ಚರಂಡಿಯಲ್ಲಿ ಮೃತದೇಹ ಸಿಕ್ಕ ಹಿನ್ನಲೆ ಪೊಲೀಸರು ಮೃತದೇಹವನ್ನು ಪತ್ತೆ ಹಚ್ಚಲು ಪ್ರಯತ್ನಿಸಿದ್ದರು. ದಿನೇಶ್ನ ಶವ ಪರೀಕ್ಷೆ ವೇಳೆ ಈತ ನನ್ನ ಗಂಡ ಅಲ್ಲ ಎಂದು ಆತನ ಪತ್ನಿ ಪೊಲೀಸರನ್ನು ನಂಬಿಸಿದ್ದಳು. ಆದರೆ, ದಿನೇಶ್ನ ಸ್ನೇಹಿತನೊಬ್ಬ ಇದು ದಿನೇಶ್ ಮೃತದೇಹ ಎಂದು ಗುರುತಿಸಿದ್ದರಿಂದಾಗಿ, ಪೊಲೀಸರಿಗೆ ದಿನೇಶ್ ಪತ್ನಿಯ ಮೇಲೆ ಅನುಮಾನ ಶುರುವಾಗಿದೆ.
ಪ್ರಿಯಕರನ ಜೊತೆಗೆ ಸೇರಿ ಗಂಡನನ್ನು ಕೊಂದ ಹೆಂಡತಿ ಆತನ ಶವದೊಂದಿಗೆ ಒಂದು ವಾರ ಕಾಲ ಕಳೆದಿರುವ ಘಟನೆ ಹರಿಯಾಣದಲ್ಲಿ ನಡೆದಿದೆ. ಹರಿಯಾಣದ ಫರಿದಾಬಾದ್ ಮೂಲದ ಮಹಿಳೆ ತನ್ನ ಪ್ರಿಯಕರನ ಜೊತೆಗಿನ ಸಂಬಂಧ ತನ್ನ ಗಂಡನಿಗೆ ತಿಳಿಯಿತು ಎಂದು ಆತನನ್ನು ಮುಗಿಸಲು ಮುಹೂರ್ತ ಇಟ್ಟು ಇದೀಗ ಜೈಲು ಪಾಲಾಗಿದ್ದಾಳೆ.
ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಪ್ರಕಾರ, ತನ್ನ ಗಂಡನನ್ನು ಜ.11ರ ತಡರಾತ್ರಿ ಕೊಂದು ಆತನ ಶವವನ್ನು ಮಂಚದೊಳಗೆ ತುಂಬಿ ಒಂದು ವಾರದವರೆಗೆ ಅದೇ ಮಂಚದ ಮೇಲೆ ಮಲಗಿದ ಹೀನ ಕೃತ್ಯ ನಡೆದಿದೆ. ಫರಿದಾಬಾದ್ನಲ್ಲಿನ ಸೈನಿಕ್ ಕಾಲೋನಿ ನಿವಾಸವೊಂದರಲ್ಲಿ ಕ್ರೂರಿ ಹೆಂಡತಿ ತನ್ನ ಗಂಡ ದಿನೇಶ್ ಎಂಬಾತನನ್ನು ಕೊಲೆ ಮಾಡಲು, ನಾಲ್ವರ ಸಹಾಯ ಪಡೆದಿದ್ದಳು
ಗಂಡನನ್ನು ಕೊಲೆಗೈದು ಅದೇ ಮನೆಯಲ್ಲಿ ಮಂಚದೊಳಗೆ ಶವವನ್ನು ಇಟ್ಟು ಹೆಂಡತಿ ವಾಸ ಮಾಡುತ್ತಿದ್ದಳು. ಆದರೆ, ಒಂದು ವಾರದ ಬಳಿಕ ಶವ ಕೊಳೆತು ವಾಸನೆ ಬರಲು ಆರಂಭಿಸಿದೆ. ಮನೆಯಿಂದ ಶವವನ್ನು ತೆರವುಗೊಳಿಸಲು ಕೊಲೆಗೈದ ನಾಲ್ವರು ಸಹಚರರೊಂದಿಗೆ ಫರಿದಾಬಾದ್ನ ಡಬುವಾ ಕಾಲೋನಿಯ ಚರಂಡಿಯಲ್ಲಿ ಎಸೆದಿದ್ದರು.
ಮೃತ ದಿನೇಶ್ ಅವರ ಶವವು ಚರಂಡಿಯಲ್ಲಿ ಜ.28ರಂದು ಪತ್ತೆಯಾಗಿದೆ. ಚರಂಡಿಯಲ್ಲಿ ಮೃತದೇಹ ಸಿಕ್ಕ ಹಿನ್ನಲೆ ಪೊಲೀಸರು ಮೃತದೇಹವನ್ನು ಪತ್ತೆ ಹಚ್ಚಲು ಪ್ರಯತ್ನಿಸಿದ್ದರು. ದಿನೇಶ್ನ ಶವ ಪರೀಕ್ಷೆ ವೇಳೆ ಈತ ನನ್ನ ಗಂಡ ಅಲ್ಲ ಎಂದು ಆತನ ಪತ್ನಿ ಪೊಲೀಸರನ್ನು ನಂಬಿಸಿದ್ದಳು. ಆದರೆ, ದಿನೇಶ್ನ ಸ್ನೇಹಿತನೊಬ್ಬ ಇದು ದಿನೇಶ್ ಮೃತದೇಹ ಎಂದು ಗುರುತಿಸಿದ್ದರಿಂದಾಗಿ, ಪೊಲೀಸರಿಗೆ ದಿನೇಶ್ ಪತ್ನಿಯ ಮೇಲೆ ಅನುಮಾನ ಶುರುವಾಗಿದೆ.
ಅಕ್ರಮ ಸಂಬಂಧವೇ ಕೊಲೆಗೆ ಕಾರಣವಾಯ್ತು..!
ಕೂಡಲೇ ಫರಿದಾಬಾದ್ ಪೊಲೀಸರು ದಿನೇಶ್ ಪತ್ನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ವಿಚಾರಣೆ ನಡೆಸಿದಾಗ ಪ್ರಕರಣವನ್ನು ಒಪ್ಪಿಕೊಂಡು ನಾಲ್ವರು ಸೇರಿ ತನ್ನ ಗಂಡನನ್ನು ಹೊಡೆದು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾಳೆ. ಅಲ್ಲದೇ, ಮೃತ ದಿನೇಶ್ ಪತ್ನಿ ನಿತಿನ್ ಎಂಬಾತನೊಂದಿಗೆ ಸಂಬಂಧ ಹೊಂದಿದ್ದಳು. ಆತನೊಂದಿಗೆ ಸೇರಿ ಕೊಲೆ ಮಾಡಲಾಗಿದೆ ಎಂದು ತನಿಖೆ ವೇಳೆ ಹೇಳಿದ್ದಾಳೆ.
ಟೈಮ್ಸ್ ನೌ ವರದಿ ಪ್ರಕಾರ, ಪತ್ನಿ ನಿತಿನ್ ಜೊತೆಗೆ ಸಂಬಂಧ ಹೊಂದಿರುವುದನ್ನು ಪತಿ ದಿನೇಶ್ ನೋಡಿದ್ದನು. ಇದರಿಂದ ತಮ್ಮ ಅನೈತಿಕ ಸಂಬಂಧಕ್ಕೆ ತೊಂದರೆ ಆಗಲಿದೆ ಎಂದು ದಿನೇಶ್ನನ್ನು ಮುಗಿಸಲು ಸಂಚು ಹಾಕಿಕೊಂಡಿದ್ದರು. ದಿನೇಶ್ ಹತ್ಯೆ ಮಾಡಲು ಪತ್ನಿಯ ಚಿಕ್ಕಪ್ಪನು ಸಾಥ್ ಕೊಟ್ಟಿದ್ದನು. ಇನ್ನು, ದಿನೇಶ್ನನ್ನು ಕೊಲ್ಲಲು ನಿತಿನ್ ತನ್ನ ಸ್ನೇಹಿತನಿಗೆ 41,000 ರೂ.ಗೆ ಸುಪಾರಿ ಕೊಟ್ಟಿದ್ದನು. ಕೊಲೆಗೈದ ನಿತಿನ್ ಸ್ನೇಹಿತ ಕೂಡ ಒಂದು ವಾರದವರೆಗೆ ಮೃತದೇಹದ ಜೊತೆಗೆ ವಾಸ ಮಾಡಿದ್ದನು.
ಮಂಗಳವಾರದಂದು ಫರಿದಾಬಾದ್ ಪೊಲೀಸರು ದಿನೇಶ್ ಪತ್ನಿಯನ್ನು ಕೊಲೆ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಬಂಧಿಸಿದ್ದಾರೆ. ಕೊಲೆಯಲ್ಲಿ ಭಾಗಿಯಾದ ನಾಲ್ವರು ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರು ಬಲೆ ಬೀಸಿದ್ದು, ತನಿಖೆ ಮುಂದುವರೆದಿದೆ.