ಹೆಣ್ಣು

ಹೊಸದಾಗಿ ಮದುವೆಯಾದ ಹೆಣ್ಣು ಮಗಳು..ಈಕೆಗೆ ಗಂಡ ಏನು ಕುಡಿಸಿದ್ದಾನೆ ನೋಡಿ..ಇವನ ಜನ್ಮಕ್ಕಿಷ್ಟು..

Girls Matter/ಹೆಣ್ಣಿನ ವಿಷಯ

ಹೊಸದಾಗಿ ಮದುವೆಯಾದ ಜೋಡಿಗಳಿಗೆ ವರ್ಷ ಪೂರ್ತಿ ಬರುವ ಮೊದಲ ಹಬ್ಬಗಳು ಬಹಳ ವಿಶೇಷ.. ಅದರಲ್ಲೂ ಮೊದಲ ವರ್ಷ ಅಳಿಯ ಮಗಳನ್ನು ಮನೆಗೆ ಕರೆದು ಅದ್ಧೂರಿಯಾಗಿ ಹಬ್ಬ ಆಚರಣೆ ಮಾಡುವ ರೂಡಿಯೂ ಇದೆ.. ಆದರೆ ಇಲ್ಲೊಬ್ಬ ಹೆಣ್ಣು ಮಗಳು ಹೊಸದಾಗಿ ಮದುವೆಯಾಗಿದ್ದ ನವ ವಿವಾಹಿತೆ ಹಬ್ಬದ ದಿನವೇ ಏನಾಗಿ ಹೋದಳು ಎಂಬುದು ತಿಳಿದರೆ ನಿಜಕ್ಕೂ ಸಂಕಟವಾಗುತ್ತದೆ.. ಹೌದು ಸುಖವಾಗಿ ಸಂತೋಷವಾಗಿ ಹುಟ್ಟಿ ಬೆಳೆದ ಮನೆಯಲ್ಲಿ ರಾಣಿಯಾಗಿ ಜೀವನ ಸಾಗಿಸುವಂತಹ ಕೆಲವು ಹೆಣ್ಣು ಮಕ್ಕಳು ತಾವು ಮದುವೆಯಾದ ಮನೆಯಲ್ಲಿಯೂ ಸಹ ಅದೇ ಪ್ರೀತಿ ಗೌರವ ಸಿಕ್ಕು ಅಲ್ಲಿಯೂ ಮನೆ ಮಗಳಾಗಿ ಜೀವನ ಕಟ್ಟಿಕೊಳ್ಳುವರು.. ಆದರೆ ಅದೆಷ್ಟೋ ಹೆಣ್ಣು ಮಕ್ಕಳ ಜೀವನ ಒಂದೇ ಒಂದು ಮದುವೆಯಿಂದ ಸಂಪೂರ್ಣ ಜೀವನವೇ ನರಕವಾಗಿ ಬಿಡೋದು ನಿಜಕ್ಕೂ ದುರ್ದೈವವೆನ್ನಬೇಕೋ ಅಥವಾ ಮತ್ತಿನ್ನೇನೋ ತಿಳಿಯದು..

ಈ ಹೆಣ್ಣು ಮಗಳ ಹೆಸರು ಗಾನವಿ.. ವಯಸ್ಸಿನ್ನು ಕೇವಲ ಇಪ್ಪತ್ತೇಳು.. ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಬನ್ನೂರು ಗ್ರಾಮದ ನಿವಾಸಿ ಲೋಕಪ್ಪ ಗೌಡ ಎಂಬುವವರ ಮಗಳು.. ಈಕೆಯನ್ನು ಕಳೆದ ವರ್ಷವಷ್ಟೇ ಗಾನವಿಯನ್ನು ಅದೇ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಾರಬೈಲು ಗ್ರಾಮದ ನಿವಾಸಿಗಳಾದ ಚಂದ್ರೇಗೌಡ ಎಂಬುವವರ ಮಗ ನಂದಿತ್ ಗೆ ಕೊಟ್ಟು ಅದ್ಧೂರಿಯಾಗಿ ಮದುವೆ ಮಾಡಲಾಗಿತ್ತು‌.. ಮಗಳು ಚೆನ್ನಾಗಿರಲಿ ಎಂದು ಎಲ್ಲವನ್ನು ಕೊಟ್ಟು ಮದುವೆ ಮಾಡಿದ್ದರು ಗಾನವಿ ತಂದೆ.. ಆದರೆ ಮದುವೆಯಾದ ಕೆಲವೇ ತಿಂಗಳುಗಳಲ್ಲಿ‌ ಮಗಳನ್ನು ಈ ರೀತಿ ನೋಡುವೆ ಎಂದುಕೊಂಡಿರಲಿಲ್ಲ..

ಹೌದು ಗಾನವಿಯನ್ನು ಮದುವೆಯಾದ ನಂತರ ನಂದಿತ್ ಶುರುವಿನಲ್ಲಿ ಚೆನ್ನಾಗಿಯೇ ಇದ್ದ.. ಆದರೇ ಕೆಲವೇ ದಿನಗಳಲ್ಲಿ ಅವನ ಹಾಗೂ ಆತನ ಕುಟುಂಬದ ಅಸಲಿ ಮುಖ ಬಯಲಾಯಿತು.. ಹೌದು ಮದುವೆಯಾದ ಕೆಲವೇ ದಿನದಲ್ಲಿ ಅವನ ಚಾಳಿಯನ್ನು ಶುರು ಮಾಡಿಕೊಂಡ.. ತವರು ಮನೆಯಿಂದ ಹಣ ತರುವಂತೆ ಗಾನವಿಗೆ ಬಹಳಷ್ಟು ನೋವು ನೀಡುತ್ತಿದ್ದ.. ಮಾತಿನಲ್ಲಿ ಕೇಳಿ ಸುಮ್ಮನಾಗಿದ್ದರೆ ಏನಿಲ್ಲ.. ಆದರೆ ನಂದಿತ್ ಹಣಕ್ಕಾಗಿ ಕಟ್ಟಿಕೊಂಡ ಹೆಂಡತಿಯ ಮೇಲೇಯೇ ಪದೇ ಪದೇ ಕೈಮಾಡುತ್ತಾ ಇದ್ದ.. ಇತ್ತ ತನ್ನ ತಂದೆ ತಾಯಿಯ ಗೌರವ ಸಂಬಂಧಿಕರ ಮುಂದೆ ಹಾಳಾಗಬಾರದೆಂದು ಎಲ್ಲವನ್ನೂ ಸಹಿಸಿಕೊಂಡು ಗಾನವಿ ನೋವು ನುಂಗುತ್ತಲೇ ಬಂದಳು..

ಕೊನೆಗೆ ನಂದಿತ್ ನ ನೀಡುತ್ತಿದ್ದ ಹಿಂಸೆ ತಡೆಯಲಾಗದೇ ತನ್ನ ತವರಿನಲ್ಲಿ ಎಲ್ಲಾ ಕಷ್ಟವನ್ನು ಹೇಳಿಕೊಂಡಿದ್ದಳು.. ಮಗಳು ಚೆನ್ನಾಗಿರಲಿ ಎಂದು ಕೆಲ ದಿನಗಳ ಹಿಂದಷ್ಟೇ ಅಳಿಯನ ಕೈಗೆ ಎರಡು ಲಕ್ಷ ರೂಪಾಯಿ ಹಣ ನೀಡಿದ್ದರು.. ಆದರೆ ಅವನ ಹಣದ ದಾಹ ಅಷ್ಟಕ್ಕೆ ನೀಗಿರಲಿಲ್ಲ.. ಎರಡು ಲಕ್ಷ ಹಣ ಪಡೆದರೂ ಸಹ ಗಾನವಿಗೆ ಮತ್ತೆ ಮತ್ತೆ ಹಣಕ್ಕಾಗಿ ಹಿಂಸೆ ನೀಡುತ್ತಲೇ ಬರುತ್ತಿದ್ದ.. ಕಟ್ಟಿಕೊಂಡ ಹೆಂಡತಿಯನ್ನು ಸಾಕಲಾಗದ ಯೋಗ್ಯತೆ ಇಲ್ಲದೆ ತಾನೂ ಸಹ ಹೆಂಡತಿಯ ಅಪ್ಪನ ಹಣದಿಂದ ಜೀವನ ಮಾಡೊ ಇಂತಹ ನಾಲಾಯಕ್ ಗಂಡ ಬೇಡ ಎಂದು ಗಾನವಿ ಆತನಿಂದ ದೂರಾಗಿದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತು.. ಆದರೆ ಕುಟುಂಬದ ಗೌರವ ಹಾಳಾಗಬಾರದೆಂದು ಗಾನವಿ ಮತ್ತೆ ಎಲ್ಲವನ್ನು ಸಹಿಸಿಕೊಂಡಳು.. ಆದರೆ ಹೊಸದಾಗಿ ಮದುವೆಯಾಗಿದ್ದ ಗಾನವಿ ಸಂಭ್ರಮದಿಂದ ಯುಗಾದಿ ಹಬ್ಬ ಆಚರಿಸಬೇಕಿತ್ತು.. ಆದರೆ ಹಬ್ಬದ ದಿನವೇ ಕೊನೆಯುಸಿರೆಳೆದುಬಿಟ್ಟಳು..

ಇದನ್ನೂ ಓದಿ >>>  ಯಾವುದೇ ಹೆಂಡತಿ ತನ್ನ ಗಂಡನಿಗೆ ಮೋಸ ಮಾಡುವುದರ ಹಿಂದೆ ಇರುವ ಕಾರಣಗಳೇನು ಗೊತ್ತೇ?? ಕಾರಣ ತಿಳಿಯಿರಿ.

ತನ್ನ ಹಣದ ದಾಹಕ್ಕೆ ಗಾನವಿಯನ್ನು ಬಲಿ ಪಡೆದುಕೊಂಡು ಬಿಟ್ಟ ನಂದಿತ್.. ಹೌದು ನಂದಿತ್ ಗಾನವಿಗೆ ಹಣ ತರುವಂತೆ ಮತ್ತೆ ಕೆಲ ದಿನದ ಹಿಂದೆ ಪೀಡಿಸುತ್ತಾ ಹಿಂಸೆ ನೀಡುತ್ತಿದ್ದದ್ದನ್ನು ಗಾನವಿ ತನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡು ಬಿಟ್ಟಿದ್ದಳು.. ಆ ವಿಚಾರ ತಿಳಿದ ನಂದಿತ್ ಆತನ ತಂದೆ ಚಂದ್ರೇಗೌಡ ಹಾಗೂ ಅತ್ತೆ ಸಾವಿತ್ರಮ್ಮ ಎಲ್ಲರೂ ಸೇರಿಕೊಂಡು ಗಾನವಿಗೆ ವಿಷ ಕುಡಿಸಿ ಜೀವ ಕಳೆದುಕೊಳ್ಳುವಂತೆ ಮಾಡಿದ್ದಾರೆ.. ಹೌದು ಸೊಸೆಯಾಗಿ ಬಂದ ಗಾನವಿಯನ್ನು ಮನೆ ಮಗಳಂತೆ ನೋಡಿಕೊಳ್ಳಬೇಕಾದ ಅತ್ತೆ ಮಾವನೇ ಮಗನ ಜೊತೆ ಸೇರಿಕೊಂಡು ಇಂತಹ ಕೆಲಸ ಮಾಡಿ ಒಂದು ಜೀವವನ್ನೇ ಇಲ್ಲವಾಗಿಸಿ ಬಿಟ್ಟರು.. ಇತ್ತ ಜೀವನ ಪೂರ್ತಿ ಜೊತೆಯಾಗಿರುವೆ ಎಂದು ಮಾತು ಕೊಟ್ಟು ಮದುವೆಯಾದ ನಾಲಾಯಕ್ ಗಂಡ ಎನಿಸಿಕೊಂಡ ನಂದಿತ್ ಹೆಂಡತಿಗೆ ಹಬ್ಬದ ದಿನವೇ ವಿಷ ಕುಡಿಸಿಬಿಟ್ಟ..

ಇತ್ತ ವಿಚಾರ ತಿಳಿದು ಓಡಿ ಬಂದ ಗಾನವಿಯ ಅಪ್ಪ ಅಮ್ಮನ ಆಕ್ರಂದನ ಮುಗಿಲು ಮುಟ್ಟಿತ್ತು.. ಸಧ್ಯ ಗಾನವಿಯ ತಂದೆ ಅಳಿಯ ಹಾಗೂ ಆತನ ಅಪ್ಪ ಅಮ್ಮನ ಮೇಲೆ ದೂರು ದಾಖಲು ಮಾಡಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.. ಹೆಣ್ಣಾಗಲಿ ಗಂಡಾಗಲಿ ಮದುವೆಯಾದ ಬಳಿಕ ಪರಸ್ಪರ ಗೌರವ ಪ್ರೀತಿ ಕೊಡಲಾಗದಿದ್ದರೇ.. ಹೆಂಡತಿಯನ್ನುಸಾಕುವ ಯೋಗ್ಯತೆ ಇಲ್ಲವಾದರೆ ದಯವಿಟ್ಟು ಮದುವೆಯಾಗಬೇಡಿ.. ಕನಿಷ್ಟಪಕ್ಷ ಅವರುಗಳು ಜೀವಂತವಾಗಾದರೂ ಇರುವರು.. ಯಾರೂ ಸಹ ಈ ರೀತಿ‌ ಮತ್ತೊಬ್ಬರ ಜೀವನ ಹಾಳು ಮಾಡಬೇಡಿ.. ಬದುಕಿ ಬಾಳಬೇಕಾದ ಗಾನವಿ ಮಾಡಿದ ತಪ್ಪಾದರೂ ಏನು.. ಆಕೆಯ ತಂದೆ ತಾಯಿ ಮಾಡಿದ ತಪ್ಪಾದರೂ ಏನು.. ಭಗವಂತನೇ ಬಲ್ಲ..

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...