ನಮ್ಮ ಕನ್ನಡ ಸಿನಿಮಾ ರಂಗದ ಸಾಕಷ್ಟು ನಟಿಯರು ಕೇವಲ ನಟನೆಯಲ್ಲಿ ಮಾತ್ರವಲ್ಲದೆ ಇತರ ಆಕ್ಟಿವಿಟಿಗಳಲ್ಲಿಯೂ ಹೆಚ್ಚಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಒಬ್ಬರು ನಟನೆಯ ಜೊತೆಗೆ ಹಾಡು ಹಾಡುವುದರಲ್ಲಿ ಪ್ರಖ್ಯಾತಿ ಪಡೆದಿದ್ದರೆ ಮತ್ತೊಬ್ಬರು ನಟನೆಯ ಜೊತೆ ಜೊತೆಗೆ ಡ್ಯಾನ್ಸ್ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ನಲ್ಲಿ ಇರುತ್ತಾರೆ. ಆದರೆ ಎಲ್ಲೋ ಬೆರಳೆಣಿಕೆಯಷ್ಟು ನಟಿ ಮಾತ್ರ ತಮ್ಮ ಫಿಟ್ನೆಸ್ ಹಾಗೂ ಯೋಗದ ಮೂಲಕವಾಗಿ ಅಭಿಮಾನಿಗಳ ಗಮನವನ್ನು ಸೆಳೆದಿರುತ್ತಾರೆ.
ಅಂತಹ ನಟಿಯರ ಪೈಕಿ ನಿಶ್ವಿಕ ನಾಯ್ಡು ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ ಎಂದರೆ ತಪ್ಪಾಗಲಾರದು. ಹೌದು ಗೆಳೆಯರೆ ಆಗಾಗ ತಮ್ಮ ಬ್ಯೂಟಿ ಟಿಪ್ಸ್ ಹಾಗೂ ಡೈಯಟ್ ಟೀಪ್ಸ್ಗಳನ್ನೆಲ್ಲ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುವ ನಿಶ್ವಿಕ ನಾಯ್ಡು(Nishvika Naidu) ತಮ್ಮ ಫಿಟ್ನೆಸ್ ಹಾಗೂ ಯೋಗದ ಕುರಿತಾಗಿಯೂ ಸಾಕಷ್ಟು ಮಾಹಿತಿ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ.
ಇದೀಗ ಕಳೆದ ಕೆಲವು ದಿನಗಳ ಹಿಂದೆ ಹಂಚಿಕೊಂಡಿರುವಂತಹ ವಿಡಿಯೋ ಈಗಲೂ ಬಾರಿ ವೈರಲ್ ಆಗುತ್ತಿದ್ದು, ಇದನ್ನು ಕಂಡಂತಹ ನೆಟ್ಟಿಗರು ರಾಜಕುಮಾರ್(Rajkumar) ಅವರ ನಂತರ ಈ ರೀತಿಯಾದಂತಹ ವಿಶೇಷ ಯೋಗಾಸನಗಳನ್ನು ಮಾಡುವುದು ನಿಶ್ವಿಕ ನಾಯ್ಡು(Nishvika Naidu) ಒಬ್ಬರೇ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಹೌದು ಗೆಳೆಯರೇ ವಾಸು ನಾನ್ ಪಕ್ಕಾ ಕಮರ್ಷಿಯಲ್, ಅಮ್ಮ ಐ ಲವ್ ಯು, ರಾಮಾರ್ಜುನ ಹಾಗೂ ದಿಲ್ ಪಸಂದ್ ಸೇರಿದಂತೆ ಸಾಕಷ್ಟು ಯಶಸ್ವಿ ಸಿನಿಮಾಗಳನ್ನು ನೀಡುತ್ತಾ ಕನ್ನಡದ ಉದ್ಯೋನ್ಮುಖ ನಟಿಯಾಗಿ ಹೊರಹೊಮ್ಮಿದ್ದಾರೆ. ಇನ್ನು ಅಲ್ಪಾವಧಿಯಲ್ಲಿ ಬಹು ಬೇಡಿಕೆಯನ್ನು ಗಿಟ್ಟಿಸಿಕೊಂಡು ಈಗಲೂ ತಮ್ಮ ಯಶಸ್ವಿ ಸಿನಿಮಾಗಳ ಮೂಲಕ ತೆರೆಯ ಮೇಲೆ ಮಿಂಚುವಂತಹ ಈ ನಟಿ ತಮ್ಮ ಫಿಟ್ನೆಸ್ ಕುರಿತಾಗಿಯೂ ಬಾರಿ ಟ್ರೆಂಡಿಂಗ್ ನಲ್ಲಿ ಇರುತ್ತಾರೆ.
ಹೌದು ಗೆಳೆಯರೇ ಬಹಳ ಕಷ್ಟಕರವಾದಂತಹ ನೌಲಿ ಕ್ರಿಯಾ(Nauli kriya) ಯೋಗ ಒಂದನ್ನು ಮಾಡಿ ಸೋಶಿಯಲ್ ಮೀಡಿಯಾ(social media) ಖಾತೆಗಳಲ್ಲಿ ಹಂಚಿಕೊಂಡು ಇದನ್ನು ನಾನು ಪ್ರಥಮ ಬಾರಿಗೆ ಮಾಡಿದ್ದೇನೆ ಇದು ಅಷ್ಟು ಪರ್ಫೆಕ್ಟ್ ಆಗಿ ಬಂದಿಲ್ಲ ಎಂಬುದು ನನಗೆ ಗೊತ್ತು ಕಲಿಯುತ್ತಿದ್ದೇನೆ ಎನ್ನುತ್ತಾ ತಮ್ಮ ಯೋಗ ಗುರುಗಳನ್ನು ಮೆನ್ಷನ್(mention) ಮಾಡಿ ಧನ್ಯವಾದಗಳು ತಿಳಿಸಿದ್ದಾರೆ. ನೀವು ಕೂಡ ಈ ಪುಟದು ಮುಖಾಂತರ ನಟಿ ನಿಶ್ವಿಕ ನಾಯ್ಡು(Nishvika Naidu) ಅವರ ವಿಶಿಷ್ಟ ನೌಲಿಕ್ರಿಯ ಯೋಗವನ್ನು ನೋಡಬಹುದು.