ಗಂಡ ತನ್ನ ಹೆಂಡತಿಯ ಮೇಲಿನ ನಂಬಿಕೆಯಿಂದ ಆಕೆ ಒಬ್ಬಳನ್ನೇ ಮನೆಯಲ್ಲಿ ಬಿಟ್ಟು ಹೊರಗೆ ದುಡಿಯಲು ಹೋಗುತ್ತಾನೆ.. ಇತ್ತ ಹೆಂಡತಿಯೂ ಗಂಡನ ಮೇಲಿನ ನಂಬಿಕೆಯಿಂದ ಹೊರಗೆ ದುಡಿಯಲು ಕಳುಹಿಸುತ್ತಾಳೆ.. ಇಬ್ಬರೂ ತಮ್ಮ ತಮ್ಮದೇ ಆದ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಾರೆ.. ತಾವು ಕೆಲಸ ಮಾಡುವ ಜಾಗದಲ್ಲಿ ನೂರಾರು ಜನರಿದ್ದರೂ ಸಹ ಆ ಹೆಣ್ಣಿನ ಮನಸ್ಸಿನಲ್ಲಿ ಗಂಡ ಮಾತ್ರವೇ ಇರಬೇಕು.. ಇತ್ತ ಗಂಡನೂ ತನ್ನ ಸುತ್ತ ಮುತ್ತಾ ಹತ್ತಾರು ಹೆಣ್ಣುಗಳಿದ್ದರೂ ಸಹ ತನ್ನ ಮನಸ್ಸಿನಲ್ಲಿ ಹೆಂಡತಿಗೆ ಮಾತ್ರವೇ ಜಾಗವೆನ್ನುವಂತಿರಬೇಕು.. ಆಗ ಮಾತ್ರವೇ ಗಂಡ ಹೆಂಡತಿಯ ನಡುವಿನ ಸಂಬಂಧ.. ಆ ಬಾಂಧವ್ಯ ಕೊನೆವರೆಗೂ ಹಾಗೆ ಉಳಿಯುತ್ತದೆ.. ಪರಸ್ಪರ ನಂಬಿಕೆ ಎಂಬುದು ಗಂಡ ಹೆಂಡತಿ ನಡುವೆ ಬಹಳ ಮುಖ್ಯವಾದದ್ದು.. ಆದರೆ ಇಂತಹ ನಂಬಿಕೆಯನ್ನೇ ಮುರಿದು ಅರೆಕ್ಷಣದ ಸುಖಕ್ಕೆ ತಮ್ಮ ತಮ್ಮ ಸಂಗಾತಿಗಳಿಗೆ ಮೋಸ ಮಾಡುತ್ತಿರುವ ಅನೇಕ ಘಟನೆಗಳು ಆಗಾಗ ನಡೆಯುತ್ತಲೇ ಇದೆ..
ಅದೇ ರೀತಿ ಇಲ್ಲೊಬ್ಬ ನತದೃಷ್ಟ ತನ್ನ ಸ್ವಂತ ಹೆಂಡತಿ ಮತ್ತೊಬ್ಬನ ಜೊತೆ ಮಲಗಿದ್ದನ್ನು ಕಾಣುವ ದೌರ್ಭಾಗ್ಯವನ್ನು ಪಡೆದು ಬಂದಿದ್ದ.. ಆದರೆ ಆ ದೃಶ್ಯ ನೋಡಿದ ಬಳಿಕ ಆತ ಮಾಡಿರುವ ಕೆಲಸವೇ ಬೇರೆ.. ಹೌದು ಈತನ ಹೆಸರು ಮುತ್ತುರಾಜ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಬ್ಯಾಗಡದೇನಹಳ್ಳಿಯ ನಿವಾಸಿ.. ಕೆಲ ವರ್ಷಗಳ ಹಿಂದೆ ಕಾವ್ಯ ಎಂಬ ಯುವತಿಯನ್ನು ಮದುವೆಯಾಗಿದ್ದ ಸುಂದರ ಸಂಸಾರ ಅವರದ್ದಾಗಿತ್ತು.. ಆದರೆ ಸಂಸಾರ ಸರಿಯಾದ ದಾರಿಯಲ್ಲಿ ಸಾಗಬೇಕಾದರೆ ಸಂಸಾರದ ನೊಗ ಹೊತ್ತ ಇಬ್ಬರೂ ಸಹ ಸರಿಯಾದ ದಾರಿಯಲ್ಲಿಯೇ ಸಾಗಬೇಕು.. ಒಬ್ಬರು ತಪ್ಪಾದ ದಾರಿ ತುಳಿದರೂ ಸಹ ಇಂತಹ ಘಟನೆ ನಡೆದು ಬಿಡುತ್ತದೆ. ಹೌದು ಮುತ್ತುರಾಜ ಎಂದಿನಂತೆ ತನ್ನ ಕೆಲಸಕ್ಕೆ ತಾನು ಹೋಗುತ್ತಿದ್ದನು.. ಹೆಂಡತಿಯನ್ನು ತುಂಬಾ ಪ್ರೀತಿಸುತ್ತಿದ್ದನು. ಹೆಂಡತಿಯ ಮೇಲಿನ ನಂಬಿಕೆ ಅಪಾರವಾಗಿತ್ತು.. ತನ್ನ ಕೆಲಸ ಅದು ಇದು ಅಂತ ಮುತ್ತುರಾಜ ಹೊರಗೆ ಹೋಗಿ ದುಡಿಯುತ್ತಿದ್ದ.. ಆದರೆ ಇತ್ತ ಮನೆಯಲ್ಲಿ ಏನಾಗುತ್ತಿದೆ ಎಂಬ ಸಣ್ಣ ಪರಿಕಲ್ಪನೆಯೂ ಇಲ್ಲದಾಯಿತು..
ಹೌದು ಇತ್ತ ಕಾವ್ಯಾ ಅದೇ ಊರಿನ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಾರಾಯಣ ಸ್ವಾಮಿ ಎಂಬಾತನ ಜೊತೆ ಸ್ನೇಹ ಬೆಳೆಸಿದ್ದಳು.. ಇತ್ತ ತನಗೆ ಮದುವೆಯಾಗಿದ್ದರೂ ಆ ಪರಿವೇ ಇಲ್ಲದೇ ಗಂಡನಿಗೆ ಮೋಸ ಮಾಡಿ ನಾರಾಯಣ ಸ್ವಾಮಿ ಜೊತೆಗೆ ಪ್ರೀತಿಯಲ್ಲಿಯೂ ಬಿದ್ದಳು.. ಅಷ್ಟೇ ಅಲ್ಲದೇ ಇಬ್ಬರು ಆಗಾಗ ಸೇರುತ್ತಲೇ ಇದ್ದರು.. ಇತ್ತ ಈ ವಿಚಾರ ತಿಳಿದಿದ್ದ ಕೆಲವರು ಮುತ್ತುರಾಜನಿಗೆ ಸಾಕಷ್ಟು ಹೇಳಿದರೂ ಸಹ ಹೆಂಡತಿ ಮೇಲಿನ ನಂಬಿಕೆಯಿಂದ ಅದನ್ನು ನಂಬಿರಲಿಲ್ಲ.. ಆದರೆ ಅದಾಗಲೇ ತನ್ನ ಪ್ರೀತಿಗೆ ತನ್ನ ಹೆಂಡತಿ ಮೋಸ ಮಾಡಿದ್ದಾಗಿತ್ತು ಎಂಬ ಸತ್ಯ ಆತನಿಗೆ ತಿಳಿಯಲೇ ಇಲ್ಲ..
ಆದರೆ ಒಂದು ದಿನ ಮನೆಯಿಂದ ಕೆಲಸಕ್ಕೆಂದು ಹೋದ ಮುತ್ತುರಾಜ ಮತ್ತೆ ಮನೆಗೆ ಮರಳಿದ್ದನು.. ಆದರೆ ಮನೆಯಲ್ಲಿ ಹೆಂಡತಿ ಇರಲಿಲ್ಲ.. ಕೊನೆಗೆ ಯಾರೋ ನಾರಾಯಣ ಸ್ವಾಮಿಯ ಜೊತೆ ಹೋದದ್ದರ ಬಗ್ಗೆ ತಿಳಿಸಿದ್ದಾರೆ.. ಹೇಗೋ ಅವರಿದ್ದ ಜಾಗಕ್ಕೆ ಹೋದ ಮುತ್ತುರಾಜ ಅಕ್ಷರಶಃ ಕುಸಿದು ಬಿದ್ದಿದ್ದಾನೆ.. ಹೌದು ಆ ಜಾಗದಲ್ಲಿ ಹೆಂಡತಿಯ ಜೊತೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಾರಾಯಣ ಸ್ವಾಮಿಯನ್ನು ಕಂಡಿದ್ದಾನೆ.. ಅಷ್ಟು ಪ್ರೀತಿಸುತ್ತಿದ್ದ ಹೆಂಡತಿಯನ್ನು ಮತ್ತೊಬ್ಬಮ ಜೊತೆ ಆ ರೀತಿ ನೋಡಿ ಕುಸಿದು ಬಿದ್ದಿದ್ದಾನೆ ಮುತ್ತುರಾಜ.. ನೋವಿನ ಜೊತೆಗೆ ಅಷ್ಟೇ ಕೋಪವೂ ಆತನಿಗೆ ಬಂದಿದೆ..
ಇದೇ ಕಾರಣಕ್ಕೆ ತನ್ನ ಹೆಂಡತಿ ಕಾವ್ಯಾ ಹಾಗೂ ನಾರಾಯಣ ಸ್ವಾಮಿ ಇಬ್ಬರನ್ನೂ ಸಹ ಇನ್ನಿಲ್ಲವಾಗಿಸಿದ್ದಾನೆ.. ಹೌದು ಕಳೆದ ನಾಲ್ಕು ದಿನದ ಹಿಂದೆ ಡಿಸೆಂಬರ್ ಹನ್ನೊಂದರಂದು ಆನೇಕಲ್ ನ ಸೂರ್ಯನಗರ ಸಿಟಿಯ ರಾಮಯ್ಯ ಬಡಾವಣೆಯಲ್ಲಿ ಇಬ್ಬರ ಪಾರ್ಥೀವಗಳು ಒಂದೇ ಜಾಗದಲ್ಲಿ ಸಿಕ್ಕಿದ್ದವು.. ಆ ಸಮಯದಲ್ಲಿ ಈ ಇಬ್ಬರು ನಾರಾಯಣ ಸ್ವಾಮಿ ಹಾಗೂ ಕಾವ್ಯಾ ಎಂದು ತಿಳಿದುಬಂದಿತ್ತು.. ಆದರೆ ಯಾರು ಈ ಕೆಲಸ ಮಾಡಿದ್ದಾರೆ ಎಂದು ತಿಳಿದಿರಲಿಲ್ಲ.. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಎರಡೇ ದಿನಕ್ಕೆ ಇದಕ್ಕೆಲ್ಲಾ ಕಾರಣವೇನು ಈ ಕೆಲಸ ಮಾಡಿದವರು ಯಾರೆಂದು ಪತ್ತೆ ಮಾಡಿದ್ದಾರೆ.. ಹೌದು ಮುತ್ತು ರಾಜನನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದು ಪೊಲೀಸರ ಮುಂದೆ ಇರೋ ವಿಚಾರವನ್ನು ತಿಳಿಸಿ ಹೆಂಡತಿಯ ಮತ್ತೊಂದು ಸಂಬಂಧ ನೋಡಲಾಗದೆ ಈ ಕೆಲಸ ಮಾಡಿದೆ ಎಂದಿದ್ದಾನೆ..
ಅತ್ತ ಪ್ರೀತಿಸುತ್ತಿದ್ದ ಗಂಡನನ್ನು ಬಿಟ್ಟು ಅದ್ಯಾವ ಸುಖಕ್ಕೆ ಮತ್ತೊಬ್ಬನ ಜೊತೆ ಹೋದಳೋ ಇತ್ತ ಗಂಡನೂ ಇಲ್ಲ ಅತ್ತ ಅವನೂ ಇಲ್ಲ.. ಕೊನೆಗೆ ಅವಳೇ ಉಳಿಯಲಿಲ್ಲ. ಇತ್ತ ಹೆಂಡತಿಯನ್ನು ಅತಿಯಾಗಿ ಪ್ರೀತಿಸಿ ತನ್ನ ನಂಬಿಕೆ ಮೋಸ ಹೋದ ಕಾರಣ ತನ್ನ ಮುಂದಿನ ಜೀವನವನ್ನು ಈ ರೀತಿ ಕಳೆಯುವಂತಾಯಿತು ಮುತ್ತುರಾಜನಿಗೆ.. ಯಾರಿಗೆ ಏನು ಸಿಕ್ಕಿತು.. ಇರೋ ಮೂರು ದಿನದ ಜೀವನದಲ್ಲಿ ಇದೆಲ್ಲಾ ಯಾಕೆ ಬೇಕಿತ್ತು.. ಅರ್ಥ ಮಾಡಿಕೊಂಡಾಗ ಮಾತ್ರವೇ ಜೀವನದ ನಿಜವಾದ ಅರ್ಥ ತಿಳಿವುದು..