ಇನ್ಮುಂದೆ ಗಂಡಸರಿಗೂ 2,000 ಕೊಡಿ,ಪುರುಷರ ಪರ ಧನಿಯೆತ್ತಿದ ವಾಟಾಳ್ ನಾಗರಾಜ್.!

Entertainment/ಮನರಂಜನೆ Today News / ಕನ್ನಡ ಸುದ್ದಿಗಳು

ಕಾಂಗ್ರೆಸ್ ನೇತ್ರತ್ವದ ರಾಜ್ಯ ಸರ್ಕಾರ 5 ಗ್ಯಾರಂಟಿ ಕಾರ್ಡ್ ಯೋಜನೆಗಳನ್ನು ಘೋಷಿಸಿರುವುದು ಈಗ ದೇಶದ ಎಲ್ಲರ ಗಮನ ಸೆಳೆದಿದೆ. ಚುನಾವಣೆ ಪೂರ್ವವಾಗಿ ಪ್ರಣಾಳಿಕೆಯಲ್ಲಿ ಈ ಅಸ್ತ್ರಗಳನ್ನು ಬಳಸಿದ ದಿನದಿಂದಲೂ ಕೂಡ ವಿರೋಧ ಪಕ್ಷಗಳು ಈ ಗ್ಯಾರಂಟಿ ಕಾರ್ಡ್ ಯೋಜನೆಗಳ ಬಗ್ಗೆ ಟೀಕೆ ಮಾಡುತ್ತಲೇ ಬಂದಿವೆ.

ಆದರೂ ಕೂಡ ಜನಬೆಂಬಲ ಕಾಂಗ್ರೆಸ್ ಪಕ್ಷಕ್ಕೆ ಇದ್ದ ಕಾರಣಕ್ಕಾಗಿ ಈಗ ಅಧಿಕಾರಕ್ಕೆ ಬಂದು ಸರ್ಕಾರ ಸ್ಥಾಪಿಸಿದ ಮೇಲೆ ಕಾಂಗ್ರೆಸ್ ನಾಯಕರುಗಳು ಯಾವ ಬೆಲೆಯನ್ನಾದರೂ ತೆತ್ತು ರಾಜ್ಯದ ನಾಗರಿಕರಿಗೆ ಈ ಗ್ಯಾರಂಟಿ ಯೋಜನೆಗಳನ್ನು ತಲುಪಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಆ ಪೈಕಿ ಈಗಾಗಲೇ ಶಕ್ತಿ ಯೋಜನೆ, ಅನ್ನಭಾಗ್ಯ ಯೋಜನೆ ಮತ್ತು ಗೃಹಜ್ಯೋತಿ ಯೋಜನೆಗೆ ಚಾಲನೆ ಸಿಕ್ಕಾಗಿದೆ. ಗೃಹಲಕ್ಷ್ಮಿ ಯೋಜನೆಗೂ ಕೂಡ ಅರ್ಜಿ ಆಹ್ವಾನಕ್ಕೆ ದಿನಗಣನೆ ಆರಂಭ ಆಗಿರುವ ಈ ಸಮಯದಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಇದಕ್ಕೆ ವಿರೋಧ ತೆಗೆದಿದ್ದಾರೆ.

ಗೃಹಲಕ್ಷ್ಮಿ ಯೋಜನೆ ಮೂಲಕ ಕರ್ನಾಟಕದ ಎಲ್ಲಾ ಕುಟುಂಬಗಳು ಯಜಮಾನಿಗೂ ಕೂಡ 2000 ಸಹಾಯಧನವನ್ನು ಮನೆ ನಿರ್ವಹಣೆಗೆ ಎಂದು ನೀಡಲಾಗುತ್ತಿದೆ. APL, BPL ಯಾವುದೇ ಕಾರ್ಡ್ ಹೊಂದಿದ್ದರು, ವಿವಾಹಿತೆಯರು, ವಿಚ್ಛೇದಿತೆಯರು, ಅವಿವಾಹಿತರು, ಲೈಂಗಿಕ ಅಲ್ಪಸಂಖ್ಯಾತರು ಹೀಗೆ 18 ವರ್ಷ ತುಂಬಿರುವ ಮನೆಯ ಯಜಮಾನಿ ಎಂದು ಗುರುತಿಸಿಕೊಂಡಿರುವವರಿಗೆ ಈ ಸಹಾಯಧನ ಸಿಗುತ್ತದೆ.

ಬ್ಯಾಂಕ್ ಖಾತೆ ಮತ್ತು ಆಧಾರ್ ಕಾರ್ಡ್ ವಿವರದೊಂದಿಗೆ ಮೊಬೈಲ್ ಆಪ್ ಮೂಲಕ ಅಥವಾ ಕರ್ನಾಟಕ ಒನ್, ಗ್ರಾಮ ಒನ್, ಬೆಂಗಳೂರು ಒನ್ ಕೇಂದ್ರಗಳಲ್ಲಿ ಅಥವಾ ಭೌತಿಕವಾಗಿ ಅರ್ಜಿ ಸಲ್ಲಿಸುವುದಾದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. ಇದೇ ಆಗಸ್ಟ್ ತಿಂಗಳಿಂದ ಎಲ್ಲಾ ಫಲಾನುಭವಿಗಳು ಇದರ ಪ್ರಯೋಜನವನ್ನು ಪಡೆಯಲಿದ್ದಾರೆ.

ಆದರೆ ಈ ಯೋಜನೆಯ ಬಗ್ಗೆ ಈಗ ವಾಟಾಳ್ ನಾಗರಾಜ್ ಅವರು ಚಕಾರವೆತ್ತಿದ್ದಾರೆ. ನೀವು ಮನೆಯ ಯಜಮಾನಿಗೆ 2,000 ರೂ. ಕೊಡಿ ಅದು ನಮ್ಮ ಸಮಸ್ಯೆಯಲ್ಲ, ಆದರೆ ಮನೆಯ ಯಜಮಾನ ಎಲ್ಲಿಗೆ ಹೋಗಬೇಕು? ಅವನೇನು ತಪ್ಪು ಮಾಡಿದ್ದ? ಈಗಾಗಲೇ ಶಕ್ತಿ ಯೋಜನೆಯಡಿ ಕರ್ನಾಟಕದಾದ್ಯಂತ ಉಚಿತವಾಗಿ ಪ್ರಯಾಣ ಮಾಡಲು ಎಲ್ಲಾ ಮಹಿಳೆಯರಿಗೂ ಅವಕಾಶ ಮಾಡಿ ಕೊಟ್ಟಿದ್ದೀರಿ. ಅದರಲ್ಲೂ ಕೂಡ ಪುರುಷರಿಗೆ ಅನ್ಯಾಯವಾಗಿದೆ.

ಈಗ ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ಮಾತ್ರ ಸಹಾಯಧನ ನೀಡುತ್ತಿರುವುದು ಸರಿಯಲ್ಲ. ಮಹಿಳೆಯರ ಜೊತೆ ಪುರುಷರಿಗೂ ಕೂಡ 2000ರೂ. ಸಹಾಯಧನ ನೀಡಬೇಕು. ಸರ್ಕಾರ ಈ ರೀತಿಯ ನಿರ್ಧಾರಗಳನ್ನು ತೆಗೆದುಕೊಂಡರೆ ಅದು ಮನೆಯಲ್ಲಿ ಗಂಡ ಹೆಂಡತಿ ನಡುವೆ ಜ’ಗ’ಳ ತಂದಿಟ್ಟ ರೀತಿ ಆಗುತ್ತದೆ. ಹಾಗಾಗಿ ಗೌರವಾನ್ವಿತವಾಗಿ ಕೇಳುತ್ತಿದ್ದೇನೆ.

ಬಜೆಟ್ ಮೇಲಿನ ಪ್ರಶ್ನೆಗಳಿಗೆ ಉತ್ತರಿಸುವಾಗ ಯಜಮಾನಿ ಜೊತೆ ಯಜಮಾನನಿಗೂ ಕೂಡ 2000ರೂ. ಸಹಾಯಧನ ಘೋಷಿಸಬೇಕು ಎಂದಿದ್ದಾರೆ. ಸರ್ಕಾರದ ಈ ಗ್ಯಾರಂಟಿ ಯೋಜನೆಗಳನ್ನು ನೋಡಿದರೆ ಇವರಿಗೆ ಪುರುಷರ ಮೇಲೆ ದ್ವೇ’ಷ ಇರಬೇಕು ಎನಿಸುತ್ತದೆ. ಎಷ್ಟು ಜನ ಪುರುಷ ಶಾಸಕರು ಇದ್ದಾರೆ. ಆದರೆ ಯಾರೂ ಕೂಡ ಇದರ ಬಗ್ಗೆ ಪ್ರಶ್ನಿಸುತ್ತಿಲ್ಲ ಎಂದು ಬೇಸರ ಹೊರ ಹಾಕಿದ್ದಾರೆ.

ಯುವನಿಧಿ ಯೋಜನೆ ಬಗ್ಗೆ ಕೂಡ ಮಾತನಾಡಿದ ಅವರು ಸರ್ಕಾರ ಪದವಿ ಪಡೆದ ನಿರುದ್ಯೋಗಿಗಳಿಗೆ ಈ ಸಹಾಯಧನ ನೀಡುವುದಾಗಿ ಹೇಳಿದೆ. ಹಾಗಾದರೇ, ಹಳ್ಳಿಯಲ್ಲಿ ಕುರಿ ಕೋಳಿ ಕಾಯುವವರಿಗೆ ವಂ’ಚ’ನೆ ಆಗುವುದಿಲ್ಲವೇ, ಕನಿಷ್ಠ ಪಕ್ಷ ಅವರಿಗೆ ಒಂದು ಸಾವಿರ ರೂಪಾಯಿ ಆದರೂ ತಲುಪಬೇಕು. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದು ಆಗ್ರಹಿಸಿದ್ದಾರೆ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.