ನಮಸ್ತೇ ಸ್ನೇಹಿತರೆ ಚಿತ್ರರಂಗದಲ್ಲಿ ಈ ನಟ ಅತ್ಯುತ್ತಮ ಕಲಾವಿದ.. ಯವುದೇ ಪಾತ್ರ ಕೊಟ್ಟರೂ ಆ ಪಾತ್ರಕ್ಕೆ ಜೀವ ತುಂಬುತ್ತಿದ್ದವರು.. ಯಾವುದೇ ಪಾತ್ರವಾಗಲಿ, ಬಾಷೆ ಯಾಗಲಿ ಎಲ್ಲದರಲ್ಲೂ ಸೈ ಎನಿಸಿಕೊಂಡಿದ್ದವರು.. ಇನ್ನೊಂದು ವಿಷಯ ಏನೆಂದರೆ ಈ ನಟ ತನ್ನ ಆಸ್ತಿಯನ್ನೆಲ್ಲಾ ಕಷ್ಟದಲ್ಲಿದ್ದವರಿಗೆ ಬರೆದುಕೊಟ್ಟು ಮಾನವೀಯತೆ ಮೆರೆದಿದ್ದಾರೆ.. ಹೌದು ಸ್ನೇಹಿತರೆ ಈಗಿನ ಕಾಲದಲ್ಲಿ ದುಡ್ದು ಮಾಡುವುದೇ ಕೆಲವರ ಜೀವನ ಆಗಿರುತ್ತದೆ ಅಂತದರಲ್ಲಿ ಈ ನಟ ತಾನು ಸಂಪಾದಿಸಿದ ಆಸ್ತಿಯನ್ನೆಲ್ಲಾ ಇತರರಿಗೆ ಬರೆದುಕೊಟ್ಟಿದ್ದಾರೆ..
ಅಷ್ಟಕ್ಕೂ ಈ ನಟ ಯಾರು ಎಂದರೆ.. ಅವರೇ ನಾನಾ ಪಾಟೇಕರ್.. ಇವರು ಬಡತನ ಕುಟುಂಬದಲ್ಲಿ ಬೆಳೆದಿದ್ದು ಪ್ರಾರಂಭದಲ್ಲಿ ಪೇಂಟಿಂಗ್ ಹೊಡೆಯುವುದು, ಸಿನಿಮಾಗಳ ಪೋಸ್ಟ್ ಗಳನ್ನು ಗೊಡೆಗಳಿಗೆ ಅಂಟಿಸುವುದು ಇನ್ನೂ ಕೈಗೆ ಸಿಕ್ಕ ಕೆಲಸವನ್ನೆಲ್ಲ ಮಾಡಿದ್ದಾರೆ.. ಇನ್ನೂ ಇವರು ದಿನಕ್ಕೆ 30 ರೂಪಾಯಿ ಸಂಪಾದನೆ ಮಾಡುತ್ತಿದ್ದರು.. ರೈತ ಬಡ ಕುಟುಂಬದಲ್ಲಿ ಬೆಳೆದ ಇವರು ಬಡತನದದಿಂದ ಆಚೆ ಬರಬೇಕು.. ಏನಾದರೂ ಸಾಧನೆ ಮಾಡಬೇಕು ಎನ್ನುವ ಛಲದಿಂದ ಥಿಯೇಟರ್ ಅರ್ಟಿಸ್ಟ್ ಹಾಗಿ ನಂತರ ಚಿತ್ರರಂಗಕ್ಕೆ ಎಂಟ್ರಿಕೊಡುತ್ತಾರೆ..
ತನ್ನ ಅತ್ಯುತ್ತಮ ನಟನೆಯಿಂದ ಚಿತ್ರರಂಗದಲ್ಲಿ ಹೆಸರು ಮಾಡುತ್ತಾರೆ.. ಆದರೆ ಕೃಷಿಕನಾಗಿದ್ದು ಬಡ ಕುಟುಂಬದಲ್ಲಿ ಬೆಳೆದ ಇವರು ತನ್ನ ಅನುಭವಿಸಿದ ಕಷ್ಟಗಳನ್ನು ನಾನ ಪಾಟೇಕರ್ ಮರೆಯಲಿಲ್ಲ.. ರೈತರ ಅಭಿವೃದ್ಧಿಗಾಗಿ ಫೌಂಡೇಷನ್ ಒಂದನ್ನು ಕಟ್ಟಿ.. ಹಲವಾರು ಬಡ ಕುಟುಂಬಗಳಿಗೆ 15 ಸಾವಿರದಂತೆ ಧಾನ ಮಾಡಿದ್ದಾರೆ.. ಅಷ್ಟೇ ಅಲ್ಲದೇ ಬಡ ಜಿಲ್ಲೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.. ಒಟ್ಟಾಗಿ ರೈತರ ಅಭಿವೃದ್ಧಿಗಾಗಿ ತಾನು ಸಂಪಾದನೆ ಮಾಡಿದ 22 ಕೋಟಿಯ ಹಣದಲ್ಲಿ 90% ನಷ್ಟು ಹಣವನ್ನು ನೀಡಿದ್ದಾರೆ..
ರೈತರ ಕಷ್ಟಕ್ಕೆ ಹೆಗಲು ಕೊಟ್ಟಿರುವ ಇವರು ಈಗಲೂ ಹಳ್ಳಿಯ ಚಿಕ್ಕ ಮನೆಯಲ್ಲಿ ಜೀವನ ಮಾಡುತ್ತಿದ್ದಾರೆ.. ಸಿನಿಮಾ ಶೂಟಿಂಗ್ ಬಿಡುವಿನ ಸಮಯದಲ್ಲಿ ಹೆಗಲ ಮೇಲೆ ಟವಾಲ್ ಹಾಕಿಕೊಂಡು ಹಳ್ಳಿಯನ್ನು ಸುತ್ತಾಡಿ ರೈತರ ಕಷ್ಟಗಳನ್ನು ವಿಚಾರಿಸಿ.. ಅವರ ಕಷ್ಟಗಳು ಪರಿಹಾರ ಆಗುವವರೆಗೂ ಬಿಡುವುದಿಲ್ಲ.. ಇವರ ಇನ್ನೊಂದು ಮೂಲ ಉದ್ದೇಶವೇನೆಂದರೆ ರೈತರು ವ್ಯವಸಾಯ ಮಾಡಲು ನೀರಿನ ವ್ಯವಸ್ಥೆ ಮಾಡುವುದು.. ಇವರಿಗೆ ಇರುವ ಹಣದಲ್ಲಿ ಶ್ರೀಮಂತ ಜೀವನ ಮಾಡಬಹುದಾಗಿತ್ತು ಆದರೆ ಸರಳ ಜೀವನ ನಡೆಸುತ್ತಿದ್ದಾರೆ.. ರೈತರ ಪರ ನಿಂತಿರುವ ಇವರು ನಿಜಕ್ಕೂ ಗ್ರೇಟ್..