PAVITRA-LOKESH

ಪವಿತ್ರಾ ಲೋಕೇಶ್ ನೋಡಲು ಅಪ್ಸರೆ ಅಂತೆ ಇದ್ದರು ದೊಡ್ಡ ನಟಿಯಾಗಿ ಮಿಂಚಲಿಲ್ಲ ಏಕೆ ಗೊತ್ತಾ.? ಸತ್ಯ ನೋಡಿ ಬೆಚ್ಚಿಬಿದ್ದ ಚಿತ್ರರಂಗ!!

CINEMA/ಸಿನಿಮಾ

ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ನಟಿ ಪವಿತ್ರಾ ಲೋಕೇಶ್ ಅವರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಕನ್ನಡದ ಖ್ಯಾತ ಪೋಷಕ ನಟ ಮೈಸೂರು ಲೋಕೇಶ್ ಅವರ ಮಗಳು ಇವರಗಿದ್ದು ತನ್ನ ಸೌಂದರ್ಯ ಹಾಗೂ ಅಭಿನಯದ ಪ್ರತಿಭೆ ಹಾಗೂ ಖ್ಯಾತಿಯನ್ನು ಹೊಂದಿದ್ದರು. ಒಬ್ಬ ಸ್ಟಾರ್ ನಟಿಯರಿಗೆ ಇರಬೇಕಾದ ಎಲ್ಲಾ ಅರ್ಹತೆಗಳು ಕೂಡ ಪವಿತ್ರಾ ಲೋಕೇಶ್ ಅವರಿಗಿತ್ತು. ಆದರೆ ಪವಿತ್ರಾ ಅವರಿಗೆ ಕನ್ನಡದ ಚಿತ್ರರಂಗದಲ್ಲಿ ಮಾತ್ರ ಅವಕಾಶಗಳೆ ಸಿಗಲಿಲ್ಲ. ಹೌದು ಅವರಿಗೆ ಸಿಕ್ಕ ಸಣ್ಣ ಪುಟ್ಟ ಪಾತ್ರಗಳೆಲ್ಲ ಅವರ ಹೊಟ್ಟೆಪಾಡಿಗಾಗಿ ಮಾಡಿದ್ದಾಗಿತ್ತೇ ಹೊರೆತು ಅವರ ಪ್ರತಿಭೆಯನ್ನು ಗುರುತಿಸುವ ಕೆಲಸ ನಡಯಲೇ ಇಲ್ಲ. ಇಂತಹ ಮಹಾನ್ ನಟಿ ಬೇರೆ ಭಾಷೆಯಲ್ಲಿ ಸ್ಟಾರ್ ಅಮ್ಮನ ಪಾತ್ರದಲ್ಲಿ ಮಿಂಚುತ್ತಿದ್ದಾರೆ.

ಪವಿತ್ರಾ ಲೋಕೇಶ್ ಅವರ ತಂದೆ ಮೈಸೂರು ಲೋಕೇಶ್ ಕನ್ನಡದ ಸಿನೆಮಾರಂಗದಲ್ಲಿ ಆಗಲೇ ಸಾಕಷ್ಟು ಹೆಸರು ಮಾಡಿದ್ದು ಹೀಗಾಗಿ ಅವರ ಮಗಳು ಪವಿತ್ರಾ ಲೋಕೇಶ್ ಅವರಿಗೆ ಸರಾಗವಾಗಿ ಚಿತ್ರರಂಗಕ್ಕೆ ಬರಬಹುದಿತ್ತು. ಇದರ ಜೊತೆಗೆ ನಟಿಯರಿಗೆ ಇರಬೇಕಾದ ಮಾದಕ ಸೌಂದರ್ಯ ಅಭಿನಯ ಪ್ರತಿಭೆ ಕೂಡ ಅವರಿಗಿತ್ತು. ಆದರೆ ಇಲ್ಲಿ ಆಗಿದ್ದ ಲೆಕ್ಕಾಚಾರನೇ ಬೇರೆಆಗಿದೆ, ನಿನ್ನ ಮಗಳು ಒಳ್ಳೆಯ ನಟಿಯಗ್ತಾಳೆ ಆಕೆಯನ್ನು ಸಿನೆಮಾರಂಗಕ್ಕೆ ಕರೆದುಕೊಂಡು ಬಾ ಎಂದವರು ಎಷ್ಟೋ ಜನ. ಆದರೆ ಅವರಿಗೆ ನಟಿಸುವ ಅವಕಾಶ ಕೊಟ್ಟವರು ಯಾರು ಇಲ್ಲವಂತೆ.

Pin on South Indian Actress

ಹೀಗೆ ಸಿನೆಮಾರಂಗಕ್ಕೆ ನಟಿ ಪವಿತ್ರಾ ಲೋಕೇಶ್ ಬರುವ ಮುನ್ನವೇ ತಂದೆ ಮೈಸೂರ್ ಲೋಕೇಶ್ ಅವರು ಮೃತರಾದರು ಖ್ಯಾತ ಕಂಠದಾನ ಕಲಾವಿದೆ ಜೊತೆಗಿನ ಸ್ನೇಹದಿಂದಾಗಿ ಅವರ ಪುರ್ಸನಲ್ ಜೀವನಕ್ಕೆ ದಕ್ಕೆಯಾಗಿತ್ತು. ಇಂತಹ ಸಂದರ್ಭದಲ್ಲಿ ಮಗಳು ಪವಿತ್ರಾ ಲೋಕೇಶ್ ಚಿತ್ರರಂಗಕ್ಕೆ ಬರುವುದು ತುಂಬಾ ಕನಸಿನ ಮಾತಾಗಿದ್ದು ಆದರೆ ಅವರನ್ನೂ ಚಿತ್ರರಂಗಕ್ಕೆ ಕರೆತಂದಿದ್ದು ಕನ್ನಡದ ಖ್ಯಾತ ನಟ ರೆಬೆಲ್ ಸ್ಟಾರ್ ಅಂಬರೀಷ್, ಅಂಬರೀಷ್ ಅಬ್ಬರು ಪವಿತ್ರಾ ಲೋಕೇಶ್ ಅವರಳಿದ್ದ ಟ್ಯಾಲೆಂಟ್ ಗುರುತಿಸಿ ಸಿನೆಮಾಗಳಲ್ಲಿ ನಟಿಸುವಂತೆ ಅವರಿಗೆ ರೆಬಲ್ ಸ್ಟಾರ್ ಅಂಬರೀಷ್ ಅವರು ಸಲಹೆ ನೀಡಿದ್ದರು.

ಇನ್ನೂ ಅಂಬರೀಷ್ ಅವರು ಬರೇ ಸಲಹೆ ಮಾತ್ರ ಕೊಡಲಿಲ್ಲ ಬದಲಾಗಿ ಮಿಸ್ಟರ್ ಅಭಿಷೇಕ್ ಎಂಬ ತಮ್ಮ ಸಿನೆಮಾದಲ್ಲಿ ನಟಿಸುವ ಅವಕಾಶ ನೀಡಿದ್ದು 1995ರಲ್ಲಿ ತೆರೆಕಂಡ ಮಿಸ್ಟರ್ ಅಭಿಷೇಕ್ ಪವಿತ್ರಾ ಲೋಕೇಶ್ ಅಭಿನಯದ ಮೊದಲ ಸಿನೆಮಾ ಹೇಳುವಷ್ಟು ಹೆಸರು ಗಳಿಸಲಿಲ್ಲ. ಆದರೆ ಪವಿತ್ರಾ ಲೋಕೇಶ್ ಎಂಬ ನಟಿ ಕನ್ನಡ ಚಿತ್ರರಂಗದಲ್ಲಿ ಇದ್ದಾರೆ ಎಂದು ನಟರು, ನಿರ್ದೇಶಕರು, ನಿರ್ಮಾಪಕರ ಕಣ್ಣಿಗೆ ಬಿದ್ದರು, ಮಿಸ್ಟರ್ ಅಭಿಷೇಕ್ ಸಿನೆಮಾ ಆದ ಮೇಲೆ ಸುಮಾರು 6 ರಿಂದ 7 ಕನ್ನಡ ಚಿತ್ರಗಳಲ್ಲಿ ನಟಿಸಿದರು ಪವಿತ್ರಾ ಲೋಕೇಶ್ ಅವರು. ಅಷ್ಟು ಚಿತ್ರಗಳಲ್ಲಿ ಅಭಿನಯಿಸಿದರು ಪವಿತ್ರಾ ಅವರ ಪಾಲಿಗೆ ಯಾವುದು ವರವಾಗಿ ಸಹಾಯ ಮಾಡಲೇ ಇಲ್ಲ.

p1 - Namma Kannada Suddi

ನಟಿ ಪವಿತ್ರಾ ಲೋಕೇಶ್ ಅವರು ಪಾತ್ರಗಳ ಆಯ್ಕೆಯಲ್ಲಿ ಎಡವಿದ್ದು ಅವರಿಗೆ ತಂದೆ ಇಲ್ಲದೆ ಇಡೀ ಮನೆ ಜವಾಬ್ದಾರಿ ಹೊರಬೇಕಾದ ಪರಿಸ್ಥಿತಿ ಇದ್ದ ಕಾರಣ ಅವರನ್ನು ಹುಡುಕಿಕೊಂಡು ಬಂದ ಸಿಕ್ಕ ಸಿಕ್ಕ ಪಾತ್ರಗಳನ್ನು ಒಪ್ಪಿಕೊಂಡರು. ಅಷ್ಟೇ ಅಲ್ಲದೇ ಗ್ಲಾಮರಾಸ್ ಪಾತ್ರಕ್ಕೂ ಬಣ್ಣ ಹಚ್ಚಿದರು. ಆದರೂ ಕೂಡ ಅದ್ಯಾವುದು ಪವಿತ್ರಾ ಲೋಕೇಶ್ ಅವರ ಕೈ ಹಿಡಿಯಲೇ ಇಲ್ಲ. ಹೋಗ ಹೋಗುತ್ತೀದ್ದಂತೆ ಕನ್ನಡದ ಹೀರೊಗಳು ನಿರ್ದೇಶಕರು ನಿರ್ಮಾಪಕರು ಪವಿತ್ರಾ ಲೋಕೇಶ್ ಅವರನ್ನು ಸಂಪೂರ್ಣ ಮರೆತಿದ್ದು ಕನ್ನಡ ಸಿನೆಮಾ ಲೋಕದಿಂದ ಮರೆಯಾಗಿ ಹೋದರು. ಮೊದಲೇ ಹೇಳಿದಂತೆ ತಂದೆ ಇಲ್ಲದ ಸಂಪೂರ್ಣ ಜವಾಬ್ದಾರಿಯನ್ನು ಅಮ್ಮ ಹಾಗೂ ತಮ್ಮನನ್ನು ಸಾಕಬೇಕಾದ ಅನಿವಾರ್ಯತೆ ಪವಿತ್ರಾ ಅವರಿಗಿತ್ತು. ಅತ್ತ ಪವಿತ್ರಾ ಲೋಕೇಶ್ ಅವರ ಪಾಲಿಗೆ ಚಿತ್ರರಂಗದ ಬಾಗಿಲೂ ಮುಚ್ಚಿತ್ತು.

ಇದನ್ನೂ ಓದಿ >>>  ಗಂಡ ಮಾಡಿದ ಎಡವಟ್ಟಿಗೆ ಮದುವೆಯಾದ ಎರಡೇ ತಿಂಗಳಿಗೆ ಆಸ್ಪತ್ರೆ ಸೇರಿದ ನಟಿ ನಯನತಾರ...

ಹೀಗಾಗಿ ಪವಿತ್ರಾ ಅವರಿಗೆ ಮನೆಯ ಜವಾಬ್ದಾರಿಯನ್ನು ನಿಭಾಯಿಸಲು ಕೆಲಸ ಮಾಡೋದು ಅನಿವಾರ್ಯವಾಗಿದ್ದು ಇದೇ ಕಾರಣಕ್ಕೆ ಪವಿತ್ರಾ ಲೋಕೇಶ್ ಅವರು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಹಚ್ ಆರ್ ಆಗಿ ಕೆಲಸಕ್ಕೆ ಸೇರಿಕೊಂಡರು. ಅವರಿಗೆ ಬರುವ ಸಂಬಳದಲ್ಲಿ ಸಂಸಾರ ಸಾಗಿಸೋಕೆ ಕಷ್ಟವಾಗುತ್ತಿತ್ತು. ಹೀಗಾಗಿ ಪವಿತ್ರಾ ಲೋಕೇಶ್ ಅವರ ಜೀವನದಲ್ಲಿ ಸಾಕಷ್ಟು ತೊಂದರೆಗಳನ್ನು ಎದುರಿಸಿದ್ದರು. ಚಿತ್ರರಂಗದ ಹಿರಿಯ ಪೋಷಕ ನಟನ ಮಗಳಾಗಿದ್ದವಳು ತಾನು ನಟಿಯಾಗಿದ್ದವಳು ಅನಿವಾರ್ಯ ಕಾರಣದಿಂದ ಬಿಎಂಟಿಸಿ ಬಸ್ಗಳಲ್ಲಿ ಓಡಾಡುವ ಹಾಗೆ ಆಯಿತು. ಸರಿ ಸುಮಾರು 1 ವರ್ಷಗಳ ಕಾಲ ಆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿದ ಪವಿತ್ರಾ ಲೋಕೇಶ್ ಅವರು ಬಸ್ ಗಳಲ್ಲೇ ಓಡಾಡಿಕೊಂಡಿದ್ದರು.

Pin on anu

ಇನ್ನೂ ಖ್ಯಾತ ನಿರ್ದೇಶಕ ಟಿ ಎಸ್ ನಾಗಭರಣ ಅವರ ನಿರ್ದೇಶನದಲ್ಲಿ ಬಿಡುಗಡೆಯದ ಜನುಮದ ಜೋಡಿಯಲ್ಲಿ ನಟಿಸಲು ಪವಿತ್ರಾ ಲೋಕೇಶ್ ಅವರಿಗೆ ಅವಕಾಶ ಬಂದಿದ್ದು ಮತ್ತೇ ಅಲ್ಲಿಂದ ಸಿನಿ ಜರ್ನಿ ಶುರುವಾಯಿತು. ಅಲ್ಲಿಂದ ಹಲವು ಚಿತ್ರಗಳಲ್ಲಿ ಎರಡೇನೇ ನಾಯಕಿಯಾಗಿ ಕಾಮಿಡಿ ಕಲಾವಿದೆಯಾಗಿ ನಟಿಸಿದ್ದರು. 2006 ರಲ್ಲಿ ಮಾಧ್ಯಮ ಸಂದರ್ಶನದಲ್ಲಿ ಅವರ ಬದುಕಿನ ಪಯಣದ ಬಗ್ಗೆ ಮಾತನಾಡಿದ್ದ ಪವಿತ್ರಾ ಲೋಕೇಶ್ ನಾನು ಎಂದಿಗೂ ಆರಾಮದಾಯಕವಾಗಿ ಜೀವನ ನಡೆಸಲಿಲ್ಲ. ನಾನು ಏಕಾಂಗಿಯೆಂದು ಭಾವಿಸಿದ್ದೇನೆ. ಆದರೆ ನಾಗಭರಣ ಅವರು ಒತ್ತಾಯಿಸಿದಾಗ ನಾನು ಒಂದು ನಿರ್ಣಯ ತೆಗೆದುಕೊಳ್ಳಲೇ ಬೇಕಾಯಿತು.

ಪೂರ್ವಸಿದ್ಧತೆ ಇಲ್ಲದಿದ್ದರೂ ನಾನು ಸಿನೆಮಾಕ್ಷೇತ್ರಗಳಲ್ಲಿ ನನ್ನ ವೃತ್ತಿಜೀವನವನ್ನಾಗಿ ಸ್ವೀಕರಿಸಲು ನಿರ್ಧಾರ ಮಾಡಿದ್ದೆ. ಇದಕ್ಕೆಲ್ಲ ಏಕೈಕ ಕಾರಣವೆಂದರೆ ನನ್ನ ಪರಿಸ್ಥಿತಿ. ನನ್ನ ಜೀವದಲ್ಲಿ ಗಾಡ್ ಫಾದರ್ ಅಥವಾ ಯಾವುದೇ ಮಾರ್ಗದರ್ಶಿ ಇಲ್ಲದೆ ಹಾಗೆಯೇ ಮುಂದುವರಿಯಲು ಕಠಿಣವಾಗಿದೆ. ಆದ್ದರಿಂದ ನಾನು ಸಿಕ್ಕ ಪ್ರತಿಯೊಂದು ಚಿತ್ರದಲ್ಲಿಯೂ ನಟಿಸುತ್ತೇನೆ. ಎಂದು ಹೇಳಿದ್ದರು. ನಂತರ ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದು ಪಕ್ಕದ ರಾಜ್ಯ ತಮಿಳು, ತೆಲುಗು ಧಾರಾವಾಹಿಗಳಲ್ಲಿ ನಟಿಸಿ ಮನೆಮಾತಾಗಿದ್ದರು. ಅಲ್ಲಿಯ ಧಾರಾವಾಹಿಗಳಲ್ಲಿ ಖ್ಯಾತಿ ಹೊಂದಿದ ಅವರು ಅಲ್ಲಿಂದ ತೆಲುಗು ಸಿನೆಮಾ ಇಂಡಸ್ಟ್ರಿಗೆ ಜಿಗಿದರು ಅಲ್ಲಿ ಅಮ್ಮನ ಪಾತ್ರ ಮಾಡಿ ಸಾಕಷ್ಟು ಜನಪ್ರಿಯತೆ ಗಳಿಸಿದರು.

Revealing Real Age and Life Before Fame of Actress PAVITRA LOKESH- dedicated to spartan - Discussions - Andhrafriends.com

ಹೌದು ಪವಿತ್ರಾ ಲೋಕೇಶ್ ಅವರು ಈಗ ತೆಲುಗು ಸಿನೆಮಾರಂಗದಲ್ಲಿ ಅತ್ಯಂತ ಬೇಡಿಕೆಯ ಪೋಷಕ ನಟಿಯಾಗಿದ್ದು ಬಹುತೇಕ ಎಲ್ಲಾ ಸ್ಟಾರ್ ಸಿನೆಮಾಗಳಲ್ಲಿ ಇವರಿಗೆ ಅಮ್ಮನ ಪಾತ್ರ ಇದ್ದೇ ಇರುತ್ತದೆ. ಇಷ್ಟದ ಬಳಿಕ ಕನ್ನಡದ ಚಿತ್ರರಂಗ ಈಗ ಇವರನ್ನು ಗುರುತಿಸಿದೆ. ಇಂದು ಕನ್ನಡದ ಹಲವು ಚಿತ್ರಗಳಲ್ಲಿ ಪವಿತ್ರಾ ಲೋಕೇಶ್ ಅವರು ನಟಿಸಿದ್ದಾರೆ. ಈಗಾಗಲೇ ಕನ್ನಡ, ತೆಲುಗು ಸೇರಿದಂತೆ 150ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿದ್ದು, ಈಗ ಬಹುಬೇಡಿಕೆಯ ನಟಿಯಾಗಿ ಎಲ್ಲಾ ಕ್ಷೇತ್ರದಲ್ಲೂ ಮಿಚ್ಚುತ್ತಿದ್ದಾರೆ. ಈ ಮಾಹಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ..
ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...