ಕನ್ನಡದ ಕಿರುತೆರೆಯ ಧಾರಾವಾಹಿಗಳಲ್ಲಿ ಗೊಂಬೆ ಪಾತ್ರದ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿರುವ ಚಂದದ ಚಲುವೆ ಇವರು ಈಗಾಗಲೇ ನಾವು ಯಾರ ಬಗ್ಗೆ ಮಾತನಾಡುತ್ತಿದ್ದೇವೆ ಅಂತ ನಿಮಗೆ ಈಗಾಗಲೇ ಗೊತ್ತಾಗಿರಬಹುದಲ್ಲವೇ. ಹೌದು ಕಲರ್ಸ್ ಕನ್ನಡದಲ್ಲಿ ಕೆಲವು ವರ್ಷಗಳ ಕಾಲ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಲಕ್ಷ್ಮಿ ಬಾರಮ್ಮ ಎನ್ನುವ ಸೀರಿಯಲ್ ನಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡ ನಟಿ ನೇಹಾ ಗೌಡ.
ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ಗೊಂಬೆ ಎನ್ನುವ ಪಾತ್ರಕ್ಕೆ ಜೀವ ತುಂಬಿದ ನೇಹಾ ಗೌಡ ಇಂದಿಗೂ ಅಭಿಮಾನಿಗಳ ಪಾಲಿಗೆ ಗೊಂಬೆ ಎಂದೇ ಖ್ಯಾತಿಯನ್ನು ಹೊಂದಿದ್ದಾರೆ. ಅದೆಷ್ಟೋ ಜನರಿಗೆ ನೇಹಾ ಗೌಡ ಎಂದರೆ ಗೊತ್ತಾಗುವುದಿಲ್ಲ ಗೊಂಬೆ ಎಂದರೆ ಮಾತ್ರ ಗೊತ್ತಾಗುತ್ತೆ. ಅಷ್ಟು ಫೇಮಸ್ ಆಗಿದ್ದರು ನೇಹಾ ಗೌಡ. ಈ ಧಾರಾವಾಹಿ ಸುಮಾರು 2013 ರಲ್ಲಿ ಆರಂಭವಾಗಿ 2020 ರವರೆಗೆ ಪ್ರಸಾರವಾಗಿತ್ತು. ಇಂದಿಗೂ ಅವರ ಪಾತ್ರ ವೀಕ್ಷಕರಿಗೆ ಗೊಂಬೆ ಹಾಗೂ ಚಿನ್ನು ಪಾತ್ರ ಖಂಡಿತವಾಗಿಯೂ ನೆನಪಿನಲ್ಲಿ ಶಾಶ್ವತವಾಗಿ ಉಳಿದಿದೆ.
ಸುಮಾರು ಏಳು ವರ್ಷಗಳ ಕಾಲ ಕವಿತಾ ಗೌಡ, ನೇಹಾ ಗೌಡ, ಚಂದನ್ ಕುಮಾರ್, ಶೈನ್ ಶೆಟ್ಟಿ, ಚಂದನ್ ಮೊದಲಾದ ನಟರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇಲ್ಲಿ ಕೆಲವು ಪಾತ್ರಗಳಲ್ಲಿ ಪಾತ್ರಧಾರಿಗಳು ಬದಲಾದರೂ ನೇಹಾ ಗೌಡ ಮಾತ್ರ ಧಾರಾವಾಹಿಯ ಆರಂಭದಿಂದ ಕೊನೆಯವರೆಗೂ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಬಂದಿದ್ದಾರೆ. ಇನ್ನೂ ನೇಹಾ ಗೌಡ ಇದೀಗ ದಾಂಪತ್ಯ ಜೀವನದ ಸವಿಯನ್ನ ಅನುಭವಿಸುತ್ತಿದ್ದಾರೆ.
ತಮ್ಮ ಬಾಲ್ಯದ ಗೆಳೆಯ ಚಂದನ್ ಅವರನ್ನು ನಟಿ ನೇಹಾ ಗೌಡ ಮದುವೆಯಾಗಿದ್ದಾರೆ. ಬಿಹಾರಿ ಮೂಲದ ಚಂದನ್ ಅವರ ಜೊತೆ ಹಸೆಮಣೆ ಏರಲಿದ್ದಾರೆ ಎನ್ನುವ ಸುದ್ಧಿ ಹಬ್ಬುತ್ತಿದ್ದಂತೆ, ಲಕ್ಷ್ಮಿ ಬಾರಮ್ಮದಲ್ಲಿ ನೇಹಾ ಗೌಡ ಅವರ ಜೊತೆಗೆ ನಟಿಸುತ್ತಿರುವ ಚಂದನ್ ಕುಮಾರ್ ಎಂದೇ ಅಭಿಮಾನಿಗಳು ಭವಿಸಿದ್ದರು. ಆದರೆ ನೇಹಾ ಗೌಡ ಅವರ ಪತಿಯ ಹೆಸರು ಕೂಡ ಚಂದನ್.
ನೇಹಾ ಗೌಡ ಅವರ ಪತಿ ಕೂಡ ಒಳ್ಳೆಯ ಅದ್ಭುತ ಡ್ಯಾನ್ಸೆರ್ ಕೂಡ ಹೌದು ಅವರು ಯಾವುದೇ ಸಿನೆಮಾರಂಗಕ್ಕೆ ಸಂಪರ್ಕ ಹೊಂದಿದವರಲ್ಲ. ಹೊರದೇಶದಲ್ಲಿ ವಾಸವಾಗಿರುವ ಚಂದನ್ ಅವರನ್ನು ನೇಹಾ ಗೌಡ ಇತ್ತೀಚಿಗೆ ವಿವಾಹವಾಗಿದ್ದರೆ. ಇವರಿಬ್ಬರೂ ಮದುವೆಯಾದ ನಂತರ ಕಲರ್ಸ್ ಕನ್ನಡದ ರಾಜ ರಾಣಿ ಎನ್ನುವ ರಿಯಾಲಿಟಿ ಶೋ ನಲ್ಲಿ ಈ ಜೋಡಿ ಭಾಗವಹಿಸಿದ್ದರು.
ಕನ್ನಡಿಗರ ನೆಚ್ಚಿನ ಚಾನಲ್ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ರಾಜ ರಾಣಿ ಶೋ ದಂಪತಿಗಳ ನಡುವಿನ ಬಾಂಧವ್ಯವನ್ನು ಹೆಚ್ಚಿಸುವಂತ ಒಂದು ಅದ್ಭುತ ವೇದಿಕೆಯಾಗಿತ್ತು. ಈಗ ರಾಜ ರಾಣಿ ಸೀಸನ್ 2 ಪ್ರಸಾರವಾಗುತ್ತಿದೆ. ರಾಜ ರಾಣಿ ಸೀಸನ್ ಒಂದರಲ್ಲಿ ಭಾಗವಹಿಸಿದ್ದ ಚಂದನ್ ಹಾಗೂ ನೇಹಾ ಗೌಡ ರಾಜರಾಣಿ ಪಟ್ಟವನ್ನು ಮೂಡಿಗೆರಿಸಿಕೊಂಡಿದ್ದರು. ಇನ್ನೂ ರಾಜ ರಾಣಿ ವೇದಿಕೆಯಲ್ಲಿ ನೇಹಾ ಗೌಡ ದಂಪತಿಗಳು ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ದಂಪತಿಗಳ ನಡುವೆ ಎಂದಿಗೂ ಆಡದೇ ಇರುವ ಹೃದಯದ ಮಾತುಗಳನ್ನು ಆಡಿಕೊಂಡು ಅವರ ಮನಸ್ಸನ್ನು ಹಗುರ ಮಾಡಿಕೊಳ್ಳಬೇಕು. ಅಂತ ರಾಜ ರಾಣಿ ಶೋ ವೇದಿಕೆ ಅವಕಾಶಗಳುನ್ನು ಕಲ್ಪಿಸಿ ಕೊಟ್ಟಿತು. ಆ ಸಂದರ್ಭದಲ್ಲಿ ಒಂದು ವಿನಂತಿಯನ್ನು ಮಾಡಿಕೊಳ್ಳುತ್ತಾರೆ “ನನಗೆ ಒಂದು ಹೆಣ್ಣು ಮಗುವನ್ನು ದತ್ತು ತೆಗೆದುಕೊಂಡು ಸಕುವ ಆಸೆ ಇದೆ” ಅಂತ ನೇಹಾ ಗೌಡ ಹೇಳುತ್ತಾರೆ ಇದಕ್ಕೆ ಚಂದನ್ ಯಾವುದೇ ಕಾರಣಕ್ಕೂ ನಿರಾಕರಿಸದೆ ಸರಿ ಎಂದು ಸಂತೋಷದಿಂದ ಒಪ್ಪಿಗೆ ನೀಡುತ್ತಾರೆ.
ಚಂದನ್ ಹಾಗೂ ನೇಹಾ ಗೌಡ ಇಬ್ಬರು ಚಿಕ್ಕಂದಿನಿಂದ ಒಟ್ಟಿಗೆ ಬೆಳೆದವರು ಹಾಗಾಗಿ ಒಬ್ಬರ ಮನಸ್ಸನ್ನು ಇನ್ನೊಬ್ಬರು ಅರ್ಥ ಮಾಡಿಕೊಳ್ಳುವ ಒಬ್ಬರ ಭಾವನೆಯನ್ನು ಇನ್ನೊಬ್ಬರು ಗೌರವಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಹಾಗಾಗಿ ಇಂದು ಉತ್ತಮವಾದ ಜೀವನ ನಡೆಸುತ್ತಿರುವ ನೇಹಾ ಗೌಡ ಹಾಗೂ ಚಂದನ್ ದಂಪತಿಗಳು ಒಂದು ಅನಾಥ ಹೆಣ್ಣು ಮಗುವಿನ ಉಜ್ವಲ ಭವಿಷ್ಯಕ್ಕೆ ಜವಾಬ್ದಾರಿಯಾಗುವುದಕ್ಕೆ ಹೊರಟಿದ್ದಾರೆ. ಈ ದಂಪತಿಗಳ ಅದ್ಭುತ ನಿರ್ಧಾರಕ್ಕೆ ನಮ್ಮ ವೀಕ್ಷಕರಿಂದ ಸಾವಿರ ನಮಸ್ಕಾರಗಳು. ಇಂತವರು ಒಂದು ಊರಲ್ಲಿ ಒಬ್ಬರು ಒಂದು ಅನಾಥ ಮಗುವನ್ನು ದತ್ತು ತೆಗೆದುಕೊಂಡರೆ ಎಷ್ಟು ಅದ್ಭುತ ವಾಗಿರುತ್ತದೆ ಅಲ್ಲವೇ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು..