ಅನುಶ್ರೀ ಹುಟ್ಟುಹಬ್ಬಕ್ಕೆ ಭರ್ಜರಿ ಉಡುಗೊರೆ ಕೊಟ್ಟ ಜೀ ಕನ್ನಡ..ಕಣ್ಣೀರಿಟ್ಟ ಅನುಶ್ರೀ..

ನಿನ್ನೆ ನಟಿ ಹಾಗೂ ನಿರೂಪಕಿ‌ ಅನುಶ್ರೀ ಅವರಿಗೆ ಹುಟ್ಟುಹಬ್ಬದ ಸಂಭ್ರಮ.. ಹೌದು ನಿನ್ನೆ ಸದ್ಯ ಕನ್ನಡ ಕಿರುತೆರೆಯ ಟಾಪ್ ನಿರೂಪಕರಲ್ಲಿ ಒಬ್ಬರಾಗಿರುವ ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಅವರು 35 ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ..

ಇನ್ನು ಬಹಳಷ್ಟು ವರ್ಷಗಳಿಂದ ಜೀ ಕನ್ನಡ ವಾಹಿನಿಯಲ್ಲಿಯೇ ಕೆಲಸ ಮಾಡುತ್ತಿರುವ ಅನುಶ್ರೀ ಅವರಿಗೆ ವಾಹಿನಿ ದೊಡ್ಡ ಉಡುಗೊರೆಯನ್ನೇ ನೀಡಿದೆ.. ಹೌದು ಕೆಲಸ ಹುಡುಕಿಕೊಂಡು ಮಂಗಳೂರಿನಿಂದ ಬೆಂಗಳೂರಿಗೆ ಬಂದ ಅನುಶ್ರೀ ಗುರು ಕಿರಣ್ ಅವರ ಶೋ ಗಳಲ್ಲಿ ಬ್ಯಾಕ್ ಡ್ಯಾನ್ಸರ್ ಆಗಿ ಕೆಲಸಕ್ಕೆ ಸೇರಿಕೊಂಡು ನಂತರ ಗುರುಕಿರಣ್ ಅವರ ಪ್ರೋತ್ಸಾಹದಿಂದ ಅವರ ಕಾರ್ಯಕ್ರಮಗಳ ನಿರೂಪಣೆಯನ್ನು ಮಾಡಿ ಇದೀಗ ಕನ್ನಡದ ಟಾಪ್ ನಿರೂಪಕರಲ್ಲೊಬ್ಬರಾಗಿದ್ದಾರೆ..

2014 ರಲ್ಲಿ ಬಿಗ್ ಬಾಸ್ ಸೀಸನ್ ಒಂದರಲ್ಲಿ ಭಾಗವಹಿಸಿ ಹೊರ ಬಂದ ಅನುಶ್ರೀ ಜೀವನ ಸಂಪೂರ್ಣವಾಗಿ ಬದಲಾಯಿತೆನ್ನಬಹುದು.. 2015 ರಲ್ಲಿ ಜೀ ಕನ್ನಡ ವಾಹಿನಿಗೆ ಸರಿಗಮಪ ಸೀಸನ್ 10 ರ ನಿರೂಪಕರಾಗಿ ಕಾಲಿಟ್ಟ ಅನುಶ್ರೀ ನಂತರ ಹಿಂತಿರುಗಿ ನೋಡಿದ್ದೇ ಇಲ್ಲ.. ಸರಿಗಮಪ ಸೀಸನ್ 10 ರಿಂದ ಮೊನ್ನೆಮೊನ್ನೆಯಷ್ಟೇ ಮುಗಿದ ಸೀಸನ್ 17 ರವರೆಗೂ ಯಶಸ್ವಿಯಾಗಿ ನಡೆಸಿಕೊಂಡು ಬಂದರು.. ಇದರ ಜೊತೆಗೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ಕೂಡ ಅವರದ್ದೇ ನಿರೂಪಣೆ.. ಅಷ್ಟೇ ಅಲ್ಲದೇ ಯಾವುದೇ ದೊಡ್ಡ ದೊಡ್ಡ ಸಿನಿಮಾಗಳ ಆಡಿಯೋ ಬಿಡುಗಡೆ ಅಥವಾ ಮತ್ಯಾವುದೇ ಕಾರ್ಯಕ್ರಮವಾದರೂ ನಿರೂಪಣೆ ಎಂದ ಕೂಡಲೇ ಕೇಳಿ ಬರುವ ಹೆಸರು ಸಹ ಅನುಶ್ರೀ ಅವರದ್ದೇ‌‌..

ಇನ್ನು ಕೆಲ ತಿಂಗಳ ಹಿಂದೆ ಸ್ಯಾಂಡಲ್ವುಡ್ ನಲ್ಲಿ ಸುದ್ದಿಯಾದ ವಿಚಾರಕ್ಕೆ ಸಂಬಂಧಪಟ್ಟಂತೆ ಅನುಶ್ರೀ ಅವರ ಹೆಸರೂ ಸಹ ಕೇಳಿ ಬಂದಿದ್ದು ಅನುಶ್ರೀ ಮಂಗಳೂರಿಗೆ ತೆರಳಿ ವಿಚಾರಣೆಗೂ ಸಹ ಹಾಜರಾಗಿ ಬಂದರು.. ಆ ಸಮಯದಲ್ಲಿ ಅನುಶ್ರೀ ಕುರಿತಾಗಿ ಸಾಕಷ್ಟು ವಿಚರಗಳು ಸುದ್ದಿಯಾದರೂ ಸಹ ಹೆಚ್ಚು ದಿನ ಉಳಿಯಲಿಲ್ಲ..

ನಂತರ ಅದೆಲ್ಲವನ್ನು ಧೈರ್ಯದಿಂದ ಎದುರಿಸಿ ಹೊರ ಬಂದ ಅನುಶ್ರೀಗೆ ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಜನಮೆಚ್ಚಿದ ನಿರೂಪಕಿ ಎಂದೂ ಸಹ ಅವಾರ್ಡ್ ಬಂದಿದ್ದು ಆ ಸಮಯದಲ್ಲಿ ಮಾತನಾಡಿದ ಅನುಶ್ರೀ “ಕೆಲ ದಿನಗಳಿಂದ ನನ್ನ ಬಗ್ಗೆ ಎದ್ದಿದ್ದ ಅನುಮಾನಗಳಿಗೆ ಇದೇ ಉತ್ತರ.. ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದಗಳು” ಎಂದಿದ್ದರು..

ಇನ್ನು ನಿನ್ನೆ ಜನವರಿ 25 ರಂದು ಅನುಶ್ರೀ ಅವರು 33ನೇ ವರ್ಷಕ್ಕೆ ಕಾಲಿಟ್ಟಿದ್ದು ಜೀ ಕನ್ನಡ ವಾಹಿನಿ ಅದ್ಧೂರಿಯಾಗಿ ಆಚರಣೆ ಮಾಡಿದೆ.‌ ಹೌದು ಸತತ ಏಳು ವರ್ಷಗಳಿಂದ ತಮ್ಮದೇ ವಾಹಿನಿಯಲ್ಲಿ ಕೆಲಸ ಮಾಡಿದ ಅನುಶ್ರೀಗೆ ಜೀ ಕನ್ನಡ ವಾಹಿನಿ ಡ್ಯಾನ್ಸ್ ಕರ್ನಾಟಕ ಡ್ಯಾಂಸ್ ವೇದಿಕೆಯಲ್ಲಿ ಅದ್ಭುತ ಉಡುಗೊರೆ ನೀಡಿದೆ.. ಹೌದು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸ್ಪರ್ಧಿಗಳು ಮಾತ್ರವಲ್ಲದೇ ಕಾಮಿಡಿ ಕಿಲಾಡಿಗಳು.. ಹಳೆಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸ್ಪರ್ಧಿಗಳು ಸರಿಗಮಪ ಸ್ಪರ್ಧಿಗಳು ಎಲ್ಲರೂ ಆಗಮಿಸಿ ಅನುಶ್ರೀ ಅವರಿಗಾಗಿ ಡ್ಯಾನ್ಸ್ ಮೂಲಕ ಸರ್ಪ್ರೈಸ್ ನೀಡಿದ್ದಾರೆ.‌

ಯಾವ ಹೀರೋಯಿನ್ ಗೂ ಕಡಿಮೆ ಇಲ್ಲದಂತೆ ಅನುಶ್ರೀ ಅವರ ಹುಟ್ಟುಹಬ್ಬವನ್ನು ಆಚರಿಸಿದ್ದು ಅರ್ಜುನ್ ಜನ್ಯ.. ರಕ್ಷಿತಾ.‌. ವಿಜಯ್ ರಾಘವೇಂದ್ರ.. ಚಿನ್ನಿ ಮಾಸ್ಟರ್ ಎಲ್ಲರೂ ಸಹ ವೇದಿಕೆಗೆ ಬಂದು ಅನುಶ್ರೀಗಾಗಿ ಡ್ಯಾನ್ಸ್ ಮಾಡಿದ್ದು ಅದೃಷ್ಟ ಎಂದರೆ ಇದು ಎನ್ನುವಂತಿತ್ತು.. ಜೊತೆಗೆ ಅನುಶ್ರೀ ಅವರ ಅಮ್ಮ ತಮ್ಮ ಹಾಗೂ ಅನುಶ್ರೀಯ ಪ್ರೀತಿಯ ನಾಯಿ ಮರಿಯನ್ನು ಸಹ ಅನುಶ್ರೀಗೆ ಗೊತ್ತಿಲ್ಲದ ರೀತಿಯಲ್ಲಿ ಕರೆತಂದು ವೇದಿಕೆಯಲ್ಲಿ ಕೇಕ್ ಕಟ್ ಮಾಡಿಸುವ ಮೂಲಕ ಅನುಶ್ರೀ ಹುಟ್ಟುಹಬ್ಬವನ್ನು ಸಂಭ್ರಮವನ್ನಾಗಿಸಿದರು.. ದೊಡ್ಡ ಕಾರ್ಯಕ್ರಮವೊಂದರಲ್ಲಿ ಸಂಪೂರ್ಣ ಅರ್ಧ ಗಂಟೆ ಅನುಶ್ರೀಗೆ ಮೀಸಲಿಟ್ಟು ಕಾರ್ಯಕ್ರಮ ಪ್ರಸಾರ ಮಾಡಲಿದ್ದು ಅನುಶ್ರೀ ಭಾವುಕರಾಗಿ ಕಣ್ಣೀರಿಟ್ಟರು..




You might also like

Comments are closed.