ನಿವೇದಿತಾ-ಗೌಡ

ಕೊನೆಗೂ ಸುದೀರ್ಘ ಸಮಯದ ಬಳಿಕ ಸಿಹಿಸುದ್ದಿ ಹಂಚಿಕೊಂಡ ನಿವೇದಿತಾ ಗೌಡ,ಸಂತಸದಲ್ಲಿ ಚಂದನ್ ಶೆಟ್ಟಿ…

CINEMA/ಸಿನಿಮಾ

ಕರ್ನಾಟಕದ ಬಾರ್ಬಿ ಡಾಲ್ ನಿವೇದಿತಾ ಗೌಡ ಅವರು ಒಂದೆಲ್ಲ ಒಂದು ವಿಚಾರವಾಗಿ ಅವರು ಟ್ರೆಂಡ್​ನಲ್ಲಿದ್ದಾರೆ. ಚೆಂದನ್ ಶೆಟ್ಟಿ ಮನಧರಸಿ ನಿವೇದಿತಾ ಗೌಡಾ ಸಾಮಾಜಿಕ ಜಾಲತಾಣದಲ್ಲಿ ಫುಲ್ ಆ್ಯಕ್ಟಿವ್ ಆಗಿರುವವರು ಎನ್ನಬಹುದು. ನಿವೇದಿತಾ ಗೌಡ, ಸಾಮಾಜಿಕ ಜಾಲಾತಾಣದಲ್ಲಿ ಹೆಚ್ಚು ಪ್ರಸಿದ್ಧ ಹಾಗೂ ಹೆಚ್ಚು ಟ್ರೋಲ್​ ಆಗುವ ಸೆಲೆಬ್ರಿಟಿಗಳಲ್ಲಿ ಒಬ್ಬರಾಗಿದ್ದಾರೆ.

ಸಾಮಾಜಿಕ ಜಾಲಾತಾಣದ ಮೂಲಕ ಫೇಮ್ ಪಡೆದು ನಂತರ ಬಿಗ್ಬಾಸ್ ಸೀಸನ್ನಲ್ಲಿ ತಮ್ಮ ವಿಶಿಷ್ಟ ರೀತಿಯ ಮಾತು ಹಾಗೂ ಫ್ಯಾಷನ್ ಕಾರಣದಿಂದ ಪ್ರಸಿದ್ಧರಾದವರು ಈ ಸುಂದರಿ. ಗೊಂಬೆ ಎಂದೇ ಪ್ರೀತಿಯಿಂದ ಅಭಿಮಾನಿಗಳು ಇವರನ್ನು ಕರೆಯೋದು. ಇನ್ನು ನಿವೇದಿತಾ ಗೌಡ ಏನೇ ಪೋಸ್ಟ್ ಹಾಕಿದ್ರು ಅದು ವೈರಲ್ ಆಗುತ್ತೆ.

ಅವರು ಎಲ್ಲಿಗೆ ಹೋದರೂ, ಬಂದರೂ ಸಹ ರೀಲ್ಸ್ ಮಾಡುತ್ತಾರೆ. ಅವರು ಒಂದು ಯೂಟ್ಯೂಬ್ ಚಾನೆಲ್ ಕೂಡ ಹೊಂದಿದ್ದು, ಅದರಲ್ಲಿ ತಮ್ಮ ಎಲ್ಲಾ ವಿಡಿಯೋಗಳನ್ನು ಮಾಡಿ ಹಾಕುತ್ತಾರೆ. ಒಟ್ಟಾರೆಯಾಗಿ ಅವರು ಎಲ್ಲಾ ಕಡೆ ಫೇಮಸ್​. ನಿವೇದಿತಾ ಕಿರುತೆರೆಯಲ್ಲಿ ಸಹ ಬ್ಯುಸಿ ಇರುವ ನಟಿ. ಬಿಗ್​ಬಾಸ್​ ನಂತರ ಫೇಮಸ್​ ಆದ ನಿವೇದಿತಾ, ರಾಜಾ-ರಾಣಿ ಶೋನಲ್ಲಿ ಜನರಿಗೆ ಮನರಂಜನೆ ನೀಡಿದ್ದರು. ಈಗ ಗಿಚ್ಚಗಿಲಿ ಗಿಲಿ ಶೋ ಮೂಲಕ ಕಾಮಿಡಿ ಮಾಡುತ್ತಿದ್ದು, ಅಲ್ಲೂ ಸಹ ಅವರದ್ದೇ ಹವಾ ಎನ್ನಬಹುದು. ಈ ಮೂಲಕ ಟಿವಿ ವಾಹಿನಿಯಲ್ಲಿ ಮಿಂಚುತ್ತಿದ್ದು ಅಭಿಮಾನಿಗಳ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ.

nivedita gowda signs a movie

ಇತ್ತೀಚೆಗೆ ಮಿಸೆಸ್ ಇಂಡಿಯಾ 2022 ನಲ್ಲಿ ಭಾಗವಹಿಸಿ, ಪೀಪಲ್ ಚಾಯ್ಸ್ ಮಿಸೆಸ್ ಇಂಡಿಯಾ 2022 ಅವಾರ್ಡ್ ಅನ್ನು ಸಹ ಪಡೆದರು, ಇದರಿಂದ ಜನರು ಅವರನ್ನು ಎಷ್ಟು ಇಷ್ಟಪಡುತ್ತಿದ್ದಾರೆ ಎನ್ನುವುದು ಸಹ ತಿಳಿದುಬಂದಿದೆ. ನಿವೇದಿತಾ ಗೌಡ ಅವರು ಇಷ್ಟೆಲ್ಲ ಜನಪ್ರಿಯತೆ ಗಳಿಸಿದ್ದು, ಅವರಿಗೆ ಕನ್ನಡ ಮತ್ತು ತೆಲುಗು ಕಿರುತೆರೆ ಮತ್ತು ಬೆಳ್ಳಿತೆರೆಯಿಂದ ಸಾಕಷ್ಟು ಅವಕಾಶಗಳು ಬರುತ್ತಿವೆ.

ಆದರೆ ಅವುಗಳನ್ನು ಚೂಸ್ ಮಾಡುವುದರಲ್ಲಿ ಬಹಳ ಚೂಸಿ ಆಗಿರುವ ನಿವೇದಿತಾ, ಇದೀಗ ಹೊಸ ತೆಲುಗು ಪ್ರಾಜೆಕ್ಟ್ ಗೆ ಸಹಿ ಹಾಕಿದ್ದಾರಂತೆ. ಈ ವಿಚಾರವನ್ನು ಸ್ವತಃ ನಿವೇದಿತಾ ಗೌಡ ಅವರೇ ಹೇಳಿಕೊಂಡಿದ್ದಾರೆ. ಹೊಸ ಪ್ರಾಜೆಕ್ಟ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಶೀಘ್ರದಲ್ಲೇ ನೀಡುವುದಾಗಿ ತಿಳಿಸಿದ್ದಾರೆ. ಟ್ಯಾಲೆಂಟ್ ಜೊತೆಗೆ ಅದೃಷ್ಟ ಇದ್ದರೆ ಏನು ಬೇಕಾದರೂ ಮಾಡಬಹುದು ಎನ್ನುವುದಕ್ಕೆ ಇವರು ಒಂದು ಉದಾಹರಣೆ ಆಗಿದ್ದಾರೆ. ಈ ಮೂಲಕ ಮುಂದಿನ ದಿನಗಳಲ್ಲಿ ಸಿನೆಮಾ ರಂಗಕ್ಕೆ ಕಾಲಿಡಬಹುದೇ ಎಂಬ ನಿರೀಕ್ಷೆ ನಿವಿ ಅಭಿಮಾನಿಗಳದ್ದಾಗಿದೆ.ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.