pavitra-lokesh

ನಟಿ ಪವಿತ್ರಾ ಲೋಕೇಶ್ ಕೆನ್ನೆಗೆ ಕಿಸ್ ಕೊಟ್ಟ ನರೇಶ್,ಮತ್ತೆ ಪಬ್ಲಿಕ್ ನಲ್ಲಿ ಕಾಣಿಸಿಕೊಂಡ ಟ್ರೋಲ್ ಜೋಡಿ

CINEMA/ಸಿನಿಮಾ Entertainment/ಮನರಂಜನೆ

ಕನ್ನಡದ ನಟಿ ಪವಿತ್ರಾ ಲೋಕೇಶ್ (Pavitra Lokesh) ಮತ್ತು ತೆಲುಗು ನಟ ನರೇಶ್ (Naresh) ಸಂಬಂಧದ ಬಗ್ಗೆ ಏನೆಲ್ಲ ಸುದ್ದಿಗಳು ಹರಿದಾಡಿದವು. ನರೇಶ್ ಪತ್ನಿ ರಮ್ಯಾ ರಘುಪತಿ (Ramya Raghupathi) ದೊಡ್ಡ ಗಲಾಟೆಯೇ ಮಾಡಿದರು. ಪವಿತ್ರಾ ಲೋಕೇಶ್ ಮತ್ತು ನರೇಶ್ ಇಬ್ಬರೂ ಮೈಸೂರು ಹೋಟೆಲ್ ವೊಂದರಲ್ಲಿ ಸಿಕ್ಕಾಕಿಕೊಂಡು ಈ ಘಟನೆಗೆ ಬೇರೆಯದ್ದೇ ದಿಕ್ಕು ತೋರಿಸಿದರು.

ಈ ಘಟನೆ ಅಲ್ಲಿಗೆ ನಾನಾ ರೂಪ ಪಡೆದುಕೊಂಡಿತು.ಅಷ್ಟಾಗಿಯೂ ನರೇಶ್ ಮತ್ತು ಪವಿತ್ರಾ ಒಟ್ಟಿಗೆ ಕಾಣಿಸಿಕೊಳ್ಳುವುದನ್ನು ಬಿಟ್ಟಿಲ್ಲ. ನಿನ್ನೆಯಷ್ಟೇ ಇಬ್ಬರೂ ವಿಡಿಯೋವೊಂದನ್ನು ಮಾಡಿದ್ದು, ಆ ವಿಡಿಯೋ (Video) ಸಖತ್ ವೈರಲ್ ಕೂಡ ಹಾಕಿದೆ. ಪವಿತ್ರಾ ಲೋಕೇಶ್ ಭುಜದ ಮೇಲೆ ಕೈ ಇಟ್ಟು ಸಖತ್ ರೊಮ್ಯಾಂಟಿಕ್ (Romantic) ಆಗಿ ನರೇಶ್ ಮಾತನಾಡಿದ್ದಾರೆ. ತಾವಿಬ್ಬರೂ ಗಂಡ ಹೆಂಡತಿಯಾಗಿ ನಟಿಸಿರುವ ಕುರಿತು ಮತ್ತು ಆ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಬಂದಿರುವ ಕುರಿತು ಹೇಳಿಕೊಂಡಿದ್ದಾರೆ.

ಈ ವಿಡಿಯೋ ನೋಡಿದ ಅನೇಕರು ಈ ಜೋಡಿಯ ರಿಲೇಶನ್ ಶಿಪ್ ಬಗ್ಗೆ ಮತ್ತೆ ಮಾತನಾಡುವುದಕ್ಕೆ ಶುರು ಮಾಡಿದ್ದಾರೆ. ಇಷ್ಟೊಂದು ಕ್ಲೋಸ್ ಆಗಿ, ರೊಮ್ಯಾಂಟಿಕ್ ಆಗಿ ಇರುವ ಜೋಡಿಯನ್ನು ಕಂಡರೆ ಎಲ್ಲರಿಗೂ ಹಾಗೆಯೇ ಅನಿಸುತ್ತದೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಇನ್ನೂ ಅನೇಕರು ಈ ಜೋಡಿಯ ಬಗ್ಗೆ ನೆಗೆಟಿವ್ ಕಾಮೆಂಟ್ ಗಳನ್ನು ಕೂಡ ಹಾಕಿದ್ದಾರೆ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...