9 ವರ್ಷದ ಹುಡುಗಿಗೆ ಬಂತು ಅವಳ ಹಿಂದಿನ ಜನ್ಮದ ನೆನಪು.ತನ್ನನ್ನು ಕೊಂದವನನ್ನು ಹುಡುಕಿ ಈಕೆ ಮಾಡಿದ್ದೇನು ನೋಡಿ..!

9 ವರ್ಷದ ಹುಡುಗಿಗೆ ಬಂತು ಅವಳ ಹಿಂದಿನ ಜನ್ಮದ ನೆನಪು | ತನ್ನನ್ನು ಕೊಂದವನನ್ನು ಹುಡುಕಿ ಅವಳು ಮಾಡಿದ್ದೇನು ನೋಡಿ !ಮೇಲೆ ಹೇಳಿದಂತಹ ವಿಚಾರಕ್ಕೆ ಸಂಬಂಧಪಟ್ಟಂತೆ ವಿಷಯವನ್ನು ನೋಡುವುದಾದರೆ ಈ ಸತ್ಯ ಘಟನೆ ನಡೆದಿದ್ದು ಆಂಧ್ರ ಪ್ರದೇಶ ರಾಜ್ಯದ ಪುಟ್ಟಪರ್ತಿ ಬಳಿ ಇರುವ ಕಠೋರ ಪಳ್ಳಿಯಲ್ಲಿ ಈ ಚಿಕ್ಕ ಹಳ್ಳಿಯಲ್ಲಿ ಮಧ್ಯಮ ವರ್ಗದಲ್ಲಿ ಒಂದು ಹುಡುಗಿಯ ಜನನ ವಾಗುತ್ತದೆ ಆ ಹುಡುಗಿಯ ಹೆಸರನ್ನು ಪ್ರಿಯಾ ಎಂದು ಇಡಲಾಗುತ್ತದೆ ಚಿಕ್ಕವಳಿದ್ದಾಗ ಪ್ರಿಯ ಬಹಳ ಚೂಟಿಯಾಗಿದ್ದಳು ಆದರೆ ಅವಳಿಗೆ ಮೂರು ವರ್ಷದ ಬಳಿಕ ಅವಳಲ್ಲಿ ಹಲವಾರು ಬದಲಾವಣೆಗಳು ಕಂಡು ಬಂದವು

ಮನೆಯಲ್ಲಿ ಒಬ್ಬಳೇ ಇರಲು ತುಂಬಾ ಭಯ ಪಡುತ್ತಿದ್ದಳು ತಕ್ಷಣವೇ ಕರೆಂಟ್ ಏನಾದರೂ ಕೆಟ್ಟು ಹೋದರೆ ಜೋರಾಗಿ ಕಿರುಚುತ್ತಿದ್ದಳು ಮತ್ತು ಯಾರಾದರೂ ಗಂಡಸರು ಅಥವಾ ಹುಡುಗರು ಅವಳನ್ನು ಮುಟ್ಟಿದರೆ ಅವರಿಗೆ ಹೊಡೆಯುತ್ತಿದ್ದಳು.ಈ ಬದಲಾವಣೆಗಳನ್ನು ಗಮನಿಸಿದಂತಹ ತಂದೆ ತಾಯಿಗಳಿಗೆ ಸ್ವಲ್ಪ ವಿಚಿತ್ರ ಅನ್ನಿಸುತ್ತಿತ್ತು ಹೀಗೆ ಅವಳು 8 ಮತ್ತು 9ನೇ ವಯಸ್ಸಿಗೆ ಬಂದಾಗ ಇನ್ನಷ್ಟು ಬದಲಾವಣೆಗಳು ಕಂಡಿತ್ತು ರಾತ್ರಿಯ ಸಮಯ ಇದ್ದಕ್ಕಿದ್ದ ಹಾಗೆ ಎದ್ದು ಚೀರುತಿದ್ದಳು ಮತ್ತು ಅಳುತ್ತಿ ದ್ದಳು ಅರ್ಜುನ್ ಸರ್ ನನ್ನನ್ನು ಮುಟ್ಟಬೇಡಿ ನನ್ನನ್ನು ಏನು ಮಾಡಬೇಡಿ ನನ್ನನ್ನು ಹೊಡೆಯಬೇಡಿ ನನ್ನನ್ನು ಕೊಲ್ಲಬೇಡಿ ಎಂದು ಜೋರಾಗಿ ಚೀರುತ್ತಿದ್ದಳು ಮೊದ ಮೊದಲು ತಂದೆ ತಾಯಿಗಳು ಇದರ ಬಗ್ಗೆ ಹೆಚ್ಚು ಗಮನವನ್ನು ಕೊಡಲಿಲ್ಲ.
ಅದೊಂದು ಕೆಟ್ಟ ಕನಸು ಇರಬಹುದು ಎಂದು ಮರೆಯುತ್ತಿದ್ದರು ಆದರೆ ಯಾವಾಗ ಪ್ರಿಯ 9 ನೇ ವರ್ಷಕ್ಕೆ ಕಾಲಿಟ್ಟಳೋ ಆ ವರ್ಷ ಅವಳ ಜೀವನಕ್ಕೆ ಹೊಸ ತಿರುವು ಬರುತ್ತದೆ ಎಂದು ಯಾರೂ ಭಾವಿಸಿರಲಿಲ್ಲ ಸಂಕ್ರಾಂತಿಯ ದಿನ ಕುಟುಂಬದವರೆಲ್ಲ ಕದ್ರಿಯಲ್ಲಿ ಇರುವಂತಹ ಕೊಂಡ ನರಸಿಂಹ ದೇವಸ್ಥಾ ನಕ್ಕೆ ಹೋಗಿರುತ್ತಾರೆ ಪ್ರಿಯ.

ದೇವರ ದರ್ಶನವನ್ನು ಪಡೆಯುವಾಗ ಅವಳ ತಲೆಯ ಮೇಲೆ ಇದ್ದಂತಹ ದೇವಸ್ಥಾನದ ಗಂಟೆ ಅಚಾನಕ್ಕಾಗಿ ಅವಳ ತಲೆಯ ಮೇಲೆ ಬಿದ್ದು ಅವಳ ತಲೆ ಗಾಯವಾಗುತ್ತದೆ ಅವಳು ಅಲ್ಲಿಯೇ ಮೂರ್ಚೆ ಹೋಗುತ್ತಾಳೆ.ನಂತರ ಅವಳಿಗೆ ಸ್ವಲ್ಪ ನೀರನ್ನು ಹಾಕಿ ಆಮೇಲೆ ಅವಳನ್ನು ಮನೆಗೆ ಕರೆ ತರಲಾಗುತ್ತದೆ ನಂತರ ಅವಳು ಎದ್ದ ತಕ್ಷಣ ಅವರ ತಂದೆ ತಾಯಿಯನ್ನು ನೋಡಿ ನೀವು ಯಾರು? ನಾನು ಎಲ್ಲಿ ಇದ್ದೇನೆ ಇದು ಯಾವ ಊರು ನಾನು ಯಾಕೆ ಇಲ್ಲಿ ಇದ್ದೇನೆ ಎಂದು ಇಲ್ಲ ಸಲ್ಲದ ಪ್ರಶ್ನೆಯನ್ನು ಕೇಳುತ್ತಾಳೆ ದೇವಸ್ಥಾನದಲ್ಲಿ ಬಿದ್ದಂತಹ ಗಂಟೆಯಿಂದ ಅವಳಿಗೆ ಹಳೆಯ ನೆನಪು ಹೋಗಿರಬಹುದು ಎಂದು ತಂದೆ ತಾಯಿಗಳು ಮತ್ತು ಊರಿನ ಹಲವಾರು ಜನರು ನಂಬುತ್ತಾರೆ ಹಾಗೂ ಜನರು ಸ್ವಲ್ಪ ದಿನದಲ್ಲಿ ಸರಿ ಹೋಗಬಹುದು ಎಂದು ಹೇಳಿ ಹೋಗುತ್ತಾರೆ ಆದರೆ ಪ್ರಿಯಾ ನೀವು ಯಾರು ನಾನು ಏಕೆ ಇಲ್ಲಿ ಇದ್ದೇನೆ ಎಂದು ಪದೇಪದೇ ಕೇಳುತ್ತಲೇ ಇರುತ್ತಾಳೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

You might also like

Comments are closed.