ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟರಾದ ಮೈಸೂರ್ ಲೋಕೇಶ್ ಎಲ್ಲರಿಗೂ ಚಿರಪರಿಚಿತರಾಗಿದ್ದು ಇವರ ಮಗಳೇ ಪವಿತ್ರಾ ಲೋಕೇಶ್. ಹೌದು ಪವಿತ್ರಾ ಲೋಕೇಶ್ ಸ್ಫೂರದ್ರೂಪಿ ಸುಂದರಿಯಾಗಿದ್ದು ನೋಡಲು ಅಪ್ಸರೆಯಂತೆ ಇದ್ದರು. ಹೌದು ಆದರೂ ಕೂಡ ಹೀರೊಯಿನ್ ಆಗಿ ಪವಿತ್ರಾ ಲೋಕೇಶ್ ಮಿಂಚಲಿಲ್ಲ.ಅದಕ್ಕೆ ಕಾರಣ ಏನು ಎನ್ನುವ ಪ್ರಶ್ನೆ ನಿಮ್ಮನ್ನು ಕಾಡಿರಬಹುದು. ಹೌದು ನಟಿ ಪವಿತ್ರಾ ಲೋಕೇಶ್ ಅವರು ಸಿನಿಮಾರಂಗಕ್ಕೆ ಬರುವ ಮುನ್ನವೇ ಅವರ ತಂದೆಯವರು ಅಗಲಿದ್ದು ಅಂದಿನ ಕಷ್ಟದ ದಿನಗಳಲ್ಲಿಯೇ ತಮ್ಮ ಹಾಗೂ ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿ ಪವಿತ್ರಾ ಲೋಕೇಶ್ ಅವರ ಮೇಲೆ ಬಿದ್ದಿತ್ತು
ಇನ್ನು ಖ್ಯಾತ ನಟನ ಮಗಳಾದರೂ ಕನ್ನಡ ಚಿತ್ರರಂಗಕ್ಕೆ ಬರುವುದಕ್ಕೆ ಪವಿತ್ರಾ ಲೋಕೇಶ್ ತುಂಬಾನೇ ಹರಸಾಹಸ ಪಡಬೇಕಾಯಿತು.ಹೌದು ನಟಿ ಪವಿತ್ರಾ ಲೋಕೇಶ್ ಮುಂದೆ ಇದ್ದದ್ದು ಸಿನಿಮಾ ರಂಗದ ಆಯ್ಕೆ. ಹೌದು ಆದರೆ ಚಿತ್ರರಂಗಕ್ಕೆ ಬಂದ ಪವಿತ್ರಾ ಲೋಕೇಶ್ ರವರಿಗೆ ಆರಂಭದಲ್ಲಿ ಅಷ್ಟಾಗಿ ಸಿನಿಮಾ ಆಫರ್ ಗಳು ಸಿಗಲಿಲ್ಲವಂತೆ. ಹೌದಿ ಬಳಿಕ ರೆಬೆಲ್ ಸ್ಟಾರ್ ಅಂಬರೀಶ್ 1995ರಲ್ಲಿ ಮಿಸ್ಟರ್ ಅಭಿಷೇಕ್ ಸಿನಿಮಾದಲ್ಲಿ ಅಭಿನಯಿಸುವುದಕ್ಕೆ ಅವಕಾಶ ಕೊಟ್ಟರು. ಹೌದು ಆದರೆ ಇದು ಅಷ್ಟು ಯಶಸ್ಸು ಪವಿತ್ರಾ ಲೋಕೇಶ್ ಅವರಿಗೆ ತಂದು ಕೊಡಲಿಲ್ಲ.
ಹೌದು ತದನಂತರ ಏಳು ಸಿನಿಮಾಗಳನ್ನು ಮಾಡಿದರೂ ಅಲ್ಲಿಯೂ ಕೂಡ ಯಶಸ್ಸು ಸಿಗಲಿಲ್ಲವಂತೆ. ಹೌದು ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ ಬಳಿಕವೂ ಕೂಡ ಸಿನಿಮಾದಲ್ಲಿ ದೊಡ್ಡ ಮಟ್ಟದ ಯಶಸ್ಸು ಇವರಿಗೆ ಸಿಗಲಿಲ್ಲ. ಹೌದು ಹಾಗಾಗಿ ಕೆಲವು ವರ್ಷ ಸಿನಿಮಾರಂಗ ಬಿಟ್ಟು ದೂರ ಉಳಿದಿದ್ದು ಪವಿತ್ರಾ ಲೋಕೇಶ್ ಬೆಂಗಳೂರಿನಲ್ಲಿ ಒಂದು ವರ್ಷ ಹೆಚ್ ಆರ್ ಆಗಿ ಕೆಲಸ ಕೂಡ ಮಾಡಿದ್ದಾರೆ. ಇನ್ನು ಜನುಮದ ಜೋಡಿ ಮೂಲಕ ಸಿನಿಮಾದಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿದ ಪವಿತ್ರಾ ಲೋಕೇಶ್ ಗೆಳತಿಯರ ಪಾತ್ರದಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸುತ್ತಾ ಬಂದಿದ್ದಾರೆ.

ಇನ್ನು ನಟಿ ಪವಿತ್ರಾ ಲೋಕೇಶ್ ಮೇಲೆ ಕುಟುಂಬ ನಡೆಸುವ ಜವಾಬ್ದಾರಿ ಇದ್ದು ಇದೇ ಉದ್ದೇಶದಿಂದ ಸಿಕ್ಕ ಸಿಕ್ಕ ಪಾತ್ರಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದರು ಎನ್ನಲಾಗಿದೆ. ಹೌದು ಪವಿತ್ರಾ ಲೋಕೇಶ್ ಪೋಷಕ ಪಾತ್ರಗಳ ಮೂಲಕವೇ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದು ಆದರೆ ಒಬ್ಬ ಸ್ಟಾರ್ ನಟಿಯಾಗಿ ಮೆರೆಯುವುದಕ್ಕೆ ಎಲ್ಲಾ ಅರ್ಹತೆ ಇದ್ದರೂ ಅದು ನೆರವೇರಲಿಲ್ಲ.ಇನ್ನು ಪವಿತ್ರಾ ಲೋಕೇಶ್ ಅಪ್ಸರೆಯಂತಿದ್ದರೂ ಪ್ರತಿಭೆ ಇದ್ದರೂ ಹೆಚ್ಚು ಅವಕಾಶ ಸಿಗದ ಕಾರಣಕ್ಕಾಗಿ ಹಿಂದುಳಿದು ಬಿಟ್ಟರು ಎಂದು ಹೇಳಲಾಗುತ್ತಿದೆ. ಹೌದು ಆದರೆ ಇಂದು ತೆಲುಗು ಚಿತ್ರರಂಗದ ಸ್ಟಾರ್ ನಟರ ಅಮ್ಮನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಪವಿತ್ರಾ ಲೋಕೇಶ್. ಹಾಗೆಯೇ ಪೋಷಕ ಪಾತ್ರದಲ್ಲಿಯೂ ಗಮನ ಸೆಳೆಯುತ್ತಿದ್ದು ಕನ್ನಡ ಸೇರಿದಂತೆ ಬೇರೆ ಭಾಷೆಗಳಲ್ಲಿ 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬೇರೆ ಬೇರೆ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಕನ್ನಡದಲ್ಲಿ ಅವರ ನಟನೆಯ ವೆಡ್ಡಿಂಗ್ ಗಿಫ್ಟ್ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ.