ಸೀರೆ ಧರಿಸಿ ಸಿಕ್ಕಾಪಟ್ಟೆ ಮಿಂಚಿದ ನಿವೇದಿತಾ ಗೌಡ ಕಲರ್ ಫುಲ್ ಫೋಟೋಸ್ ಇಲ್ಲಿವೆ

CINEMA/ಸಿನಿಮಾ

ನಿವೇದಿತಾ ಗೌಡ ಅವರು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರೀಯರಾಗಿರುತ್ತಾರೆ. ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಅಭಿಮಾನಿಗಳಿದ್ದಾರೆ. ನಿವೇದಿತಾ ಅವರು ಮಾಡುವ ರೀಲ್ಸ್ ಗಳಿಗೆ ಅಭಿಮಾನಿಗಳು ಫಿದಾ ಆಗುತ್ತಾರೆ. ಇತ್ತೀಚಿಗೆ ಸೀರೆ ಧರಿಸಿಕೊಂಡು ಅನೇಕ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನಿವೇದಿತಾ ಅವರ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ನಿವೇದಿತಾಗೌಡ ಅವರು ಮೇ 12, 2000 ನೇ ಇಸ್ವಿಯಲ್ಲಿ ಮೈಸೂರಿನಲ್ಲಿ ಜನಿಸಿದ್ದಾರೆ. ನಿವೇದಿತಾ ಅವರ ತಂದೆ ಹೆಸರು ರಮೇಶ್ ಲಕ್ಷ್ಮಣ ಅವರು ಬಿಸಿನೆಸ್ ಮ್ಯಾನ್ ಆಗಿದ್ದಾರೆ. ನಿವೇದಿತಾ ಅವರ ತಾಯಿಯ ಹೆಸರು ಹೇಮಾ ರಮೇಶ್. ನಿವೇದಿತಾ ಅವರಿಗೆ ಒಬ್ಬ ಸಹೋದರನಿದ್ದು ಅವನ ಹೆಸರು ರಾಹುಲ್ ರಮೇಶ್. ನಿವೇದಿತಾ ಅವರು ಬಿಸಿಎ ಓದಿದ್ದಾರೆ ಶಾಲೆಗಳಲ್ಲಿ ಮೊದಲಿನಿಂದಲೂ ಆಕ್ಟೀವ್ ಆಗಿ ಶಾಲೆಯಲ್ಲಿ ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು. ಅವರು ತಮ್ಮ ಶಿಕ್ಷಣವನ್ನು ಮೈಸೂರಿನಲ್ಲಿ ಮುಗಿಸಿದ್ದಾರೆ.

ಬಿಗ್ ಬಾಸ್ ಸೀಸನ್ ಐದರ ಸ್ಪರ್ಧಿಯಾಗಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಟಾಸ್ಕ್ ಗಳನ್ನು ಉತ್ತಮವಾಗಿ ಆಡುವ ಮೂಲಕ ಜನರ ಮನಸನ್ನು ಗೆದ್ದರು. ಬಿಗ್ ಬಾಸ್ ಸೀಸನ್ 5 ರ ವಿನ್ನರ್ ಚಂದನ್ ಶೆಟ್ಟಿ ಅವರ ಪರಿಚಯವಾಗಿ ಅವರ ನಡುವೆ ಪ್ರೀತಿಯಾಗಿ ಫೆಬ್ರುವರಿ 26, 2020 ರಲ್ಲಿ ಮದುವೆಯಾಗುತ್ತಾರೆ. ನಿವೇದಿತಾ ಅವರು ಮೊಡೆಲ್ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ನಿವೇದಿತಾ ಗೌಡ ಅವರು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯರಾಗಿರುತ್ತಾರೆ. ಟಿಕ್ ಟಾಕ್ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ. ನಿವೇದಿತಾ ಅವರೊಂದಿಗೆ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಅವರ ತಾಯಿ ಹೇಮಾ ಅವರು ಕೂಡ ವಿಡಿಯೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಿವೇದಿತಾ ಅವರ ವಿಡಿಯೋಗಳಿಗೆ ಹೆಚ್ಚಿನ ಅಭಿಮಾನಿಗಳಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು.

ನಿವೇದಿತಾ ಅವರು ಸೀರೆ ಧರಿಸಿ ಕಣ್ಮನ ಸೆಳೆಯುತ್ತಾರೆ. ರಿಯಾಲಿಟಿ ಶೋಗಳಲ್ಲಿ ಪರಮ ಸುಂದರಿಯಂತೆ ಸೀರೆ ಧರಿಸಿಕೊಂಡು ಕಂಗೊಳಿಸುತ್ತಾರೆ. ತಮ್ಮ ಸೀರೆ ಧರಿಸಿಕೊಂಡ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ನಿವೇದಿತಾ ಅವರ ಜನಪ್ರಿಯತೆ ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಹೆಚ್ಚಾಯಿತು. ನಿವೇದಿತಾ ಅವರು ಹೆಚ್ಚು ಸಕ್ರೀಯವಾಗಿ ಪಾಲ್ಗೊಳ್ಳಲಿ ಎಂದು ಆಶಿಸೋಣ.
ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...