ಕೈ ಹಿಂದೆ ಕಟ್ಟಿ ಮುದ್ದೆ ತಿನ್ನುವ ಚಾಲೆಂಜ್,ವೈಷ್ಣವಿ ನಿವೇದಿತಾ ಇಬ್ಬರಲ್ಲಿ ಗೆದ್ದಿದ್ದು ಯಾರೂ ಗೊತ್ತಾ? ನೋಡಿ ವಿಡಿಯೋ ಇಲ್ಲಿದೆ!!

ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಹಾಗೂ ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ ಗೌಡ ಇಬ್ಬರೂ ಸಾಮಾಜಿಕ ಜಾಲತಾಣ (Social Media) ದಲ್ಲಿ ಆಕ್ಟಿವ್ ಇರುವ ನಟಿಯರು. ಇವರಿಬ್ಬರಿಗೂ ಇನ್ಸ್ಟಾಗ್ರಾಮ್ ನಲ್ಲಿ ಲಕ್ಷಾಂತರ ಫಾಲೋವರ್ಸ್ ಕೂಡ ಇದ್ದಾರೆ. ವೈಷ್ಣವಿ ಗೌಡ (Vaishnavi Gowda) ಯೋಗ, ಡ್ಯಾನ್ಸ್ (Dance) ಪೋಸ್ಟ್ ಗಳನ್ನು ಹೆಚ್ಚಾಗಿ ಹಾಕುತ್ತಾರೆ. ಇನ್ನು ನಿವೇದಿತಾ ಕೂಡ ಈಗಾಗಲೇ ಗಿಚ್ಚಿ ಗಿಲಿ ಗಿಲಿ (Gichhi giligili) ಶೋನಲ್ಲಿ ರನ್ನರ್ ಅಪ್ ಕೂಡ ಆಗಿದ್ರು ಜೊತೆಗೆ ಸಾಕಷ್ಟು ರೀಲ್ಸ್ (Reels) ಮಾಡುವುದರ ಮೂಲಕವೂ ಅಭಿಮಾನಿಗಳ ಜೊತೆ ನಿರಂತರ ಸಂಪರ್ಕದಲ್ಲಿ ಇರುತ್ತಾರೆ.

ಅಂದಹಾಗೆ ಇವರಿಬ್ಬರೂ ಸೇರಿ ವಿಡಿಯೋ (Video) ಮಾಡಿದ್ರೆ ಹೇಗಿರುತ್ತೆ? ಎಲ್ಲರೂ ಖುಷಿಯಿಂದ ನೋಡೇ ನೋಡುತ್ತಾರೆ. ಇಂಥ ಸುಯೋಗ ಕೂಡ ಒಮ್ಮೆ ಒಲಿದು ಬಂದಿತ್ತು ನೋಡಿ. ನಿವೇದಿತಾ ಗೌಡ ಅವರ ಯೂಟ್ಯೂಬ್ ಚಾನೆಲ್ (Youtube channel) ನಲ್ಲಿ ವೈಷ್ಣವಿ ಗೌಡ ಕೂಡ ಕಾಣಿಸಿಕೊಂಡಿದ್ದರು. ಇಬ್ಬರೂ ಸೇರಿ ಬಿಸಿ ಬಿಸಿ ಮುದ್ದೆ ತಿನ್ನುವ ಸ್ವರ್ದೆ ಇಟ್ಟುಕೊಂಡಿದ್ದರು. ಅದೂ ಸುಮ್ಮನೆ ತಿನ್ನುವುದಲ್ಲ. ಹಿಂದೆ ಕೈ ಕಟ್ಟಿ ಬಾಯಿಯಿಂದ ಮುದ್ದೆ ತಿನ್ನಬೇಕು. ನಿವೇದಿತಾ ಅವರಿಗೆ ಹೋಲಿಸಿದರೆ ವೈಷ್ಣವಿ ಅವರೇ ಜಾಸ್ತಿ ಮುದ್ದೆ ತಿಂದಿದ್ದು.

ಇನ್ನು ವೈಷ್ಣವಿ ಗೌಡ ಆನೆ ಇರುವೆ ಕಥೆ ಹೇಳಲು ಫೇಮಸ್. ಅವರು ಬಿಗ್ ಬಾಸ್ (Bigg Boss) ನಲ್ಲಿ ಇರುವಾಗ ಇದೇ ರೀತಿ ಕಥೆ ಹೇಳಿ ಜನರನ್ನು ರಂಜಿಸಿದ್ದರು. ಮುದ್ದೆ ತಿನ್ನುತ್ತಾ ಇಂತಹ ಹಲವಾರು ಕಥೆಗಳನ್ನು ಹೇಳಿದ್ದಾರೆ ಹಾಗೆಯೇ ನಿವೇದಿತಾ ಗೌಡ ವೈಷ್ಣವಿ ಅವರ ಪ್ರಶ್ನೆಗೆ ಉತ್ತರ ಕೊಡಲು ಸಾಧ್ಯವಾಗದೇ ಇದ್ದದ್ದು ಜನರನ್ನು ಇನ್ನಷ್ಟು ರಂಜಿಸಿತ್ತು. ಅದೇ ರೀತಿ ನಿವೇದಿತಾ ಗೌಡ ತಮ್ಮ ಮನೆಯಲ್ಲಿ ನಡೆದಿರುವಂತಹ ಒಂದು ಹಾರರ್(Horror) ಘಟನೆಯನ್ನು ಕೂಡ ವೈಷ್ಣವಿ ಗೌಡ ಅವರಿಗೆ ವಿವರಿಸುತ್ತಾರೆ.

ವೈಷ್ಣವಿ ಗೌಡ ಮತ್ತು ನಿವೇದಿತಾ ಸೇರ್ಕೋಂಡು ಅಡುಗೆ ಮನೆಯಲ್ಲಿ ರಾಗಿ ಮುದ್ದೆ ಮಾಡಿರೋ ವಿಡಿಯೋ ಹೇಗಿದೆ ನೋಡಿ - ಕನ್ನಡ ನಾಡಿ

ನಿವೇದಿತಾ ಗೌಡ ಮನೆಯಲ್ಲಿ ಚಂದನ್ (Chandan Shetty) ಇಲ್ಲದೆ ಇರುವ ಸಮಯದಲ್ಲಿ ಒಮ್ಮೆ ಸುಸ್ತಾಗಿ ಮಲಗಿದ್ದರಂತೆ. ಕೊನೆಗೆ 8 ಗಂಟೆಯ ಹೊತ್ತಿಗೆ ಊಟಕ್ಕೆ ಆರ್ಡರ್ ಮಾಡುತ್ತಾರೆ. ರಾತ್ರಿ ಆದ್ದರಿಂದ ಕೆಳಗಡೆ ಸ್ವಲ್ಪ ಕತ್ತಲೆ ಇತ್ತು. ಅಷ್ತರಲ್ಲಿ ನಿವಿ ಆರ್ಡರ್ ಮಾಡಿದ ಫುಡ್ ಬರುತ್ತದೆ. ಹಾಲ್ನಲ್ಲಿ ಬಂದು ಕುಳಿತುಕೊಳ್ಳುವುದಕ್ಕೆ ನೋಡಿದಾಗ ಸೋಫಾ ಹಿಂದೆ ಸರಿದಿತ್ತಂತೆ. ಕೊನೆಗೆ ಕರೆಂಟ್ ಹೋಗಿದ್ದಕ್ಕೆ ಯುಪಿಎಸ್ ಕೂಡ ಡೌನ್ ಆಗಲು ಶುರುವಾಯಿತು.

ಇದರಿಂದ ಭಯಗೊಂಡ ನಿವೇದಿತ ಚಂದನ್ ಗೆ ಕಾಲ್ ಮಾಡಿ ಸೋಫಾ ಸರಿಸಿದ್ದೀರಿ ಎಂದು ಕೇಳುತ್ತಾರೆ. ಚಂದನ್ ಇಲ್ಲ ನಾನೇನು ಮಾಡಿಲ್ಲ ಎಂದು ಹೇಳುತ್ತಾರೆ ಕೊನೆಗೆ ಇನ್ನಷ್ಟು ಭಯ ಕಾಡುತ್ತೆ ನಾನು ಅಮ್ಮನ ಮನೆಗೆ ಹೋಗ್ತೇನೆ ಎಂದು ಹೇಳುತ್ತಾರೆ. ಅದಕ್ಕೆ ಸರಿಯಾಗಿ ಚಂದನ್ ಕೂಡ ನನಗೂ ಅದೇ ಸರಿ ಎನಿಸುತ್ತದೆ ಎಂದು ಹೇಳಿದ್ದಾರೆ. ನೀವು ಇನ್ನೇನು ಮನೆಗೆ ಹೊರಡಬೇಕು ಎನ್ನುವಷ್ಟರಲ್ಲಿ ಕರೆಂಟ್ ಬರುತ್ತೆ ನಾನು ಈ ಮನೆ ಬಿಟ್ಟು ಹೋಗಬಾರದು ಎನ್ನುವ ಕಾರಣಕ್ಕೆ ಕರೆಂಟ್ ಬಂದ ಹಾಗೆ ಫೀಲ್ ಆಯ್ತು ಎಂದು ನಿವೇದಿತಾ ಅವರು ಹೇಳುತ್ತಾರೆ.

ಈ ಕಥೆ ನಿಜಕ್ಕೂ ಹಾರರ್ ಆಗಿದೆ ಎಂದು ವೈಷ್ಣವಿ ಗೌಡ ಕೂಡ ಹೇಳುತ್ತಾರೆ. ನಿವಿ ತಮ್ಮ ಕಥೆ ಹೇಳಿ ಮುಗಿಸುವಷ್ಟರಲ್ಲಿ ವೈಷ್ಣವಿ ಗೌಡ ಅವರ ಪ್ಲೇಟ್ ನಲ್ಲಿ ಇದ್ದ ಮುದ್ದೆ ಕಾಣೆಯಾಗಿತ್ತು. ಇದು ಮನೆಯಲ್ಲಿ ಯಾರೋ ಏನೋ ಮಾಡಿದ್ದಾರೆ ಅದಕ್ಕೆ ಮಾಯವಾಗಿದೆ ಎಂಡು ಇಬ್ಬರೂ ಮಾತನಾಡಿಕೊಳ್ಳುತ್ತಾರೆ. ಕೊನೆಗೆ ಮುದ್ದೆ ಎಲ್ಲಿ ಮಾಯಆಯ್ತು ಹ್ಳಿ ಅಂತ ವೀಕ್ಷಕರಿಗೆ ಪ್ರಶ್ನೆಯನ್ನ ಇಟ್ಟಿದ್ದಾರೆ. ಈ ವಿಡಿಯೋ ನೋಡ್, ನೀವು ಹೇಳಿ ಮುದ್ದೆ ಎಲ್ಲಿ ಹೋಯ್ತು ಅಂತ.

You might also like

Comments are closed.