ಹುಲಿಕಲ್ ನಟರಾಜ್ ಮೇಲೆ ಹಲ್ಲೆ ವಿಚಿತ್ರವಾದ ಸಮಸ್ಯೆಯಿಂದ ಬಳಲುತ್ತಿದ್ದ ಹುಡುಗನಿಂದ ಏನಾಗಿದೆ ನೋಡಿ‌

ವಿಚಿತ್ರವಾದ ಸಮಸ್ಯೆಯಲ್ಲಿ ನರಳುತ್ತಿದ್ದ ಹುಡುಗ ಬೆಳಕು ಕಂಡರೆ ಉರಿದು ಬೀಳುತ್ತಿದ್ದ!!ಹುಲಿಕಲ್ ನಟರಾಜ್ ಅವರು ಹೇಳುವಂತೆ “ಪವಾಡಗಳಿಗೆ ಮೋಸ ಹೋಗುವುದು ಯಾವುದು ಎಂದರೆ ಈ ಮನಸ್ಸು, ಹಾಗಾಗಿ ನಾನು ಈ ಮನಶಾಸ್ತ್ರದ ಬಗ್ಗೆ ಅಧ್ಯಯನ ಮಾಡುತ್ತಾ ಹೋದೆ ಇದನ್ನು ಮಾಡುತ್ತಾ ಹೋದಂತೆಯೇ ಹಲವಾರು ಸಮಸ್ಯೆಗಳು ನಮ್ಮ ಕಣ್ಣೆದುರು ಬಂದವು ಅದರಲ್ಲಿ ಇದು ಸಹ ಒಂದು ಸಮಸ್ಯೆಯಾಗಿ ನಮ್ಮ ಕಣ್ಣೆದುರು ಇದೆ. ನನಗೆ ಗೊತ್ತಿರುವಂತ ಆಪ್ತ ಸಮಾಲೋಚನೆಗಳ ಮುಖಾಂತರ, ವೈದ್ಯರುಗಳ ಮುಖಾಂತರ, ಹಲವಾರು ಸಮಸ್ಯೆಗಳಿಗೆ ಪರಿಹಾರವನ್ನು ಮಾಡುತ್ತೇನೆ. ನನ್ನ ಬಳಿ ಒಬ್ಬರು ತಂದೆ ತಾಯಿ ಬರ್ತಾರೆ ಅವರು ಬಂದ ತಕ್ಷಣ ಮೌನರಾಗಿ ಕಣ್ಣಲ್ಲಿ ನೀರು ಹಾಕುತ್ತಾ ಸ್ತಬ್ಧವಾಗಿ ಕುಳಿತುಕೊಂಡು ಬಿಡುತ್ತಾರೆ. ಆಗ ನಾನು ಅವರ ಬಳಿ ಏನು ಮಾತಾಡದೆ ಸ್ವಲ್ಪ ಸಮಯ ಮೌನವಾಗಿ ಇದ್ದೆ.ಆನಂತರ ಅವರು ನನ್ನ ಬಳಿ ಅವರ ಮಗನಿಗೆ ಇರುವಂತಹ ಸಮಸ್ಯೆಯನ್ನು ಹೇಳುತ್ತಾ ಹೋದರು, ಸರ್ ನನ್ನ ಮಗನ ಹತ್ತಿರ ಯಾವುದೇ ಕೆಟ್ಟ ಗುಣಗಳಿಲ್ಲ, ಕೆಟ್ಟ ಅಭ್ಯಾಸಗಳಿಲ್ಲ, ಕೆಟ್ಟ ಮಾತುಗಳನ್ನು ಸಹ ಆಡುವುದಿಲ್ಲ, ಅವನು ಒಬ್ಬ ಒಳ್ಳೆಯ ವಿದ್ಯಾರ್ಥಿ.

ಆದರೆ ಏನೋ ಗೊತ್ತಿಲ್ಲ ಒಂದು ದಿನ ರಾತ್ರಿ ಅವನು ಕೆಲಸ ಮುಗಿಸಿಕೊಂಡು ಮನೆಗೆ ಬಂದು ತಕ್ಷಣ ರೂo ಒಳಗೆ ಹೋಗಿ ಬಾಗಲು ಹಾಕಿಕೊಂಡವನು ಹೊರಗಡೆ ಬರಲೇ ಇಲ್ಲ, ನಾವು ಅವನು ಏನು ಮಾಡಿಕೊಂಡನೋ ಎಂದು ಗಾಬರಿಯಿಂದ ಕಿಟಕಿಯಿಂದ ನೋಡಿದಾಗ ಅವನು ಸುಮ್ಮನೆ ಮಲಗಿ ಕೊಂಡಿರುತ್ತಿದ್ದ ಸರ್, ಆದರೂ ನಾವು ಬಿಡದೆ ಬಾಗಿಲನ್ನು ಹೊಡೆದು ಒಳಗಡೆ ಹೋದಾಗ ಯಾರು ನೀವು ಯಾಕೆ ಒಳಗೆ ಬಂದಿದ್ದೀರಾ ನಾನು ಒಬ್ಬನೇ ಇರಬೇಕು ಎಂದು ಜೋರಾಗಿ ಕಿರುಚಾಡಿದ. ಎಂದು ಅವರ ತಂದೆ ತಾಯಿ ಹೇಳಿದರು.

ಹುಲಿಕಲ್ ನಟರಾಜ್ ಬಾಯಿಂದ ಚೇಳು ತೆಗೆದದ್ದು ಹೇಗೆ I Hulikal Nataraj Exclusive video  - YouTube

ಆಗ ನಾನು ಆತನನ್ನು ನೋಡಲು ಅವರ ಮನೆಗೆ ಹೋಗಿ ಅವನು ಇದ್ದಂತಹ ಸ್ಥಳಕ್ಕೆ ಹೋದಾಗ ಅವನು ಕಿರುಚಾಡಲು ಪ್ರಾರಂಭಿಸಿದ ಆಗ ನಾನು ಅವನನ್ನು ಸಮಾಧಾನವಾಗಿ ಕೂರಿಸಿಕೊಂಡು ಏನಾಯಿತು ಏನು ಎಂದು ವಿಷಯ ಕೇಳಿದಾಗ ಆತ ನನಗೆ ಈ ಬೆಳಕು ಕಂಡರೆ ಆಗುವುದಿಲ್ಲ ನಾನು ಯಾರ ಬಳಿಯೂ ಹೋಗಬಾರದು ನಾನು ಒಬ್ಬನೇ ಇರಬೇಕು ಹಾಗೆ ಅನ್ನಿಸುತ್ತಿದೆ ಎಂದು ಅವನು ನನ್ನ ಬಳಿ ಹೇಳಿಕೊಂಡನು ಆಗ ನಾನು ಒಬ್ಬ ಮನೋವೈದ್ಯರ ಬಳಿ ಹೇಳಿದಾಗ ಅವರು ಅವನು ತುಂಬಾ ಡಿಪ್ರೆಶನ್ ಗೆ ಹೋಗಿದ್ದಾನೆ ಇದನ್ನು ಸರಿ ಮಾಡಬಹುದು ಎಂದು ಹೇಳಿದಾಗ ನಾವು ಅವರ ಬಳಿ ಕರೆದುಕೊಂಡು ಹೋಗಿ ಅವನಿಗೆ ಚಿಕಿತ್ಸೆ ನೀಡಿಸಿ ಅವನನ್ನು ಮೊದಲಿನಂತೆ ಮಾಡಿದೆವು.

ಕೊನೆಗೆ ಅವನು ಈಗ ಒಬ್ಬ ಎಂ ಡಿ ಆಗಿ ಕೆಲಸ ನಿರ್ವಹಿಸುತ್ತಿದ್ದಾನೆ. ಅನಿರೀಕ್ಷಿತವಾಗಿ ಬರುವಂತಹ ಈ ಸಮಸ್ಯೆಗಳನ್ನ ನಾವು ಒಪ್ಪಿಕೊಳ್ಳಲೇ ಬೇಕು ಆ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಲೇಬೇಕು ಆಗ ನಮಗೆ ಒಂದಿಷ್ಟು ತಾಳ್ಮೆಯೂ ಸಹ ಇರಬೇಕು. ಇದು ಯಾವುದೇ ಗ್ರಹಚಾರ ಅಲ್ಲ ಯಾವುದೇ ದೇವರ ಶಾಪ ಅಲ್ಲ ಇದು ಸಹಜವಾಗಿ ಕೆಲವೊಬ್ಬರಲ್ಲಿ ಕಾಣಿಸಿಕೊಳ್ಳುವಂತ ಸಮಸ್ಯೆ ಇವೆಲ್ಲವನ್ನೂ ಬಗೆಹರಿಸಲು ಉತ್ತರವನ್ನು ಕಂಡುಕೊಳ್ಳೋಣ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

You might also like

Comments are closed.