ಸದ್ಯ ನಟಿ ನಯನತಾರ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನ ಪಡೆದುಕೊಳ್ಳುತ್ತಿದ್ದು ಯಾವುದೇ ಸಮಸ್ಯೆ ಇಲ್ಲ ಎಂದು ವೈದ್ಯರು ಹೇಳಿದ್ದಾರೆ. ಹೊಸದಾಗಿ ಮದುವೆಯ ಗಂಡು ಹೆಣ್ಣು ಕೆಲವು ಉಡುಗೊರೆ ಮತ್ತು ಸರ್ಪ್ರೈಸ್ ಕೊಡುವುದು ಸರ್ವೇ ಸಾಮಾನ್ಯವಾಗಿದೆ, ಆದರೆ ಸರ್ಪ್ರೈಸ್ ಅನ್ನುವುದು ನಟಿ ನಯನತಾರ ಅವರಿಗೆ ದೊಡ್ಡ ಸಮಸ್ಯೆಯನ್ನ ಉಂಟುಮಾಡಿದ್ದು ಈಗ ಆಸ್ಪತ್ರೆಯನ್ನ ಸೇರಿಕೊಳ್ಳುವ ಹಾಗೆ ಆಗಿದೆ. ತನ್ನ ಹೆಂಡತಿಗೆ ತಾನೇ ಅಡುಗೆಯನ್ನ ಮಾಡಿ ಬಡಿಸಬೇಕು ಎಂದು ಬಹಳ ದಿನಗಳಿಂದ ಬಹಳ ಪ್ರಯತ್ನವನ್ನ ಮಾಡಿ ವಿಘ್ನೇಶ್ ಅವರು ಕೆಲವು ಅಡುಗೆಯನ್ನ ಕಲಿತಿದ್ದಾರೆ ಮತ್ತು ಅವುಗಳನ್ನ ಮನೆಯಲ್ಲಿ ಮಾಡಿದ್ದಾರೆ.
ಹೆಂಡತಿ ನಯನತಾರ ಅವರಿಗೆ ಇಷ್ಟವಾಗಬಹುದು ಅನ್ನುವ ಕಾರಣಕ್ಕೆ ವಿಘ್ನೇಶ್ ಕೆಲವು ಅಡುಗೆಯನ್ನ ತಾವೇ ಮಾಡಿ ಹೆಂಡತಿ ನಯನತಾರಗೆ ಸರ್ಪ್ರೈಸ್ ಕೊಟ್ಟಿದ್ದಾರೆ. ಗಂಡ ಪ್ರೀತಿಯಿಂದ ಮಾಡಿದ್ದಾರೆ ಅನ್ನುವ ಕಾರಣಕ್ಕೆ ನಟಿ ನಯನತಾರ ಅವರು ಊಟವನ್ನ ಬಹಳ ಹೆಚ್ಚಾಗಿಯೇ ಮಾಡಿದ್ದಾರೆ. ಊಟವನ್ನ ಮಾಡಿದ ಕೆಲವು ಸಮಯದ ನಂತರ ನಟಿ ನಯನತಾರ ಅವರ ಆರೋಗ್ಯದಲ್ಲಿ ಬಹಳ ಏರುಪೇರಾಗಿದೆ. ಆರೋಗ್ಯದಲ್ಲಿ ಸಮಸ್ಯೆಯಾದ ಕಾರಣ ನಟಿ ನಯನತಾರ ಅವರನ್ನ ಆಸ್ಪತ್ಯ್ರೆಗೆ ದಾಖಲು ಮಾಡಲಾಗಿದ್ದು ವೈದ್ಯರು ಚಿಕಿತ್ಸೆ ನೀಡಿದ ನಂತರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಊಟದಲ್ಲಿ ವ್ಯತ್ಯಾಸ ಆದಕಾರಣ ಹೀಗೆ ಸಮಸ್ಯೆ ಆಗಿದೆ ಎಂದು ವೈದ್ಯರು ಹೇಳಿದ್ದಾರೆ.
ಸದ್ಯ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಹರಿಯುತ್ತಿದ್ದು ಇದು ಜನರ ತಮಾಷೆಗೆ ಕೂಡ ಕಾರಣವಾಗಿದೆ. ಟ್ರೊಲ್ ಮಾಡುವ ಜನರು ಬಹಳಷ್ಟು ಟ್ರೊಲ್ ಮಾಡುತ್ತಿದ್ದು ಸದ್ಯ ವಿಘ್ನೇಶ್ ಮತ್ತು ನಯನತಾರ ಅವರು ಜನರ ತಮಾಷೆಯ ಬಾಯಿಗೆ ಬಿದ್ದಿದ್ದಾರೆ. ನಟಿಯನ್ನ ಈಗ ಡಿಸ್ಚಾರ್ಜ್ ಮಾಡಲಾಗಿದ್ದು ಮನೆಯಲ್ಲಿ ರೆಸ್ಟ್ ಮಾಡುತ್ತಿದ್ದಾರೆ. ವಿಘ್ನೇಶ್ ಅವರು ನಯನತಾರ ಅವರಿಗೆ ಆಶ್ಚರ್ಯ ಕೊಡಲು ಹೋಗಿ ಆಘಾತ ಕೊಟ್ಟಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ನಟಿ ನಯನತಾರ ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ನಾವು ಆಶಿಸೋಣ.