ಇಷ್ಟು ದಿನ ಮುಚ್ಚಿಟ್ಟಿದ್ದ ಪುನೀತ್ ಅಗಲಿಕೆ ಸುದ್ದಿ ಕೊನೆಗೂ ಅತ್ತೆ ನಾಗಮ್ಮನವ್ರಿಗೆ ಗೊತ್ತಾಯ್ತು,ಏನಂದ್ರು ನೋಡಿ…

CINEMA/ಸಿನಿಮಾ

ಸ್ಯಾಂಡಲ್‌ವುಡ್‌ನಲ್ಲಿ ಹೈವೋಲ್ಟೇಜ್ ಕರೆಂಟ್ ಆಗಿದ್ದವರು ‘ಪವರ್ ಸ್ಟಾರ್’ ಪುನೀತ್ ರಾಜ್‌ಕುಮಾರ್. ಕೋಟ್ಯಂತರ ಅಭಿಮಾನಿಗಳ ಮನಗೆದ್ದಿರುವ, ಎಲ್ಲರಿಂದ ಪ್ರೀತಿಯಿಂದ ಅಪ್ಪು ಅಂತ ಕರೆಯಿಸಿಕೊಳ್ಳುತ್ತಿದ್ದ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅವರು ಇಂದು ನಮ್ಮೊಂದಿಗಿಲ್ಲ. ಜನಮಾನಸದಲ್ಲಿ ಅಪ್ಪು ಎಂದಿಗೂ ಅಮರ ಎಂದರೆ ತಪ್ಪಲ್ಲ. ಅವರು ಇಲ್ಲ ಎನ್ನುವ ಸುದ್ದಿ ಬಂದಾಗಿನಿಂದಲೂ ಅವರ ಬಗ್ಗೆ ಒಂದೆಲ್ಲ ಒಂದು ವಿಚಾರಗಳು ಹೊರಬರುತ್ತಿವೆ.

ಅವರ ಸಾಮಾಜಿಕ ಕೆಲಸಗಳು, ಅವರು ಅಭಿಮಾನಿಗಳ ಜೊತೆ ಇರುತ್ತಿದ್ದ ರೀತಿ ಎಲ್ಲವೂ ಮಾದರಿ. ಪುನೀತ್‌ ರಾಜ್‌ಕುಮಾರ್‌ ಬಗ್ಗೆ ಇಡೀ ಜಗತ್ತೇ ಮಾತಾಡಿದೆ. ಬೇರೆ ದೇಶದ ಸುದ್ದಿ ಮಾಧ್ಯಮಗಳು ಅಪ್ಪುಗೆ ನಮನ ಸಲ್ಲಿಸಿವೆ. ಇಡೀ ಜಗತ್ತಿಗೆ ಅಪ್ಪು ಅಗಲಿರುವ ವಿಚಾರ ತಿಳಿದಿದೆ. ಆದರೆ ಅವರ ಕುಟುಂಬದ ಒಬ್ಬರಿಗೆ ಮಾತ್ರ ಆ ವಿಚಾರ ತಿಳಿದಿಲ್ಲ. ಅಪ್ಪು ಅಗಲಿಕೆಯ ಬಗ್ಗೆ ಗೊತ್ತಿರದವರು ಪುನೀತ್ ಸೋದರತ್ತೆ ನಾಗಮ್ಮ.

ಅಪ್ಪುವಿನ ಪ್ರೀತಿಯ ಅತ್ತೆಗೆ ಅಪ್ಪು ಸಾ'ವಿನ ಸುದ್ದಿ ಯಾರೂ ಹೇಳಿಲ್ಲ! ಟಿವಿ ನೋಡಿದ ಮೇಲೆ ಅಪ್ಪು ಅತ್ತೆ ಮಾಡಿದ್ದೇನು ಗೊತ್ತಾ, ಕಣ್ಣೀರು ಬರುತ್ತೆ – Karnataka Web

ಡಾ.ರಾಜ್‌ಕುಮಾರ್‌ ಅವರ ಸಹೋದರಿ ನಾಗಮ್ಮ, ಪುನೀತ್‌ ರಾಜ್‌ಕುಮಾರ್‌ ಅವರ ಸೋದರ ಅತ್ತೆ. ಇವರಿಗೆ ಪುನೀತ್‌ರಾಜ್‌ಕುಮಾರ್‌ ನಿಧನ ಹೊಂದಿರುವ ವಿಚಾರ ಇನ್ನೂ ಕೂಡ ತಿಳಿಸಿಲ್ಲ. ಕುಟುಂಬಸ್ಥರು ಕೂಡ ಉದ್ದೇಶ ಪೂರ್ವಕವಾಗಿ ಈ ವಿಚಾರವನ್ನು ಅವರಿಂದ ಮುಚ್ಚಿಟ್ಟಿದ್ದಾರೆ. ಅವರಿಂದ ಈ ವಿಚಾರವನ್ನು ಮುಚ್ಚಿಡಲು ಮುಖ್ಯ ಕಾರಣ ಎಂದರೆ ಅವರಿಗೆ ವಯಸ್ಸಾಗಿದೆ. ಜೊತೆಗೆ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪುನೀತ್ ನಿಧನದ ವಿಚಾರ ತಿಳಿದರೆ ಅವರಿಗೆ ತಡೆದುಕೊಳ್ಳುವ ಶಕ್ತಿ ಇಲ್ಲ. ಆದರೆ, ಅಪ್ಪು ಬಗ್ಗೆ ಏನು ಗೊತ್ತಿರದ ನಾಗಮ್ಮ ‘ಜೇಮ್ಸ್​’ ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಶುಭಾಶಯ ಕೂಡ ಕೋರಿದ್ದರು.

ನಾಗಮ್ಮ ಅವರು ಸದ್ಯ ಗಾಜನೂರಿನಲ್ಲಿ ವಾಸವಿದ್ದಾರೆ. ಮಗ ಮತ್ತು ಸೊಸೆ ಅವರನ್ನು ನೋಡಿಕೊಳ್ಳುತ್ತಿದ್ದಾರೆ. ರಾಜ್‌ ಕುಮಾರ್‌ ಕುಟುಂಬದಲ್ಲಿ ಈಕೆಯೆ ಹಿರಿಯ ಜೀವ. ಹಾಗಾಗಿ ಅವರ ಆರೋಗ್ಯ ಕಾಪಾಡುವುದು ಮನೆಯ ಎಲ್ಲರಿಗೂ ಬಹಳ ಮುಖ್ಯ ಆಗಿದೆ. ಪುನೀತ್‌ ರಾಜ್‌ಕುಮಾರ್‌ ನಿಧನದ ಸುದ್ದಿ ಅವರಿಗೆ ತಿಳಿಯದಂತೆ ಮನೆಯವರು ಸಾಕಷ್ಟು ಮುತುವರ್ಜಿ ವಹಿಸಿದ್ದಾರೆ. ಮನೆಯಲ್ಲಿರುವ ಪುನೀತ್‌ ರಾಜ್‌ಕುಮಾರ್‌ ಫೋಟೊಗೆ ಹಾರ ಹಾಕಿ ಪೂಜೆ ಮಾಡಲ್ಲ, ನ್ಯೂಸ್‌ ಚಾನೆಲ್‌ಗಳನ್ನು ಹಾಕುವುದಿಲ್ಲ, ಊರಿನವರು ಮನೆಗೆ ಬಂದರೆ ನಾಗಮ್ಮ ಅವರನ್ನು ಭೇಟಿ ಮಾಡಲು ಬಿಡುವುದಿಲ್ಲ. ಹೀಗೆ ಅವರಿಂದ ಈ ವಿಚಾರವನ್ನು ಮುಚ್ಚಿಟ್ಟಿದ್ದಾರೆ ಕುಟುಂಬಸ್ಥರು.

ಅಪ್ಪುವಿನ ಪ್ರೀತಿಯ ಅತ್ತೆಗೆ ಅಪ್ಪು ಸಾ'ವಿನ ಸುದ್ದಿ ಯಾರೂ ಹೇಳಿಲ್ಲ! ಟಿವಿ ನೋಡಿದ ಮೇಲೆ ಅಪ್ಪು ಅತ್ತೆ ಮಾಡಿದ್ದೇನು ಗೊತ್ತಾ, ಕಣ್ಣೀರು ಬರುತ್ತೆ – Karnataka Web

ಸದ್ಯ ಅವರಿಗೆ ಪುನೀತ್ ರಾಜಕುಮಾರ್ ಅಗಲಿಕೆಯ ವಿಷಯ ತಿಳಿದಿದ್ದು ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದಾರೆ. ದುಃಖದಿಂದ ಮಾತನಾಡಿದ್ದಾರೆ. ಜೊತೆಗೆ ರಾಜಕುಮಾರ್ ಅಗಲಿಕೆಯನ್ನು ನೆನೆದು ಕಣ್ಣೀರಿಟ್ಟರು. ನಮ್ಮನೆಲ್ಲಾ ಬಿಟ್ಟು ಯಾಕೆ ಹೋದೆ ನೀನು. ನೀನಿಲ್ಲದೆ ನಾವೆಲ್ಲಾ ಅನಾಥರು ಎಂದರು. ಆ ಹಿರಿಜೀವದ ಮಾತುಗಳನ್ನು ಕೇಳಿದರೆ ಪ್ರತಿಯೊಬ್ಬರ ಕಣ್ಣಂಚಲಿ ಒದ್ದೆಯಾಗುವುದು.
ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.