OMG

ಅಪಾಯ ಅನ್ನೋದು ಎಲ್ಲಿಂದ ಹೇಗೆ ಬೇಕಾದ್ರೂ ಬರಬಹುದು ಅನ್ನೋದಿಕ್ಕೆ ಈ ವೀಡಿಯೋನೆ ಸಾಕ್ಷಿ: ಕಾಲ ಕೆಟ್ಟರೆ ಹಗ್ಗ ಕೂಡಾ ಹಾವಾಗಬಹುದು!

Entertainment/ಮನರಂಜನೆ

ಮನುಷ್ಯನ ಜೀವನದಲ್ಲಿ ಸಮಯ ಯಾವಾಗಲೂ ಒಂದೇ ರೀತಿ ಇರುತ್ತೆ ಅಂತ ಯಾರೂ ಕೂಡಾ ಎಂದೂ ಹೇಳೋದಿಕ್ಕೆ ಸಾಧ್ಯವಿಲ್ಲ. ಮುಂದೆ ಏನಾಗುತ್ತೆ ಅನ್ನೋದು ಸ್ಪಷ್ಟವಾಗಿ ಅಥವಾ ಬಹಳ ನಿಖರವಾಗಿ ಯಾರಿಂದನೂ ಕೂಡ ಊಹೆ ಮಾಡಲಿಕ್ಕೂ ಸಾಧ್ಯವಿಲ್ಲ. ಹಾಗೇನಾದ್ರೂ ಸಾಧ್ಯ ಇದ್ದಿದ್ರೆ ಬಹುಶಃ ಎಲ್ಲರೂ ಕೂಡ ಮುಂದೆ ಸಂಭವಿಸುವ ಅ ಪಾ ಯ ದಿಂದ ಎಚ್ಚೆತ್ತುಕೊಂಡು ತಮ್ಮನ್ನ ತಾವು ಸುರಕ್ಷತೆಯಿಂದ ಇರೋ ಹಾಗೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದರು. ಆದರೆ ವಿಪರ್ಯಾಸ ಏನಂದ್ರೆ ಎಷ್ಟೋ ಸಂದರ್ಭಗಳಲ್ಲಿ ಸೂಕ್ತವಾದ ಮುಂಜಾಗ್ರತೆ ವಹಿಸಿದ್ದರೂ ಅ ಪಾ ಯ ಬಂದು ಮೇಲೆ ಎರಗಿದ ಉದಾಹರಣೆಗಳು ಕೂಡಾ ಉಂಟು. ಅದಕ್ಕೆ ತಿಳಿದವರು, ಹಿರಿಯವರು ಸಾಮಾನ್ಯವಾಗಿ ಕಾಲ ಕೆಟ್ಟಾಗ, ಹಣೆ ಬರಹ ಸರಿ ಇಲ್ಲದಾಗ ಕೈಯಲ್ಲಿರೋ ಹಗ್ಗ ಕೂಡಾ ಹಾವಾಗಿ ಕಚ್ಚಬಹುದು ಅಂತ. ವಿಧಿ ನಮ್ಮ ಹಣೆಯಲ್ಲಿ ಏನು ಬರೆದಿರುತ್ತೆ ಅದನ್ನ ಯಾರಿಂದಲೂ ಕೂಡ ತಪ್ಪಿಸುವುದಕ್ಕೆ ಸಾಧ್ಯವೇ ಇಲ್ಲ
ಅಂತ ಕೂಡಾ ಹೇಳ್ತಾರೆ.‌

ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೋವನ್ನು ಒಂದು ಸಲ ನೋಡಿದಾಗ ನಾವು ಇಷ್ಟು ಹೊತ್ತು ಏನಿಲ್ಲ ಹೇಳಿದವು ಅದೆಲ್ಲಾ ನಿಜಾನೆ ಅನಿಸೋದು ಖಂಡಿತ. ಯಾಕೆ ಅನ್ನೋದು ವೀಡಿಯೋ ನೋಡಿದ ಪ್ರತಿಯೊಬ್ಬರಿಗೂ ಕೂಡ ಅರ್ಥ ಆಗುತ್ತೆ. ವೀಡಿಯೋದಲ್ಲಿ ಒಬ್ಬ ವ್ಯಕ್ತಿ ತಾನು ನಿಂತಿದ್ದ ಜಾಗದಲ್ಲೇ ನಿಂತಿದ್ದರೆ ಬಹುಶಃ ಆ ವ್ಯಕ್ತಿಗೆ ಅಪಾಯ ಸಂಭವಿಸುತ್ತಿರಲಿಲ್ವೋ ಏನೋ? ಆದರೆ ದುರಾದೃಷ್ಟವೋ ಅಥವಾ ಹಣೆ ಬರಹವೋ ಆತನ ಜೊತೆ ಆಟ ಆಡಿದೆ ಅನ್ನೋದಕ್ಕೆ ಈ ವಿಡಿಯೋ ಒಂದು ಉದಾಹರಣೆ ಅಂತಾನೇ ನಾವು ಹೇಳಬಹುದು. ಈ ಘಟನೆ ನಡೆದಿದ್ದು ಎಲ್ಲಿ ಅಂತ ಗೊತ್ತಿಲ್ಲವಾದರೂ ಈ ವಿಡಿಯೋ ಮಾತ್ರ ಸೋಶಿಯಲ್ ಮೀಡಿಯಾ ಗಳಲ್ಲಿ ವೈರಲ್ ಖಂಡಿತ ಆಗಿದೆ.

ಹಾಗಿದ್ರೆ ಈ ವಿಡಿಯೋದಲ್ಲಿ ಅಂತಹ ಘಟನೆ ನಡೆದಿದ್ದಾದರೂ ಏನು? ಅನ್ನುವಂತಹ ಪ್ರಶ್ನೆ ನಿಮಗೆ ಇದ್ರೆ ಅದಕ್ಕೆ ನಾವು ಉತ್ತರವನ್ನು ಕೊಡ್ತೀವಿ. ಈ ವಿಡಿಯೋವನ್ನು ಗಮನಿಸಿದಾಗ ಅಲ್ಲಿ ಇಬ್ಬರು ವ್ಯಕ್ತಿಗಳನ್ನು ನೋಡಬಹುದು. ಅದರಲ್ಲಿ ಒಬ್ಬ ವ್ಯಕ್ತಿ ಲಾರಿಯ ಟೈರಿಗೆ ಗಾಳಿಯನ್ನ ತುಂಬುತ್ತಿದ್ದಾನೆ. ಮತ್ತೊಬ್ಬ ವ್ಯಕ್ತಿ ಅವನ ಹಿಂದೆ ನಿಂತು ಅದನ್ನ ಗಮನಿಸುತ್ತಾ ಇದ್ದಾನೆ. ಈ ಸನ್ನಿವೇಶ ನೋಡಿದಾಗ ಇದೊಂದು ಸಾಮಾನ್ಯವಾದ ಘಟನೆ ಅಂತ ಅನಿಸುತ್ತದೆ. ಆದರೆ ಸ್ವಲ್ಪ ತಾಳ್ಮೆಯಿಂದ ಅಲ್ಲಿ ಮುಂದೆ ಏನ್ ನಡೆಯುತ್ತೆ ಅನ್ನೋದನ್ನ ಸೂಕ್ಷ್ಮವಾಗಿ ಗಮನಿಸಿದಾಗ ನಿಜಕ್ಕೂ ಕೂಡ ಒಂದು ಕ್ಷಣ ಶಾ ಕ್ ಆಗುತ್ತೆ.

ಅಲ್ಲಿ ಗಾಳಿ ತುಂಬುತ್ತಾ ಇದ್ದ ವ್ಯಕ್ತಿಯ ಹಿಂದೆ ನಿಂತಿದ್ದಂತಹ ಇನ್ನೊಬ್ಬ ವ್ಯಕ್ತಿ ತಾನು ನಿಂತಿರುವ ಜಾಗವನ್ನು ಬಿಟ್ಟು ಗಾಳಿ ತುಂಬಿಸುತ್ತಿದ್ದಂತಹ ವ್ಯಕ್ತಿಯ ಮುಂದೆ ಹೋಗಿ ನಿಂತುಕೊಳ್ಳುತ್ತಾನೆ.‌ ಆಗಲೂ ಕೂಡಾ ಪರಿಸ್ಥಿತಿ ಸಾಮಾನ್ಯವಾಗಿ ಕಾಣುತ್ತೆ. ಆದರೆ ಇದ್ದಕ್ಕಿದ್ದ ಹಾಗೆ ಅಲ್ಲಿ ನಡೆಯುವ ಘಟನೆ ಮಾತ್ರ ಯಾರೂ ಊಹಿಸಿರದ್ದಂತದ್ದು. ಏಕೆಂದರೆ ಆ ವೇಳೆಯಲ್ಲಿ ಬಹುಶಃ ಟೈಯರ್ ಗೆ ತುಂಬಿದಂತಹ ಗಾಳಿಯ ಪ್ರಮಾಣ ನಿಗದಿತ ಪ್ರಮಾಣಕ್ಕಿಂತ ಹೆಚ್ಚಾಯ್ತೇನೋ ಅನ್ನೋ ರೀತಿ ಟೈಯರ್ ಸಿಡಿದಿದೆ. ಅದು ಸಿಡಿದ ರಭಸಕ್ಕೆ ಹಿಂದಿನಿಂದ ಮುಂದೆ ಬಂದು ನೋಡ್ತಾ ಇದ್ದ ಆ ವ್ಯಕ್ತಿಗೆ ಅದು ಕೂಡ ಸರಿಯಾಗಿ ಬಡಿದಿದೆ. ಟೈಯರ್ ಸಿಡಿದ ಕೂಡಲೇ ಗಾಳಿಯನ್ನು ತುಂಬಿಸುತ್ತಿದ್ದ ವ್ಯಕ್ತಿ ಕೂಡ ಭಯದಿಂದ ಹಿಂದೆ ಬಿದ್ದಿದ್ದಾನೆ.

ವಿಡಿಯೋ ನೋಡಿ

ಇನ್ನು ಟಯರ್ ನಿಂದ ಹೊಡೆತ ತಿಂದ ಮತ್ತೊಬ್ಬ ವ್ಯಕ್ತಿ ಕೂಡ ನೆಲದ ಮೇಲೆ ಉರುಳಿ ಬಿದ್ದಿದ್ದಾನೆ. ಬಹುಶಃ ಅವನಿಗೆ ಪ್ರಜ್ಞೆ ತಪ್ಪಿತು ಎಂದು ನಮಗೆ ಅನುಮಾನ ಮೂಡುತ್ತದೆ. ಆದರೆ ಕೆಲವು ಕ್ಷಣಗಳ ನಂತರ ಆತ ನಿಧಾನವಾಗಿ ತಾನೇ ಮೇಲೆ ಎದ್ದೇಳ್ತಾನೆ. ಏನೇ ಆದ್ರೂ ಕೂಡಾ ಈ ವಿಡಿಯೋ ಒಂದು ಕ್ಷಣ ನೋಡುಗನ ಎದೆಯನ್ನು ಝಲ್ಲೆನಿಸುವ ಹಾಗಿದೆ. ಈ ವೈರಲ್ ವಿಡಿಯೋವನ್ನ ಈಗಾಗಲೇ 9 ಲಕ್ಷಕ್ಕೂ ಅಧಿಕ ಜನ ನೋಡಿದ್ದಾರೆ. 8 ಸಾವಿರಕ್ಕೂ ಅಧಿಕ ಜನರು ಲೈಕ್ ನೀಡಿದ್ದಾರೆ. ಒಟ್ಟಾರೆ ಕಾಲ ಕೆಟ್ಟಾಗ, ವಿಧಿ ಲಿಖಿತವನ್ನು ಯಾರಿಂದಲೂ ತಪ್ಪಿಸುವುದಕ್ಕೆ ಸಾಧ್ಯ ಇಲ್ಲ ಅನ್ನೋದನ್ನಿ, ಅಪಾಯ ಎಲ್ಲಿಂದ ಬೇಕಾದ್ರೂ, ಹೇಗೆ ಬೇಕಾದ್ರೂ ಎದುರಾಗಬಹುದು ಅನ್ನೋದನ್ನ ಈ ವಿಡಿಯೋ ತೋರಿಸಿರೋ ಹಾಗೆ ಕಾಣ್ತಾ ಇದೆ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.