರುವಾಸಿ. ಅನೇಕರು ಉದಾರತೆ ಹಾಗೂ ಸಹಾನುಭೂತಿಯುಳ್ಳವರು. ಮೀನರಾಶಿಯವರು ನಿಸ್ವಾರ್ಥಿಗಳು ಆದರೆ ಇತರರಿಗೆ ಇವರು ನಿಷ್ಠುರರಾಗಿ ಕಾಣಬಹುದು. ಇವರ ವ್ಯಕ್ತಿತ್ವ, ಒಳ್ಳೆಯ ಗುಣಗಳು ಹಾಗೂ ಕೆಟ್ಟ ಗುಣಗಳ ಕುರಿತಾದ ಮಾಹಿತಿ ಇಲ್ಲಿದೆ.
ಮೀನ ರಾಶಿಯವರ ವ್ಯಕ್ತಿತ್ವ
ಮೀನ ರಾಶಿಯವರ ಸ್ವಭಾವ
ಎರಡು ಮೀನುಗಳು ವಿರುದ್ಧ ದಿಕ್ಕಿನಲ್ಲಿ ಚಲಿಸುವ ಸಂಕೇತವಿರುವ ಈ ರಾಶಿಯವರು ಉಭಯ ಸ್ವಭಾವದವರು. ಕೆಲವೊಮ್ಮೆ ಇವರು ಅಪಾಯಕಾರಿಯಂತೆ ವರ್ತಿಸಬಹುದು. ಕೆಲವೊಮ್ಮೆ ಮೃದುಸ್ವಭಾವದವರಂತೆ ಕಾಣುತ್ತಾರೆ. ಇವರು ಉತ್ತಮ ಪ್ರತಿಭಾವಂತರು ಹಾಗೂ ವಿವಿಧ ಪರಿಸರಗಳಿಗೆ ಸುಲಭವಾಗಿ ಹೊಂದಿಕೊಳ್ಳುವಂತಹ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಇವರು ಇತರರಿಗೂ ತಮ್ಮ ಜ್ಞಾನವನ್ನು ಕಲಿಸಿಕೊಡುತ್ತಾರೆ. ಇತರರ ಇಚ್ಛೆಗಳಿಗೂ ಅವಕಾಶ ನೀಡುತ್ತಾರೆ. ಇವರೊಳಗಿನ ಆಳವಾದ ಸಾಮರ್ಥ್ಯವು ಬಹಳ ಸ್ವತಂತ್ರವಾಗಿರುತ್ತದೆ. ಇವರ ಮುಖ್ಯ ಲಕ್ಷಣವೆಂದರೆ ಕನಸುಗಾರರು. ತಮ್ಮ ಕಲ್ಪನಾ ಲೋಕದಲ್ಲಿ ಜೀವಿಸಲು ಇಷ್ಟಪಡುತ್ತಾರೆ. ವಾಸ್ತವತೆಗೆ ಇದು ಕೆಲವೊಮ್ಮೆ ದೂರವಿರಬಹುದು. ಇವರು ಬಹಳ ಆಕರ್ಷಕ ಸ್ವಭಾವದವರು ಜನರು ಇವರ ನಕಾರಾತ್ಮಕ ಸ್ವಭಾವಗಳನ್ನು ಬದಿಗೊತ್ತಿ, ಸಕಾರಾತ್ಮಕ ಸ್ವಭಾವವನ್ನು ಇಷ್ಟಪಡುತ್ತಾರೆ. ಇವರು ತುಂಬಾ ರೊಮ್ಯಾಂಟಿಕ್ ಸ್ವಭಾವದವರು. ವಿವಾದಗಳನ್ನು ತಪ್ಪಿಸಿ, ವಾಸ್ತವದ ಕಹಿ ಸತ್ಯಗಳನ್ನು ಎದುರಿಸುವಾಗ ಖಿನ್ನರಾಗುತ್ತಾರೆ ಹೀಗೆಯೇ ದುರ್ಬಲರಾಗುತ್ತಾರೆ.
ಪ್ರೀತಿ- ಸ್ನೇಹ ಸಂಬಂಧಗಳಲ್ಲಿ ಮೀನ ರಾಶಿಯವರು
ಆರೋಗ್ಯ
ಮೀನ ರಾಶಿಯವರು ಅತ್ಯಂತ ಸೂಕ್ಷ್ಮವಾದ ಭೌತಿಕ ರಚನೆಯನ್ನು ಹೊಂದಿದ್ದಾರೆ. ಇವರ ಪಾದಗಳು, ಉಸಿರಾಟ ಮತ್ತು ರಕ್ತಪರಿಚಲನಾ ವ್ಯವಸ್ಥೆಯ ಸಮಸ್ಯೆಯು ಕಾಡಬಹುದು. ಇದಲ್ಲದೆ ಇವರು ಬಹಳ ಸೂಕ್ಷ್ಮದವರು, ಸುಲಭವಾಗಿ ಜಂಕ್‌ಫುಡ್‌ನತ್ತ ವಾಲುತ್ತಾರೆ. ಹೀಗಾಗಿ ಇದು ಅಧಿಕ ತೂಕಕ್ಕೂ ಕಾರಣವಾಗಬಹುದು ಮತ್ತು ವ್ಯಸನಗಳಿಗೆ ಕಾರಣವಾಗಬಹುದು. ಸಣ್ಣ ಕಾಲೋಚಿತ ಬದಲಾವಣೆಗಳೂ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕಾಲುಗಳಲ್ಲಿ ಸಂಧಿವಾತ ಅಥವಾ ರಕ್ತಪರಿಚಲನೆಯ ಸಮಸ್ಯೆ ಇರಬಹುದು.
ಮೀನ ರಾಶಿಯವರ ಸಕಾರಾತ್ಮಕ ಹಾಗೂ ನಕಾರಾತ್ಮಕ ಗುಣಲಕ್ಷಣಗಳು
ಮೀನ ರಾಶಿಯವರು ಉದಾರತೆಯುಳ್ಳವರು ಹಾಗೂ ಭಾವುಕರು. ಎಲ್ಲರಿಗೂ ನಿಜವಾದ ಸ್ನೇಹಿತರಾಗಿರುವುದರಿಂದ ಇವರು ಸಾಮಾಜಿಕ ವಲಯದಲ್ಲಿ ಜನಪ್ರಿಯರಾಗಿರುತ್ತಾರೆ. ಮಾನವಸಂಬಂಧಗಳನ್ನು ಹೆಚ್ಚು ಗೌರವಿಸುತ್ತಾರೆ. ಇವರು ಪ್ರೀತಿಸುವ ಸಂಗಾತಿಯನ್ನು ಎಲ್ಲರಿಗಿಂತ ಹೆಚ್ಚಾಗಿ ಮೇಲಿಡುತ್ತಾರೆ. ಸ್ಪೂರ್ತಿದಾಯಕ, ಆತಿಥ್ಯ, ಶಾಂತಿಪ್ರಿಯ, ಅರ್ಥಗರ್ಭಿತ, ಕ್ರಮಬದ್ಧ, ಸಹಾನುಭೂತಿ, ದಯೆ, ಸೃಜನಶೀಲ, ಕಾಲ್ಪನಿಕ ಹಾಗೂ ಸೂಕ್ಷ್ಮತೆ ಇವರ ಸಕಾರಾತ್ಮಕ ಸ್ವಭಾವಗಳಾದರೆ, ನಿರಾಶಾವಾದ, ಆಲಸ್ಯ, ಅಸಡ್ಡೆ, ನಿರ್ಣಯಿಸಲಾಗದ ಗುಣ, ಅಧೀನ, ಅಂಜುಬುರುಕ, ಅತೀ ಸೂಕ್ಷ್ಮ, ಮೂಡಿ ಹಾಗೂ ನಕಾರಾತ್ಮಕತೆ ಇವರ ಕೆಟ್ಟ ಸ್ವಭಾವಗಳು.