ವಾಂತಿ ಬರುತ್ತಿದೆ, ತಲೆ ಸುತ್ತುತ್ತಿದೆ,ಮೈಯೆಲ್ಲ ಜುಮ್ ಜುಮ್ ಅನ್ನುತ್ತಿದೆ,ಸಿಹಿ ಸುದ್ದಿ ಹಂಚಿಕೊಂಡ ನಿವೇದಿತಾ ಗೌಡ! ಚಂದನ್ ಶೆಟ್ಟಿ ಫುಲ್ ಖುಷ್ ನೋಡಿ!!

ನಿವೇದಿತಾ ಗೌಡ ಹಾಗೂ ರಾಪರ್ ಚಂದನ್ ಶೆಟ್ಟಿ ಮದುವೆಯಾಗಿ ಎರಡು ವರ್ಷಗಳು ಕಳೆದಿವೆ. ಇವರಿಬ್ಬರು ಯಾವಾಗ ಗುಡ್ ನ್ಯೂಸ್ ನೀಡುತ್ತಾರೆ ಎಂದು ಅಭಿಮಾನಿಗಳು ಕಾಯ್ತಾ ಇದ್ರು. ಇತ್ತೀಚೆಗೆ ಸಿನಿಮಾ ರಂಗದಲ್ಲಿ ಸಿನಿಮಾ ತಾರೆಯರು ಮದುವೆ ಹಾಗೂ ಮಕ್ಕಳ ವಿಚಾರದಲ್ಲಿ ಸಾಕಷ್ಟು ಗುಡ್ ನ್ಯೂಸ್ (Good News) ಕೊಡುತ್ತಿದ್ದಾರೆ. ಅಂತೆಯೇ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಅಪ್ಪ ಅಮ್ಮ ಆಗುತ್ತಿದ್ದಾರೆ ಎನ್ನುವ ವಿಷಯ ಸೋಶಿಯಲ್ ಮೀಡಿಯಾ (Social Media) ದಲ್ಲಿ ಹರಿದಾಡುತ್ತಿದೆ.

ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಇಬ್ಬರು ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ಆಕ್ಟಿವ್ (Active) ಆಗಿರುತ್ತಾರೆ. ಚಂದನ್ ಶೆಟ್ಟಿ ಇತ್ತೀಚಿಗೆ ಅಪ್ಪ ಆಗುತ್ತಿದ್ದೇನೆ ಎಂದು ಹೇಳುವಂತಹ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ (Post) ಮಾಡಿದ್ದರು. ಅದೇ ರೀತಿಯಾಗಿ ಕಳೆದ ವಾರ ನಿವೇದಿತಾ ಗೌಡ ಕೂಡ ನನ್ನ ಗುಡ್ ನ್ಯೂಸ್ ಬಗ್ಗೆ ನಿಮಗೆ ಸರಿಯಾದ ಮಾಹಿತಿ ಬೇಕು ಅಂದ್ರೆ ಗಿಚ್ಚಿ ಗಿಲಿ ಗಿಲಿ ಸೀಸನ್ 2 (Gichhi Gili Gili comedy show) ವನ್ನು ಈ ವಾರ ನೋಡಿ. ನಾನು ಗಿಚ್ಚಿ ಗಿಲಿ ಗಿಲಿ ವೇದಿಕೆಯಲ್ಲಿ ಉತ್ತರ ನೀಡುತ್ತೇನೆ ಎಂದು ಹೇಳಿದರು.

ಮಿಸೆಸ್ ಇಂಡಿಯಾ ಆದ ಚಂದನ್ ರಾಣಿ ನಿವೇದಿತಾ ಗೌಡ | Public TV

ಅದೇ ರೀತಿಯಾಗಿ ವಾರಂತ್ಯದಲ್ಲಿ ಗಿಚ್ಚಿ ಗಿಲಿ ಗಿಲಿ ಸೀಸನ್ 2 ವೇದಿಕೆಯಲ್ಲಿ ತಾನು ಎರಡು ತಿಂಗಳ ಪ್ರಗ್ನೆಂಟ್ (Pregnant) ಎಂಬುದಾಗಿ ನಿವೇದಿತಾ ಗೌಡ ಘೋಷಣೆ ಮಾಡಿದ್ದಾರೆ. ನಿವೇದಿತಾ ಗೌಡ ಗಿಚ್ಚಿ ಗಿಲಿ ಗಿಲಿ ಕಾಮೆಡಿ ಶೋನ ಮೊದಲ ಸೀಸನ್ ನಲ್ಲಿ ರನ್ನರ್ ಆಫ್ ಆಗಿದ್ದರು. ಇದೀಗ ಸೀಸನ್ 2 ಆರಂಭವಾಗಿದ್ದು ಇದರಲ್ಲಿಯೂ ನಿವೇದಿತಾ ಗೌಡ ಕಾಣಿಸಿಕೊಳ್ಳಲಿದ್ದಾರೆ.

ಇನ್ನು ಕಳೆದ ವಾರದ ಸೀಸನ್ ನಲ್ಲಿ ವೇದಿಕೆಯ ಮೇಲೆ ನಿರೂಪಕ ನಿರಂಜನ ದೇಶಪಾಂಡೆ ಮಾವಿನ ಕಾಯಿ, ಹುಣಸೆಹಣ್ಣನ್ನು ವೇದಿಕೆಯ ಮೇಲೆ ತರಿಸಿದ್ದರು. ಆಗ ಅದನ್ನ ನೋಡಿ ಆಸೆ ಪಟ್ಟ ನಿವೇದಿತಾ ತನಗೆ 2 ತಿಂಗಳು ಎಂದಿದ್ದಾರೆ. ಜೊತೆಗೆ ತನಗೆ ಬೆಳಿಗ್ಗೆ ಎಳೋದಕ್ಕೆ ಆಗಲ್ಲ, ತಲೆ ಸುತ್ತತ್ತೆ, ವಾಂತಿ ಆಗತ್ತೆ ಎಂದೆಲ್ಲ ಪ್ರಗ್ನೇನ್ಸಿ ಸಿಕ್ನೆಸ್ ಬಗ್ಗೆ ಮಾತನಾಡಿದ್ದಾರೆ.

ನಿವೇದಿತಾ ಗೌಡ ಸದಾ ಒಂದಲ್ಲಾ ಒಂದು ವಿಷಯಕ್ಕೆ ಟ್ರೋಲ್ ಆಗುತ್ತಲೇ ಇರುತ್ತಾರೆ. ಅವರ ಮಾತು ಡ್ರೆಸ್ ಎಲ್ಲದರ ಬಗೆ ಜನ ಕಮೆಂಟ್ ಮಾಡುತ್ತಾರೆ. ಆದರೆ ನಿವಿ ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳುವುದಿಲ್ಲ. ತಮಗೆ ಅನ್ನಿಸಿದ್ದನ್ನು ಮಾಡುತ್ತಾರೆ. ಮತ್ತು ಇದೇ ಕಾರಣಕ್ಕೆ ಕೆಲವ್ರಿಗೆ ನಿವಿ ತುಂಬಾ ಇಷ್ಟವಾಗುತ್ತಾರೆ ಕೂಡ.

ಸದ್ಯ ಗಿಚ್ಚಿ ಗಿಲಿ ಗಿಲಿ ಸಿಸನ್ 2 ಶೋ ನೋಡಿದ ಹಲವರು ಇದೆಲ್ಲ ಪ್ರಚಾರದ ಗಿಮಿಕ್ ಎಂದಿದ್ದಾರೆ. ಇನ್ನು ನಿವೇದಿತಾ ಗೌಡ ನಿಜವಾಗಿಯೂ ಗರ್ಭಿಣಿ ಹೌದೋ ಅಲ್ವೋ ಅನ್ನೋದು ಮುಂದಿನ ವಾರಾಂತ್ಯದ ಗಿಚ್ಚಿ ಗಿಲಿ ಗಿಲಿ ಸೀಸನ್ 2 ವೇದಿಕೆಯ ಮೇಲೆ ರಿವಿಲ್ ಆಗಬಹುದು.







You might also like

Comments are closed.