ಸ್ನೇಹಿತರೆ ಪ್ರತಿದಿನ ನಮ್ಮ ಸುತ್ತ ಮುತ್ತ ಕೆಲವೊಂದು ಚಿತ್ರ ವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತವೆ. ಅದರಲ್ಲೂ ಇತ್ತೀಚೆಗೆ ಗಂಡ ಹೆಂಡತಿ ಸಂಬಂಧದಲ್ಲಿ ತುಂಬಾ ಬಿರುಕು ಮೂಡುವ ಘಟನೆಗಳು ನಡೆಯುತ್ತಲೇ ಇರುವುದನ್ನು ಗಮನಿಸಿಯೇ ಇರುತ್ತೀರಿ. ಅದ್ಯಾವಾಗ ಸ್ಮಾರ್ಟ್ ಫೋನ್ ಹುಟ್ಟಿಕೊಂಡವು ಅಂದಿನಿಂದ ಪ್ರತಿ ಕುಟುಂಬದಲ್ಲಿ ಒಂದಲ್ಲ ಒಂದು ರೀತಿಯ ಸಮಸ್ಯೆ ನೋವು ಎಲ್ಲರನ್ನೂ ಕಾಡುತ್ತಲೇ ಇವೆ.
ಮೊಬೈಲ್ ಗಳಿಂದ ಅದೆಷ್ಟು ಒಳ್ಳೆಯ ಉಪಯೋಗಕ್ಕೆ ಬರುವ ಪ್ರಯೋಜನಗಳಿವೆಯೋ ಅಷ್ಟೇ ಕೆಟ್ಟದ್ದು ಆಗಿದೆ. ಇನ್ನು ವಿಡಿಯೋ ಮಾಡಿ ಈಗ ಒಂದೇ ದಿನಕ್ಕೆ ದೇಶದಾದ್ಯಂತ ಹೆಸರು ಮಾಡುವ ಟ್ರೆಂಡ್ ಹುಟ್ಟಿಕೊಂಡು ಬಿಟ್ಟಿದೆ. ಹಾಗೆ ಸಮಾಜಕ್ಕೆ ಒಳ್ಳೆರಿತಿಯ ಸಂದೇಶ ನೀಡಲು ಶಾರ್ಟ್ ಫಿಲ್ಮ್ ರೀತಿ ವಿಡಿಯೋಗಳು ಈಗ ಎಲ್ಲೆಡೆ ನಾವು ನೋಡುತ್ತೇವೆ. ಇದು ಕೂಡ ಅದೇ ವಿಷಯವನ್ನು ಒಳಗೊಂಡಿದೆ.
ವ್ಯಕ್ತಿಯೊಬ್ಬ ಮನೆಯಲ್ಲಿ ಇಟ್ಟ ಹಣ ಕಾಣೆಯಾದಾಗ ಮನೆ ಕೆಲಸದಾಕೆ ಬಳಿ ಬಂದು ಹಣ ಎಲ್ಲಿ ಹೋಯಿತು ಎಂದು ವಿಚಾರಿಸುತ್ತಾನೆ. ಆಗ ನೋಡಿ ಮನೆ ಕೆಲಸದಾಕೆ ನಾಟಕ ಶುರು ಆಗುತ್ತೆ. ಉಟ್ಟ ಸೀರೆಯನ್ನ ಬಿಚ್ಚಿ ನೋಡಿಕೊಳ್ಳಿ ನಾನು ಯಾವುದೇ ಹಣ ಎತ್ತಿಕೊಂಡಿಲ್ಲ, ನನ್ನ ಮೇಲೆ ಆಪಾದನೆ ಸರಿಯಲ್ಲ ಎಂದು ಮೊಸಳೆ ಕಣ್ಣೀರು ಸುರಿಸಿ ಡ್ರಾಮಾ ಮಾಡುತ್ತಾಳೆ.
ಆಗ ಮನೆ ಯಜಮಾನನಿಗೆ ಇವಳು ಹಣ ತೆಗೆದುಕೊಂಡಿಲ್ಲ ಎಂದು ತಿಳಿಯುವ ಅಷ್ಟರಲ್ಲೇ ಪಕ್ಕದಲ್ಲಿ ನಿಂತಿದ್ದ ಮನೆ ಕೆಲಸದಾಕೆಯ ಮಗನನ್ನು ಒಮ್ಮೆ ಗಮನಿಸುತ್ತಾನೆ. ಆಕೆಯ ಮಗನ ಪ್ಯಾಂಟ್ ಕೆಳಗೆನಿಂದ ಒಂದು ನೋಟು ಕೆಳಗೆ ಬೀಳುತ್ತದೆ. ಇದನ್ನು ಗಮನಿಸಿದ ಮನೆ ಯಜಮಾನ ಆತನನ್ನು ಕರೆದು ಪ್ಯಾಂಟ್ ತೆರೆದು ನೋಡುತ್ತಾನೆ.
ಕಂತೆ ಕಂತೆ ಹಣವನ್ನು ಮಗನ ಪ್ಯಾಂಟಿನಲ್ಲಿ ಕಂಡು ಬೆಚ್ಚಿ ಬೀಳುತ್ತಾನೆ. ಈ ಕಡೆ ಕೆಲಸದಾಕೆ ಅದನ್ನು ನೋಡಿ ಗಾಬರಿಯಾಗುತ್ತದೆ ಸಿಕ್ಕಬಿದ್ದ ನೋವು ಕಾಡಲಾರಂಭಿಸುತ್ತದೆ. ಆಗಲೇ ಆಕೆಯ ತಲೆಗೆ ಕೂಡಲೇ ಮತ್ತೊಂದು ಉಪಾಯ ಹೊಳೆಯುತ್ತದೆ. ಕೂಡಲೇ ಜೋರಾಗಿ ಅಳುತ್ತಾ ನನ್ನನ್ನು ಕ್ಷಮಿಸಿ ನಾನು ತುಂಬಾ ಬಡತನದಿಂದ ಬಳಲುತ್ತಿದ್ದಿನಿ, ನನ್ನ ಚಿಕ್ಕ ಮಗನ ಎದೆಯಲ್ಲಿ ತುತಾಗಿದೆ.
ಅದನ್ನು ಆಪರೇಶನ್ ಮಾಡಿಸಲು ತುಂಬಾ ಹಣ ಬೇಕು ಎಂದು ಸುಳ್ಳು ಹೇಳುತ್ತಾಳೆ. ಇದನ್ನು ಮನೆ ಯಜಮಾನ ನಿಜವೆಂದು ನಂಬಿ ಆ ಹಣವನ್ನೆಲ್ಲ ಆಕೆಗೆ ಕೊಟ್ಟು ಬಿಡುತ್ತಾನೆ. ಯಜಮಾನನಿಗೆ ಮೋಸ ಮಾಡಿದ ಕುಷಿಯಲ್ಲಿದ್ದ ಮನೆ ಕೆಲಸದಾಕೆಗೆ ಒಂದು ಮೊಬೈಲ್ ಕರೆ ಬರುತ್ತದೆ. ಅದನ್ನು ಸ್ವೀಕರಿಸಿದ ಆಕೆಗೆ ಆಕಡೆಯಿಂದ ಕೆಟ್ಟ ಸುದ್ದಿಯೊಂದು ಕೇಳಿಬರುತ್ತದೆ. ಹೌದು ಆಕೆಯ ಚಿಕ್ಕ ಮಗಳಿಗೆ ತಲೆಗೆ ಪೆಟ್ಟು ಬಿದ್ದಿದೆ ಎಂದು ತಿಳಿಯುತ್ತದೆ. ಇನ್ನೊಬ್ಬರಿಗೆ ಮೋಸ ಮಾಡಿದ ಕರ್ಮಕ್ಕೆ ಹೀಗಾಯಿತು ಎಂದು ನೊಂದು ಮನೆ ಕಡೆ ಓಡುತ್ತಾಳೆ.