Nithya Menon Pregnant: ನಿತ್ಯ ಮೆನನ್ (Nithya Menon) ದೇಶದ ಟಾಪ್ ನಟಿಯರಲ್ಲಿ ಒಬ್ಬರು. ಕನ್ನಡ, ಹಿಂದಿ, ಮಲಯಾಳಂ, ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ನಟನೆಯನ್ನ ಮಾಡುವುದರ ಮೂಲಕ ಸಾಕಷ್ಟು ಅಭಿಮಾನಿಗಳನ್ನ ಗಳಿಸಿಕೊಂಡಿರುವ ನಟಿ ನಿತ್ಯ ಮೆನನ್ ಅವರು ಕೆಲವು ವಿಷಯಗಳ ಕಾರಣ ಸಾಮಾಜಿಕ ಜಾಲತಾಣದಲ್ಲಿ ಮತ್ತು ಮಾಧ್ಯಮಗಳಲ್ಲಿ ವೈರಲ್ ಆಗಿದ್ದಾರೆ.
ಹೌದು ಹಿಂದೆ ಪ್ರಿಯತಮನ ವಿಷಯವಾಗಿ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದ ನಟಿ ನಿತ್ಯ ಮೆನನ್ ಅವರು ಈಗ ಗರ್ಭಿಣಿಯ ವಿಷಯವಾಗಿ ಸುದ್ದಿಯಾಗಿದ್ದಾರೆ. ಹೌದು ನಟಿ ನಿತ್ಯ ಮೆನನ್ ಅವರು ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದಾರೆ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಮತ್ತು ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಮದುವೆಗೂ ಮುನ್ನವೇ ಗರ್ಭಿಣಿಯಾದರೆ ನಿತ್ಯ ಮೆನನ್
ಹೌದು ನಟಿ ನಿತ್ಯ ಮೆನನ್ ಅವರು ಒಂದು ಫೋಟೋ ಶೇರ್ ಮಾಡಿದ್ದು ಅವರು ಶೇರ್ ಮಾಡಿದ ಒಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಲ್ಲಿ ಬಹಳ ಪ್ರಶ್ನೆ ಮೂಡುವಂತೆ ಮಾಡಿದೆ. Pregnancy Kit ಫೋಟೋವನ್ನ ನಟಿ ನಿತ್ಯ ಮೆನನ್ ಅವರು ತಮ್ಮ ಇನಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು ಈ ಫೋಟೋ ನೂರಾರು ಪ್ರಶ್ನೆಗೆ ದಾರಿಮಾಡಿ ಕೊಟ್ಟಿದೆ.
ಇನ್ಸ್ಟಾಗ್ರಾಮ್ ನಲ್ಲಿ ಪ್ರೆಗ್ನನ್ಸಿ ಕಿಟ್ ಫೋಟೋ ಶೇರ್ ಮಾಡಿದ ನಿತ್ಯ ಮೆನನ್
ಹೌದು ನಟಿ ನಿತ್ಯ ಮೆನನ್ ಅವರು ಸಾಮಾಜಿಕ ಜಾಲತಾಣದಲ್ಲಿ ಬಹಳ ಸಕ್ರಿಯರಾಗಿರುವ ನಟಿಯರಲ್ಲಿ ಒಬ್ಬರು. ಆಗಾಗ ಫೋಟೋ ಮತ್ತು ವಿಡಿಗಳನ್ನ ಶೇರ್ ಮಾಡಿಕೂಳುವ ನಟಿ ನಿತ್ಯ ಮೆನನ್ ಅವರು ಈಗ ಪ್ರೆಗ್ನನ್ಸಿ ಕಿಟ್ ಫೋಟೋ ಶೇರ್ ಮಾಡಿದ್ದಾರೆ.
ಕೇವಲ ಪ್ರೆಗ್ನನ್ಸಿ ಕಿಟ್ ಫೋಟೋ ಶೇರ್ ಮಾಡಿದ್ದರೆ ಯಾರು ಕೂಡ ಪ್ರಶ್ನೆಯನ್ನ ಮಾಡುತ್ತಿರಲಿಲ್ಲ, ಆದರೆ ಪ್ರೆಗ್ನನ್ಸಿ ಕಿಟ್ ನಲ್ಲಿ Positive ಇರುವುದು ಜನರ ಪ್ರಶ್ನೆಗೆ ಕಾರಣವಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ವಿಶ್ ಮಾಡಿದ ಅಭಿಮಾನಿಗಳು
ನಟಿ ನಿತ್ಯ ಮೆನನ್ ಈ ಫೋಟೋ ಶೇರ್ ಮಾಡಿದ ನಂತರ ಹಲವು ಅಭಿಮಾನಿಗಳು ನೀವು ಮದುವೆಯನ್ನ ಮಾಡಿಕೊಂಡಿಲ್ಲ ಮತ್ತೆ ಯಾಕೆ ಇಂತಹ ಫೋಟೋ ಶೇರ್ ಮಾಡಿದ್ದೀರಿ ಎದು ಪ್ರಶ್ನೆಯನ್ನ ಇಟ್ಟಿದ್ದಾರೆ. ಇನ್ನೂ ಕೆಲವು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ನಟಿ ನಿತ್ಯ ಮೆನನ್ ಅವರಿಗೆ ಶುಭಾಶಯಗಳ ಸುರಿಮಳೆಯನ್ನ ಸುರಿದಿದ್ದಾರೆ.
ಇದು ಮುಂದಿನ ಚಿತ್ರದ ಪ್ರಚಾರ ಎಂದು ಹೇಳಿದ ಕೆಲವು ಅಭಿಮಾನಿಗಳು
ನಟಿ ನಿತ್ಯ ಮೆನನ್ ಅವರಿಗೆ ಇನ್ನೂ ಕೂಡ ಮದುವೆ ಆಗಿಲ್ಲ ಮತ್ತು ಈಗ ಪ್ರೆಗ್ನನ್ಸಿ ಕಿಟ್ ಫೋಟೋ ಶೇರ್ ಮಾಡಿರುವುದು ಅವರ ಮುಂದಿನ ಚಿತ್ರದ ಪ್ರೊಮೋಷನ್ ಆಗಿದೆ ಎಂದು ಹಲವು ಜನರು ಮಾತನಾಡಿದ್ದಾರೆ. ಪ್ರೆಗ್ನನ್ಸಿ ಕಿಟ್ ಫೋಟೋ ಶೇರ್ ಮಾಡಿರುವ ನಟಿ ನಿತ್ಯ ಮೆನನ್ ಅವರು, “And, The Wonder Begins” ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.
ಹಲವು ಚಿತ್ರ ಮತ್ತು ವೆಬ್ ಸೀರೀಸ್ ನಲ್ಲಿ ನಿತ್ಯ ಮೆನನ್
ಹೌದು ನಟಿ ನಿತ್ಯ ಮೆನನ್ ಅವರು ಸದ್ಯ ಬಾಲಿವುಡ್ ಸೇರಿದಂತೆ ಹಲವು ಚಿತ್ರಗಳ ಶೂಟಿಂಗ್ ನಲ್ಲಿ ಬಹಳ ಬ್ಯುಸಿ ಆಗಿದ್ದಾರೆ ಮತ್ತು ಅದರ ನಡುವೆ ನಟಿ ನಿತ್ಯ ಮೆನನ್ ಅವರು ಕೆಲವು ವೆಬ್ ಸೀರೀಸ್ ನಲ್ಲಿ ಕೂಡ ನಟನೆಯನ್ನ ಮಾಡುತ್ತಿದ್ದಾರೆ.
ಹಿಂದೆ ನಟಿ ನಿತ್ಯ ಮೆನನ್ ಅವರು ಅಭಿಷೇಕ್ ಬಚ್ಚನ್ ಅವರ ಜೊತೆ ಬ್ರೀತ್ ವೆಬ್ ಸೆರಿಸ್ ನಟನೆಯನ್ನ ಮಾಡಿ ಬಹಳ ಸುದ್ದಿಯಾಗಿದ್ದರು. ನಟಿ ನಿತ್ಯ ಮೆನನ್ ಅವರು ಕೊನೆಯದಾಗಿ ಮುಮ್ಮೂಟಿ ಅವರ ಜೊತೆ ಪುಜು ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.
View this post on Instagram