ಈ ಫೋಟೋ ತೆಗೆದ ಮರುಕ್ಷಣವೇ ಈ ಹುಡುಗಿ ಇಲ್ಲವಾಗಿ ಹೋದಳು…ಮನಕಲಕುವ ಸುದ್ದಿ…

CINEMA/ಸಿನಿಮಾ

ಇತ್ತೀಚಿನ ದಿನಗಳಲ್ಲಿ ಫೋಟೋ ಎಂಬುದು ಒಂದು ಗೀಳಾಗಿ ಹೋಗಿದೆ..ಕುಂತರು ಫೋಟೋ..ನಿಂತರು ಫೋಟೋ.. ಮಲಗಿದ್ದರೂ ಫೋಟೋ.. ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದು.. ಒಂದತ್ತು ಲೈಕ್ಸ್ ಬಂದರೆ ಕೋಟಿ ಹಣ ಸಂಪಾದನೆ ಮಾಡಿದವರಂತೆ ಆಡೋದು.. ಈಗಿನ ಕಾಲದವರ ಮನಸ್ಥಿತಿಯೇ ಈ ರೀತಿಯಾಗಿ ಹೋಗಿದೆ..ಮೊದಲೆಲ್ಲಾ ಕುಟುಂಬದ ಜೊತೆ ಸಮಯ ಕಳೆಯುವುದೇ ಒಂದು ಆನಂದವಾಗಿತ್ತು..ಸ್ನೇಹಿತರೊಡಗೂಡಿ ಆಡೋದೇ ಒಂದು ಚೆಂದವಾಗಿತ್ತು..ಆದರೀಗ ಮೂರೊತ್ತು ಫೋನು..ಫೋಟೋ..ಇಷ್ಟೇ ಜೀವನವಾಗಿ ಹೋಯ್ತು..ಸಂತೋಷದ ಕ್ಷಣವಾಗಲಿ ಅಥವಾ ಪ್ರವಾಸವಾಗಲಿ ಆ ಕ್ಷಣವನ್ನು ಸವಿಯುವ ಬದಲು ಸಮಯವೆಲ್ಲಾ ಫೋಟೋ ಕ್ಲಿಕ್ಕಿಸಿಕೊಳ್ಳಲೇ ಕಳೆದು ಹೋಗುತ್ತದೆ..

ಆದರೆ ಅದರಿಂದಾಗುವ ಅಪಾಯಗಳನ್ನು ಮಾತ್ರ ಯಾರೂ ಯೋಚಿಸುತ್ತಿಲ್ಲ.. ಹೌದು ಸೆಲ್ಫಿ ಗೀಳಿಗೆ ಬಿದ್ದು ಅನೇಕರು ಜೀವವನ್ನೇ ಕಳೆದುಕೊಂಡಿದ್ದಾರೆ.. ಅದರಲ್ಲೂ ಎತ್ತರದ ಸ್ಥಳಗಳಲ್ಲಿ.. ನೀರಿನಲ್ಲಿ.. ಇಂತಹ ಜಾಗಗಳಲ್ಲಿ ಆಯ ತಪ್ಪಿ ಬಿದ್ದು ಜೀವ ಕಳೆದುಕೊಂಡ ಘಟನೆಗಳು ಆಗಾಗ ಸುದ್ದಿಯಾಗುತ್ತಲೇ ಇರುತ್ತವೆ.. ಆದರೂ ಸಹ ಜನರಿಗೆ ಫೋಟೋ ಗೀಳು ಮಾತ್ರ ಹೋಗಿಲ್ಲ..

ಅದೇ ರೀತಿ ಇಲ್ಲೊಂದು ಮನಕಲಕುವ ಘಟನೆ ನಡೆದಿದೆ.. ಹೌದು ಕೆರೆಯ ಬಳಿ ಫೋಟೋ ತೆಗೆದುಕೊಳ್ಳಲು ಹೋಗಿ ಫೋಟೋವನ್ನು ತೆಗೆದುಕೊಂಡರು.. ಆದರೆ ಅದೇ ಫೋಟೋ ಜೀವಮದ ಕೊನೆಯ ಫೋಟೋವಾಗಿ ಹೋಯ್ತು.. ಹೌದು ಮಧ್ಯ ಪ್ರದೇಶದ ಇಂದೋರ್ ನಲ್ಲಿ ಈ ಘಟನೆ ನಡೆದಿದ್ದು ಒಂದೇ ಕುಟುಂಬದ ಹದಿಮೂರು ಮಂದಿ ಫೋಟೋ ತೆಗೆಯುವ ವೇಳೆ ದೇವಾಸ್ ಕೆರೆಯಲ್ಲಿ ಬಿದ್ದಿದ್ದು ಹನ್ನೆರೆಡು ಜನರನ್ನು ರಕ್ಷಣೆ ಮಾಡಲಾಯಿತಾದರು ಈ ಹೆಣ್ಣು ಮಗಳು ಮಾತ್ರ ನೀರಿನಿಂದ ಹೊರ ಬಾರಲೇ ಇಲ್ಲ..

ಹೌದು ಕೊರೊನಾ ನಿಯಂತ್ರಣಕ್ಕೆ ಬಂದ ಬಳಿಕ ಎಲ್ಲರೂ ಪ್ರವಾಸಗಳಿಗೆ ಹೋಗುತ್ತಿದ್ದು ಸಾಮಾಜಿಕ ಜಾಲತಾಣದಲ್ಲಿ ಪ್ರವಾಸದ ಫೋಟೋಗಳೇ ತುಂಬಿವೆ.. ಅದೇ ರೀತಿ ಇಂದೋರ್ ಜಿಲ್ಲೆಯ ಸಾಂವೆರ ಗ್ರಾಮದಲ್ಲಿನ ಬಾಲಕಿ ಎಂಟನೇ ತರಗತಿ ಓದುತ್ತಿದ್ದ ನುಜ್ಜತ್ ಎಂಬ ಹುಡುಗಿಯೇ ಈ ಘಟನೆಯಲ್ಲಿ ಜೀವ ಕಳೆದುಕೊಂಡ ಬಾಲಕಿ.. ನುಜ್ಜತ್ ನ ಕುಟುಂಬದವರು ಮತ್ತು ಸ್ನೇಹಿತರು ಒಟ್ಟು ಹದಿಮೂರು ಮಂದಿ ನಿನ್ನೆ ಸೋಮವಾರ ಪ್ರವಾಸಕ್ಕೆಂದು ಕೆರೆಯ ಬಳಿ ತೆರಳಿದ್ದರು.. ದೇವಾಸ್ ಕೆರೆಯ ಬಳಿ ಎಲ್ಲರೂ ಫೋಟೋ ತೆಗೆದುಕೊಂಡರು.. ಅದೇ ಸಮಯದಲ್ಲಿ ನುಜ್ಜತ್ ಕೂಡ ನೀರಿನಲ್ಲಿ ನಿಂತು ಫೋಟೋ ತೆಗೆಸಿಕೊಂಡಳು..

ಅದೇ ಸಮಯದಲ್ಲಿ ನುಜ್ಜತ್ ಜೊತೆಯಲ್ಲಿ ಬಂದಿದ್ದ ಅವರ ಅತ್ತೆ ನುಜ್ಜತ್ ನ ಫೋಟೋ ತೆಗೆಯುತ್ತಿದ್ದರು.. ಫೋಟೋ ತೆಗೆಯುತ್ತಿದ್ದಂತೆ ನೀರಿನಲ್ಲಿ ಆಯ ತಪ್ಪಿ ಬಿದ್ದು ಹೋದರು.. ಅವರನ್ನು ರಕ್ಷಣೆ ಮಾಡುವ ಸಲುವಾಗಿ ಒಬ್ಬರ ಹಿಂದೆ ಒಬ್ಬರು‌ ನೀರಿನಲ್ಲಿ ಬಿದ್ದರು.. ಆದರೆ ದುರ್ದೈವ ಹದಿಮೂರು ಜನರು ಸಹ ಆ ಕೆರೆಯ ನೀರಿನಲ್ಲಿ ಮುಳುಗಿ ಹೋದರು..

ಎಲ್ಲರೂ ಕಾಪಾಡಿ ಎಂದು ಕೂಗಿಕೊಂಡರು.. ಅವರೆಲ್ಲರ ಕೂಗು ಕೇಳಿ ಹತ್ತಿರದಲ್ಲಿದ್ದ ಮೀನುಗಾರರು ಹಾಗೂ ರೈತರು ಸ್ಥಳಕ್ಕೆ ಆಗಮಿಸಿ ನೋಡಿ ತಕ್ಷಣ ನೀರಿಗೆ ಧುಮುಕಿ ಹನ್ನೆರೆಡು ಮಂದಿಯನ್ನು ರಕ್ಷಣೆ ಮಾಡಿ ನೀರಿನಿಂದ ಹೊರ ಕರೆತಂದರು..

ಆದರೆ ನುಜ್ಜತ್ ಮಾತ್ರ ಯಾರಿಗೂ ಸಿಗಲೇ ಇಲ್ಲ.. ತಡರಾತ್ರಿ ವರೆಗೂ ಹುಡುಕಾಡಿದರೂ ಪ್ರಯೋಜನವಾಗಲಿಲ್ಲ.. ಇಂದು ಬೆಳಿಗ್ಗೆ ಆಕೆಯದೇ ಹ ನೀರಿನಿಂದ ತೇಲಿ ಬಂದಿದ್ದು ಆ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.. ಸಂತೋಷವಾಗಿ ಸಮಯ ಕಳೆಯಲೆಂದು ಬಂದು.. ಒಂದು ಫೋಟೋ ಕಾರಣದಿಂದಾಗಿ ಕುಟುಂಬದ ಎಲ್ಲರೂ ಕಣ್ಣೀರಿಡುವಂತಾಯಿತು..

ಇಂತಹ ಘಟನೆ ಆಗಾಗ ಪದೇ ಪದೇ ನಡೆಯುತ್ತಿದ್ದರೂ ಸಹ ಜನರು ಮಾತ್ರ ಇಂತಹ ಸಾಹಸಗಳಿಗೆ ಕೈಹಾಕುವುದ ಬಿಡುವುದಿಲ್ಲ.. ಜೀವನ ಇರುವುದೇ ಕೆಲ ದಿನ.. ಈ ದಿನ ಈ ಕ್ಷಣವನ್ನು ಅನುಭವಿಸಬೇಕು.. ಆ ಕ್ಷಣವನ್ನು ಸವಿಯಬೇಕು.. ಆದರೆ ಮುಂದೊಂದು ದಿನದ ನೆನಪಿಗಾಗಿ ಎಂದು ಅಪಾಯದ ಸ್ಥಳಗಳಲ್ಲಿ‌ ನಿಂತು ಫೋಟೋ ತೆಗೆಯಲು ಹೋಗಿ ತಾವೇ ಇಲ್ಲದಂತಾಗಿ ಹೋಗಿಬಿಡುವರು.. ಆದರೆ ಅವರುಗಳ ಕುಟುಂಬ ಮಾತ್ರ ಕೊನೆಯವರೆಗೂ ಕಣ್ಣೀರಿಡುತ್ತಲೇ ಘಟನೆ ನೆನೆದು ಕೊರಗುತ್ತಿರುವಂತಾಗಿ ಹೋಗುವುದು..

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.