ಕನ್ನಡ ಮಾತ್ರವಲ್ಲದೇ ತೆಲುಗು ಸಿನಿಮಾರಂಗದಲ್ಲಿ ಪೋಷಕ ನಟಿಯಾಗಿ ಮಿಂಚುತ್ತಿರುವ ನಟಿ ಪವಿತ್ರಾ ಲೋಕೇಶ್ ಹಾಗೂ ನಟ ನರೇಶ್ ಬಾಬುರವರ ಮದುವೆ ಸುದ್ದಿಯೊಂದು ಕಳೆದ ಕೆಲವು ದಿನಗಳಿಂದ ಸುದ್ದಿ ಮಾಡುತ್ತಲೇ ಇದೆ. ಎರಡನೇ ಮದುವೆಯ ಮೂಲಕ ಸುದ್ದಿಯಾಗಿರುವ ನಟಿ ಪವಿತ್ರಾ ಲೋಕೇಶ್ ರವರು ಸುಚೇಂದ್ರ ಪ್ರಸಾದ್ ಅವರಿಂದ ದೂರವಾಗಲು ಕಾರಣವೂ ಇದೆ. ಹೌದು, ಮೂಲಗಳ ಪ್ರಕಾರ ಪ್ರಕಾರ ಕೆಲ ವರ್ಷಗಳಿಂದ ಸುಚೇಂದ್ರ ಪ್ರಸಾದ್ ಹಾಗೂ ಪವಿತ್ರ ಲೋಕೇಶ್ ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದರಂತೆ.
ಅವರಿಬ್ಬರ ದಾಂಪತ್ಯದಲ್ಲಿ ಬಿರುಕು ಮೂಡುವುದಕ್ಕೆ ಸುಚೇಂದ್ರ ಪ್ರಸಾದ್ ಅವರ ಕೋಪಾನೆ ಕಾರಣನಾ? ಎನ್ನುವ ಪ್ರಶ್ನೆಯೂ ಹುಟ್ಟಿಕೊಂಡಿದೆ. ಇನ್ನು , ಸುಚೇಂದ್ರ ಪ್ರಸಾದ್ ಅವರಿಂದ ಡೈವೋರ್ಸ್ ಸಿಗುವ ತನಕ ಪವಿತ್ರಾ ಲೋಕೇಶ್ ಅವರು ಕಾಯುತ್ತಿದ್ದಾರೆ. ಸುಚೇಂದ್ರರವರಿಂದ ಡೈವೋರ್ಸ್ ಸಿಕ್ಕಿದ ಬಳಿಕ ನಟ ನರೇಶ್ ಅವರನ್ನು ಮದುವೆಯಾಗಲಿದ್ದಾರೆ ಎನ್ನಲಾಗಿದೆ. ಆದರೆ ನಟಿ ಪವಿತ್ರಾ ಲೋಕೇಶ್ ಹಾಗೂ ಸುಚೇಂದ್ರಾರವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಲು ಕಾರಣವೇನು ತಿಳಿದರೆ ಅಚ್ಚರಿಯಾಗುತ್ತದೆ.
ಇನ್ನು, ನಟಿ ಪವಿತ್ರಾ ಲೋಕೇಶ್ ಅವರು ಕೇಳಿ ಬರುತ್ತಿರುವ ಮದುವೆಯ ಸುದ್ದಿ ಬಗ್ಗೆ ಎಲ್ಲಿಯೂ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಈ ಮದುವೆಯ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿರುವ ನಟ ನರೇಶ್ ಬಾಬುರವರು, ” ಮದುವೆ ಅನ್ನೋದು ಆಟವಲ್ಲ… ‘ಸಿನಿಮಾದವರು ಮದುವೆ ವಿಷಯ ಬೇಗ ಬಯಲಿಗೆ ಕಾಣಿಸುತ್ತದೆ, ಬೇರೆಯವರು ಕಾಣಿಸುವುದಿಲ್ಲ. ಮದುವೆ ಅನ್ನೋದು ಆಟವಲ್ಲ. ಅದು ಒಂದು ಜೀವನ. ಜೀವನದಲ್ಲಿ ಎಷ್ಟೋ ಮಾನಸಿಕ ತಳಮಳಗಳನ್ನು ಅನುಭವಿಸಿದರೆ ಅದರಿಂದ ಹೊರಗೆ ಬರುತ್ತೇವೆ. ಇವತ್ತು ಅಂತಹ ಪರಿಸ್ಥಿತಿ ಇಲ್ಲ…
‘ಹಿಂದೊಮ್ಮೆ ಒಂದೇ ಕುಟುಂಬಿಕ ನ್ಯಾಯಾಲಯ ಇತ್ತು. ಆದರೆ, ಈಗ ಎಂಟು ನ್ಯಾಯಾಲಯಗಳಿವೆ. ಹಾಗೆ, ಹಿಂದೊಮ್ಮೆ ಗಂಡ ಸಂಪಾದನೆ ಮಾಡಿ ತಂದರೆ, ಹೆಂಡ್ತಿ ಮನೆಗೆಲಸ, ಮಕ್ಕಳು, ಹಿರಿಯರನ್ನು ನೋಡಿಕೊಂಡು ಇರುತ್ತಿದ್ದಳು. ಆದರೆ, ಇವತ್ತು ಅಂತಹ ಪರಿಸ್ಥಿತಿ ಇಲ್ಲ. ಆಕೆ ಕೂಡ ಸಂಪಾದನೆ ಮಾಡುತ್ತಿದ್ದಾಳೆ. ಆಕೆ ತನ್ನದೇ ಆದ ಸೆಲ್ ಫೋನ್ ಖರೀದಿಸುತ್ತಾಳೆ. ಆಕೆಗೂ ಸ್ನೇಹಿತರಿದ್ದಾರೆ, ತನ್ನದೇ ಆದ ಜೀವನವಿದೆ. ಅರ್ಥ ಮಾಡಿಕೊಳ್ಳುವವರೊಂದಿಗೆ ಬದುಕಬಲ್ಲೆ… ‘ಈ ನಡುವೆ ಗಂಡ-ಹೆಂಡ್ತಿ ಬೇಗ ದೂರವಾಗುತ್ತಾರೆ. ಭವಿಷ್ಯದಲ್ಲಿ ಮದುವೆ ವ್ಯವಸ್ಥೆಯೇ ಇರದೇ ಹೋಗಬಹುದು. ಒಬ್ಬ ನಟನಿಗೆ ಸ್ಥಿರತೆ ಇರುವುದಿಲ್ಲ. ಅವನು ಸಮಯಕ್ಕೆ ಮನೆಗೆ ಬರುವುದಿಲ್ಲ. ನಾನು ತಿಂಗಳಿಗೆ 28 ದಿನ ಶೂಟಿಂಗ್ ಮಾಡುತ್ತೇನೆ. ನನ್ನ ವೃತ್ತಿ ಜೀವನವನ್ನು ಅರ್ಥಮಾಡಿಕೊಳ್ಳುವ ಜನರೊಂದಿಗೆ ನಾನು ಬದುಕಬಲ್ಲೆ’ ಎಂದು ನರೇಶ್ ಬಾಬು ಹೇಳಿದ್ದಾರೆ.
ಅದೇನೇ ಇರಲಿ, ನಟಿ ಪವಿತ್ರಾ ಲೋಕೇಶ್ ಹಾಗೂ ಸುಚೇಂದ್ರ ಪ್ರಸಾದ್ ಅವರು ದೂರವಾಗಲು ಕಾರಣವೊಂದಿದೆ. ಹೌದು, ಈ ಹಿಂದೆ ಸುಚೇಂದ್ರ ಪ್ರಸಾದ್ ಅವರಿಗೆ ಸಂದರ್ಶನವೊಂದರಲ್ಲಿ ಪ್ರಶ್ನೆವೊಂದನ್ನು ಕೇಳಲಾಗಿತ್ತು. ಈ ವೇಳೆಯಲ್ಲಿ, ಸುಚೇಂದ್ರ ಪ್ರಸಾದ್ ಅವರು ಸಿಡಿ ಮಿಡಿ ಗೊಂಡಿದ್ದರು. ನಿಮಗೆ ಯಾಕೆ ಬೇರೆಯವರ ಮದುವೆ ವಿಚಾರ. ನೀವು ಯಾಕೆ ಕುತೂಹಲ ಭರಿತವಾಗಿ ನೋಡ್ತಾ ಇರ್ತೀರಾ. ಅದು ನಮ್ಮ ನಮ್ಮ ವಿಚಾರ. ಸಂಸಾರ ಅಂದಮೇಲೆ ಕೋಪ ತಾಪ ಮೌನ ಎಲ್ಲವೂ ಕೂಡ ಇರುತ್ತದೆ.
ಅದನ್ನು ನಾನು ಎಲ್ಲಿಯೂ ಕೂಡ ಹೇಳುವುದಕ್ಕೆ ಹೋಗುವುದಿಲ್ಲ ಎಂದು ಹೇಳಿ ಅವತ್ತೇ ತಾವಿಬ್ಬರೂ ವೈವಾಹಿಕ ಜೀವನದಲ್ಲಿ ಸರಿ ಇಲ್ಲ ಎನ್ನುವುದನ್ನು ಸುಳಿವು ನೀಡಿದ್ದರು. ಇದೀಗ ಮೂಲಗಳ ಪ್ರಕಾರ ಪ್ರಕಾರ ಕೆಲ ವರ್ಷಗಳಿಂದ ಸುಚೇಂದ್ರ ಪ್ರಸಾದ್ ಹಾಗೂ ಪವಿತ್ರ ಲೋಕೇಶ್ ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದರಂತೆ. ಅವರಿಬ್ಬರ ದಾಂಪತ್ಯದಲ್ಲಿ ಬಿರುಕು ಮೂಡುವುದಕ್ಕೆ ಸುಚೇಂದ್ರ ಪ್ರಸಾದ್ ಅವರ ಕೋಪ ಎನ್ನಲಾಗಿದೆ. ಇನ್ನೊಂದೆಡೆ ಕೋಟಿ ಒಡೆಯ ನರೇಶ್ ಬಾಬುರವರ ಜೊತೆಗಿನ ಸುತ್ತಾಟವು ಸುಚೇಂದ್ರ ದಂಪತಿಗಳ ನಡುವೆ ಬಿರುಕು ಮೂಡಲು ಕಾರಣ ಎನ್ನಲಾಗಿದೆ.