ಕುದಿಯುವ ಎಣ್ಣೆಯಲ್ಲಿ ಕೈ ಹಾಕಿ ಪಕೋಡಾ ಫ್ರೈ… Watch video
ಅಡುಗೆ ಮಾಡುವಾಗ ಸಾಸಿವೆಯೊಂದು ಸಿಡಿದು ಮುಖಕ್ಕೆ ರಾಚಿದರೆ ನಾವು ನೋವಿನಿಂದ ಕೂಗಾಡುತ್ತೇವೆ. ಆದರೆ ಇಲ್ಲೋರ್ವ ರಸ್ತೆ ಬದಿ ವ್ಯಾಪಾರಿ, ಕುದಿಯುತ್ತಿರುವ ಎಣ್ಣೆಗೆ ಕೈ ಹಾಕುತ್ತಿದ್ದಾನೆ. ಆದರೂ ಆತನಿಗೆ ಏನು ಆಗಿಲ್ಲ. ಈ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಜೈಪುರ(Jaipur)ದ ಪಕೋಡಾ ತಯಾರಕನೋರ್ವ ಪಕೋಡಾ (pakoda) ತಯಾರಿಸುವ ವೇಳೆ ಹೀಗೆ ಕುದಿಯುವ ಎಣ್ಣೆಯಲ್ಲಿ ಕೈ ಹಾಕುತ್ತಿರುವ ದೃಶ್ಯ ಕಂಡು ಬಂದಿದೆ. ಈ ವಿಡಿಯೋವನ್ನು ಮುಂಬೈ ಮೂಲದ ಬ್ಲಾಗರ್ ಒಬ್ಬರು ರೆಕಾರ್ಡ್ ಮಾಡಿ ಇನ್ಸ್ಟಾಗ್ರಾಮ್ (ನಲ್ಲಿ ಹಾಕಿದ್ದಾರೆ. ಕುದಿಯುವ ಎಣ್ಣೆಗೆ ಕೈ ಹಾಕಿದರು ಆತನಿಗೆ ಏನು ಆಗದೇ ಇರುವುದನ್ನು ಕಂಡು ವಿಡಿಯೋ ವೀಕ್ಷಿಸಿದ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಜೈಪುರದಲ್ಲಿ ರಸ್ತೆಬದಿ ಕಿಸಾನ್ ಪಕೋಡೆ ವಾಲಾ ಹೆಸರಿನ ಫುಡ್‌ಸ್ಟಾಲ್‌ವೊಂದರಲ್ಲಿ ಬೀದಿ ಬದಿ ವ್ಯಾಪಾರಿಯೊಬ್ಬರು ಕಡಾಯಿಯಲ್ಲಿ ಪಕೋಡಾ ಕಾಯಿಸುತ್ತಿದ್ದು, ಅವರು ಪಕೋಡಾವನ್ನು ಬಿಸಿಯಾದ ಎಣ್ಣೆಗೆ ಹಾಕುತ್ತಿದ್ದಾರೆ. ನಂತರ ಕೈಯನ್ನು ಕುದಿಯುತ್ತಿರುವ ಎಣ್ಣೆಗೆ ಮುಳುಗಿಸಿ ಏನೂ ಆಗಿಲ್ಲವೆಂದು ವಿಡಿಯೋ ಮಾಡುತ್ತಿದ್ದ ಬ್ಲಾಗರ್‌ಗೆ ತೋರಿಸಿದ್ದಾರೆ. ಜೈಪುರದ ಹೀಟ್ ಪ್ರೂಫ್ ಪಕೋಡಾವಾಲಾ ಎಂದು ಈ ವಿಡಿಯೋಗೆ ಕ್ಯಾಪ್ಷನ್ ನೀಡಲಾಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಬಹುತೇಕರು ಆತನ ಕೈಗೆ ಏನು ಆಗಿಲ್ಲವೇ ಎಂದು ಪ್ರಶ್ನಿಸಿದ್ದರೆ ಮತ್ತೂ ಕೆಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ಇಂತಹ ಚಿತ್ರ ವಿಚಿತ್ರ ಅಚ್ಚರಿ ಎನಿಸುವ ಘಟನೆಗಳ ವಿಡಿಯೋ ಬೇಕಾದಷ್ಟು ಸಿಗುತ್ತಿದೆ.