ತಿಂಗಳಿಗೆ 1 ಲಕ್ಷದವರೆಗೆ ಆದಾಯ ಕೊಡುವ ಈ ಪೇಪರ್ ಪ್ಲೇಟ್ ಬ್ಯುಸಿನೆಸ್ ಕುರಿತು ಇಲ್ಲಿದೆ ಮಾಹಿತಿ

ಹುಬ್ಬಳ್ಳಿಯಲ್ಲಿರುವ ಪ್ರಿನ್ಸ್ ಎಂಟರ್ಪ್ರೈಸಸ್ ಪೇಪರ್ ಪ್ಲೇಟ್ ಗಳನ್ನು ಮತ್ತು ಅದಕ್ಕೆ ಬೇಕಾಗುವ ಕಚ್ಚಾ ವಸ್ತುಗಳನ್ನು ಸಹ ಹೋಲ್ ಸೇಲ್ ಪುರೈಕೆ ಮಾಡುತ್ತದೆ ಹಾಗೆ ಪೇಪರ್ ಪ್ಲೇಟ್ ತಯಾರಿಕೆಯ ಮಷೀನ್ ಗಳನ್ನು ಸಹ ಇಲ್ಲಿಂದ ಪೂರೈಕೆ ಮಾಡಲಾಗುತ್ತಿದೆ. ಇದುವರೆಗೆ (Karnataka) ಕರ್ನಾಟಕದ ಅನೇಕ ಭಾಗಗಳಿಗೆ ಮತ್ತು ಇಲ್ಲಿ ಉತ್ಪಾದನೆಯಾದಂತಹ (Paper plates) ಪೇಪರ್ ಪ್ಲೇಟ್ಗಳು ಬೇರೆ ದೇಶಗಳಿಗೆ ಕೂಡ ಪೂರೈಕೆಯಾಗಿದೆ.

ಇಲ್ಲಿ ಸ್ವಯಂ ಉದ್ಯೋಗ ಮಾಡುವ ಇಚ್ಛೆ ಹೊಂದಿರುವವರಿಗೆ ತರಬೇತಿಯನ್ನು ನೀಡಿ ಅವರಿಂದಲೇ ಉತ್ಪಾದಿಸಲ್ಪಟ್ಟ ವಸ್ತುಗಳನ್ನು ಅವರೇ ಮಾರುಕಟ್ಟೆಗೆ ಪರಿಚಯಿಸಲು ಅವಕಾಶವನ್ನು ನೀಡಲಾಗಿದೆ ಹಾಗೆ ಮೆಷಿನುಗಳ ವಿವಿಧ ಭಾಗಗಳು ಸಹ ಇಲ್ಲಿ ದೊರೆಯುತ್ತವೆ. ಇಲ್ಲಿ ಸಿಗುವ ಮಷೀನ್ ಗಳಲ್ಲಿ ವಿವಿಧ ರೀತಿಯ ಹಾಗೂ ವಿವಿಧ ಸೈಜ್ ನ ಲೇಟ್ಗಳನ್ನು ತಯಾರಿಸಬಹುದು ಈ ಪ್ರಿನ್ಸ್ ಪೇಪರ್ ಪ್ಲೇಟ್ ಹುಬ್ಬಳ್ಳಿ ಯಲ್ಲಿ ತಯಾರಾದಂತಹ ಪ್ಲೇಟ್ಗಳು ಬಹಳ ದಿನ ಸ್ಟಾಕ್ ಆಗಿ ಇರುವುದಿಲ್ಲ ಬೇಗನೆ ಕಾಲಿಯಾಗುತ್ತವೆ. ಎಂಟರ್ಪ್ರೈಸಸ್ ನ ಒಂದು ಗಾಡಿಯಲ್ಲಿ ಎಲ್ಲಾ ಸರಕುಗಳನ್ನು ತುಂಬಿಕೊಂಡು ಅವಶ್ಯವಿರುವ ಅಂಗಡಿಗೆ ಹೋಗಿ ಅವುಗಳನ್ನು ಪೂರೈಕೆ ಮಾಡಿ ಬರಲಾಗುತ್ತದೆ.

paper plate business in Kannada

ಇಲ್ಲಿ ಒಂದು ಮಷೀನ್ ಬೆಲೆ ಸುಮಾರು 85,000 ಗಳಷ್ಟು ಇದೆ ಹಾಗೆ ಇಲ್ಲಿ ಕಟ್ಟಿಂಗ್ ಮಷೀನ್ ಕೂಡ ದೊರೆಯುತ್ತದೆ ಇದರ ಬೆಲೆ ಸುಮಾರು 75,000 ದಿಂದ ಇರುತ್ತದೆ. ರೋಲಿಂಗ್ ಮಷೀನ್ ಗೆ ಹಾಕುವುದರಿಂದ ಅದು ಆಟೋಮೆಟಿಕ್ ಆಗಿ ರೆಡಿ ಆಗಿ ಬರುತ್ತದೆ ಸರಿಯಾಗಿ ಬಂದಿರುವ ಪ್ಲೇಟ್ ಗಳನ್ನು ಎತ್ತಿಕೊಳ್ಳುವುದು ಮಾತ್ರ ಮನುಷ್ಯರ ಕೆಲಸ ಉಳಿದಿದ್ದೆಲ್ಲವನ್ನು ಮಷೀನ್ ಗಳೇ ಮಾಡುತ್ತದೆ ಮಾರ್ಕೆಟ್ ಗಳಲ್ಲಿ ಇದಕ್ಕೆ ಡಿಮ್ಯಾಂಡ್ ಇದೆ ಏಕೆಂದರೆ ಎಲ್ಲಾ ಕಾರ್ಯಕ್ರಮಗಳಲ್ಲೂ ಕೂಡ ಇಂತಹ ಪ್ಲೇಟ್ಗಳನ್ನು ಬಳಕೆ ಮಾಡುತ್ತಾರೆ.

ಈ ಮಷೀನ್ ಅನ್ನು ಖರೀದಿ ಮಾಡಿದಾಗ ಅವರೇ ಬಂದು ಫಿಟ್ಟಿಂಗ್ ಎಲ್ಲ ಮಾಡಿಕೊಡುತ್ತಾರೆ ಅದರ ವರ್ಕಿಂಗ್ ಪ್ರೊಸೆಸ್ ಅನ್ನು ಕೂಡ ತಿಳಿಸಿಕೊಡುತ್ತಾರೆ. ಆರು ತಿಂಗಳಲ್ಲಿ 40 ರಿಂದ 60 ಸಾವಿರ ರೂಪಾಯಿಗಳನ್ನು ಸಂಪಾದನೆ ಮಾಡಬಹುದು.

You might also like

Comments are closed.