ಸ್ಯಾಂಡಲ್ವುಡ್ ನ ಹಿರಿಯ ಕಾಮಿಡಿ ನಟ ಮೈಸೂರು ಲೋಕೇಶ್ ಅವರ ಪುತ್ರಿ ಕನ್ನಡದ ಖ್ಯಾತ ನಟಿಯಾಗಿ ಈಗಾಗಲೇ ಅವರದ್ದೇ ಆದ ಅಭಿನಯದಿಂದ ಹೆಚ್ಚು ಕನ್ನಡಿಗರ ಮತ್ತು ಅಭಿಮಾನಿಗಳ ಪ್ರೀತಿಯನ್ನು ಗೆದ್ದಿದ್ದಾರೆ ಅವ್ರೆ ಪವಿತ್ರಾ ಲೋಕೇಶ್. ಇತ್ತೀಚಿನ ದಿನಗಳಲ್ಲಿ ಕಂಡು ಬಂದ ಒಂದು ಘಟನೆ ಮುಂಚೆ ನಟಿ ಪವಿತ್ರ ಲೋಕೇಶ್ ಅವರು ತುಂಬಾ ಸಂಪ್ರದಾಯದತ್ತ ಕುಟುಂಬದ ಒಂದು ಹೆಣ್ಣು ಎಂದು ಸಾಕಷ್ಟು ಜನರು ಅಂದುಕೊಂಡಿದ್ದರು. ಅದೇ ರೀತಿ ಅವರ ವೈವಾಹಿಕ ಜೀವನವಾಗಿ ತುಂಬಾ ಸೊಗಸಾದ ಸುಖ ಸಂಸಾರ ನಡೆಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು..ಆದರೆ ಯಾವಾಗ ನರೇಶ್ ಅವರೊಟ್ಟಿಗೆ ಅಫೇರ್ ಇರುವುದಾಗಿ ಹೆಚ್ಚು ಚರ್ಚೆ ಆಯ್ತೊ ನಟಿ ಪವಿತ್ರ ಲೋಕೇಶ್ ಅವರ ಬಗ್ಗೆ ಮೊದಲು ಅಂದುಕೊಂಡ ಮಾತುಗಳೆಲ್ಲ ಅಕ್ಷರಸಹ ಸುಳ್ಳು ಆದವು ಎನ್ನಬಹುದು.
ಅವರ ಪತಿ ಸುಚೇಂದ್ರ ಪ್ರಸಾದ್ ಅವರೊಟ್ಟಿಗೆ ಈಗಾಗಲೇ ಪವಿತ್ರ ಲೋಕೇಶ್ ಅವರು ದೂರವಾಗಿ ಬೇರೆ ಕಡೆ ಜೀವನ ಮಾಡುತ್ತಿದ್ದಾರೆ ಎನ್ನುವ ಸುದ್ದಿ ತಿಳಿದಿದ್ದು, ಹಾಗೆ ನರೇಶ್ ಒಟ್ಟಿಗೆ ಮದುವೆ ಸಂಬಂಧ ಸುದ್ದಿ ಕೇಳಿದವೋ ಬಳಿಕ ಈಕೆ ಬಗ್ಗೆ ಬೇರೆ ರೀತಿ ಮಾತನಾಡಲು ಜನರು ಆರಂಭಿಸಿದರು. ಅದು ನಿಮಗೂ ಗೊತ್ತು, ತದನಂತರ ಮೈಸೂರಿನಲ್ಲಿ ನರೇಶ್ ಜೊತೆ ಹೋಟೆಲ್ ಒಂದರಲಿ ರೂಮ್ನಲ್ಲಿ ಪವಿತ್ರ ಲೋಕೇಶ್ ಅವರು ಹೊರಗಡೆ ಬಂದ ದೃಶ್ಯ, ನರೇಶ ಅವರ ಮೂರನೇ ಪತ್ನಿ ರಮ್ಯಾ ರಘುಪತಿ ಮಾಡಿದ ಆರೋಪ ಎಲ್ಲವೂ ಬೇರೆ ರೀತಿಯಾಗಿ ಮಾತನಾಡಲು ಪ್ರೇರೇಪಿಸಿದವು ಎಂದರೆ ತಪ್ಪಾಗಲಾರದು..ಇದಾದ ಮೇಲೆ ನಟಿ ಪವಿತ್ರ ಲೋಕೇಶ್ ಅವರಿಗೆ ಇನ್ನು ಮುಂದೆ ತೆಲುಗು ಚಿತ್ರರಂಗದಲ್ಲಿ ಹೆಚ್ಚು ಸಿನಿಮಾ ಅವಕಾಶಗಳು ಸಿಗುವುದಿಲ್ಲ, ಅವರಿಗೆ ಸ್ಟಾರ್ ನಟರ ತಾಯಿ ಪಾತ್ರಗಳು, ಹಾಗೇನೇ ಈ ಪೋಷಕ ಪಾತ್ರಗಳು ಸಿಗುವುದಿಲ್ಲ ಎಂಬಂತೆ ಕೇಳಿ ಬಂದಿತ್ತು

ಆದರೆ ಇದೀಗ ಕೇಳಿ ಬಂದಿರುವ ಮಾಹಿತಿ ಪ್ರಕಾರ ಪವಿತ್ರ ಲೋಕೇಶ್ ಅವರು ಇತ್ತೀಚಿನ ದಿನಗಳಲ್ಲಿ ಸಿನಿಮಾ ಒಂದಕ್ಕೆ ನಟಿಸಲು ಪ್ರತಿ ದಿನಕ್ಕೆ 90 ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಿದ್ದರಂತೆ. ಆದರೆ ಇದೀಗ ಕೇಳಿ ಬಂದ ಮಾಹಿತಿ ಪ್ರಕಾರ ನಟಿ ತನ್ನ ಸಂಭಾವನೆಯನ್ನು ದಿನಕ್ಕೆ 5 ಲಕ್ಷಕ್ಕೆ ಏರಿಕೆ ಮಾಡಿಕೊಂಡಿದ್ದಾರಂತೆ. ಹೀಗಂತಾ ಈಗ ಮಾಧ್ಯಮ ವಲಯದಲ್ಲಿ ಹೇಳಲಾಗಿದೆ. ಪವಿತ್ರ ಲೋಕೇಶ್ ಅವರು ಅದ್ಭುತ ಕಲಾವಿದೆ, ಅವರ ನಿಜ ಜೀವನದಲ್ಲಿ ಏನೇ ಆದರೂ ಅದು ನಮಗೆ ಸಂಬಂಧವಿಲ್ಲ ಎನ್ನುತ್ತಾರಂತೆ ಕೆಲ ತೆಲುಗು ಚಿತ್ರರಂಗದ ನಿರ್ಮಾಪಕರು. ಮುಂದೆ ಕಾದು ನೋಡಬೇಕು ಏನಾಗುತ್ತದೆ ಎಂದು ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ತಪ್ಪದೆ ಮಾಹಿತಿಯನ್ನು ಶೇರ್ ಮಾಡಿ..