
ಪುನೀತ್ ರಾಜ್‌ಕುಮಾರ್ ಅವರು ನಮ್ಮನ್ನು ಬಿಟ್ಟು ಇಹ ಲೋಕ ತ್ಯಜಿಸಿ 5 ದಿನಗಳು ಕಳೆದಿವೆ. ಅಪ್ಪು ಅವರ ಅಂತ್ಯಕ್ರಿಯೆ ಮುಗಿದಿದ್ದು, 5 ನೇ ದಿನ ಅಪ್ಪು ವಿನ ಸಮಾ ಧಿಗೆ ಹಾಲು ತುಪ್ಪು ಎರೆಯುವ ಕಾರ್ಯವು ಕೂಡ ಮುಗಿದಿದೆ. ಇನ್ಮೇಲೆ ಅಭಿಮಾನಿಗಳು ಸಹ ಅಪ್ಪು ಸ ಮಾಧಿ ಬಳಿ ಹೋಗಿ ನಮನ ಸಲ್ಲಿಸುವ ಅವಕಾಶ ಕಲ್ಪಿಸಲಾಗುವುದು. ದೊಡ್ಮನೆ ಕುಟುಂಬ ದವರು ಹಿಂದೂ ಸಂಪ್ರದಾಯದ ಪ್ರಕಾರ ಎಲ್ಲಾ ವಿಧಿ ವಿಧಾನಗಳನ್ನು ನೆರವೇರಿಸಿದ್ದಾರೆ. ಅಪ್ಪು ಅವರ ಪತ್ನಿ ಅಶ್ವಿನಿ ಹಾಗೂ ಇಬ್ಬರು ಮಕ್ಕಳು 5 ದಿನದಿಂದ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ.
ವೈದ್ಯಕೀಯ ಪರೀಕ್ಷೆಯ ಮೂಲಕ ಮತ್ತು ಫ್ಯಾಮಿಲಿ ಡಾಕ್ಟರ್ ರಮಣ ರಾವ್ ಅವರು ಸೂಚಿಸಿರುವ ಹಿನ್ನೆಲೆಯಲ್ಲಿ ಅಪ್ಪು ಅವರ ಅಗಲಿಗೆ ಹೃದಯಾಘಾ ತವೇ ಕಾರಣ ಎಂದು ತಿಳಿದು ಬಂದಿದೆ. ಕೆಲವರು ಇದನ್ನು ಕಾರ್ಡಿಯಾಕ್ ಅರೆ ಸ್ಟ್ ಇರಬಹುದು ಎಂದು ಊಹಿಸಿದ್ದಾರೆ. ಅಪ್ಪು ಅವರ ಅಗಲಿಕೆಗೆ ವೈಜ್ಞಾನಿಕ ಕಾರಣಗಳ ಜೊತೆಗೆ ಆಧ್ಯಾತ್ಮಿಕ ಕಾರಣಗಳು ಸಹ ಕಂಡುಬಂದಿದೆ. ಸಂಖ್ಯಾ ಶಾಸ್ತ್ರಜ್ಞರು ಮತ್ತು ಜ್ಯೋತಿಷ್ಯರು ಕೆಲವು ಮೂಲ ಕಾರಣಗಳನ್ನು ತಿಳಿಸಿದ್ದಾರೆ.
ಕಳೆದ 2 ವರ್ಷಗಳಲ್ಲಿ ನಾವು ಕನ್ನಡ ಚಿತ್ರರಂಗದ ಪ್ರಸಿದ್ಧ ನಟರಾದ ಚಿರಂಜೀವಿ ಸರ್ಜಾ, ಸಂಚಾರಿ ವಿಜಯ್ ಮತ್ತು ಪುನೀತ್ ರಾಜ್ ಕುಮಾರ್ ಅವರನ್ನು ಕಳೆದುಕೊಂಡಿದ್ದೇವೆ. ಸಂಖ್ಯಾಶಾಸ್ತ್ರದ ಪ್ರಕಾರ ಮೂರೂ ಜನರ ಸಾ ವಿಗೆ ಅವರ ಹುಟ್ಟಿದ ದಿನಾಂಕವೇ ಕಾರಣ. ಚಿರಂಜೀವಿ ಸರ್ಜಾ ಅವರು ಹುಟ್ಟಿದ ದಿನಾಂಕ 17 ಅಕ್ಟೋಬರ್ 1984. ಸಂಚಾರಿ ವಿಜಯ್ ಅವರು ಹುಟ್ಟಿದ ದಿನಾಂಕ 17 ಜುಲೈ 1983 ಮತ್ತು ಪುನೀತ್ ರಾಜ್ ಕುಮಾರ್ ಹುಟ್ಟಿದ ದಿನ 17 ಮಾರ್ಚ್ 1975. ಹುಟ್ಟಿದ ದಿನಾಂಕದ ಮೇಲೆ ಲೆಕ್ಕ ಹಾಕಿ ಬ್ರಹ್ಮಾಂಡ ಗುರೂಜಿ ಅವರು ಅಪ್ಪು ಅವರ ಅ ಗಲಿಕೆಯ ಕಾರಣ ತಿಳಿಸಿದ್ದಾರೆ.
ಸಂಖ್ಯಾಶಾಸ್ತ್ರದ ಪ್ರಕಾರ ಬ್ರಹ್ಮಾಂಡ ಗುರೂಜಿ ಅವರು ಹೇಳುವುದೇನೆಂದರೆ.. 17 ನೇ ತಾರೀಕಿನಂದು ಹುಟ್ಟಿದ ಮನುಷ್ಯರು ಏಳು ಬೀಳನ್ನು ಕಾಣುತ್ತಾರೆ. 17 ನೇ ತಾರೀಖಿನಂದು ಹುಟ್ಟಿದವರಿಗೆ ಅಲ್ಪಾಯುಷ್ಯ ಇರುತ್ತದೆ. ಪುನೀತ್ ಅವರು ಜಾತಕದಲ್ಲಿ ಶುಕ್ರಾದಿತ್ಯ ಸಂಧಿ ಸಮಸ್ಯೆ ಇತ್ತು. ಇದಕ್ಕೆ ಅಪ್ಪು ಅವರು ಶುಕ್ರಾದಿತ್ಯ ಸಂಧಿ ಗೆ ಪರಿಹಾರವನ್ನು ಮಾಡಿಕೊಳ್ಳಬೇಕಿತ್ತು. ಬಹುಶಃ ಆಗ ಅವರನ್ನು ಕಾಪಾಡ ಬಹುದಿತ್ತು ಎಂದು ಬ್ರಹ್ಮಾಂಡ ಗುರೂಜಿ ತಿಳಿಸಿದ್ದಾರೆ. ಪುನೀತ್ ಅವರ ಮೂಲ ಹೆಸರು ಲೋಹಿತ್. ಲೋಹಿತ್ ಎಂದರೆ ಅಲ್ಪ ಆಯಸ್ಸು ಎಂದರ್ಥ. ಈ ಕಾರಣದಿಂದಲೇ ಲೋಹಿತ್ ಬದಲಾಗಿ ಪುನೀತ್ ಎಂದು ನಾಮಕರಣ ಮಾಡಲಾಗಿತ್ತು.
ರಜನೀಕಾಂತ್ ಅವರು ಆಸ್ಪತ್ರೆ ಸೇರಿದಾಗ ಅಭಿಮಾನಿಗಳು ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದರು. ಹಾಗೆ ಅಂಬರೀಶ್ ಅವರು ಆಸ್ಪತ್ರೆ ಸೇರಿದಾಗ ಕೂಡ ಅಭಿಮಾನಿಗಳ ಪ್ರಾರ್ಥನೆಯಿಂದ ಅವರನ್ನು ಕಾಪಾಡಲು ಸಾಧ್ಯವಾಯಿತು. ಆದರೆ ಪುನೀತ್ ಅವರ ವಿಷಯದಲ್ಲಿ ಹಾಗಲ್ಲ ಅಭಿಮಾನಿಗಳಿಗೆ ಪ್ರಾರ್ಥನೆ ಮಾಡಲು ಸಮಯವೇ ಸಿಕ್ಕಿಲ್ಲ. ದೇವರು ತನಗೆ ಪ್ರೀತಿ ಪಾತ್ರರಾದವರನ್ನು ಇದೇ ರೀತಿ ಕರೆಸಿಕೊಳ್ಳುತ್ತಾನೆ ಎಂದು ಬ್ರಹ್ಮಾಂಡ ಗುರೂಜಿ ಹೇಳಿದ್ದಾರೆ. ಮನುಷ್ಯನ ಸಾ ವಿನಲ್ಲಿ ಗೊತ್ತಾಗುತ್ತೆ ಅವನು ಒಳ್ಳೆಯವನಾ ಅಥವಾ ಕೆಟ್ಟವನಾ ಎಂದು. “ಈ ಘಟನೆ ಸಂಭವಿಸ ಬಾರದಿತ್ತು.. ದೇವರಿಗೆ ಪುನೀತ್ ಅವರು ತುಂಬಾ ಇಷ್ಟವಾಗಿದ್ದರು ಮತ್ತು ಪುನೀತ್ ಅವರು ಒಳ್ಳೆಯ ಮನುಷ್ಯರಾಗಿದ್ದರು. ಅದಿಕ್ಕೆ ಅವರಿಗೆ ಒಳ್ಳೆ ಸಾ ವು ದೊರಕಿದೆ” ಎಂದು ಬ್ರಹ್ಮಾಂಡ ಗುರೂಜಿ ಅವರು ತಿಳಿಸಿದ್ದಾರೆ.
Comments are closed.