nagachaintya-visit-samantha-hospital

ಲಗೇಜ್ ಸಮೇತ ಸಮಂತಾ ಇದ್ದ ಆಸ್ಪತ್ರೆಗೆ ಬಂದ ನಾಗಚೈತನ್ಯ,ವೈರಲ್ ಆಗುತ್ತಿದೆ ಮಾಜಿ ಪತ್ನಿಗೆ ಮಾಡಿದ ಸಹಾಯ

CINEMA/ಸಿನಿಮಾ Entertainment/ಮನರಂಜನೆ

ಸದ್ಯ ಸಮಂತಾ ಅನಾರೋಗ್ಯದಿಂದ ಬಳಲುತ್ತಿರುವುದು ಗೊತ್ತೇ ಇದೆ. ಕೆಲವು ತಿಂಗಳ ಹಿಂದೆ ಮೈಯೋಸಿಟಿಸ್(Myositis) ಎಂಬ ಆಟೋಇಮ್ಯೂನ್ ಕಾಯಿಲೆ ಇರುವುದು ಪತ್ತೆಯಾಗಿದೆ ಎಂದು ಸಮಂತಾ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ.

ಆದರೆ ಸ್ಯಾಮ್ ಆರೋಗ್ಯದ (Samantha Health)  ಬಗ್ಗೆ ಅನೇಕ ಸೆಲೆಬ್ರಿಟಿಗಳು ಪ್ರತಿಕ್ರಿಯಿಸಿದ್ದು ಆದರೆ ಅವರ ಮಾಜಿ ಪತಿ ಟಾಲಿವುಡ್ ಯಂಗ್ ಹೀರೋ ನಾಗ ಚೈತನ್ಯ ಇದುವರೆಗೆ ಯಾವುದೇ ಪೋಸ್ಟ್ ಅಥವಾ ಕಾಮೆಂಟ್‌ಗಳನ್ನು ಮಾಡಿಲ್ಲ.

ಇನ್ನು ಈ ಜೋಡಿ ವಿಚ್ಛೇದನ ಪಡೆದು ಬಹಳ ತಿಂಗಳುಗಳು ಕಳೆದಿದ್ದು ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಬಳಿಕ ಪರಸ್ಪರ ಅವರಿಬ್ಬರು ಮುಖ ನೋಡಿಕೊಂಡಿಲ್ಲ. ಹೌದು ಸಾರ್ವಜನಿಕವಾಗಿ ಒಬ್ಬರ ಬಗ್ಗೆ ಮತ್ತೊಬ್ಬರು ಮಾತನಾಡಿಲ್ಲ.

ಆದರೆ ಸಮಂತಾಗೆ ಅನಾರೋಗ್ಯದ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ನಾಗ ಚೈತನ್ಯ ಬಗ್ಗೆ ಗಾಸಿಪ್​ ಮಂದಿ ಇಲ್ಲಸಲ್ಲದ ಸುದ್ದಿ ಹಬ್ಬಿಸುತ್ತಿದ್ದಾರೆ. ಹೌದು ನಟ ನಾಗಚೈತನ್ಯ ಮತ್ತು ಸಮಂತಾ ಅವರು ಹಲವು ವರ್ಷಗಳ ಕಾಲ ಪ್ರೀತಿಸಿ ಮದುವೆ ಆಗಿದ್ದು ಆದರೆ ನಾಲ್ಕೇ ವರ್ಷಕ್ಕೆ ಅವರ ಸಂಸಾರ ಕೊನೆಯಾಯಿತು.

ಇಬ್ಬರ ನಡುವೆ ವೈಮನಸ್ಸು ಮೂಡಿದ್ದರಿಂದ ವಿಚ್ಛೇದನ ಪಡೆದುಕೊಂಡಿದ್ದೀಯ ಮಾಜಿ ಪತ್ನಿ ಬಗ್ಗೆ ನಾಗ ಚೈತನ್ಯ ಅವರು ಈಗಲೂ ಕೂಡ ಕರುಣೆ ತೋರುತ್ತಿದ್ದಾರೆ ಎಂಬ ಗಾಸಿಪ್​ ಹರಡಿದೆ.

ಆಸ್ಪತ್ರೆಗೆ ಭೇಟಿ ಕೊಟ್ಟ ನಾಗಚೈತನ್ಯ

ಹೌದು ಅನಾರೋಗ್ಯದ ವಿಚಾರ ತಿಳಿಯುತ್ತಿದ್ದಂತೆಯೇ ನಾಗ ಚೈತನ್ಯ ಫೋನ್​ ಮಾಡಿದ್ದು ಆಸ್ಪತ್ರೆಗೆ ಹೋಗಿ ನೋಡಿಕೊಂಡು ಬಂದರಂತೆ.

ಆರೋಗ್ಯ ವಿಚಾರಿಸಿ ಕಾಳಜಿ ತೋರಿಸಿದ್ರಂತೆ ಎಂದೆಲ್ಲ ಕೆಲವು ಮಾಧ್ಯಮಗಳು ವರದಿ ಮಾಡಿದ್ದು ಆದರೆ ಆಸ್ಪತ್ರೆಯಲ್ಲಿ ಸಮಂತಾ ರವರನ್ನು ನಾಗ ಚೈತನ್ಯ ಭೇಟಿ ಆಗಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿ ಯಾವುದೇ ಫೋಟೋ ಅಥವಾ ವಿಡಿಯೋ ಸಿಕ್ಕಿಲ್ಲ.

Naga Chaitanya visited Samantha Hospital
Image Credit: DNA India

ಹೌದು ಹಾಗಾಗಿ ಇಂಥ ವರದಿಯಲ್ಲಿ ಹುರುಳಿಲ್ಲ ಎಂದು ಅಭಿಮಾನಿಗಳು ಅರ್ಥ ಮಾಡಿಕೊಂಡಿದ್ದು ವೈಯಕ್ತಿಕ ವಿಚಾರಗಳ ಕುರಿತು ನಾಗ ಚೈತನ್ಯ ಸೈಲೆಂಟ್​ ಆಗಿದ್ದಾರೆ. ಮಾಜಿ ಪತ್ನಿ ಬಗ್ಗೆ ಅವರು ಯಾವುದೇ ರೀತಿಯ ಹೇಳಿಕೆಗಳನ್ನು ನೀಡುತ್ತಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ಕೆಲ ಫೋಟೋಗಳು ವೈರಲ್ ಆಗಿದೆ.

ಇನ್ನು ಸಮಂತಾ ಕೈಯಲ್ಲಿ ಹಲವು ಸಿನಿಮಾಗಳಿದ್ದು ಅನಾರೋಗ್ಯದ ನಡುವೆಯೂ ಕೂಡ ಅವರು ಡಬ್ಬಿಂಗ್​ ಕೆಲಸಗಳನ್ನು ಮಾಡುತ್ತಿದ್ದಾರೆ. ಈ ಬಗ್ಗೆ ಅವರು ಇತ್ತೀಚೆಗೆ ಸಾಮಾಜಿಕ ಜ‍ಾಲತಾಣಸ ಮೂಲಕ ಮಾಹಿತಿ ಹಂಚಿಕೊಂಡಿದ್ದರು.

ಯಶೋದ ಸಿನಿಮಾ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ರಿಲೀಸ್

ಅವರು ನಟಿಸಿರುವ ಯಶೋದ ಸಿನಿಮಾ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ರಿಲೀಸ್​ ಆಗಲಿದ್ದು ಟ್ರೇಲರ್​ ಮೂಲಕ ಗಮನ ಸೆಳೆದಿರುವ ಈ ಸಿನಿಮಾ ನವೆಂಬರ್​ 11ರಂದು ತೆರೆಕಾಣಲಿದೆ. ಹೌದು ಬಹುನಿರೀಕ್ಷಿತ ಶಾಕುಂತಲಂ ಸಿನಿಮಾದ ಕೆಲಸಗಳಲ್ಲೂ ಸಮಂತಾ ತೊಡಗಿಕೊಂಡಿದ್ದು ಇದಲ್ಲದೇ ವಿಜಯ್​ ದೇವರಕೊಂಡ ಜೊತೆ ಅವರು ಖುಷಿ ಚಿತ್ರದಲ್ಲಿ ಕೂಡ ನಟಿಸುತ್ತಿದ್ದಾರೆ.

Naga Chaitanya visited Samantha Hospital
Image Credit: DNA India

ಸಮಾಂತಾ ಅವರ ಅನಾರೋಗ್ಯದ ಕಾರಣದಿಂದ ಖುಷಿ ಚಿತ್ರದ ಚಿತ್ರೀಕರಣ ಮುಂದೂಡಲ್ಪಟ್ಟಿದ್ದು ಅವರು ಆದಷ್ಟು ಬೇಗ ಸಂಪೂರ್ಣವಾಗಿ ಚೇತರಿಸಿಕೊಂಡು ಮೊದಲಿನಂತಾಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.