ನರೇಶ್ ಹಾಗೂ ಪವಿತ್ರಾ ಲೋಕೇಶ್ ಅಭಿನಯದ ಮಳ್ಳಿ ಪೆಳ್ಳಿಸಿನಿಮಾ ಥಿಯೇಟರ್‌ಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಆಂಧ್ರ, ತೆಲಂಗಾಣದಲ್ಲಿ ಬಿಡುಗಡೆಯಾಗಿರುವ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ನರೇಶ್- ಪವಿತ್ರಾ ಲವ್‌ಸ್ಟೋರಿಯಲ್ಲಿ ನಿರ್ದೇಶಕ ಎಂ. ಎಸ್ ರಾಜು ತೆರೆಗೆ ತಂದಿದ್ದಾರೆ. 15 ಕೋಟಿ ರೂ. ವೆಚ್ಚದಲ್ಲಿ ಈ ಚಿತ್ರ ನಿರ್ಮಾಣ ಮಾಡಿರುವುದಾಗಿ ನರೇಶ್ ಹೇಳಿದ್ದಾರೆ. ಇದೀಗ ಜೋಡಿ ಸಿನಿಮಾ ಹಾಗೂ ವೈಯಕ್ತಿಕ ವಿಚಾರಗಳ ಬಗ್ಗೆ ಸಂದರ್ಶನಗಳನ್ನು ನೀಡುತ್ತಿದ್ದಾರೆ.
ಈ ವೇಳೆ ಮಕ್ಕಳು ಮಾಡಿಕೊಳ್ಳುವ ಆಲೋಚನೆ ಬಗ್ಗೆ ಜೋಡಿ ಅಭಿಪ್ರಾಯ ವ್ತಕ್ತಪಡಿಸಿದೆ. ಯೂಟ್ಯೂಬ್ ಚಾನಲ್‌ಗೆ ನೀಡಿದ ಸಂದರ್ಶನದಲ್ಲಿ ನಿಮಗೆ ಮಕ್ಕಳು ಮಾಡಿಕೊಳ್ಳುವ ಆಲೋಚನೆ ಇದೆಯಾ? ಎನ್ನುವ ಪ್ರಶ್ನೆಗೆ ಪವಿತ್ರಾ ಲೋಕೇಶ್ ಮಾತನಾಡಿ ಸಾಕಷ್ಟು ಮಕ್ಕಳಿಗೆ ಪ್ರಪಂಚದಲ್ಲಿ ತಂದೆ ತಾಯಿ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಮತ್ತೆ ಮಕ್ಕಳನ್ನು ಪಡೆಯುವ, ಸಮಾಜಕ್ಕೆ ನೀಡುವ ಅವಶ್ಯಕತೆ ಏನಿದೆ? ಎಂದಿದ್ದಾರೆ. ನಾವು ಜೋಡಿಯಾಗಿ ಮಾಡೋಕೆ ಸಾಕಷ್ಟು ವಿಷಯಗಳಿವೆ ಎಂದರು.
ನರೇಶ್ ಮಾತನಾಡಿ ರಕ್ತ ಸಂಬಂಧಕ್ಕಿಂತ ಭಾವನಾತ್ಮಕ ಸಂಬಂಧ ಬಹಳ ದೊಡ್ಡದು. ನನಗೆ ಪವಿತ್ರಾ ಮಗು, ನಾನು ಪವಿತ್ರಾಗೆ ಮಗು. ನಮಗೆ ಮಕ್ಕಳಿದ್ದಾರೆ. ಎಲ್ಲರನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ. ಮಗು ಪಡೆಯಲು ನಾವು ದೈಹಿಕವಾಗಿ ಅರ್ಹರಾಗಿದ್ದೇವೆ. ನಾವು ಈಗ ಮಕ್ಕಳನ್ನು ಪಡೆದು ಬೆಳೆಸಿದರೆ, ಅವರಿಗೆ 20 ವರ್ಷ ಆಗುವಷ್ಟರಲ್ಲಿ ನಮಗೆ 60 ವರ್ಷ ವಯಸ್ಸಾಗಿರುತ್ತದೆ. ನನಗೆ ಪವಿತ್ರಾ ದೇವತೆಯಂತೆ, ತಾಯಿಯಂತೆ, ಮಡದಿಯಂತೆ, ಮಗಳಂತೆ, ಸ್ನೇಹಿತೆಯಂತೆ ಕಾಣಿಸುತ್ತಾರೆ.
ಆಕೆ ಬಂದ ಮೇಲೆ ನನ್ನ ಜೀವನ ಸಂಪೂರ್ಣವಾಗಿ ಬದಲಾಗಿದೆ ಎಂದರು.ಮೇ 26ಕ್ಕೆ ʻಮಳ್ಳಿ ಪೆಳ್ಳಿʼ ಎಂಬ ಟೈಟಲ್ ನಡಿ ತೆಲುಗಿನಲ್ಲಿ ಸಿನಿಮಾ ತೆರೆ ಕಂಡಿದೆ. ಚಿತ್ರಕ್ಕೆ ಎಂ. ಎಸ್. ರಾಜು, ಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಇದೊಂದು ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾವಾಗಿದೆ. ಜಯಸುಧಾ ಮತ್ತು ಶರತ್ ಬಾಬು ಚಿತ್ರದ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ವನಿತ ವಿಜಯಕುಮಾರ್, ಅನನ್ಯ ನಾಗೆಲ್ಲ, ರೋಶನ್, ರವಿವರ್ಮ, ಅನ್ನಪೂರ್ಣ, ಭದ್ರಂ, ಯುಕ್ತ, ಪ್ರವೀಣ್ ಯಂಡಮುರಿ, ಮಧು ಹಾಗೂ ಇನ್ನಿತರರು ಈ ಚಿತ್ರದಲ್ಲಿ ನಟಿಸಿದ್ದಾರೆ.