ಇನ್ಮುಂದೆ ಸರತಿ ಸಾಲಿನಲ್ಲಿ ನಿಂತು ಹೆಸರನ್ನು ದಾಖಲಿಸಿ ಫೋಟೋ ಹಚ್ಚಿಸಿ ಕಾಯಬೇಕೆಂದಿಲ್ಲ ಈಗ 24 ಗಂಟೆಗಳಲ್ಲಿ ರೇಷನ್ ಕಾರ್ಡ್ ನೀಡಲಾಗುತ್ತದೆ. ಹೌದು ರಾಜ್ಯದ ಜನರಿಗೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಪಡಿತರ ವಿತರಣೆ ಕೂಡ ಒಂದಾಗಿದೆ. ಇದೀಗ, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ನ್ಯಾಯ ಬೆಲೆ ಅಂಗಡಿಗಳ ಮಂಜೂರಾತಿಯಲ್ಲಿ ಶೇಕಡ 24.1 ರಷ್ಟು ಮೀಸಲಾತಿ ಕಲ್ಪಿಸಲು ವಿಧಾನ ಮಂಡಲದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣ ಸಮಿತಿ ಶಿಫಾರಸು ಮಾಡಲಾಗಿದೆ.
ಇನ್ನು ರಾಜ್ಯದಲ್ಲಿ ಈಗಾಗಲೇ ಬಿಪಿಎಲ್ ರೇಷನ್ ಕಾರ್ಡುಗಳಿಗಾಗಿ ಅರ್ಜಿಯನ್ನ ಸಲ್ಲಿಸಿದವರಿಗೆ ಇನ್ನೂ ಕೆಲವರ 60 ಕೆಲಸದ ದಿನಗಳಲ್ಲಿ ಅವರಿಗೆ ಬಿಪಿಎಲ್ ರೇಷನ್ ಕಾರ್ಡುಗಳು ಬರಲಿದ್ದು ಅವರು ಸರ್ಕಾರದ ಸೌಲಭ್ಯಗಳನ್ನ ಪಡೆಯಬಹುದಾಗಿದೆ. ಇನ್ನು ರಾಜ್ಯದಲ್ಲಿ ಹೆಚ್ಚಿನ ಬಡ ಜನರಿಗೆ ಎಪಿಎಲ್ ರೇಷನ್ ಕಾರ್ಡ್ ಸಿಕ್ಕಿದ್ದು ಅವರು ತಮ್ಮ ಕಾರ್ಡುಗಳನ್ನ ಬಿಪಿಎಲ್ ರೇಷನ್ ಕಾರ್ಡುಗಳಾಗಿ ಬದಲಾವಣೆ ಮಾಡಲು ಈಗಾಗಲೇ ಅರ್ಜಿಯನ್ನ ಸಲ್ಲಿಸಿದ್ದಾರೆ, ಆದರೆ ಕರೋನ ಮಹಾಮಾರಿಯ ಹಿನ್ನಲೆಯಲ್ಲಿ ಯಾವುದೇ ಅರ್ಜಿಯನ್ನ ಪರಿಶೀಲನೆ ಮಾಡಿಲ್ಲ,
ಆದರೆ ಈಗ ಅದನ್ನ ಪರಿಶೀಲನೆ ಮಾಡಲಾಗುತ್ತಿದ್ದು ಅರ್ಜಿ ಸಲ್ಲಿಸಿದವರು ನಿಜವಾಗಿಯೂ ಬಡವರಾಗಿದ್ದರೆ ನಿಮಗೆ ಅವರಿಗೂ ಬಿಪಿಎಲ್ ರೇಷನ್ ಕಾರ್ಡ್ ಸಿಗಲಿದೆ ಇನ್ನು ಈಗಾಗಲೇ ಎಪಿಎಲ್ ರೇಷನ್ ಕಾರ್ಡ್ ಇದ್ದು ಅದನ್ನ ಬಿಪಿಎಲ್ ಕಾರ್ಡುಗಳಾಗಿ ಬದಲಾವಣೆ ಮಾಡಲು ಮತ್ತೆ ಅರ್ಜಿಯನ್ನ ಕೂಡ ಕರೆಯಲಾಗಿದ್ದು ಅರ್ಜಿ ಸಲ್ಲಿಸುವವರು ಕಾರ್ಡಿನ ಜೆರಾಕ್ಸ್, ಜಾತಿ ಮತ್ತು ಆದಾಯ ಪ್ರಮಾಣಪತ್ರ ಮತ್ತು ಆಧಾರ್ ಕಾರ್ಡ್ ತೆಗೆದುಕೊಂಡು ನಿಮ್ಮ ವಲಯದ ಆಹಾರ ನಾಗರೀಕ ಸರಬರಾಜು ಇಲಾಖೆಯ ಕಚೇರಿಗೆ ನೇರವಾಗಿ ಭೇಟಿನೀಡಿ ನಿಮ್ಮ ಎಪಿಎಲ್ ಕಾರ್ಡುಗಳನ್ನ ರದ್ದು ಮಾಡಿಸಿ ಅದನ್ನ ಬಿಪಿಎಲ್ ಕಾರ್ಡುಗಳನ್ನಾಗಿ ಮಾಡಿಕೊಳ್ಳಬಹುದಾಗಿದೆ ಅಥವಾ ಹೊಸದಾಗಿ ಬಿಪಿಎಲ್ ಕಾರ್ಡಿಗಾಗಿ ಅರ್ಜಿಯನ್ನ ಸಲ್ಲಿಸಬಹುದಾಗಿದೆ.

ಇನ್ನು ಈಗಾಗಲೇ ರಾಜ್ಯದಲ್ಲಿ ಸುಮಾರು 3 ಲಕ್ಷಕ್ಕೂ ಅಧಿಕ ಕುಟುಂಬದವರು ಅರ್ಜಿಯನ್ನ ಸಲ್ಲಸಿದ್ದು ಅವರು ಸಲ್ಲಿಸಿದ ಅರ್ಜಿಗಳನ್ನ ಇನ್ನು ಪರಿಶೀಲನೆ ಮಾಡಿಲ್ಲ ಮತ್ತು ಹೊಸ ಅರ್ಜಿಗಳನ್ನ ಕೂಡ ತಗೆದುಕೊಳ್ಳಲಾಗುತ್ತಿಲ್ಲ. ರಾಜ್ಯದಲ್ಲಿ ಇರುವ ನಿಜವಾದ ಬಡ ಕುಟುಂಬಗಳಿಗೆ ಸರ್ಕಾರದ ಸೌಲಭ್ಯಗಳ ಜೊತೆಗೆ ಬಿಪಿಎಲ್ ರೇಷನ್ ಕಾರ್ಡ್ ದೊರೆಯಬೇಕು ಅನ್ನುವುದು ಸರ್ಕಾರದ ನಿಜವಾದ ಉದ್ದೇಶವಾಗಿದೆ ಮತ್ತು ಈ ಕಾರಣದಿಂದ ರಾಜ್ಯದಲ್ಲಿ ಮತ್ತೆ ರೇಷನ್ ಕಾರ್ಡುಗಳನ್ನ ಸಿದ್ದ ಮಾಡಲು ಸರ್ಕಾರ ನಿರ್ಧಾರ ಮಾಡಿದ್ದು ಈ ರಾಜ್ಯದ ಜನರಿಗೆ ಬಂಪರ್ ಸಿಹಿ ಸುದ್ದಿಯಾಗಿದೆ.
ಇನ್ನು ಈಗಾಗಲೇ ರೇಷನ್ ಕಾರ್ಡ್ ಇಲ್ಲದೆ ಹೊಸ ರೇಷನ್ ಕಾರ್ಡ್ ಪಡೆಯಲು ಬಯಸುವವರಿಗೆ ಮುಂದಿನ ತಿಂಗಳ ಆರಂಭದಿಂದಲೇ ಹೊಸ ಅರ್ಜಿಯನ್ನ ಕರೆಯಲಾಗಿದ್ದು ರೇಷನ್ ಕಾರ್ಡ್ ಮಾಡಲು ಬಯಸುವವರು ಆನ್ಲೈನ್ ನಲ್ಲಿ ಅರ್ಜಿಯನ್ನ ಸಲ್ಲಿಸಿ ಹೊಸ ರೇಷನ್ ಕಾರ್ಡ್ ಮಾಡಿಸಿಕೊಳ್ಳಬಹುದಾಗಿದೆ. ಇನ್ನು ಹೊಸ ಕಾರ್ಡಿಗೆ ಅರ್ಜಿಯನ್ನ ಸಲ್ಲಿಸುವವರು ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣಪತ್ರ ಹಾಗು ವಾಸಸ್ಥಳದ ಮಾಹಿತಿಯನ್ನ ಸಲ್ಲಿಸುವುದು ಅತ್ಯಗತ್ಯವಾಗಿದೆ.