ನೀತಾ ಅಂಬಾನಿ ವಿಶ್ವದ ನಾಲ್ಕನೇ ಮತ್ತು ಭಾರತದ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿರುವ ರಿಲಯನ್ಸ್ ದಿಗ್ಗಜ ಮುಖೇಶ್ ಅಂಬಾನಿಯವರ ಪತ್ನಿ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಮಾಲೀಕರೂ ಆಗಿರುವ ನೀತಾ ಅಂಬಾನಿ ಅವರು ತಮ್ಮ ಜೀವನ ಶೈಲಿ, ಅವರ ಹವ್ಯಾಸಗಳು, ಅವರ ದುಬಾರಿ ವಸ್ತುಗಳ ಸಂಗ್ರಹಗಳ ಕಾರಣದಿಂದ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಇಂಟರ್ನೆಟ್ ನಲ್ಲಿ ಆಗಾಗ ನೀತಾ ಅವರ ವಿಷಯಗಳು ಪ್ರಕಟವಾದಾಗ ಅವು ಸಿಕ್ಕಾಪಟ್ಟೆ ವೈರಲ್ ಆಗುತ್ತವೆ. ನೀತಾ ಅಂಬಾನಿ ಅವರ ದುಬಾರಿ ಅಥವಾ ಐಶಾರಾಮೀ ಎನಿಸುವ ಹವ್ಯಾಸಗಳನ್ನು ನೋಡಿದಾಗ ಅಬ್ಬಾ ಎಂತಹ ಜೀವನ ಇದು ಎಂದು ಸಾಮಾನ್ಯ ಜನರು ಉದ್ಗಾರ ತೆಗೆಯುವಂತಾಗುತ್ತದೆ. ಆಕೆಯ ಹವ್ಯಾಸಗಳ ಕುರಿತಾಗಿ ಸಾಮಾನ್ಯ ಜನರು ಊಹಿಸಲು ಕೂಡಾ ಸಾಧ್ಯವಿಲ್ಲ.

ಸಂದರ್ಶನವೊಂದರಲ್ಲಿ ಮಾತನಾಡುವ ವೇಳೆಯಲ್ಲಿ ನೀತಾ ಅಂಬಾನಿಯವರು ತಾನು ಚಹಾ ಕುಡಿಯಲು ಜಪಾನ್‌ನ ಅತ್ಯಂತ ಹಳೆಯ ಮಣ್ಣಿನ ಪಾತ್ರೆಗಳಾದ ನೊರಿಟೇಕ್‌ನ ಕಪ್ ಗಳನ್ನು ಬಳಸುವುದಾಗಿ ಹೇಳಿದ್ದರು. ನೊರಿಟೆಕ್ ಮಣ್ಣಿನ ಪಾತ್ರೆಗಳು 50 ಕಪ್ ಗಳ ಒಂದು ಸೆಟ್ ಆಗಿರುತ್ತದೆ. ಇದರ ವಿಶೇಷತೆ ಏನೆಂದರೆ ಈ ಕಪ್ ಗಳು ಚಿನ್ನದ ಬಾರ್ಡರ್ ಅನ್ನು ಹೊಂದಿದೆ ಮತ್ತು ಅದರ ಬೆಲೆ ಬರೋಬ್ಬರಿ 1.5 ಕೋಟಿ ರೂ. ಆಗಿದೆ. ಅಂದರೆ ಒಂದು ಕಪ್ ಬೆಲೆ 3 ಲಕ್ಷ ರೂಪಾಯಿಗಳಾಗುತ್ತದೆ. ನೀತಾ ಅಂಬಾನಿಯವರು ಕುಡಿಯುವ ಕಾಫಿ ಕಪ್ ಗಳು ಕೂಡಾ ದುಬಾರಿ ಹಾಗೂ ಇವು ಅದ್ಭುತ ಕಲಾಕೃತಿಗಳ ಸಾಲಿಗೆ ಸೇರಿವೆ ಎಂಬುದು ಕೂಡಾ ನಿಜ.

ನೀತಾ ಅಂಬಾನಿ ಬಳಸುವ ಹ್ಯಾಂಡ್ ಬ್ಯಾಗ್ ಗಳು ಕೂಡಾ ಸಿಕ್ಕಾಪಟ್ಟೆ ದುಬಾರಿ. ಆಕೆ ಬಹಳ ಹೆಚ್ಚು ಬೆಲೆ ಬಾಳುವ ಬ್ರಾಂಡ್ ಗಳ ಬ್ಯಾಗ್ ಗಳನ್ನು ಮಾತ್ರವೇ ಇಷ್ಟಪಡುತ್ತಾರೆ. ಅವರ ಬ್ಯಾಗ್ ಗಳಲ್ಲಿ ವಜ್ರವನ್ನು ಕೂಡಾ ಅಳವಡಿಸಲಾಗಿದೆ. ನೀತಾ ಅಂಬಾನಿ ಅವರ ಸಂಗ್ರಹದಲ್ಲಿ ಶನೆಲ್, ಗೊಯಾರ್ಡ್ ಮತ್ತು ಜಿಮ್ಮಿ ಚೂಕ್ಯಾರಿ ಗಳಂತಹ ಜಗತ್ತಿನ ಟಾಪ್ ಬ್ರಾಂಡೆಡ್ ಹ್ಯಾಂಡ್ ಬ್ಯಾಗ್ ಗಳು ಇವೆ. ನೀತಾ ಅಂಬಾನಿ ಜುಡಿತ್ ಲೈಬರ್‌ನ ಗ್ಯಾನಿಶ್ ಕ್ಲಚ್‌ನ ಹ್ಯಾಂಡ್ ಬ್ಯಾಗ್ ಕೂಡಾ ತಮ್ಮ ಬಳಿ ಇರಿಸಿಕೊಂಡಿದ್ದು, ಈ ಸಣ್ಣ ಗಾತ್ರದ ಕ್ಲಚ್‌ನಲ್ಲಿ ವಜ್ರಗಳನ್ನು ಕೆತ್ತಲಾಗಿದೆ. ಅವುಗಳ ಬೆಲೆ 3-4 ಲಕ್ಷದಿಂದ ಪ್ರಾರಂಭವಾಗುತ್ತದೆ ಎನ್ನಲಾಗಿದೆ.

ನೀತಾ ಅಂಬಾನಿ ಪೆಡ್ರೊ, ಗಾರ್ಸಿಯಾ, ಜಿಮ್ಮಿ ಚೂ, ಪೆಲ್ಮೋರಾ, ಮರ್ಲಿನ್ ಬ್ರಾಂಡ್ ಶೂಗಳು ಮತ್ತು ಸ್ಯಾಂಡಲ್‌ಗಳನ್ನು ಹೊಂದಿದ್ದಾರೆ. ಈ ಎಲ್ಲಾ ಬ್ರಾಂಡ್‌ಗಳ ಬೂಟುಗಳು ಬೆಲೆ ಕೂಡಾ ಲಕ್ಷಗಳ ಮೊತ್ತದಲ್ಲಿ ಆರಂಭವಾಗುತ್ತದೆ. ಅಲ್ಲದೇ ನೀತಾ ಅಂಬಾನಿ ಒಮ್ಮೆ ಧರಿಸಿದ ಶೂಗಳನ್ನು ಮತ್ತೆ ಪುನರಾವರ್ತನೆ ಮಾಡುವುದಿಲ್ಲವೆಂಬ ಟಾಕ್ ಕೂಡಾ ಇದೆ. ನೀತಾ ಅಂಬಾನಿ ಕೈಗಡಿಯಾರಗಳನ್ನು ತುಂಬಾ ಇಷ್ಟಪಡುತ್ತಾರೆ. ಅವುಗಳು ಕೂಡಾ ದುಬಾರಿ ಹಾಗೂ ಟಾಪ್ ಬ್ರಾಂಡೆಡ್ ಎಂದು ಪ್ರತ್ಯೇಕವಾಗಿ ಹೇಳಬೇಕಿಲದಲ. ಆಕೆಯ ಬಳಿ ಬಲ್ಗರಿ,ಕಾರ್ಟಿಯರ್, ರಾಡೋ, ಗುಚಿ, ಕ್ಯಾಲ್ವಿನ್ ಕೆಲಿನ್ ಮತ್ತು ಫೋಸಿಲ್ ನಂತಹ ಅದ್ಭುತ ಬ್ರಾಂಡ್ ಗಳ ಕೈಗಡಿಯಾರಗಳು ಇವೆ. ಒಂದೊಂದು ಕೈ ಗಡಿಯಾರ ಕೂಡಾ ಒಂದೂವರೆ ಲಕ್ಷದಿಂದ ಎರಡು ಲಕ್ಷ ಬೆಲೆ ಬಾಳುತ್ತದೆ.

ನೀತಾ ಆಭರಣ ಪ್ರಿಯೆ ಕೂಡಾ, ಆಕೆ ಸಭೆ, ಸಮಾರಂಭಗಳಲ್ಲಿ ಕೋಟಿಗಟ್ಟಲೆ ಬೆಲೆ ಬಾಳುವ ಆಭರಣಗಳನ್ನು ಧರಿಸಿ ಕಂಗೊಳಿಸುತ್ತಾರೆ. ಸೀರೆಗಳೆಂದರೆ ವಿಶೇಷ ಪ್ರೀತಿ ಇರುವ ನೀತಾ ಅವರ ಸೀರೆಗಳು ಕೂಡಾ ಬಂಗಾರ ಹಾಗೂ ವಜ್ರದ ಹರಳುಗಳನ್ನು ಹೊಂದಿದೆ. ಆಕೆ ತಮ್ಮ ಮಗನ ನಿಶ್ಚಿತಾರ್ಥಕ್ಕೆ ಉಟ್ಟಿದ್ದ ಸೀರೆಯ ಬೆಲೆ 40 ಲಕ್ಷ ರೂ. ಎಂದರೆ ನಂಬಲೇಬೇಕು. ನೀತಾ ಅವರ ಬಳಿ 40 ,ಲಕ್ಷದ ಲಿಪ್ ಸ್ಟಿಕ್ ಕಲೆಕ್ಷನ್ ಇದೆ ಎನ್ನಲಾಗಿದೆ. ಇದಲ್ಲದೇ ಪತಿ ಉಡುಗೊರೆಯಾಗಿ ನೀಡಿರುವ ನೂರು ಕೋಟಿ ಬೆಲೆ ಬಾಳುವ ಪ್ರೈವೇಟ್ ಜೆಟ್ ಕೂಡಾ ಇದ್ದು ಅದರಲ್ಲಿ ಪಂಚತಾರಾ ಸೌಲಭ್ಯಗಳು ಇವೆ ಎನ್ನಲಾಗಿದೆ
