Nishvika Naidu: ನಿಶ್ವಿಕಾ ನಾಯ್ಡು, ಕನ್ನಡ ಸಿನಿಮಾ ಇಂಡಸ್ಟ್ರಿಯ ಯುವ ನಟಿ ಹಾಗೂ ಅತ್ಯುತ್ತಮ ನಟಿ ಎನಿಸಿಕೊಂಡಿರುವವರು. ಈಗಾಗಲೇ ಕನ್ನಡದಲ್ಲಿ ಕೆಲವು ಚಿತ್ರಗಳನ್ನು ಮಾಡಿ ಹೆಸರು ಮಾಡಿರುವ ನಿಶ್ವಿಕ ಸಾಲು ಸಾಲು ಪ್ರಾಜೆಕ್ಟ್ (Project) ಗಳಲ್ಲಿ ಬ್ಯುಸಿ (Busy) ಆಗಿದ್ದಾರೆ ಇತ್ತೀಚಿಗೆ ತೆರೆಕಂಡ ಗುರು ಶಿಷ್ಯರು (Guru Shishyaru) ಚಿತ್ರದ ಆಣೆ ಮಾಡಿ ಹೇಳುತೀನಿ ಹಾಡಿನ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು ನಿಶ್ವಿಕಾ ನಾಯ್ಡು.
ನಿಶ್ವಿಕ ನಾಯ್ಡು ಮೂಲತಃ ಬೆಂಗಳೂರಿನವರೇ ಆಗಿದ್ದು ಇಲ್ಲಿಯೇ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಮನಶ್ಯಾಸ್ತ್ರ ಪದವಿಯನ್ನು ಪಡೆದಿದ್ದಾರೆ ಮೊದಲು ಮೂಡಲಿಂಗ ಕ್ಷೇತ್ರಕ್ಕೆ ಪ್ರವೇಶ ಮಾಡಿದ ನಿಶ್ವಿಕ ಅಲ್ಲಿಂದ ಕನ್ನಡ ಸಿನಿಮಾ ರಂಗಕ್ಕೆ ಎಂಟ್ರಿ ಕೊಡುತ್ತಾರೆ. ನಿಶ್ವಿಕ ನಾಯ್ಡು ಅಭಿನಯದ ಮೊದಲ ಚಿತ್ರ ವಾಸು ನಾನು ಪಕ್ಕಾ ಕಮರ್ಷಿಯಲ್. ಆದರೆ ವಿಶೇಷ ಏನು ಅಂದ್ರೆ ಇವರ ಮೊದಲ ಚಿತ್ರದ ಬಿಡುಗಡೆಗು ಮುನ್ನ ಎರಡನೇ ಚಿತ್ರವಾದ ಅಮ್ಮ ಐ ಲವ್ ಯು ಚಿತ್ರ ಬಿಡುಗಡೆಯಾಗಿತ್ತು.
2020ರಲ್ಲಿ ಜೆಂಟಲ್ ಮ್ಯಾನ್ ಸಿನಿಮಾದ ನಂತರ ಹಿಟ್ ತಂದುಕೊಟ್ಟ ಸಿನಿಮಾ ಇತ್ತೀಚಿಗೆ ಬಿಡುಗಡೆಯಾದ ನಟ ಶರಣ್ ಅಭಿನಯದ ಗುರು ಶಿಷ್ಯರು ಸಿನಿಮಾ. ಇದರಲ್ಲಿ ಆಣೆ ಮಾಡಿ ಹೇಳುತೀನಿ ಹಾಡು ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಈ ಸಿನಿಮಾದ ನಂತರ ನಿಶ್ವಿಕ ನಾಯ್ಡು ಸಾಕಷ್ಟು ಗುರುತಿಸಿಕೊಂಡಿದ್ದಾರೆ ಕನ್ನಡಿಗರ ಅಚ್ಚುಮೆಚ್ಚಿನ ನಟಿ ಎನಿಸಿದ್ದಾರೆ.
ಕನ್ನಡದ ಉದಯೋನ್ಮುಖ ನಟಿ 26 ವರ್ಷದ ಚೆಲುವೆ ನಿಶ್ವಿಕ ನಾಯ್ಡು ಡಾರ್ಲಿಂಗ್ ಕೃಷ್ಣ ಅಭಿನಯದ ಚಿತ್ರದಲ್ಲಿಯೂ ಕೂಡ ಬಣ್ಣ ಹಚ್ಚಿದ್ದಾರೆ. ದಿಲ್ ಪಸಂದ್ ಸಿನಿಮಾದಲ್ಲಿ ಮೋಹಕ ಸೆಳೆತವನ್ನು ಕ್ರಿಯೇಟ್ ಮಾಡಿರುವ ನಟಿ ನಿಶ್ವಿಕ ನಾಯ್ಡು ಗಾಳಿಪಟ 2 ಚಿತ್ರದಲ್ಲಿ ವಿಶೇಷ ಪಾತ್ರ ಒಂದರಲ್ಲಿಯೂ ಕೂಡ ಕಾಣಿಸಿಕೊಂಡಿದ್ದರು.
ಇನ್ನು ನಿಶ್ಮಿಕ ನಾಯ್ಡು ಹಾಟ್ ಫೋಟೋಶೂಟ್ ಮಾಡಿಸುವುದರಲ್ಲಿ ಎತ್ತಿದ ಕೈ. ಅವರು ಸೀರೆಯಲ್ಲಿ ಕಾಣಿಸಿಕೊಳ್ಳುವುದು ಬಹಳ ಅಪರೂಪ. ಆದರೆ ಸೀರೆಯಲ್ಲಿ ಮಾಡಿರುವ ಕೆಲವು ಫೋಟೋಗಳಲ್ಲಿ ಬಹಳ ಅದ್ಭುತವಾಗಿ ಕಾಣಿಸುತ್ತಾರೆ. ಹೆಚ್ಚು ಗ್ಲಾಮರಸ್ ಆಗಿರುವ ಹಾಟ್ ಫೋಟೋಶೂಟ್ಗಳಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಾರೆ. ಇತ್ತೀಚಿಗೆ ಬಿಳಿ ಬಣ್ಣದ ಶರ್ಟ್ ಧರಿಸಿ ಹೊಸ ಫೋಟೋ ಶೂಟ್ ಮಾಡಿ ತಮ್ಮ ಇನ್ಸ್ಟಾಗ್ರಾಮ್ (Instagram) ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ನಿಶ್ವಿಕ ನಾಯ್ಡು ಫ್ಯಾನ್ಸ್ ಪೇಜ್ ಗಳು ಕೂಡ ಈ ಫೋಟೋಗಳನ್ನ ಹಂಚಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ. ಇನ್ನು ಈ ಫೋಟೋಗೆ ಸಾಕಷ್ಟು ಲೈಕ್ ಹಾಗೂ ಕಮೆಂಟ್ಗಳು ಬಂದಿವೆ. ಕೆಲವರು ನಿಶ್ವಿಕ ನಾಯ್ಡು ಪ್ಯಾಂಟ್ ಹಾಕೋದಕ್ಕೆ ಮರೆತ್ರಾ ಅಂತ ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ. ನೀವು ಕೂಡ ನಿಶ್ವಿಕ ನಾಯ್ಡು ಅವರ ಇನ್ಸ್ಟಾಗ್ರಾಮ್ ಆಫೀಷಿಯಲ್ ಪೇಜ್ ನಲ್ಲಿ ಅವರ ಫೋಟೋಗಳನ್ನು ನೋಡಬಹುದು ಈ ಸುದ್ದಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಮೆಂಟ್ ಮಾಡುವುದರ ಮೂಲಕ ತಿಳಿಸಿ.