ಕನ್ನಡ ಕಿರುತೆರೆಯಲ್ಲಿ ಕಳೆದ ಹತ್ತು ವರ್ಷಗಳಿಂದ ಸಕ್ರಿಯರಾಗಿರುವ ಕವಿತಾ ಗೌಡ ಮತ್ತು ಚಂದನ್ ಕುಮಾರ್ ಅವರಿಬ್ಬರಿಗೂ ಅಪಾರ ಪ್ರಮಾಣದ ಅಭಿಮಾನಿಗಳನ್ನು ಇದ್ದಾರೆ. ಇಬ್ಬರು ಸಹ ನೋಡಲು ಸ್ಪುರಧ್ರೂಪಿಗಳು, ನಟನೆ ವಿಷಯದಲ್ಲಿ ಇಬ್ಬರು ಸಹ ಅಷ್ಟೇ ಅದ್ಭುತ ಕಲೆಗಾರರು. ರಾಧಾ ಕಲ್ಯಾಣ ಎನ್ನುವ ಧಾರವಾಹಿ ಮೂಲಕ ಚಂದನ್ ಗೌಡ ಅವರು ಕಿರುತೆರೆಲೋಕವನ್ನು ಪ್ರವೇಶಿಸಿದರು.
ನಂತರ ಲಕ್ಷ್ಮೀ ಬಾರಮ್ಮ ಎನ್ನುವ ಮೇಘ ಧಾರವಾಹಿ ಇವರಿಗೆ ದೊಡ್ಡ ಪ್ರಮಾಣದ ಹಿಟ್ ಕೊಟ್ಟಿತ್ತು. ಈ ಸಕ್ಸಸ್ಸಿನಿಂದ ಬೆಳ್ಳಿತೆರೆ ಮೇಲೆ ಹೀರೋ ಆಗಿ ಮಿಂಚಲು ಶುರು ಮಾಡಿದ ಇವರು ಬೆಂಗಳೂರು 56, ಲವ್ ಯು ಅಲಿಯ ಮತ್ತು ಪ್ರೇಮ ಬರಹ ಸಿನಿಮಾಗಳಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಚಿನ್ನು ಎನ್ನುವ ಪಾತ್ರಧಾರಿಯಾದ ಕವಿತ ಗೌಡ ಅವರು ಸಹ ಚಂದನ್ ಅವರ ಜೊತೆ ಜೊತೆಯೇ ಆಕ್ಟಿಂಗ್ ಕೆರಿಯರ್ ಶುರು ಮಾಡಿದವರು.
ಭರತನಾಟ್ಯ ಕಲಾವಿದೆ ಆಗಿದ್ದ ಇವರಿಗೆ ಸಲೀಸಾಗಿ ಕಿರುತೆರೆಯಲಿ ಆಗುವ ಅವಕಾಶ ಬಂತು, ತನ್ನ ಮೊದಲ ಧಾರವಾಹಿಯಲ್ಲೇ ಹೆಸರು ಮಾಡಿದ ಇವರು ನಂತರ ಪರಭಾಷೆ ಧಾರಾವಾಹಿಗಳಲ್ಲಿ ಕೂಡ ಕಾಣಿಸಿಕೊಂಡಿದ್ದರು. ಶ್ರೀನಿವಾಸ ಕಲ್ಯಾಣ, ಗೋವಿಂದ ಗೋವಿಂದ, ಬೀರಬಲ್, ದ್ವಿಮುಖ ಮುಂತಾದ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೊನೆ ಎಪಿಸೋಡ್ ವರೆಗೂ ಉಳಿದುಕೊಂಡಿದ್ದ ಸ್ಟ್ರಾಂಗೆಸ್ಟ್ ವುಮೆನ್ ಆದ ಕವಿತ ಗೌಡ ಅವರು ಬಿಗ್ ಬಾಸ್ ಇಂದ ಬಂದಮೇಲೆ ಚಂದನ್ ಕುಮಾರ್ ಅವರನ್ನು ವಿವಾಹವಾಗಿದ್ದಾರೆ. ಇವರಿಬ್ಬರದು ಪ್ರೇಮ ವಿವಾಹವಾಗಿದ್ದು ಮದುವೆ ಆದ ಮೇಲೆ ಸಿನಿಮಾ ಧಾರವಾಹಿ ಜೊತೆ ಬಿಸಿನೆಸ್ ಕಡೆ ಕೂಡ ಗಮನ ಹರಿಸಿದ್ದಾರೆ.
ಚಂದನ್ ಕುಮಾರ್ ಅವರು ಸಹ ಬಿಗ್ ಬಾಸ್ ಸೀಸನ್ ಮೂರರಲ್ಲಿಯೇ ಭಾಗವಹಿಸಿ ರನ್ನರ್ ಆಗಿ ಹೊರಬಂದಿದ್ದರು. ಅಲ್ಲಿಂದ ಬಂದ ಮೇಲೆ ಸರ್ವ ಮಂಗಳ ಮಾಂಗಲ್ಯೇ ಮತ್ತು ತೆಲುಗಿನ ಎರಡು ಮೂರು ಧಾರವಾಹಿಗಳಲ್ಲಿ ನಾಯಕನಟನಾಗಿ ಅಭಿನಯಿಸಿದ ಇವರು ಸದ್ಯಕ್ಕೆ ಸುವರ್ಣ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಮರಳಿ ಮನಸಾಗಿದೆ ಧಾರವಾಹಿಯಲ್ಲಿ ಮುಖ್ರ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಜೊತೆಗೆ ನಾಗಶೇಖರ್ ಅವರ ನಿರ್ದೇಶನದ ಡಾರ್ಲಿಂಗ್ ಕೃಷ್ಣ ಅವರ ನಿರ್ಮಾಣದ ಶ್ರೀ ಕೃಷ್ಣ ಜಿ ಮೇಲ್ ಡಾಟ್ ಕಾಮ್ ಸಿನಿಮಾದಲ್ಲಿ ಪ್ರಮುಖ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ನಡುವೆ ಬಿಸಿನೆಸ್ ಕಡೆ ಕೂಡ ಮುಖ ಮಾಡಿದ ಈ ಜೋಡಿ ಒಟ್ಟಿಗೆ ಬಿರಿಯಾನಿ ಪ್ಯಾಲೆಸ್ ಎನ್ನುವ ರೆಸ್ಟೋರೆಂಟ್ ಅನ್ನು ಬೆಂಗಳೂರಿನ ಸಹಕಾರ ನಗರದಲ್ಲಿ ಓಪನ್ ಮಾಡಿದ್ದರು.
ಹ್ಯಾಟ್ರಿಕ್ ಹೀರೋ ಶಿವಣ್ಣ ಅವರೇ ಸಮಾರಂಭದಲ್ಲಿ ಭಾಗಿಯಾಗಿ ಉದ್ಘಾಟನೆ ಮಾಡಿದ್ದರು. ಕಳೆದ ಕೆಲವು ದಿನಗಳ ಹಿಂದೆ ಇದೇ ಹೋಟೆಲ್ ಅಲ್ಲಿ ಕಳ್ಳತನವಾಗಿದೆ ಎನ್ನುವ ಸುದ್ದಿ ಪ್ರಸಾರವಾಗಿತ್ತು. ಅದೇ ಸಮಯದಲ್ಲಿ ಚಂದನ್ ಅವರು ಮಾಡಿಕೊಂಡ ಒಂದು ಎಡವಟ್ಟಿನಿಂದ ತೆಲುಗು ಧಾರಾವಾಹಿಗಳಿಂದ ಬ್ಯಾನ್ ಆದರು. ಈ ರೀತಿ ಸಂಕಷ್ಟದ ಸಮಯ ಮತ್ತು ಬೇಸರದ ಸ್ಥಿತಿಯಲ್ಲಿದ್ದ ಇವರ ಮನಸ್ಸಿನಲ್ಲಿ ಈಗ ಭರವಸೆ ಮೂಡಿದೆ. ಇಬ್ಬರು ಮತ್ತೆ ಬಿಸಿನೆಸ್ ಅಲ್ಲಿ ತೊಡಗಿಸಿಕೊಳ್ಳುವ ನಿರ್ಧಾರ ಮಾಡಿದ್ದು ಮೈಸೂರು ರೋಡ್ ಅಲ್ಲಿ ಸಿಕೆ ಮಂಡಿಪೇಟೆ ಪಲಾವ್ ಎನ್ನುವ ಹೆಸರಿನಲ್ಲಿ ರೆಸ್ಟೋರೆಂಟ್ ಓಪನ್ ಮಾಡಿದ್ದಾರೆ. ನಿನ್ನೆ ಅಷ್ಟೇ ರೆಸ್ಟೋರೆಂಟ್ ಓಪನ್ ಆಗಿದ್ದು ಕಲಾವಿದರು ಹಾಗೂ ಇವರ ಸ್ನೇಹಿತರ ಕುಟುಂಬಸ್ಥರೆಲ್ಲರೂ ಇಬ್ಬರಿಗೂ ಶುಭವಾಗಲಿ ಎಂದು ಹರಸಿದ್ದಾರೆ ಮತ್ತು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಇಬ್ಬರೂ ಕೂಡ ತಮ್ಮ ರೆಸ್ಟೋರೆಂಟ್ ಓಪನ್ ಸಮಾರಂಭದ ಫೋಟೋಗಳನ್ನು ಅಪ್ಲೋಡ್ ಮಾಡಿ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ.