ಟಿಕ್ ಟಾಕ್ ಇಂದ ಫೇಮಸ್ ಆಗಿದ್ದ ನಿವೇದಿತಾ ಗೌಡ, ಬಿಗ್ ಬಾಸ್ ಕನ್ನಡ ಸೀಸನ್ 5ರಲ್ಲಿ ಕಾಮನ್ ಮ್ಯಾನ್ ಆಗಿ ಎಂಟ್ರಿ ಕೊಟ್ಟು ಜನಪ್ರಿಯತೆ ಗಳಿಸಿದರು. ಬಿಗ್ ಮನೆಯಲ್ಲಿದ್ದಾಗ ಅಷ್ಟು ದಿನ ತಮ್ಮ ಮುಗ್ಧತೆಯಿಂದ ಕಿರಿತೆರೆಯಲ್ಲಿ ಹಲವಾರು ಅಭಿಮಾನಿಗಳನ್ನು ಗಳಿಸಿದರು ನಿವೇದಿತಾ. ಬಿಗ್ ಬಾಸ್ ನಂತರ ಸೋಷಿಯಲ್ ಮೀಡಿಯಾ ಸ್ಟಾರ್ ಆಗಿದ್ದಾರೆ. ಈಗ ತಮ್ಮ ಮ್ಯಾರೀಡ್ ಲೈಫ್ ಎಂಜಾಯ್ ಮಾಡುತ್ತಿದ್ದಾರೆ ನಿವೇದಿತಾ. ಹಾಗೂ ರಾಜಾ ರಾಣಿ ಶೋನಲ್ಲಿ ಸ್ಪರ್ಧಿಯಾಗಿದ್ದಾರೆ.
ಬಿಗ್ ಬಾಸ್ ನಂತರ ಕೆಲವು ಶೋಗಳಲ್ಲಿ ನಿವೇದಿತಾ ಕಾಣಿಸಿಕೊಂಡಿದ್ದರು. ಕಳೆದ ವರ್ಷ ವರ್ಷ ಕನ್ನಡ ರಾಪರ್ ಚಂದನ್ ಶೆಟ್ಟಿ ಅವರೊಡನೆ ವಿವಾಹವಾಗಿ ಸುಂದರವಾದ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿರುವ ನಿವೇದಿತಾರಿಗೆ ಇನ್ಸ್ಟಾಗ್ರಾಮ್ ನಲ್ಲಿ ಬರೋಬ್ಬರಿ 1 ಮಿಲಿಯನ್ ಫಾಲೋವರ್ಸ್ ಗಳಿದ್ದಾರೆ. ವಿಧವಿಧವಾದ ಫೋಟೋಶೂಟ್ ಗಳನ್ನು ಮಾಡಿಸಿ ತಮ್ಮ ಅಭಿಮಾನಿಗಳ ಜೊತೆ ಶೇರ್ ಮಾಡಿಕೊಳ್ಳುತ್ತಾರೆ ನಿವೇದಿತಾ.
ನಿವೇದಿತಾ ಗೌಡ ಅವರ ಕುಟುಂಬದ ವಿಷಯಕ್ಕೆ ಬರುವುದಾದರೆ, ನಿವೇದಿತಾ ಅವರು ಹುಟ್ಟಿದ್ದು, ಬೆಳೆದದ್ದು ಎಲ್ಲವೂ ಮೈಸೂರಿನಲ್ಲಿ. ಅಪ್ಪ ಅಮ್ಮನ ಮುದ್ದು ಮಗಳಾಗಿ ಬೆಳೆದರು ನಿವೇದಿತಾ ಗೌಡ. ನಿವೇದಿತಾ ಗೌಡ ಅವರ ತಾಯಿ ಹೆಸರು ಹೇಮಾ. ನಿವೇದಿತಾ ಅವರಿಗೆ ತಾಯಿ ಜೊತೆ ತುಂಬಾ ಹೋಲಿಕೆ ಇದೆ. ನಿವೇದಿತಾ ಅವರ ತಾಯಿಯ ನಿಜವಾದ ವಯಸ್ಸು 40 ದಾಟಿದ್ದರು, ಈಗಲೂ ಬಹಳ ಯಂಗ್ ಆಗಿ ಕಾಣುತ್ತಾರೆ ಹೇಮಾ. ನಿವೇದಿತಾ ಮತ್ತು ಅವರ ತಾಯಿ ನೋಡಲು ಒಂದೆ ರೀತಿ ಕಾಣಿಸುತ್ತಾರೆ.
View this post on Instagram