PHYTHON

ತೆಂಗಿನ ಮರವನ್ನು ಏರುತ್ತಿರುವ ಬೃಹತ್ ಗಾತ್ರದ ಹೆಬ್ಬಾವು! ಹೆಬ್ಬಾವಿನ ಮರ ಏರುವ ಟೆಕ್ನಿಕ್ ನೋಡಿ ‘ವಾವ್’ ಎಂದ ಜನ!

Entertainment/ಮನರಂಜನೆ

ಇದು ಅದ್ಭುತ, ರಮಣೀಯ ಎನ್ನುವುದಕ್ಕಿಂತ ರುದ್ರ ರಮಣೀಯ ಎಂದರೆ ಸೂಕ್ತ ಎನಿಸುವುದೇನೋ? ಏನಿದು ಎಂದುಕೊಂಡಿರಾ? ಖಚಿತವಾಗಿ ವಿಷಯ ತಿಳಿದ ಮೇಲೆ ನೀವು ಬಹುಶಃ ನಮಗಿಂತ ಹೆಚ್ಚಿನ ಹಾಗೂ ಉತ್ತಮ ಶಬ್ದಗಳಿಂದಲೇ ನಾವು ಹೇಳಲು ಹೊರಟಿರುವ ಸನ್ನಿವೇಶದ ಬಗ್ಗೆ ಬಣ್ಣಿಸಬಹುದು ಅಥವಾ ವರ್ಣಸಬಹುದು ಎಂಬುದಂತೂ ಸತ್ಯ. ನಮ್ಮ ಸುತ್ತ ಮುತ್ತಲಿನ ಪರಿಸರದಲ್ಲಿ ಅದೆಷ್ಟೋ ಅದ್ಭುತ ಎನ್ನುವಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ‌. ಆದರೆ ಅದನ್ನೆಲ್ಲಾ ಗಮನಿಸಲು ನಮಗೆ ಸಮಯ ದೊರೆಯುವುದಿಲ್ಲ, ಇನ್ನು ನಗರವಾಸಿಗಳಾದರೆ ಅವರಿಗೆ ಇಂತಹ ಪ್ರಕೃತಿಯ ದರ್ಶನವೇ ದುರ್ಲಭವಾಗಿರುವಾಗ ಅದ್ಭುತ ಎನಿಸುವ ದೃಶ್ಯಗಳು ಕಾಣುವುದಾದರೂ ಹೇಗೆ ಸಾಧ್ಯ ಅಲ್ಲವೇ?

ಆದರೆ ಸೋಷಿಯಲ್ ಮೀಡಿಯಾಗಳು ಇರುವುದರಿಂದ ಇಂದು ನಾವು ಅನೇಕ ಅದ್ಭುತ, ಕುತೂಹಲಕಾರಿ, ರೋಮಾಂಚನ ಎನಿಸುವ ವೀಡಿಯೋಗಳನ್ನು ನೋಡಿ ನಮ್ಮ ಕಣ್ತುಂಬಿಕೊಳ್ಳಬಹುದು. ಈಗ ಟ್ವಿಟರ್ ನಲ್ಲಿ ಇಂತಹುದೇ ಒಂದು ರೋಮಾಂಚನ ಎನಿಸುವ, ಮೈನವಿರೇಳಿಸುವ ವಿಡಿಯೋ ಒಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಾ ಸಾಗುತ್ತಿದ್ದು, ನೋಡಿದವರೆಲ್ಲರೂ ಕೂಡಾ ಅಬ್ಬಾ ಅದ್ಭುತ ಈ ದೃಶ್ಯ ಎಂದು ಉದ್ಗಾರ ಮಾಡಿದರೆ, ಅನೇಕರು ಕಾಮೆಂಟ್ ಗಳ ಮೂಲಕ ತಮ್ಮ ಅನುಭವದ ಕುರಿತಾಗಿ ಹೇಳುತ್ತಿದ್ದಾರೆ.

ನೇಚರ್ ಈಸ್ ಲಿಟ್ ಎನ್ನುವ ಟ್ವಿಟರ್ ಬಳಕೆದಾರರು ಇದೇ  ನಿನ್ನೆ ಒಂದು ವೀಡಿಯೋ ಶೇರ್ ಮಾಡಿದ್ದು, ಈ ವೀಡಿಯೋವನ್ನು ಈಗಾಗಲೇ 75 ಸಾವಿರಕ್ಕೂ ಅಧಿಕ ಜನ ವೀಕ್ಷಣೆ ಮಾಡಿದ್ದು ಒಂದು ಲಕ್ಷ ವೀಕ್ಷಣೆಯ ಕಡೆಗೆ ದಾಪುಗಾಲು ಹಾಕುತ್ತಿದೆ. ಈ ಮಟ್ಟದ ಅದ್ಭುತ ಏನಿದೆ ಆ‌ ವೀಡಿಯೋದಲ್ಲಿ ಎನ್ನುವುದಾದರೆ, ನಿಜಕ್ಕೂ ಅಲ್ಲಿ ಇರುವುದು ಅದ್ಭುತವೇ ಹಾಗೂ ಪ್ರಕೃತಿಯ ಮಡಲಿನ ಒಂದು ವಿಸ್ಮಯವೇ ಅಥವಾ ಪ್ರಕೃತಿ ತನ್ನ ಮಡಿಲಲ್ಲಿ ಇರುವ ಜೀವಿಗಳಿಗೆ ಪ್ರಕೃತಿಯೇ ಕಲಿಸಿದ ಪಾಠದ ಒಂದು ಚಿಕ್ಕ ಉದಾಹರಣೆ ಈ ವೀಡಿಯೋದಲ್ಲಿ ಇದೆ.

ವೀಡಿಯೋದಲ್ಲಿ ಒಂದು ಬೃಹತ್ ಗಾತ್ರದ ಹೆಬ್ಬಾವು ತೆಂಗಿನ ಮರವನ್ನು ಏರುತ್ತಿದೆ‌. ಹಾವು ತೆಂಗಿನ ಮರ ಏರಲು ಬಳಸಿರುವ ಕೌಶಲ್ಯ ವಾವ್ ಎನಿಸದೆ ಇರಲಾರದು. ಸ್ವಲ್ಪ ಎತ್ತರಕ್ಕೆ ಏರಿದ ಕೂಡಲೇ ಮರವನ್ನು ತನ್ನ ದೇಹದಿಂದ ಎರಡು ಮೂರು ಸುತ್ತುಗಳಿಂದ ಮರವನ್ನು ಸುತ್ತಿ, ತನ್ನ ಹಿಡಿತವನ್ನು ಬಿಗಿಗೊಳಿಸಿ, ಮತ್ತೆ ಇನ್ನೊಂದಷ್ಟು ಮೇಲೆ ಮರವನ್ನು ಏರಿ ಮತ್ತೆ ಮರವನ್ನು ದೇಹದಿಂದ ಸುತ್ತಿಕೊಂಡು ಮೇಲೇರುವ ಈ ಹೆಬ್ಬಾವಿನ ಮರ ಹತ್ತುವ ಕಲೆ ರೋಮಾಂಚನ ಮಾತ್ರವೇ ಅಲ್ಲದೇ ಭಯಾನಕ ಕೂಡಾ ಎನಿಸುವಂತಿದೆ.

ವೀಡಿಯೋ ನೋಡಿದ ನೆಟ್ಟಿಗರು ಅದ್ಬುತ ಎಂದರೆ ಕೆಲವರು ನಮಗೆ ಹೆಬ್ಬಾವುಗಳೆಂದರೆ ಭಯ, ವೀಡಿಯೋ ನೋಡುತ್ತಿದ್ದರೆ ಭಯ ಎನಿಸುತ್ತದೆ ಎಂದಿದ್ದಾರೆ. ಮತ್ತೆ ಕೆಲವರು ರೋಮಾಂಚಕ ಅನುಭವ ಎಂದಿದ್ದಾರೆ. ಈಗಾಗಲೇ 1 ಸಾವಿರ ದಾಟಿದ ರೀಟ್ವೀಟ್ ಗಳು ಹಾಗೂ 4 ಸಾವಿರ ದಾಟಿದ ಲೈಕ್ ಗಳನ್ನು ಪಡೆದುಕೊಂಡು ಈ ವೀಡಿಯೋ ನೋಡುಗನಿಗೆ ಖಂಡಿತ ಹೊಸ ಅನುಭವ ನೀಡುತ್ತದೆ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...