ನೋಡಲು ಸುಂದರಿ,11 ವರ್ಷದ ಹಿಂದೆ ಮದುವೆ- ಮುದ್ದಾದ 2 ಮಕ್ಕಳು- ಆದರೆ ಒಂದೇ ರಾತ್ರಿಯಲ್ಲಿ ಏನಾಗಿ ಹೋಯ್ತು ಗೊತ್ತೇ??

Today News / ಕನ್ನಡ ಸುದ್ದಿಗಳು

ಈಗಿನ ಕಾಲದಲ್ಲಿ ಮದುವೆಗಳು ಸಂತೋಷವಾಗಿ ನಡೆಯುತ್ತಿಲ್ಲ. ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇದ್ದರು ಸಹ, ಮುಂದಿನ ದಿನಗಳಲ್ಲಿ ಎಲ್ಲವೂ ಬದಲಾಗುತ್ತದೆ. ಬೇರೆ ಬೇರೆ ಕಾರಣಗಳಿಗೆ ಗಂಡ ಹೆಂಡತಿಯರ ನಡುವೆ ತೊಂದರೆಗಳು ಉಂಟಾಗಬಹುದು. ಈ ರೀತಿ ಆದಾಗ ಕೆಲವೊಮ್ಮೆ ದುಡುಕಿನ ನಿರ್ಧಾರ ತೆಗೆದುಕೊಳ್ಳುವುದರಿಂದ ಬದುಕಿಗೆ ತೊಂದರೆ ಆಗುತ್ತದೆ. ಇಂಥದ್ದೊಂದು ಘಟನೆ ಇತ್ತೀಚೆಗೆ ನಡೆದಿದೆ. ಚೆನ್ನಾಗಿಯೇ ಇದ್ದ ಸಂಸಾರದಲ್ಲಿ ಕೊನೆಗೆ ಏನಾಗಿದೆ ಗೊತ್ತಾ?

ಈ ಘಟನೆ ನಡೆದಿರುವುದು ಜಂಟಿ ಮಹಬೂಬಾಬಾದ್ ಜಿಲ್ಲೆಯ ನರಸಿಂಹುಲಪೇಟ ಮಂಡಲ ವ್ಯಾಪ್ತಿಯ ಪಕೀರತಾಂಡ ಎನ್ನುವ ಊರಿನಲ್ಲಿ. ಈ ಹುಡುಗಿಯ ಹೆಸರು ಮೌನಿಕಾ ಈಕೆಗೆ ಈಗ 28 ವರ್ಷ ವಯಸ್ಸು 28, 11ವರ್ಷಗಳ ಹಿಂದೆಯೇ ಈಕೆಗೆ ರಾಮ್ ಬಾಬು ಎನ್ನುವ ವ್ಯಕ್ತಿಯ ಜೊತೆಗೆ ಮದುವೆ ಆಗಿತ್ತು, ಗಂಡ ಹೆಂಡತಿ ಇಬ್ಬರು ಕೂಡ ಬಹಳ ಸಂತೋಷವಾಗಿ ಜೀವನ ನಡೆಸುತ್ತಿದ್ದರು. ಇಬ್ಬರು ಸಂತೋಷವಾಗಿ ಇದ್ದ ಕೆಲವು ವರ್ಷಗಳಲ್ಲಿ ಇಬ್ಬರು ಮಕ್ಕಳು ಕೂಡ ಜನಿಸಿದರು.

ಸಂಸಾರದಲ್ಲಿ ಎಲ್ಲವೂ ಚೆನ್ನಾಗಿಯೇ ಸಾಗುತ್ತಿದ್ದ ಸಮಯದಲ್ಲಿ ಇದ್ದಕ್ಕಿದ್ದ ಹಾಗೆ ಮೌನಿಕಾ ಪ್ರಾಣ ಕಳೆದುಕೊಳ್ಳುವ ಪ್ರಯತ್ನ ಮಾಡಿದ್ದಾಳೆ. ಈ ವಿಷಯ ಗೊತ್ತಾಗುತ್ತಿದ್ದ ಹಾಗೆ, ಅಕ್ಕಪಕ್ಕದ ಮನೆಯವರು ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ವೈದ್ಯರು ಕೊಟ್ಟ ಚಿಕಿತ್ಸೆ ಫಲ ನೀಡದೆ ಮೌನಿಕಾ ಇನ್ನಿಲ್ಲವಾಗಿದ್ದಾರೆ. ಮಗಳು ಈ ರೀತಿ ಮಾಡಿಕೊಂಡಿರುವುದು ಗೊತ್ತಾಗಿ ಆಕೆಯ ತಂದೆ ತಾಯಿ ಕಣ್ಣೀರು ಹಾಕಿದರು. ಮೌನಿಕಾ ತಲೆಯ ಮೇಲೆ ಒಂದು ಗಾಯ ಇರುವುದನ್ನು ಗಮನಿಸಲಾಗಿತ್ತು.

ಅದನ್ನು ನೋಡಿ ಆಕೆಯ ಗಂಡನ ಮನೆಯವರೇ ಹೀಗೆ ಮಾಡಿ ನಂತರ ಆಕೆಯೇ ಹೀಗೆ ಮಾಡಿಕೊಂಡಿರುವ ಹಾಗೆ ಬಿಂಬಿಸಿದ್ದಾರೆ ಎಂದು ಮೌನಿಕಾ ತಂದೆ ತಾಯಿ ಪೊಲೀಸರ ಬಳಿ ಆರೋಪ ಮಾಡಿದ್ದಾರೆ. ಹಾಗೆಯೇ ಮೌನಿಕಾಗೆ ಕೆಲವು ದಿನಗಳಿಂದ ಅತ್ತೆ ಮನೆಯಲ್ಲಿ ಹೆಚ್ಚು ವರದಕ್ಷಿಣೆ ಬೇಕು ಎಂದು ಕಾಟ ಕೊಡುತ್ತಿದ್ದು, ಆ ಕಾರಣದಿಂದ ಮೌನಿಕಾ ಹೀಗೆ ಮಾಡಿಕೊಂಡಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆಕೆಯ ಗಂಡ ಹಾಗೂ ಅತ್ತೆ ಮನೆಯವರನ್ನು ವಿಚಾರಣೆ ನಡೆಸುತ್ತಿದ್ದಾರೆ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.