ಪದ್ಮಜಾ ರಾವ್

ನಟನೆ ಮೇಲಿನ ಆಸೆಯಿಂದ ಗಂಡನನ್ನು ತೊರೆದು 2 ವರ್ಷದ ಮಗುವಿನ ಜೊತೆ ಮನೆಬಿಟ್ಟು ಬಂದಿದ್ದರಂತೆ ನಟಿ ಪದ್ಮಜಾರಾವ್.!!

CINEMA/ಸಿನಿಮಾ Entertainment/ಮನರಂಜನೆ

ನಮಸ್ಕಾರ ಸ್ನೇಹಿತರೇ, ಕನ್ನಡ ಕಿರುತೆರೆ ಮತ್ತು ಕನ್ನಡ ಚಿತ್ರರಂಗದ ಬಹು ಬೇಡಿಕೆಯ ಪೋಷಕ ನಟಿಯರಲ್ಲಿ ಒಬ್ಬರು ಪದ್ಮರಾವ್.ಮುಂಗಾರು ಮಳೆ ಮತ್ತು ಗಾಳಿ ಪಟಾ ಚಿತ್ರದಿಂದ ಪದ್ಮಜಾ ರಾವ್ ಅವರಿಗೆ ಚಿತ್ರರಂಗದಲ್ಲಿದ್ದ ಬೇಡಿಕೆ ಹೆಚ್ಚಾಯಿತು.ಸ್ಯಾಂಡಲ್ವುಡ್ನ ಎಲ್ಲಾ ಟಾಪ್ ಆಕ್ಟರ್ ಗಳಿಗೆ ಅಮ್ಮ ಅಥವಾ ಅತ್ತಿಗೆ ಪಾತ್ರದಲ್ಲಿ ಕಾಣಿಸಿಕೊಳ್ಳುವ ಪದ್ಮಜಾರಾವ್ ಅವರು ಸಿನಿಮಾ ಮೇಲಿನ ಆಸೆಯಿಂದ ಗಂಡ ಮತ್ತು ಕುಟುಂಬವನ್ನು ಬಿಟ್ಟು ಬಂದಿದ್ದರು.ಹಾಗಾದರೆ ಅದೇನೆಂದು ಸಂಪೂರ್ಣವಾಗಿ ತಿಳಿಯೋಣ ಬನ್ನಿ.

ಪದ್ಮಜಾ ರಾವ್ ಅವರಿಗೆ ಚಿಕ್ಕವಯಸ್ಸಿನಿಂದಲೂ ನಟನೆ ಮೇಲೆ ಬಹಳ ಆಸಕ್ತಿ ಇದೆ. ಆದರೆ ಇವರ ಕುಟುಂಬ ಇವರಿಗೆ ನಟನೆ ಮಾಡಲು ಅವಕಾಶ ಕಲ್ಪಿಸಿ ಕೊಡಲಿಲ್ಲ. ಮನೆಯಲ್ಲಿ ಮೂವರು ಹೆಣ್ಣು ಮಕ್ಕಳಿದ್ದು ಪೂಜಾ ಅವರ ಮೊದಲ ಮಗಳಾಗಿದ್ದರೂ ಹಾಗಾಗಿ ಪದ್ಮಜ ಅವರಿಗೆ ಬೇಗ ಮದುವೆ ಮಾಡಬೇಕು ಅಂತ ತೀರ್ಮಾನಿಸಿ ಹುಡುಗನನ್ನು ಹುಡುಕಲು ತೀರ್ಮಾನಿಸಿದರು.ನೋಡಲು ಬರುವ ಹುಡುಗನ ಬಳಿ ಮಾತನಾಡುವಾಗ ಆಕ್ಟಿಂಗ್ ಮಾಡಲು ಅನುಮತಿ ಕೊಡ್ತೀರಾ ಅಂತ ಕೇಳುತ್ತಿದ್ದರಂತೆ ನಟಿ ಪದ್ಮಜಾ.

Kannada actress Padmaja rejoices the success of 'Chaali Polilu'. | KANNADIGA WORLD

ಇದರಿಂದಾಗಿ ಹುಡುಗನ ಕಡೆಯವರು ಪದ್ಮಜಾ ಅವರನ್ನು ರಿಜೆಕ್ಟ್ ಮಾಡುತ್ತಿದ್ದರಂತೆ. ಕೊನೆಗೆ ಒಂದು ಹುಡುಗನನ್ನು ಒಪ್ಪಿ ಮದುವೆಯಾಗುತ್ತಾರೆ ಪದ್ಮಜಾ.ಆದರೆ ಆತ ಕೂಡ ನಟನೆಗೆ ಒಪ್ಪಲಿಲ್ಲ,ಆ ವೇಳೆಗೆ ಪದ್ಮಜ ಅವರಿಗೆ ಒಂದು ಮಗು ಸಹ ಇತ್ತು.ಚಿತ್ರರಂಗದ ಮೇಲೆ ಇದ್ದ ಒಲವಿಂದ ಎರಡು ವರ್ಷದ ಮಗುವನ್ನು ಕರೆದುಕೊಂಡು ಮನೆಬಿಟ್ಟ ಬಂದುಬಿಡುತ್ತಾರೆ ಪದ್ಮಜಾರಾವ್.

ನಂತರ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳುತ್ತಾರೆ.ಇಂದು ಪದ್ಮಜಾ ಅವರು ಕನ್ನಡ ಚಿತ್ರರಂಗದ ಬಹು ಬೇಡಿಕೆಯ ಪೋಷಕ ನಟಿಯಾಗಿ ಬೆಳೆದಿದ್ದಾರೆ. ಅನೇಕ ಸಿನಿಮಾಗಳಲ್ಲಿ ಅನೇಕ ಒಳ್ಳೆಯ ಪಾತ್ರಗಳಲ್ಲಿ ನಟಿಸಿದ್ದಾರೆ ಪದ್ಮಜಾ ರಾವ್. ಈಗ ಪದ್ಮಜಾರಾವ್ ಅವರು ಮತ್ತೊಂದು ಮದುವೆಯಾಗಿ ಸುಖಜೀವನ ನಡೆಸುತ್ತಿದ್ದಾರೆ. ತಮ್ಮ ಜೀವನದ ಘಟನೆಗಳ ಬಗ್ಗೆ ಇತ್ತೀಚಿನ ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ….




ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.