ನೇಹಾ ಗೌಡ, ಅನುಪಮಾ ಗೌಡ ಮತ್ತು ಇಶಿತಾ ಮುರುಗಾ ಗೋವಾ ಟ್ರಿಪ್ ಮಜವೋ ಮಜಾ. ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡ ನಟಿಯರು.ಕನ್ನಡ ಕಿರುತೆರೆ ಲೋಕದ ಜನಪ್ರಿಯ ನಟಿಯರಾದ ನೇಹಾ ಗೌಡ, ಅನುಪಮಾ ಗೌಡ ಮತ್ತು ಇಶಿತಾ ಮುರುಗಾ ಗೋವಾ ಟ್ರಿಪ್ ಎಂಜಾಯ್ ಮಾDIತ್ತಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಚೆಲುವೆಯರು ಫೋಟೋ ಹಂಚಿಕೊಂಡು ಬೀಚ್ ಬಳಿ ಮಜಾ ಮಾಡಿರುವುದಲ್ಲದೆ ಗೋವಾದ ಟೂರಿಸ್ಟ್ ಸ್ಥಳಗಳನ್ನು ವೀಕ್ಷಿಸಿದ್ದಾರೆ. ಎಲ್ಲಾ ಫೋಟೋಗಳನ್ನು ರೀಲ್ಸ್ ಮೂಲಕ ಹಂಚಿಕೊಂಡಿದ್ದಾರೆ.ಪ್ಲ್ಯಾನ್ ಮಾಡದ ಟ್ರಿಪ್‌ಗಳು ಸಖತ್ ಮಜಾವಾಗಿರುತ್ತದೆ, ಸಣ್ಣ ಮಾತುಕತೆ ಬ್ಯಾಗ್ ಪ್ಯಾಕ್ ಮಾಡಿದ್ದು ಅಷ್ಟೆ ಆಗಲೇ ಗೋವಾದಲ್ಲಿ ಇದ್ದೀವಿ ಎಂದು ಬರೆದುಕೊಂಡಿದ್ದಾರೆ.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸಿಂಗ್ ಚಾಂಪಿಯನ್ ರಿಯಾಲಿಟಿ ಶೋನಲ್ಲಿ ಇಶಿತಾ ಮುರುಗಾ ಸ್ಪರ್ಧಿಸುತ್ತಿದ್ದಾರೆ. ದಿನೇ ದಿನೇ ಇಶಿತಾ ಆಂಡ್ ಟೀಂ ಟಫ್ ಫೈಟ್ ನೀಡುತ್ತಿದ್ದಾರೆ.ಇನ್ನು ರಾಜಾ ರಾಣಿ ಮತ್ತು ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ನಿರೂಪಣೆ ನಂತರ ಅನುಪಮಾ ಗೌಡ ತಮ್ಮ ಮುಂದಿನ ಪ್ರಾಜೆಕ್ಟ್‌ಗಳ ಬಗ್ಗೆ ರಿವೀಲ್ ಮಾಡಿಲ್ಲ. ಲಕ್ಷ್ಮಿ ಬಾರಮ್ಮ ಧಾರಾವಾಹಿ ನಂತರ ಅನೇಕ ಟಿವಿ ಶೋಗಳು ಮತ್ತು ಗೆಸ್ಟ್ ಅಪಿಯರೆನ್ಸ್ ಮಾಡಿದ ನಂತರ ನೇಹಾ ಇದೀಗ ತಮಿಳು ಧಾರಾವಾಹಿಗಳಲ್ಲಿ ಬ್ಯುಸಿಯಾಗಿದ್ದಾರೆ.
ಬಹಳ ಕಾಲದ ಸ್ನೇಹಿತರು ಇವರು
ನೇಹಾ ಗೌಡ ಹಾಗೂ ಅನುಪಮಾ ಗೌಡ ಬಹಳ ಕಾಲದಿಂದ ಸ್ನೇಹಿತರು. ಅನೇಕ ವೇದಿಕೆಗಳಲ್ಲಿ ತಮ್ಮ ಸ್ನೇಹದ ಬಗ್ಗೆ ಅವರಿಬ್ಬರು ಹೇಳಿಕೊಂಡಿದ್ದರು. ಪರಸ್ಪರ ಒಬ್ಬರು ಇನ್ನೊಬ್ಬರ ಹುಟ್ಟುಹಬ್ಬವನ್ನು ಕೂಡ ಭರ್ಜರಿಯಾಗಿ ಆಚರಿಸುತ್ತಾರೆ. ಆದರೆ ಇತ್ತೀಚೆಗೆ ಅನುಪಮಾ ಗೌಡ ಹುಟ್ಟುಹಬ್ಬ ಆಚರಣೆಯಲ್ಲಿ ನೇಹಾ ಬಂದಿರಲಿಲ್ಲ, ನೇಹಾ ಪತಿ ಚಂದನ್ ಆಗಮಿಸಿದ್ದರು. ಇನ್ನು ಇಷಿತಾ ವರ್ಷ ಹಾಗೂ ನೇಹಾ ಗೌಡ ‘ರಾಜಾ ರಾಣಿ’ ಶೋನಲ್ಲಿ ಒಟ್ಟಿಗೆ ಭಾಗವಹಿಸಿದ್ದರು.
ಮೆಗಾ ಹಿಟ್ ನೀಡಿರುವ ಈ ಕಿರುತೆರೆ ಕಲಾವಿದರು
ನೇಹಾ ಗೌಡ ಅವರು ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ಗೊಂಬೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆರು ವರ್ಷಗಳಿಗೂ ಅಧಿಕ ಕಾಲ ಈ ಸೀರಿಯಲ್ ಪ್ರಸಾರವಾಗಿತ್ತು. ಇಷಿತಾ ವರ್ಷ ಅವರು ‘ಅಗ್ನಿಸಾಕ್ಷಿ’ ಧಾರಾವಾಹಿಯಲ್ಲಿ ಮಾಯಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.