ಸಿನಿಮಾ ಒಂದು ಮಾಯಲೋಕ ಎಂಬುದು ಎಲ್ಲರಿಗೂ ತಿಳಿದೇ ಇದೆ. ಹೌದು, ಈ ಲೋಕವು ಅನೇಕ ಪ್ರತಿಭೆಗಳಿಗೆ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಆದರೆ ಜೀವನ ಪರ್ಯಂತ ಅವಕಾಶಗಳು ಸಿಗುತ್ತದೆ ಎಂಬುದು ಅಂದುಕೊಳ್ಳುವುದು ಕಷ್ಟವೇ. ಎಲ್ಲರಿಗೂ ತಿಳಿದಿರುವಂತೆ ಕನ್ನಡ ಚಿತ್ರರಂಗಕ್ಕೆ ಅನೇಕರು ಲಗ್ಗೆ ಇಟ್ಟಿದ್ದಾರೆ. ಕೆಲವರು ಚಿತ್ರರಂಗದಲ್ಲಿ ಯಶಸ್ಸು ಕಂಡರೆ ಇನ್ನು ಕೆಲವರು ಚಿತ್ರರಂಗದಿಂದ ದೂರ ಸರಿದ್ದಾರೆ. ಇನ್ನು ಅನೇಕರು ಸುದೀರ್ಘ ಬ್ರೇಕ್ ನಂತರ ಮರಳಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾರೆ. ಅದು ಅಲ್ಲದೇ ಕೆಲವರು ಕಲೆಯೇ ಬದುಕು ಸೋತರು ಕಲೆಯನ್ನು ಆರಾಧಿಸುವ ಕಲಾವಿದರು ಸುತ್ತಮುತ್ತಲು ಇದ್ದಾರೆ. ಸಿನಿಮಾರಂಗ ಎಂದ ಮೇಲೆ ಅಲ್ಲಿ ಗಾಸಿಫ್ ಗೆ ಕೊರತೆಯಿಲ್ಲ. ಗಾಸಿಫ್ ಗಳ ಬಾಯಿಗೆ ಒಳಗಾಗದವರು ಹಾಗೂ ಸಿನಿಮಾರಂಗದಿಂದ ದೂರಯಿರುವ ನಟಿಮಣಿಯರಲ್ಲಿ ಇದ್ದಾರೆ. ಅಂತಹ ನಟಿಯರಲ್ಲಿ ನಿಖಿತಾ ಕೂಡ ಒಬ್ಬರು.
ನಟಿ ನಿಖಿತಾ ಕನ್ನಡ ಚಿತ್ರರಂಗದಲ್ಲಿ ನಟನೆಯ ಮೂಲಕ ಮೋಡಿ ಮಾಡಿದವರು. ಹೌದು, ಕನ್ನಡ ಸಿನಿಮಾ ಮಾತ್ರವಲ್ಲದೇ ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲೂ ನಟಿಸಿದ್ದಾರೆ. ಆದರೆ ಚಿತ್ರರಂಗದಿಂದ ಅಂತರ ಕಾಯ್ದುಕೊಂಡರು. ನಿಖಿತಾ ತುಕ್ರಾಲ್ ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್ ಹೀರೋಗಳ ಜೊತೆ ತೆರೆಹಂಚಿಕೊಳ್ಳುವ ಅವಕಾಶ ಅವರಿಗೆ ಮನೆ ಬಾಗಿಲಿಗೆ ಬಂದಿತ್ತು. ಪುನೀತ್ ರಾಜ್‌ಕುಮಾರ್ ಹಾಗೂ ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಜೊತೆ ಅವರು ನಟಿಸಿದ್ದರು. ಆದರೆ ಮದುವೆ ಬಳಿಕ ಅವರು ಬಣ್ಣದ ಲೋಕದಿಂದ ದೂರ ಉಳಿದುಕೊಂಡಿದ್ದರು. ನಟನಾ ಬದುಕಿನಿಂದ ದೂರ ಉಳಿದಿದ್ದರೂ ಕೂಡ ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಸಂಪರ್ಕದಲ್ಲಿದ್ದಾರೆ.
ಬೆಳ್ಳಿತೆರೆ ಮಾತ್ರವಲ್ಲದೇ ಕಿರುತೆರೆಯಲ್ಲಿ ನಟಿ ನಿಖಿತಾ ಗುರುತಿಸಿಕೊಂಡಿದ್ದರು. ಹೌದು, ಬಿಗ್ ಬಾಸ್ ಕನ್ನಡ ಮೊದಲ ಸೀಸನ್‌ನಲ್ಲಿ ನಿಖಿತಾ ಭಾಗವಹಿಸಿದ್ದರು. ಅನೇಕ ಸಿನಿಮಾಗಳ ಹಿಟ್ ಆದರು. ಇನ್ನು 2017ರಲ್ಲಿ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಹೀಗಾಗಿ ಸಾಂಸರಿಕ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಮದುವೆಯ ಬಳಿಕ ಅವರು ಮುಂಬೈನಲ್ಲೇ ಸೆಟ್ಲ್ ಆದರು. ಮತ್ತೆ ಅವರು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಾರೋ ಇಲ್ಲವೋ ಎಂಬ ಅನುಮಾನ ಹಲವರಿಗೆ ಇದೆ. ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿರುವ ಈ ನಟಿ ಆಗಾಗ ಪೋಸ್ಟ್ ಆಗುತ್ತಿರುತ್ತಾರೆ. ಈ ಹಿಂದೆ ಕೆಲವು ದಿನಗಳ ಹಿಂದೆ ಪೋಸ್ಟ್ ಒಂದನ್ನು ಹಾಕಿದ್ದರು. ಅದುವೇ ನಿಖಿತಾ ತನ್ನ ಮಗುವಿನೊಂದಿಗೆ ಫೋಟೋ ಶೇರ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಅಭಿಮಾನಿಗಳು ಯಾವಾಗ ಸಿನಿಮಾದಲ್ಲಿ ನಟಿಸುತ್ತೀರಾ ಎಂದು ಪ್ರೆಶ್ನೆ ಕೇಳಿದ್ದರು. ಅಂದಹಾಗೆ, ಅಭಿಮಾನಿಗಳಿಗೆ ನಟಿ ನಿಖಿತಾ ಅವರನ್ನು ಸಿನಿಮಾದಲ್ಲಿ ನೋಡುವ ಆಸೆ ಇದೆ ಎಂಬುದು ಪಕ್ಕಾ.
ಅಷ್ಟೇ ಅಲ್ಲದೇ, ಕಳೆದ ಒಂದೆರಡು ವರ್ಷಗಳ ಹಿಂದೆ, ಅವರು ಇನ್‌ಸ್ಟಾಗ್ರಾಮ್ ಮೂಲಕ ಒಂದು ಶುಭ ಸುದ್ದಿ ನೀಡಿದ್ದರು. ‘ನನ್ನ ಮೊದಲ ಪ್ರೀತಿಯಂತಿರುವ ಕೆಲಸಕ್ಕೆ ಮರಳಿದ್ದೇನೆ’ ಎಂದು ಅವರು ಪೋಸ್ಟ್ ಮಾಡಿದ್ದರು. ಆದರೆ ಹೆಚ್ಚಿನ ವಿವರಗಳನ್ನು ಬಿಟ್ಟುಕೊಟ್ಟಿರಲಿಲ್ಲ. ಇದನ್ನು ನೋಡಿದ ಅಭಿಮಾನಿಗಳ ತಲೆಯಲ್ಲಿ ಪ್ರಶ್ನೆ ಮೂಡಿತ್ತು. ತದನಂತರ ಅದಕ್ಕೆ ಉತ್ತರ ಸಿಕ್ಕಿತ್ತು. ನಿಖಿತಾ ಬಣ್ಣ ಹಚ್ಚುತ್ತಿರುವುದು ಒಂದು ವೆಬ್ ಸಿರೀಸ್‌ನಲ್ಲಿ ಎಂಬುದು. ತೆಲುಗು ಭಾಷೆಯ ಒಂದು ವೆಬ್ ಸರಣಿಯಲ್ಲಿ ಅವರು ನಟಿಸುತ್ತಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿತ್ತು.
ಅಂದಹಾಗೆ, ನಟಿ ನಿಖಿತಾ ಅವರನ್ನು 2011 ರಲ್ಲಿ ಸುಮಾರು ಮೂರು ವರ್ಷಗಳ ಕಾಲ ಸಿನಿಮಾರಂಗದಿಂದ ಬ್ಯಾನ್ ಮಾಡಲಾಗಿತ್ತು. ಈ ವಿಚಾರವು ಬಹುದೊಡ್ಡ ಮಟ್ಟಿಗೆ ಸುದ್ದಿಯಾಗಿತ್ತು. ನಿಖಿತಾ ಅವರನ್ನು ಬ್ಯಾನ್ ಮಾಡಲು ಕಾರಣ, ದರ್ಶನ್ ಹಾಗೂ ವಿಜಯಲಕ್ಷ್ಮಿಯವರ ಸಂಸಾರದಲ್ಲಿ ನಿಖಿತಾರವರು ಹುಳಿ ಹಿಂಡಿದ್ದಾರೆ ಎನ್ನುವುದಾಗಿತ್ತು. ಹೌದು ಈ ಸುದ್ದಿ ದೊಡ್ಡ ಮಟ್ಟಿಗೆ ಚರ್ಚೆಯಾಗಿದ್ದ ಸಮಯದಲ್ಲಿ ಪಾರ್ವತಮ್ಮ ರಾಜ್ ಕುಮಾರ್ ಅವರು ಎಂಟ್ರಿ ಕೊಟ್ಟಿದ್ದರು. ನಿಖಿತಾ ಅವರ ವಿಚಾರದಲ್ಲಿ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿರುವುದಿಲ್ಲ.
ಕೂಡಲೇ ಅವರನ್ನು ಸಿನಿಮಾರಂಗದಿಂದ ಬ್ಯಾನ್ ಮಾಡಿರುವುದನ್ನು ತೆರೆವು ಗೊಳಿಸಬೇಕು ಎಂದು ಹೇಳಿದ್ದರು. ಹೌದು ಹೀಗಾಗಿ ಮೂರು ವರ್ಷಗಳ ಕನ್ನಡ ಸಿನಿಮಾರಂಗದಿಂದ ಬ್ಯಾನ್ ಮಾಡಿದ್ದ ನಿರ್ಧಾರವನ್ನು ತೆಗೆದು ಹಾಕಿದ್ದರು. ಈ ಘಟನೆಯಾದ ಬಳಿಕ ನಿಖಿತಾ ಹಾಗೂ ದರ್ಶನ್ ಅವರು ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಸಿನಿಮಾ ಜೊತೆಯಾಗಿ ಕಾಣಿಸಿಕೊಂಡರು. ಹೀಗೆ ಕೆಲವು ಗಾಸಿಫ್ ಗಳ ಬಾಯಿಗೆ ಬಿದ್ದು ನಟಿ ನಿಖಿತಾರವರು ತತ್ತರಿಸಿ ಹೋಗಿದ್ದರು