Petrol Bunk Business: ಇದೀಗ ಪೆಟ್ರೋಲ್ ಬಂಕ್ (Petrol Bunk) ಸ್ಥಾಪನೆ ಮಾಡುವವರಿಗೆ ವಿಶೇಷ ಸುದ್ದಿ ಒಂದು ಹೊರ ಬಿದ್ದಿದೆ. ದೇಶದ ಹಲವಾರು ಜನರಲ್ಲಿ ಯಾರಾದರೂ ಪೆಟ್ರೋಲ್ ಬಂಕ್ ಸ್ಥಾಪನೆ ಮಾಡಬೇಕೆಂದು ಅಂದುಕೊಂಡರೆ ಅದಕ್ಕೆ ಕೆಲವು ಅರ್ಹತೆಗಳು ಬೇಕು. ಅಲ್ಲದೆ ಕೆಲವು ನಿಯಮಗಳನ್ನು ಪಾಲಿಸಬೇಕು.
Image Credit: deccanherald
ಪೆಟ್ರೋಲ್ ಬಂಕ್ ಸ್ಥಾಪನೆ ಮಾಡಲು ವ್ಯಕ್ತಿಗೆ ಇರಬೇಕಾದ ಅರ್ಹತೆ
ಪೆಟ್ರೋಲ್ ಬಂಕ್ ಸ್ಥಾಪನೆ ಮಾಡಲು ಅವರು 21 ವರ್ಷ ವಯಸ್ಸಿಗಿಂತ ಕಡಿಮೆ ಇರಬಾರದು. ಅಲ್ಲದೆ 55 ವರ್ಷ ವಯಸ್ಸು ಮೀರಿರಬಾರದು. ಅರ್ಜಿದಾರರು ಮಾನ್ಯತೆ ಪಡೆದ ಮಂಡಳಿಯಿಂದ 10 ನೇ ತರಗತಿ ಅಥವಾ ಅದಕ್ಕಿಂತ ಹೆಚ್ಚು ಉತ್ತೀರ್ಣರಾಗಿರಬೇಕು. ಅರ್ಜಿದಾರರು ರೀಟೇಲ್ ಔಟ್ ಲೆಟ್, ವ್ಯಾಪಾರ ಅಥವಾ ಯಾವುದೇ ಇತರ ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ ಮೂರೂ ವರ್ಷಗಳ ಅನುಭವವನ್ನು ಹೊಂದಿರಬೇಕು.
ಪೆಟ್ರೋಲ್ ಬಂಕ್ ಸ್ಥಾಪನೆ ಮಾಡಲು ಇರಬೇಕಾದ ನಿಯಮಗಳು
ಇನ್ನು ಪೆಟ್ರೋಲ್ ಬಂಕ್ ಅರ್ಜಿದಾರರು ಕನಿಷ್ಠ 25 ಲಕ್ಷಗಳ ನಿವ್ವಳ ಮೌಲ್ಯವನ್ನು ಹೊಂದಿರಬೇಕು. ಅಲ್ಲದೆ ಅರ್ಜಿದಾರರ ಕುಟುಂಬದ ನಿವ್ವಳ ಮೌಲ್ಯ ರೂಪಾಯಿ 50 ಲಕ್ಷಕ್ಕಿಂತ ಕಡಿಮೆ ಇರಬಾರದು.
ಅರ್ಜಿದಾರರು ಯಾವುದೇ ಕ್ರಿಮಿನಲ್ ದಾಖಲೆಯನ್ನು ಹೊಂದಿರಬಾರದು. ಅಲ್ಲದೆ ಅವರು ಯಾವುದೇ ಇತರ ವ್ಯಾಪಾರ ಲೋನ್ ನ ಡಿಫಾಲ್ಟ್ ಆಗಿರಬಾರದು. ಭಾರತದಲ್ಲಿ ಪೆಟ್ರೋಲ್ ಬಂಕ್ ಗಳ ಸೆಟ್ಟಿಂಗ್ ಅಗತ್ಯತೆಗಳು ಮತ್ತು ವಿತರಣಾ ಘಟಕಗಳನ್ನು ಅವಲಂಭಿಸಿರುತ್ತದೆ. ಜಾಮೀನು ಮಾಲೀಕರು ಅರ್ಜಿದಾರರಾಗಿರಬೇಕು. ಜಾಮೀನು ಯಾವುದೇ ಕಾನೂನು ವಿವಾದಕ್ಕೆ ಒಳಗೊಂಡಿರಬಾರದು.
ಪೆಟ್ರೋಲ್ ಬಂಕ್ ತೆರೆಯಲು ಬೇಕಾದ ಹಣ
ನೀವು ಭಾರತದಲ್ಲಿ ಪೆಟ್ರೋಲ್ ಬಂಕ್ ತೆರೆಯಲು ಅಗತ್ಯವಿರುವ ಹೂಡಿಕೆಯು ಅನೇಕ ವಿಷಯಗಳನ್ನು ಅವಲಂಬಿಸಿರುತ್ತದೆ. ಇದು ಭೂಮಿ ವೆಚ್ಚ, ನಿರ್ಮಾಣ ವೆಚ್ಚ, ಸಲಕರಣೆ ವೆಚ್ಚ, ಪರವಾನಗಿ ಶುಲ್ಕವನ್ನು ಒಳಗೊಂಡಿರುತ್ತದೆ. ಭೂಮಿಯ ಬೆಲೆ 20 ಲಕ್ಷದಿಂದ ಕೋಟಿ ರೂಪಾಯಿ ಆಗಿದೆ. ನಿರ್ಮಾಣ ವೆಚ್ಚ 30 ಲಕ್ಷದಿಂದ 1 ಕೋಟಿ ರೂಪಾಯಿ. ಸಾಧನದ ಬೆಲೆ 20 ಲಕ್ಷದಿಂದ 50 ಲಕ್ಷದ ನಡುವೆ ಇರುತ್ತದೆ.
Image Credit: telegraphindia
ಪೆಟ್ರೋಲ್ ಬಂಕ್ ತೆರೆಯಲು ಅರ್ಜಿ ಸಲ್ಲಿಸುವುದು ಹೇಗೆ
ಪೆಟ್ರೋಲ್ ಬಂಕ್ ತೆರೆಯಲು ಪರವಾನಗಿ ಪಡೆದ ತೈಲ ಮಾರುಕಟ್ಟೆ ಕಂಪನಿಗಳು ನೀಡುವ ಜಾಹೀರಾತುಗಳನ್ನು ನೀವು ಗಮನಿಸಬೇಕು. ನಂತರ ಪೆಟ್ರೋಲ್ ಬಂಕ್ ಡೀಲರ್ ಅನ್ನು ಆಯ್ಕೆ ಮಾಡಿ, ಅಧಿಕೃತ ಪೋರ್ಟಲ್ ಗೆ ಭೇಟಿ ನೀಡಿ. ನೀವು ಹೊಸ ಡೀಲರ್ಶಿಪ್ ಜಾಹೀರಾತನ್ನ ನೋಡಿದಾಗ ಅಲ್ಲಿ ಎಲ್ಲಾ ವಿವರಗಳು ಮತ್ತು ಷರತ್ತುಗಳನ್ನ ಎಚ್ಚರಿಕೆಯಿಂದ ಓದಿ. ಎಲ್ಲಿ ಮತ್ತು ಯಾವಾಗ ಅರ್ಜಿ ಸಲ್ಲಿಸಬೇಕು ಎಂಬುದು ಅಲ್ಲಿ ಸ್ಪಷ್ಟವಾಗಿ ತಿಳಿಯುತ್ತದೆ.
ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.