ನಿವೇದಿತಾ ಗೌಡ ತಮ್ಮ ಕ್ಯೂಟ್ ಮಾತು ಮತ್ತು ಹಾವಭಾವದಿಂದಲೇ ಮನೆ ಮಾತಾದವರು. ಅದರಲ್ಲೂ ಬಿಗ್‌ಬಾಸ್‌ನಿಂದ ಅವರ ಫೇಮ್ ಮತ್ತಷ್ಟು ಎತ್ತರಕ್ಕೆ ಬೆಳೆದು ನಿಂತಿತು. ಹೀಗಿರುವಾಗಲೇ ರ್ಯಾಪರ್ ಚಂದನ್ ಶೆಟ್ಟಿ ಜತೆ ಪ್ರೇಮ ಚಿಗುರಿ ಇಬ್ಬರೂ ವಿವಾಹ ಬಂಧನಕ್ಕೊಳಗಾದರು. ಚಂದನ್ ಸಿನಿಮಾ ಸಂಗೀತದ ಕಡೆ ಗಮನ ಹರಿಸಿದರೆ, ಇತ್ತ ರಿಯಾಲಿಟಿ ಶೋ ಸೇರಿ ಹಲವು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ನಿವೇದಿತಾ. ಈ ನಡುವೆ ಇನ್‌ಸ್ಟಾಗ್ರಾಂನಲ್ಲಿ 10ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿರುವ ಇವರು, ಅಲ್ಲಿಯೂ ರಿಲ್ಸ್ ಮಾಡುವುದರಲ್ಲಿ ಬಿಜಿ. ಇದೀಗ ಇದೇ ಚೆಲುವೆಗೆ ಅವಾರ್ಡ್‌ವೊಂದು ಸಿಕ್ಕಿದೆ.
ತಮ್ಮ ಎಂದಿನ ಕೆಲಸಗಳ ಜತೆಗೆ ನಿವೇದಿತಾ ಫ್ಯಾಷನ್ ಕಡೆಗೂ ವಾಲಿದ್ದರು. ಆ ವಿಚಾರವನ್ನು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದರು. “ಇಸೆಸ್ ಇಂಡಿಯಾ ಇಂಕ್” ಸ್ಪರ್ಧೆಯಲ್ಲಿಯೂ ಅವರು ಭಾಗವಹಿಸಿದ್ದರು. ಇದೀಗ ಆ ಸ್ಫರ್ಧೆಯಲ್ಲಿ ವಿಶೇಷ ಟೈಟಲ್‌ವೊಂದನ್ನು ಮುಡಿಗೇರಿಸಿಕೊಂಡಿದ್ದಾರೆ. “ಪೀಪಲ್ಸ್ ಚಾಯ್ಸ್ 2002 ಆಫ್ ಮಿಸೆಸ್ ಇಂಡಿಯಾ Inc” ಟೈಟಲ್ ಗಿಟ್ಟಿಸಿಕೊಂಡಿದ್ದಾರೆ.
ಈ ಖುಷಿಯ ವಿಚಾರವನ್ನು “ಮಿಸೆಸ್ ಇಂಡಿಯಾ Inc” ತನ್ನ ಅಧಿಕೃತ ಇನ್‌ಸ್ಟಾಗ್ರಾಂ ಪುಟದಲ್ಲಿ ಹಂಚಿಕೊಂಡು ಶುಭಾಶಯ ಕೋರಿದೆ. “ನಿವೇದಿತಾ ಗೌಡ ಕೊನೆಗೂ ಜನರ ಹೃದಯವನ್ನು ಗೆದ್ದಿದ್ದಾರೆ. ಈ ಮೂಲಕ ಜನರ ಪ್ರೀತಿಯನ್ನು ಗಳಿಸಿದ್ದಾರೆ. ಇದು ನಿಜವಾದ ಸಾಧನೆ ಅಲ್ಲವೇ? ಎಂದು ಬರೆದುಕೊಂಡು, ಮಿಸೆಸ್ ಇಂಡಿಯಾ ಇಂಕ್‌ನ ಪೀಪಲ್ಸ್ ಚಾಯ್ಸ್ 2022 ರ ವಿಜೇತರಾದ ನಿವೇದಿತಾ ಗೌಡ ಅವರು ತಮ್ಮ ನಮ್ರತೆಯಿಂದ ಲಕ್ಷಾಂತರ ಹೃದಯಗಳನ್ನು ಗೆದ್ದಿದ್ದಾರೆ” ಎಂದೂ ಹೇಳಿದೆ. ಈ ವಿಶೇಷ ಟೈಟಲ್ ಅನ್ನು ಟೀಮ್ ಇಂಡಿಯಾ ಮಾಜಿ ನಾಯಕ ಅಜರುದ್ದೀನ್ ಅವರು ನಿವೇದಿತಾಗೆ ಪ್ರದಾನ ಮಾಡಿದ್ದಾರೆ.