ಸ್ಯಾಂಡಲ್ವುಡ್ ಮತ್ತು ಟಾಲಿವುಡ್ನಲ್ಲಿ ಸದ್ಯ ಪವಿತ್ರಾ ಲೋಕೇಶ್ ಹಾಗೂ ನಟ ನರೇಶ್ ಸುದ್ದಿ ಸದ್ದು ಮಾಡುತ್ತಿದೆ. ಅವರಿಬ್ಬರ ಸಂಬಂಧದ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದ್ದು, ದಿನಕ್ಕೊಂದು ಹೊಸ ಸಂಗತಿ ಹೊರ ಬರುತ್ತಿದೆ.
ಸದ್ಯ ಮೈಸೂರು ಹುಣಸೂರು ರಸ್ತೆಯ ಖಾಸಗಿ ಹೋಟೆಲ್ನಲ್ಲಿ ನಟ ನರೇಶ್-ಪವಿತ್ರಾ ತಂಗಿದ್ದ ವಿಚಾರ ತಿಳಿದು ರೂಂ ಮುಂದೆ ನರೇಶ್ ಪತ್ನಿ ರಮ್ಯ ರಘುಪತಿ ಬಾಗಿಲು ಬಡಿಯುತ್ತಿದ್ದರೂ ನರೇಶ್ ಮತ್ತು ಪವಿತ್ರಾ ಲೋಕೇಶ್ ಹೊರ ಬಂದಿಲ್ಲ. ಪೊಲೀಸ್ ಭದ್ರತೆಯಲ್ಲಿ ನರೇಶ್ ಹಾಗೂ ಪವಿತ್ರಾ ಲೋಕೇಶ್ ಹೊರಟಿದ್ದು, ಈ ವೇಳೆ ಚಪ್ಪಲಿ ಎತ್ತಿಕೊಂಡ ರಮ್ಯಾ ಹೊಡೆಯಲು ಮುಂದಾದರು. ರಮ್ಯಾರನ್ನು ಪೊಲೀಸರು ಹಾಗೂ ಆಪ್ತ ರಕ್ಷಕರು ತಡೆದರು. ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ನರೇಶ್ ಹಾಗೂ ಪವಿತ್ರಾ ಲೋಕೇಶ್ ಹೋಟೆಲ್‌ನಿಂದ ಹೊರ ಹೋದರು.
ನಟಿಯ ಜೊತೆಗಿದ್ದ ನರೇಶ್ ಅವರು ಶಿಳ್ಳೆ ಹೊಡೆಯುತ್ತಾ ಹೊರ ಬಂದಿದ್ದಾರೆ. ಬಳಿಕ ರಮ್ಯಾ ಅವರು ಪ್ರಶ್ನಿಸಿದ್ದಕ್ಕೆ ಹಾರಿಕೆ ಉತ್ತರ ನೀಡಿ ಒಂದೇ ಕಾರಿನಲ್ಲಿ ಹೊರ ನಡೆದಿದ್ದಾರೆ. ನರೇಶ್ ಮತ್ತು ಪವಿತ್ರ ಒಟ್ಟಿಗೆ ಹೋಗಿರುವುದು ಮಾಧ‍್ಯಮಗಳ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ.
ಘಟನೆ ಬಗ್ಗೆ ಮಾತನಾಡಿರುವ ನರೇಶ್ ಮೂರನೇ ಪತ್ನಿ ರಮ್ಯಾ, ಇಬ್ಬರು ಮೈಸೂರಿನ ಹೋಟೆಲ್ನಲ್ಲಿ ತಂಗಿದ್ದಾರೆ ಎಂನ ಸುಳಿವುಬ ದೊರೆತ ಕೂಡಲೇ ಬೆಂಗಳೂರಿನಿಂದ ರಾತ್ರಿ ಒಂದು ಗಂಟೆಗೆ ಹೊರಟೆ. ಹೋಟೆಲ್ಗೆ ಮಧ್ಯರಾತ್ರಿ ಬಂದು ಬೆಳಗ್ಗೆ ವರೆಗೆ ಕಾದೆ. ರಾತ್ರಿ ಗಲಾಟೆ ಮಾಡುವುದು ಸರಿಯಲ್ಲ ಅಂತಾ ಬೆಳಗ್ಗೆವರೆಗೂ ಕಾದೆ. ಮುಂಜಾನೆ ಆದ ಬಳಿಕ ಬಾಗಿಲು ಬಡಿದು ಗಲಾಟೆ ಮಾಡಿದೆ. ಬೆಸ್ಟ್ ಫ್ರೆಂಡ್ ಅಂದುಕೊಂಡು ರಾತ್ರಿಯೆಲ್ಲ ಒಂದೇ ರೂಮಿನಲ್ಲಿದ್ದರೆ, ಏನು ಅರ್ಥ? ಮುಂದೆ ಕಾನೂನಿನ ಮೂಲಕ ಎದುರಿಸುತ್ತೇನೆ ಎಂದು ಹೇಳಿದರು.
ನನಗೆ ಡಿವೋರ್ಸ್ ನೋಟಿಸ್ ಕಳುಹಿಸಿದ್ದಾರೆ. ನಾನು ಕಾನೂನಿನ ಮೂಲಕ ಉತ್ತರಿಸುತ್ತೇನೆ. ಮದುವೆಯಾದ ಒಂದೂವರೆ ವರ್ಷ ಚೆನ್ನಾಗಿದ್ದೆವು. ಸಂಸಾರ ಅಂದ ಮೇಲೆ ಏರು-ಪೇರು ಇದ್ದೇ ಇರುತ್ತದೆ. ಎಲ್ಲವು ಚೆನ್ನಾಗಿತ್ತು. ಯಾವಾಗ ಮೂರನೇ ವ್ಯಕ್ತಿ ನಮ್ಮ ನಡುವೆ ಬಂದರೋ ಆಗ ನಮ್ಮ ಸಂಬಂಧದ ನಡುವೆ ಬಿರುಕು ಮೂಡಿತು. ಅವರ ಮೇಲೆ ನಾನು ಮಾಡಿರುವ ಆರೋಪಿಗಳನೆಲ್ಲ ನಾನು ಸಾಬೀತುಪಡಿಸಿದ್ದೇನೆ ಎಂದು ರಮ್ಯಾ ಕಣ್ಣೀರಿಡುತ್ತಾ ಹೇಳಿದರು.