ನವಿಲು

ನವಿಲಿನ ಮೊಟ್ಟೆ ಕದಿಯಲು ಹೋದವನಿಗೆ ಕಾದಿತ್ತು ಆಪತ್ತು: ತಟ್ಟನೆ ಬಂದ ನವಿಲು ಸರಿಯಾದ ಪಾಠ ಕಲಿಸಿತ್ತು

CINEMA/ಸಿನಿಮಾ

ಸೋಶಿಯಲ್ ಮೀಡಿಯಾದಲ್ಲಿ ಹಾಸ್ಯ, ನಗು ಅಥವಾ ತಮಾಷೆಯ ಸನ್ನಿವೇಶಗಳನ್ನು ಒಳಗೊಂಡ ಹತ್ತು ಹಲವು ವಿಡಿಯೋಗಳು ನೋಡಲು ಸಿಗುತ್ತವೆ. ಅಲ್ಲದೇ ಪ್ರತಿದಿನ ಇಂತಹ ಇನ್ನೊಂದಿಷ್ಟು ವೀಡಿಯೋಗಳು ಸಹಾ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಆಗುತ್ತಲೇ ಇರುತ್ತವೆ. ಹೀಗೆ ಇಂತಹ ವೀಡಿಯೋಗಳು ಎಷ್ಟೇ ಬಂದರೂ ಸಹಾ ಅದು ಮನಸ್ಸಿಗೆ ಖುಷಿಯನ್ನು ನೀಡುವ ಹಾಗೆ ಇದ್ದರೆ ಜನರು ಅವುಗಳನ್ನು ಬಹಳ ಇಷ್ಟ ಪಟ್ಟು ನೋಡುತ್ತಾರೆ ಹಾಗೂ ಮೆಚ್ಚುಗೆಯನ್ನು ನೀಡುತ್ತಾರೆ.

ಈಗ ಇದೇ ಹಿನ್ನೆಲೆಯ ಒಂದು ವೀಡಿಯೋ ವೈರಲ್ ಆಗುತ್ತಾ ಸಾಗಿದೆ. ಈ ವೀಡಿಯೋದಲ್ಲಿ ವ್ಯಕ್ತಿಯೊಬ್ಬನು ತಾನು ಮಾಡಿದ ಕೆಲಸಕ್ಕೆ ತಕ್ಕ ಫಲಿತಾಂಶವನ್ನು ಪಡೆಯುವ ಸನ್ನಿವೇಶವನ್ನು ನಾವು ನೋಡಬಹುದಾಗಿದೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಈ ವೀಡಿಯೋ ವೈರಲ್ ಆಗುತ್ತಿದೆ.‌ ಇದರಲ್ಲಿ ಒಬ್ಬ ವ್ಯಕ್ತಿಯು ತಾನು ಮಾಡಿದ ಕೆಲಸಕ್ಕೆ ಕೆಲವೇ ಕ್ಷಣಗಳ ನಂತರ ತಕ್ಕ ಶಿ’ ಕ್ಷೆಗೆ ಒಳಗಾಗುವುದನ್ನು ನಾವು ನೋಡಬಹುದು.

ಒಂದು ನವಿಲು ಮೊಟ್ಟೆ ಇಡುತ್ತದೆ, ಅದನ್ನು ಗಮನಿಸಿದ ವ್ಯಕ್ತಿಯೊಬ್ಬರು ನವಿಲು ಅಲ್ಲಿಂದ ಸ್ವಲ್ಪ ದೂರ ಹೋದ ಮೇಲೆ ತಾನು ಆ ಮೊಟ್ಟೆಯನ್ನು ಪಡೆಯಬಹುದು ಎಂದು ಆಲೋಚನೆ ಮಾಡಿ, ಅನಂತರ ಏನು ಮಾಡಿದ, ಅದರ ಪ್ರತಿಫಲ ಏನಾಯ್ತು ಎನ್ನುವುದು ಈ ವೀಡಿಯೋದಲ್ಲಿ ದಾಖಲಾಗಿದೆ. ಆ ವ್ಯಕ್ತಿ ಮಾಡಿದ ಆಲೋಚನೆಯಂತೆ ಮೊಟ್ಟೆಯಿಂದ ನವಿಲು ದೂರ ಹೋಗಿ ಕುಳಿತಾಗ, ಅವನಿಗೆ ಮೊಟ್ಟೆ ಎತ್ತಿಕೊಳ್ಳಲು ಒಂದು ಉತ್ತಮ ಅವಕಾಶ ದೊರೆಯುತ್ತದೆ.‌

ಆದರೆ ಅವನು ಮೊಟ್ಟೆ ಕದಿಯಲು ಬಂದಿರುವುದನ್ನು ದೂರದಿಂದಲೇ ಗಮನಿಸಿದ ನವಿಲಿಗೆ ಅವನ ಆಲೋಚನೆಯು ಅರ್ಥವಾಗಿದೆ. ಅದು ತಡ ಮಾಡದೇ ಮೊಟ್ಟೆ ಕದಿಯಲು ಬಂದವನ ಮೇಲೆ ಧಾಳಿ ಮಾಡಿದೆ. ನವಿಲಿನ ಮುಂದೆ ತನ್ನ ಚಾಲಾಕಿತನ ಪ್ರದರ್ಶನ ಮಾಡಲು ಹೊರಟವನಿಗೆ ನವಿಲು ಸರಿಯಾಗಿ ಪಾಠವನ್ನು ಹೇಳಿದೆ. ನವಿಲು ಮೈ ಎಲ್ಲಾ ಕಣ್ಣಾಗಿ ತನ್ನ ಮೊಟ್ಟೆಯ ಬಗ್ಗೆ ಎಚ್ಚರದಿಂದ ಇರುವುದನ್ನು ನೋಡಬಹುದು.

ಈ ಒಂದು ವಿಶೇಷ ಹಾಗೂ ಅಚ್ಚರಿಯ ಸನ್ನಿವೇಶದ ವೀಡಿಯೊವನ್ನು beautifulfulgram ಎನ್ನುವ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಲಾಗಿದೆ. ಈ ವೀಡಿಯೊವನ್ನು ಈಗಾಗಲೇ 1.8 ಮಿಲಿಯನ್ ಜನರು ವೀಕ್ಷಿಸಿದ್ದಾರೆ ಮತ್ತು ಅಸಂಖ್ಯಾತ ಜನರು ಇದನ್ನು ಇಷ್ಟಪಟ್ಟಿದ್ದಾರೆ. ಬಹುತೇಕ ಎಲ್ಲ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೊಗೆ ಅನೇಕ ಜನರು ತಮ್ಮ ಪ್ರತಿಕ್ರಿಯೆಯನ್ನು ಕಾಮೆಂಟ್ ಮೂಲಕ ವ್ಯಕ್ತಪಡಿಸಿದ್ದಾರೆ.

ಒಬ್ಬ ಇನ್ಸ್ಟಾಗ್ರಾಂ ಬಳಕೆದಾರರು ತಮ್ಮ ಕಾಮೆಂಟ್ ನಲ್ಲಿ, “ಒಳ್ಳೆಯದು! ಅವನು ಅದಕ್ಕೆ ಅರ್ಹ” ಎಂದು ಬರೆದು ನವಿಲು ಮಾಡಿದ್ದು ಸರಿ ಎಂದಿದ್ದಾರೆ. ಇನ್ನೊಬ್ಬ ಇನ್ಸ್ಟಾಗ್ರಾಂ ಬಳಕೆದಾರರು ಕಾಮೆಂಟ್ ಮಾಡುತ್ತಾ “ದುರಾಸೆಯು ಮನುಷ್ಯನನ್ನು ಕುರುಡನನ್ನಾಗಿ ಮಾಡಿತು” ಎಂದಿದ್ದಾರೆ. ಬಹಳಷ್ಟು ಜನರು ಕಾಮೆಂಟ್ ವಿಭಾಗದಲ್ಲಿ ಮೊಟ್ಟೆ ಕದಿಯಲು ಹೊರಟಿದ್ದ ಆ ವ್ಯಕ್ತಿಯನ್ನು ಖಂ’ ಡಿಸಿದ್ದಾರೆ.

ಆ ವಿಡಿಯೊ ಕೆಳಗಿದೆ ನೋಡಿ…

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.