ಕೆಲವೊಮ್ಮೆ ಪರಿಸ್ಥಿತಿ ಹೇಗೆ ಉಲ್ಟಾ ಹೊಡೆಯುತ್ತದೆ ಎಂಬುವುದಕ್ಕೆ ಈ ಘಟನೆ ಸಾಕ್ಷಿ ಹೇಳುತ್ತಿದೆ. ನಾಗರ ಹಾವೊಂದು ಮೊಟ್ಟೆ ತಿನ್ನುವ ಆಸೆಯಿಂದ ನವಿಲಿದ್ದ ಗೂಡಿಗೆ ಬಂದಿದ್ದು, ಇದನ್ನು ಕಂಡ ನವಿಲು ತನ್ನ ಬಳಿಗೆ ಆಹಾರವೇ ಹುಡುಕಿ ಬರುತ್ತಿದೆ ಎಂದು ನಾಗರ ಹಾವನ್ನೇ ತಿಂದು ಹಾಕಿದೆ. ನಿಸರ್ಗ ನಿಯಮದ ಮಿದರ್ಶನವಾದ ಇಂಥ ದ್ದೊಂದು ಘಟನೆ ಸಮೀಪದ ನಾರಳ ಮಠ ಎಂಬಲ್ಲಿನ ಗುಡ್ಡೆಯಲ್ಲಿ ನಡೆದಿದೆ.

ನಾರಳಮಠದ ಗುಡ್ಡದಲ್ಲಿ ನವಿಲೊಂದು ಮೊಟ್ಟೆ ಇಟ್ಟು ಕಾವು ಕೊಡುತ್ತಿತ್ತು. ಈ ದಶ್ಯವನ್ನು ಮೊದಲೇ ಗಮನಿಸಿದ್ದ ನಾಗರ ಹಾವು ನವಿಲಿನ ಮೊಟ್ಟೆ ಕಬಳಿಸಲು ಬಹಳ ಸಮಯದಿಂದ ಹೊಂಚುಹಾಕಿ ಕುಳಿತಿತ್ತು. ನಿಸರ್ಗದ ಆಹಾರ ಸರಪಳಿ ಗಮನಿಸಿದರೆ ನವಿಲಿನ ಮೊಟ್ಟೆ ನಾಗನ ಆಹಾರವಾದರೆ, ನಾಗರ ಹಾವು ನವಿಲಿನ ಆಹಾರ. ಹೀಗೆ ಜೀವಿಶಾಸ್ತ್ರ ನಿಯಮಕ್ಕೆ ಕಟ್ಟುಬಿದ್ದಿದ್ದ ನವಿಲು ಹಾಗೂ ನಾಗ ಕೊನೆಗೂ ಪ್ರಕತಿಯ ಸಹಜ ಕ್ರಿಯೆಗೆ ಸಾಕ್ಷಿಯಾಗಿಯೇ ಬಿಟ್ಟಿದೆ.ಅಷ್ಟಕ್ಕೂ ಅಲ್ಲಿ ನಡೆದಿದ್ದೇನು ಎಂಬುವುದನ್ನು ನೋಡಿದರೆ ನಾವು ಖಂಡಿತಾ ಬೆಚ್ಚಿಬೀಳಬೇಕು. ನವಿಲು ಆಹಾರ ತಿನ್ನಲೆಂದು ತನ್ನ ಮೊಟ್ಟೆಗಳನ್ನು ಅಲ್ಲೇ ಬಿಟ್ಟು ತೆರಳಿತ್ತು. ಇದನ್ನೇ ಹೊಂಚು ಹಾಕಿ ಕುಳಿತಿದ್ದ ನಾಗರಹಾವು ಮೊಟ್ಟೆ ಕಬಳಿಸಲೆಂದು ಮೊಟ್ಟೆಯತ್ತ ಬಂದಿತ್ತು.
ಇನ್ನೇನು ಮೊಟ್ಟೆಯನ್ನು ನುಂಗಬೇಕೆನ್ನುವಷ್ಟರಲ್ಲಿ ಅಷ್ಟಕ್ಕೇ ನವಿಲು ಎಂಟ್ರಿ ಕೊಟ್ಟೇ ಬಿಟ್ಟಿತು. ಮೊಟ್ಟೆಯ ಬಳಿ ನಾಗರ ಹಾವು ಇರುವುದನ್ನು ಗಮನಿಸಿದ ನವಿಲು ಕ್ಯಾರೇ ಅನ್ನದೆ ನಾಗನ ಮುಖಕ್ಕೆ ಕೊಕ್ಕಿನಲ್ಲಿ ಕುಕ್ಕಿ ದೂರ ಸರಿಸಿತು. ಆಮೇಲೇ ಏನೂ ಆಗೇ ಇಲ್ಲದಂತೆ ಮೊಟ್ಟೆ ಮೇಲೆ ಕಾವುಕೊಡುತ್ತ ಕುಳಿತಿತ್ತು.
ನವಿಲು ನಾಗನನ್ನು ನಿರ್ಲಕ್ಷಿಸಿದರೂ, ಪೆಟ್ಟು ತಿಂದ ನಾಗ ಅಲ್ಲಿಂದ ಆಚೆ ಹೋಗಲಿಲ್ಲ. ನಾಗನ ಈ ವರ್ತನಗೆ ಜೀವ ವಿಜ್ಞಾನದ ವಿವರ ಏನೆಂದು ತಿಳಿದಿಲ್ಲ. ನವಿಲು ನಾಗರ ಹಾವಿಗೆ ದಡೆ(ದಿಗ್ಬಂಧನ) ಹಾಕಿದ್ದರಿಂದ ನಾಗ ಅಲ್ಲಿಂದ ಹಂದಾಡುವುದ ಸಾಧ್ಯವಾಗಲಿಲ್ಲ ಎಂದು ಸ್ಥಳೀಯವಾಗಿ ಇದಕ್ಕೆ ವಿವರಣೆ ಇದೆ. ಅಲ್ಲಿಯೇ ಇದ್ದ ನಾಗವು ತುಸು ಸಮಯದಲ್ಲಿ ಹೆಡೆ ಎತ್ತಿ ಬುಸುಗುಡ ತೊಡಗಿತ್ತು. ಆದರೆ ನವಿಲು ಮಾತ್ರ ಜಪ್ಪಯ್ಯ ಅನ್ನಲೇ ಇಲ್ಲ. ಒಂದಷ್ಟು ಬಾರಿ ಬುಸುಗುಡುವ ನಾಗವನ್ನು ನಿರ್ಲಕ್ಷಿಸಿದ ನವಿಲು ಕೊನೆಗೊಮ್ಮೆ ನಾಗನ ಮುಖಕ್ಕೆ ಬಲವಾಗಿ ಕುಕ್ಕಿ ಸರ‌್ಪ ಸಂಹಾರ ನಡೆಸಿಯೇ ಬಿಟ್ಟಿತ್ತು. ಇತರ ಕೀಟಗಳಂತೆ ಹಾವನ್ನು ತಿಂದು ಹಾಕಿತು. ನವಿಲಿನ ಮೊಟ್ಟೆಯನ್ನು ತಿನ್ನಬೇಕೆಂಬ ಹಂಬಲದಿಂದ ಬಂದಿದ್ದ ಹಾವು ಕೊನೆಗೆ ತನೇ ನವಿಲಿನ ಆಹಾರವಾಗಿ ಬಿಟ್ಟಿತ್ತು.