
ನೀವು ಒಂದು ಉತ್ತಮವಾದ ಮತ್ತು ಅಗ್ಗದ ಬೆಲೆಯ ಸ್ಮಾರ್ಟ್‌ಫೋನ್‌ಗಾಗಿ ಹುಡುಕುತ್ತಿದ್ದರೆ, ನೋಕಿಯಾದ ಒಂದು ಸ್ಮಾರ್ಟ್‌ಫೋನ್ ಬಗ್ಗೆ ಕೇಳಲೇಬೇಕು. ನೋಕಿಯಾದ ಈ ಸ್ಮಾರ್ಟ್‌ಫೋನ್ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಇದರಲ್ಲಿ ಲಭ್ಯವಿರುವ ವೈಶಿಷ್ಟ್ಯಗಳು ಅದ್ಭುತವಾಗಿದೆ. ನಾವು ನಿಮಗೆ ಅದನ್ನು ಸಂಪೂರ್ಣವಾಗಿ, ವಿವರವಾಗಿ ತಿಳಿಸಲಿದ್ದೇವೆ. ಫೋನ್ ಉದ್ಯಮದಲ್ಲಿ ನೋಕಿಯಾ ಜನಪ್ರಿಯತೆ ಪಡೆದಿರುವ ಒಂದು ಹೆಸರಾಗಿದೆ.
ಪ್ರಸ್ತುತ ನೋಕಿಯಾದ ಪ್ರಾಬಲ್ಯವು ಕೊನೆಗೊಂಡಂತೆ ಕಾಣುತ್ತಿದೆ. ಹಿಂದೊಮ್ಮೆ ನೋಕಿಯಾ ತನ್ನ ಅತ್ಯುತ್ತಮ ಫೋನ್‌ಗಳಿಗೆ ಹೆಸರುವಾಸಿಯಾಗಿತ್ತು. ಯಾವುದೇ ಹೊಸ ಫೋನ್ ಬಂದರೂ ಜನರು ಹೆಚ್ಚಾಗಿ ನೋಕಿಯಾ ಬಗ್ಗೆ ಮಾತ್ತವೇ ಮಾತನಾಡುತ್ತಿದ್ದರು. ಆದರೆ ಅನಂತರ ಮಾರುಕಟ್ಟೆಗೆ Xiaomi, Redmi, 1 Plus, Apple ಮುಂತಾದ ಹೊಸ ಹೊಸ ಕಂಪನಿಗಳ ಎಂಟ್ರಿಯೊಂದಿಗೆ Nokia ಹೆಸರು ಮಂಕಾಗಿದೆ.
ಆದರೆ ಈಗ ನೋಕಿಯಾ ಮತ್ತೆ ತನ್ನ ಫೋನ್‌ನೊಂದಿಗೆ ಮಾರುಕಟ್ಟೆಗೆ ಎಂಟ್ರಿ ನೀಡಲು ಸಜ್ಜಾಗಿದೆ. ಇದೀಗ ನೋಕಿಯಾ ಕೂಡಾ ಮೊಬೈಲ್ ಮಾರುಕಟ್ಟೆಯಲ್ಲಿ ಪ್ರಚಂಡ ವೈಶಿಷ್ಟ್ಯಗಳ ಫೋನ್‌ಗಳನ್ನು ಪರಿಚಯಿಸುತ್ತಿದೆ. ನೋಕಿಯಾ ತನ್ನ ನೋಕಿಯಾ C2 2ನೇ ಆವೃತ್ತಿಯ ಮೊಬೈಲ್ ಫೋನ್ ಅನ್ನು ಬಿಡುಗಡೆ ಮಾಡಿದೆ. ಇದು ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವ ಅತ್ಯುತ್ತಮ ನೋಕಿಯಾ ಸ್ಮಾರ್ಟ್‌ಫೋನ್ ಆಗಿದೆ.
ಕಂಪನಿಯು ನೋಕಿಯಾ C2 2 ನೇ ಆವೃತ್ತಿಯ (Nokia C2 2nd Edition) ಸ್ಮಾರ್ಟ್‌ಫೋನ್ ಅನ್ನು ಮಾರುಕಟ್ಟೆಯಲ್ಲಿ ಕೇವಲ 7000 ರೂಗಳಿಗೆ ಬಿಡುಗಡೆ ಮಾಡಿರುವುದು ವಿಶೇಷವಾಗಿದೆ. ಇದರಲ್ಲಿ 5.7 ಇಂಚಿನ ಡಿಸ್ಪ್ಲೇ, 5 ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು 5000mah ಸ್ಟ್ರಾಂಗ್ ಬ್ಯಾಟರಿಯೊಂದಿಗೆ ಪರಿಚಯಿಸಲಾಗಿದೆ. ಅದರ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಕಂಪನಿ ಈ ಸ್ಮಾರ್ಟ್‌ಫೋನ್‌ನಲ್ಲಿ 960×480 ಪಿಕ್ಸೆಲ್‌ಗಳ ರೆಸಲ್ಯೂಶನ್ ನ 5.7-ಇಂಚಿನ IPS ಡಿಸ್‌ಪ್ಲೇಯನ್ನು ನೀಡಿದೆ. ಇದರಲ್ಲಿ 1GB ಮತ್ತು 2GB RAM ಗಳ ಆಯ್ಕೆಗಳಿವೆ. ಮತ್ತು
ಫೋನ್ ನಲ್ಲಿ ಇಂಟರ್ನೆಲ್ ಮೆಮೊರಿ 32GB ಇದೆ. ಅಲ್ಲದೇ ಇದರಲ್ಲಿ ಮೆಮೊರಿ ಕಾರ್ಡ್ ಅಂದರೆ ಮೈಕ್ರೋ SD ಕಾರ್ಡ್ ಕೂಡಾ ಹಾಕಿ, ಮೆಮೊರಿಯನ್ನು ಹೆಚ್ಚಿಸಿಕೊಳ್ಳಬಹುದು. ಈ ಸ್ಮಾರ್ಟ್ ಫೋನ್ ನ ಆಪರೇಟಿಂಗ್ ಸಿಸ್ಟಮ್ ಯಾವುದು ಎನ್ನುವುದಾದರೆ ಇದು ಆಂಡ್ರಾಯ್ಡ್ 11 ಗೋ ಆವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಸ್ಮಾರ್ಟ್‌ಫೋನ್‌ನಲ್ಲಿ ಫೇಸ್ ಅನ್‌ಲಾಕ್ ಭದ್ರತಾ ವೈಶಿಷ್ಟ್ಯವನ್ನು ಸಹಾ ನೀಡಲಾಗಿದೆ.
ಇದರಲ್ಲಿ ಮೀಡಿಯಾ ಟೆಕ್ ಕ್ವಾಡ್ ಕೋರ್ ಪ್ರೊಸೆಸರ್ ಅನ್ನು ನೀಡಲಾಗಿದೆ. ಕಂಪನಿಯು ಈ ಸ್ಮಾರ್ಟ್‌ಫೋನ್‌ನಲ್ಲಿ 5 ಮೆಗಾಪಿಕ್ಸೆಲ್ ಹಿಂಭಾಗದ ಕ್ಯಾಮೆರಾವನ್ನು ನೀಡಿದೆ. ಈ ಸ್ಮಾರ್ಟ್ ಫೋನ್ ನಲ್ಲಿ ಸೆಲ್ಫಿಗಾಗಿ 5 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ನೀಡಲಾಗಿದೆ. ಇದರ ಹೊರತಾಗಿ ಈ ಫೋನ್ 2.4GHz ವೈಫೈ, GPS ಅಥವಾ 3.5mm ಆಡಿಯೊ ಜಾಕ್ ಅನ್ನು ಹೊಂದಿದೆ. ಈ ಸ್ಮಾರ್ಟ್ ಫೋನ್ ಕಡಿಮೆ ಬೆಲೆಯಲ್ಲಿ, ಉತ್ತಮ ಫೀಚರ್ ಗಳನ್ನು ಬಯಸುವವರಿಗೆ ಅತ್ಯುತ್ತಮ ಆಯ್ಕೆಯಾಗಿದೆ.
ಏಕೆಂದರೆ ಇದರಲ್ಲಿ ನಿಮಗೆ ಒಳ್ಳೆಯ ಕ್ಯಾಮರಾ, ಬ್ಯಾಟರಿ ಮತ್ತು ಡಿಸ್ಪ್ಲೇ ಎಲ್ಲವೂ ದೊರೆಯುತ್ತದೆ. ಹಾಗಾದರೆ ತಡ ಏಕೆ? ನೀವು ಈ ಸ್ಮಾರ್ಟ್‌ಫೋನ್ ಅನ್ನು ಕೇವಲ 7000 ರೂಪಾಯಿಗಳಲ್ಲೇ ಖರೀದಿಸುವ ಅವಕಾಶ ನಿಮಗಾಗಿ ಕಾದಿದೆ. ನೋಕಿಯಾ ಕಂಪನಿಯು ಉತ್ತಮ ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ಪರಿಚಯ ಮಾಡುತ್ತಿದ್ದು, ಅದು ನಿಮ್ಮ ಬಜೆಟ್‌ನಲ್ಲೇ ಲಭ್ಯವಿದೆ ಮತ್ತು ಈ ಸ್ಮಾರ್ಟ್ ಫೋನ್ ಗಳ ವೈಶಿಷ್ಟ್ಯಗಳು ಸಹಾ ಬಹಳ ಅದ್ಭುತವಾಗಿದೆ.
ಇಷ್ಟು ಮಾತ್ರವಲ್ಲದೇ ನೋಕಿಯಾದ ಸ್ಮಾರ್ಟ್‌ಫೋನ್ ಗಳನ್ನು ಜನರು ಕೂಡಾ ತುಂಬಾ ಇಷ್ಟಪಟ್ಟಿದ್ದಾರೆ. ನೋಕಿಯಾ ತನ್ನ ಸ್ಮಾರ್ಟ್‌ಫೋನ್ ಮೂಲಕ ಮಾರುಕಟ್ಟೆಯಲ್ಲಿ ಮತ್ತೊಮ್ಮೆ ತನ್ನ ಪ್ರಾಬಲ್ಯವನ್ನು ಸ್ಥಾಪಿಸುವತ್ತ ಮುನ್ನಡೆಯುತ್ತಿದೆ. ಅಲ್ಲದೇ ನೋಕಿಯಾದ ಹೊಸ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆಗಾಗಿ ಜನರು ನಿರೀಕ್ಷೆ ಮಾಡುತ್ತಿದ್ದಾರೆ.
Comments are closed.