ಸ್ನೇಹಿತರೆ, ರವಿಚಂದ್ರನ್ ಅವರೊಡನೆ ಕೆಲಸ ಮಾಡಿದಂತಹ ನಟಿಯರು ನಮ್ಮ ಕನ್ನಡಿಗರು ಸದಾ ನೆನಪಿನಲ್ಲಿ ಇಟ್ಟುಕೊಂಡಿರುತ್ತಾರೆ ಎಂಬುದಕ್ಕೆ ನಾವಿವತ್ತು ತಿಳಿಸ ಹೊರಟಿರುವ ಈ ಮುದ್ದಾದ ಚೆಲುವೆಯೇ ಉದಾಹರಣೆ. ಹೌದು ಸ್ನೇಹಿತರೆ ಕನ್ನಡದ ಕೆಲವೇ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದರೂ ಸಾಕಷ್ಟು ಅಭಿಮಾನಿಗಳ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾದ ನಟಿ ನಮಿತಾ ಅವರ ಕುರಿತು ಯಾರಿಗೂ ತಿಳಿಯದಂತಹ ವಿಶೇಷ ಮಾಹಿತಿಯನ್ನು ತಿಳಿಸಿ ಹೊರಟಿದ್ದೇವೆ.
ಆದ್ದರಿಂದ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಫ್ರೆಂಡ್ಸ್, ವಿ ರವಿಚಂದ್ರನ್ ಅವರೊಡನೆ ನೀಲಕಂಠ ಮತ್ತು ಹೂ ಎಂಬ ಸಿನಿಮಾದಲ್ಲಿ ಬಣ್ಣಹಚ್ಚಿ ಸಾಕಷ್ಟು ಜನಪ್ರಿಯತೆ ಪಡೆದ ನಮಿತಾ ಅವರು ಕನ್ನಡ ಸೇರಿದಂತೆ ತಮಿಳು, ತೆಲುಗು ಸಿನಿಮಾಗಳಲ್ಲಿ ತಮ್ಮದೇ ಆದ ವಿಶಿಷ್ಟ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ಅಭಿನಯಿಸಿದ ಎಲ್ಲಾ ನಟರೊಂದಿಗೆ ಕೂಡ ಗಾಸಿಪ್ಗಳನ್ನು ಸೃಷ್ಟಿ ಮಾಡಿಕೊಂಡಿದ್ದ ನಮಿತಾ ಅವರು 2017ರಲ್ಲಿ ವೀರೇಂದ್ರ ಎಂಬ ತಮಿಳು ನಿರ್ದೇಶಕರೊಂದಿಗೆ ತಿರುಪತಿಯ ಇಸ್ಕಾನ್ ಲೊಟಸ್ ದೇವಾಲಯದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಹರಿದಾಡುತ್ತಿದ್ದ ಊಹಾಪೋಹಗಳಿಗೆ ಬ್ರೇಕ್ ಹಾಕಿದರು.
ಮದುವೆಯಾದ ನಂತರ ಚಿತ್ರರಂಗಕ್ಕೆ ಸಂಪೂರ್ಣ ಗುಡ್ ಬೈ ಹೇಳಿದ ಈಕೆ ತಮ್ಮ ಹಾಟ್ ಹಾಟ್ ಫೋಟೋಶೂಟ್ಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಸದ್ದು ಮಾಡುತ್ತಿರುತ್ತಾರೆ. ಹೀಗಿರುವಾಗ ತಾಯಿಯಾಗುತ್ತಿರುವ ವಿಷಯದ ಕುರಿತು ಫೋಟೋಶೂಟ್ ಮೂಲಕ ಮಾಹಿತಿ ತಿಳಿಸಿರುವಂತಹ ನಮಿತಾ ಅವರು ತಮ್ಮ ಪ್ರೇಮಕಹಾನಿಯ ಮೆಲುಕು ಹಾಕಿದ್ದಾರೆ.

ಹೌದು ತಮಿಳು ಸಿನಿಮಾ ಒಂದರಲ್ಲಿ ಕೆಲಸ ಮಾಡುವಾಗ ನಟಿ ನಮಿತಾ ಮತ್ತು ನಿರ್ದೇಶಕ ವೀರೇಂದ್ರರವರ ನಡುವೆ ಸ್ನೇಹ ಬೆಳೆಯುತ್ತದೆ. ಇವರ ಸ್ನೇಹ ಬಾಂಧವ್ಯ ಪ್ರೀತಿಗೆ ತಿರುವಿ ಮನೆಯವರೆಲ್ಲರ ಒಪ್ಪಿಗೆ ಪಡೆದು ಗುರುಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಮುದ್ದಾದ ಜೋಡಿಗೆ ಒಂದು ಪುಟ್ಟ ಕಂದಮ್ಮನ ಆಗಮನವಾಗುತ್ತಿದೆ. ಈ ಕುರಿತು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಮಾಹಿತಿ ಹಂಚಿಕೊಂಡು ಸಂತಸವನ್ನು ನಮಿತಾ ವ್ಯಕ್ತಪಡಿಸಿದ್ದಾರೆ.

ಹಾಲು-ಬೆಣ್ಣೆ ಯಂತಿರುವಂತಹ ನಮಿತಾ ಅವರು ನಮ್ಮ ಕನ್ನಡದ ಇಂದ್ರ ಎಂಬ ಸಿನಿಮಾದಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಂಡು ತಮ್ಮ ಅಭೂತಪೂರ್ವ ಅಭಿನಯದ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಆದ್ರೆ ಬೆಂಕಿ-ಬಿರುಗಾಳಿ ಸಿನಿಮಾದ ನಂತರ ಕನ್ನಡಕ್ಕೆ ಗುಡ್ ಬೈ ಹೇಳಿ ತಮಿಳಿನಲ್ಲಿ ಸಕ್ರಿಯರಾಗಿದ್ದಾ ಈಕೆ ತಮಿಳಿನ ಬಿಗ್ ಬಾಸ್ ಸೀಸನ್ 5ಕ್ಕೆ ಎಂಟ್ರಿಕೊಟ್ಟು ತಮ್ಮ ನಡುವಳಿಕೆಯ ಮೂಲಕವೇ ಸಾಕಷ್ಟು ಜನಪ್ರಿಯತೆ ಪಡೆದಿದ್ದರು.
ಅದಾದ ನಂತರ ಹಲವಾರು ರಿಯಾಲಿಟಿ ಶೋಗಳ ಜಡ್ಜ್ ಆಗಿಯೂ ಕಾಣಿಸಿಕೊಂಡಿದ್ದ ನಮಿತಾ ಅವರು ಮದುವೆಯಾದ ನಂತರ ಸಾಂಸಾರಿಕ ಜೀವನದಲ್ಲಿ ಕೊಂಚ ಬ್ಯುಸಿಯಾಗಿ ಬಿಟ್ಟರು ಎಂದರೆ ತಪ್ಪಾಗಲಾರದು. ಮುಂದಿನ ದಿನಗಳಲ್ಲಿ ಈ ಮುದ್ದಾದ ನಟಿಯ ಮಗು ಕೂಡ ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ಈ ಮಾಹಿತಿ ಕುರಿತು ನಿಮ್ಮ ಅನಿಸಿಕೆಯೇನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.