ಇಲ್ಲಿಯ ಉಪಚುನಾವಣೆ ಪ್ರಚಾರಕ್ಕಾಗಿ ಬಂದಿದ್ದ ಎಂ.ಐ.ಎಂ. ಪಕ್ಷದ ಅಧ್ಯಕ್ಷ ಸಂಸದ ಅಸಾದುದ್ದಿನ ಓವೈಸಿಯ ಸ್ವಾಗತವನ್ನು ‘ಪಾಕಿಸ್ತಾನ ಜಿಂದಾಬಾದ’ ಘೋಷಣೆಯೋಂದಿಗೆ ಮಾಡಲಾಯಿತು. ಈ ಘೋಷಣೆಯನ್ನು ನೀಡಿದವರ ಗುರುತು ಪತ್ತೆಯಾಗಿಲ್ಲ. ಇಲ್ಲಿಯ ಉಪಚುನಾವಣೆ ಪ್ರಚಾರಕ್ಕಾಗಿ ಬಂದಿದ್ದ ಎಂ.ಐ.ಎಂ. ಪಕ್ಷದ ಅಧ್ಯಕ್ಷ ಸಂಸದ ಅಸಾದುದ್ದಿನ ಓವೈಸಿಯ ಸ್ವಾಗತವನ್ನು ‘ಪಾಕಿಸ್ತಾನ ಜಿಂದಾಬಾದ’ ಘೋಷಣೆಯೋಂದಿಗೆ ಮಾಡಲಾಯಿತು. ಈ ಘೋಷಣೆಯನ್ನು ನೀಡಿದವರ ಗುರುತು ಪತ್ತೆಯಾಗಿಲ್ಲ.
ಜೂನ ೧೯ರ ಮಧ್ಯಾಹ್ನ ಈ ಘಟನೆ ನಡೆದಿದೆ. ರಾಂಚಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ನಂತರ ಓವೈಸಿ ಅವರನ್ನು ಕಾರ್ಯಕರ್ತರು ಸ್ವಾಗತಿಸಿದರು, ಆ ಸಮಯದಲ್ಲಿ ಘೋಷಣೆ ನೀಡಲಾಯಿತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲಿದೆ. ಈ ಘಟನೆಯ ಕುರಿತು ಆಳವಾದ ತನಿಖೆ ನಡೆಸಲಾಗುವುದು ಎಂದು ರಾಂಚಿ ಪೊಲೀಸ ವರಿಷ್ಠಾಧಿಕಾರಿ ಅಂಶುಮನ ಕುಮಾರ ಹೇಳಿದ್ದಾರೆ.
ಇದರಿಂದ ಮತಾಂಧರಿಗೆ ಪೊಲೀಸ, ಆಡಳಿತ, ಸರಕಾರ, ಕಾನೂನು ಇತ್ಯಾದಿಗಳ ಭಯ ಉಳಿದಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಈ ರೀತಿಯಲ್ಲಿ ಆಗುವುದು ಇದು ಸರಕಾರಿ ಸಂಸ್ಥೆಗಳಿಗೆ ನಾಚಿಕೆಗೇಡಿನ ಸಂಗತಿ. ನೂಪುರ್ ಶರ್ಮಾ ಅವರ ಹೇಳಿಕೆಗಳು ರಾಜಕೀಯ ಬಿರುಗಾಳಿಯನ್ನು ಎಬ್ಬಿಸಿ ದೇಶಾದ್ಯಂತ ಪ್ರತಿಭಟನೆಯ ಅಲೆಯನ್ನು ಎಬ್ಬಿಸಿದ ಒಂದು ವಾರದ ನಂತರ ಪ್ರಧಾನಿಯವರ ಮೇಲೆ ಓವೈಸಿ ಹೊಸ ದಾಳಿ ನಡೆಸಿದ್ದಾರೆ.
ತಮ್ಮ ತಾಯಿ ಹೀರಾಬೆನ್ ಮೋದಿಯವರ ಹುಟ್ಟುಹಬ್ಬದ ಅಂಗವಾಗಿ ಬರೆದ ಬ್ಲಾಗ್ ಪೋಸ್ಟ್‌ನಲ್ಲಿ, ಅಬ್ಬಾಸ್ ಅವರೊಂದಿಗಿನ ತಮ್ಮ ನೆನಪುಗಳನ್ನು ಪ್ರಧಾನಿ ನೆನಪಿಸಿಕೊಂಡಿದ್ದರು. ನನ್ನ ತಂದೆಯ ಗೆಳೆಯರೊಬ್ಬರು ಸಮೀಪದ ಹಳ್ಳಿಯಲ್ಲಿ ವಾಸಿಸುತ್ತಿದ್ದರು, ಅವರ ಅಕಾಲಿಕ ಮರಣದ ನಂತರ, ನನ್ನ ತಂದೆ ತನ್ನ ಸ್ನೇಹಿತನ ಮಗ ಅಬ್ಬಾಸ್ ನನ್ನು ನಮ್ಮ ಮನೆಗೆ ಕರೆತಂದರು.
ಅವರು ನಮ್ಮೊಂದಿಗೆ ಉಳಿದುಕೊಂಡು ತಮ್ಮ ವಿದ್ಯಾಭ್ಯಾಸ ಪೂರ್ಣಗೊಳಿಸಿದರು. ನಮ್ಮ ತಾಯಿ ಅಬ್ಬಾಸ್ ಬಗ್ಗೆ ನಮಗೆ ತೋರಿದ ಪ್ರೀತಿ ಮತ್ತು ಕಾಳಜಿಯನ್ನೇ ಸಮನಾಗಿ ಅಬ್ಬಾಸ್ ಮೇಲೆ ತೋರಿಸಿದ್ದರು. ಪ್ರತಿ ವರ್ಷ ಈದ್‌ನಲ್ಲಿ ನಮ್ಮ ತಾಯಿ ಅವನ ನೆಚ್ಚಿನ ಭಕ್ಷ್ಯಗಳನ್ನು ತಯಾರಿಸುತ್ತಿದ್ದರು ಎಂದು ಮೋದಿ ಬರೆದಿದ್ದಾರೆ.
ಇದಕ್ಕೆ ಪ್ರತ್ಯುತ್ತರ ನೀಡಿರುವ ಓವೈಸಿ, ‘ಪ್ರಧಾನಿ ಎಂಟು ವರ್ಷಗಳ ನಂತರ ತಮ್ಮ ಸ್ನೇಹಿತನನ್ನು ನೆನಪಿಸಿಕೊಂಡಿದ್ದಾರೆ. ನಿಮಗೆ ಈ ಸ್ನೇಹಿತನಿದ್ದಾನೆಂದು ನಮಗೆ ತಿಳಿದಿರಲಿಲ್ಲ. ನಾವು ಪ್ರಧಾನಿಗೆ ಮನವಿ ಮಾಡುತ್ತೇವೆ, ದಯವಿಟ್ಟು ಅಬ್ಬಾಸ್ ಅವರಿಗೆ ಕರೆ ಮಾಡಿ. ಅವರು ಅಸಾದುದ್ದೀನ್ ಓವೈಸಿ ಮತ್ತು ಉಲೇಮಾಗಳ (ಧಾರ್ಮಿಕ ಮುಖಂಡರು) ಭಾಷಣಗಳನ್ನು ಕೇಳಲು ಹೇಳಿ. ನಾವು ಸುಳ್ಳು ಹೇಳುತ್ತಿದ್ದೇವಾ ಎಂದು ಕೇಳಿ ಎಂದು ಮಾತಿನಲ್ಲೇ ಪ್ರಧಾನಿ ಮೋದಿಯನ್ನ ಕುಟುಕಿದ್ದಾರೆ.
Islamist raise pro-Pakistan slogans to greet AIMIM chief Asaduddin Owaisi at Ranchi airport: Reportshttps://t.co/6wL1Wa9U1K
— OpIndia.com (@OpIndia_com) June 20, 2022