ಸಿದ್ದರಾಮಯ್ಯನವರಿಗೆ ಸ್ವಕ್ಷೇತ್ರದಲ್ಲಿಯೇ ಮೋದಿ… ಮೋದಿ… ಘೋಷಣೆಯೊಂದಿಗೆ ಸ್ವಾಗತ!

ಸಾಮಾನ್ಯವಾಗಿ ಯಾವುದೇ ಒಂದು ಕ್ಷೇತ್ರಕ್ಕೆ ರಾಜಕೀಯ ನಾಯಕರು ಜನಸಮೂಹವನ್ನು ಭೇಟಿಯಾದಾಗ ಅವರ ಹೆಸರನ್ನು ಘೋಷಣೆ ಕೂಗಿ ಅವರಿಗೆ ಜಯಘೋಷಗಳೊಂದಿಗೆ ಸ್ವಾಗತ ಕೋರುವುದು ಮಾಮೂಲು, ಆದರೆ ನಿನ್ನೆ ಬಾದಾಮಿಯಲ್ಲಿ ನಡೆದ ರಥೋತ್ಸವಕ್ಕೆ ಆಗಮಿಸಿದ್ದ ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಹಾಲಿ ಬಾದಾಮಿ ಶಾಸಕರು ಹಾಗೂ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರೂ ಆಗಿರುವ ಮಾನ್ಯ ಸಿದ್ದರಾಮಯ್ಯನವರಿಗೆ ಮೋದಿ ಮೋದಿ ಎಂಬ ಘೋಷವಾಕ್ಯದೊಂದಿಗೆ ಸ್ವಾಗತ ಸಿಕ್ಕಿದ್ದು ಸ್ವಕ್ಷೇತ್ರದಲ್ಲಿಯೇ ಭಾರಿ ಮುಖಭಂಗವಾದಂತಾಗಿದೆ!

ಸಾಮಾನ್ಯವಾಗಿ ಈ ಹಿಂದೆ ಚಲನಚಿತ್ರದ ನಾಯಕ ನಟ ನಟಿಯರಿಗೆ ಅಭಿಮಾನಿಗಳು ಇರುತ್ತಿದ್ದರು, ಆದರೆ ನರೇಂದ್ರ ಮೋದಿಯವರು ಪ್ರಧಾನಿಯಾದ ಮೇಲೆ ಚಿತ್ರ ನಟರಿಗಿಂತಲೂ ಹೆಚ್ಚಿನ ಅಭಿಮಾನಿಗಳು ಭವ್ಯ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಇದ್ದು ನರೇಂದ್ರ ಮೋದಿಯವರನ್ನು ಹೆಚ್ಚಾಗಿ ವಿರೋಧಿಸುವ ಯಾವುದೇ ಪಕ್ಷದ ನಾಯಕನಾದರೂ ಸರಿಯೇ ಅವರನ್ನು ಮೋದಿಯವರ ಅಭಿಮಾನಿಗಳು ಹೀಗೆಯೇ ಸ್ವಾಗತಿಸುತ್ತಿದ್ದಾರೆ

ಹೌದು, ಇಂದು ನಡೆದ ಬಾದಾಮಿ ಬನಶಂಕರಿ ಜಾತ್ರೆಯ ರಥೋತ್ಸವಕ್ಕೆ ಬಂದಿದ್ದ ಸಿದ್ದರಾಮಯ್ಯನವರನ್ನು ಜಾತ್ರೆಯಲ್ಲಿ ನೆರೆದಿದ್ದ ಜನರು ಮೋದಿ ಮೋದಿ ಎಂಬ ಘೋಷಣೆ ಕೂಗುವ ಮೂಲಕ ಸ್ವಾಗತ ಕೊರಿದರು. 2018 ರಲ್ಲಿ ತಾವು ಗೆದ್ದು ಶಾಸಕರಾಗಿ ವಿಧಾನಸಭೆ ಪ್ರವೇಶಿಸಿರುವ ಕ್ಷೇತ್ರದಲ್ಲಿಯೇ ಸಿದ್ದರಾಮಯ್ಯ ಇಂತಹ ಮುಜುಗರಕ್ಕೀಡಾಗಿರುವುದು ವಿಶೇಷ.

ಇಂಥ ಘಟನೆ ಹಲವು ಸಲ ಘಟಿಸಿದ್ದು ಬರುವ ವರ್ಷ ನಡೆಯುವ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೆ ಸಿದ್ದರಾಮಯ್ಯನವರಿಗೆ ಸೋಲಾಗಬಹುದಾ ಎಂಬ ಚರ್ಚೆಗಳು ಆರಂಭವಾಗಿವೆ! ಇದಕ್ಕೆಲ್ಲ ಅವರ ಹಿಂದೂ ವಿರೋಧಿ ನಿಲುವುಗಳೇ ಕಾರಣ. ತೀರ ಶಕ್ತಿಪೀಠ ಬನಶಂಕರಿ ದೇವಸ್ಥಾನದ ಕುಂಕುಮ ಹಚ್ಚಿಕೊಳ್ಳಲು ಕೂಡ ನಿರಾಕರಿಸಿದ್ದು ಅಲ್ಲಿನ ಜನರನ್ನು ಕೆರಳಿಸಿದೆ.

ಹಣೆಗೆ ಭಂಡಾರ ಹಚ್ಚಿಸಿಕೊಳ್ಳದ ಸಿದ್ದರಾಮಯ್ಯನವರು ಜಾತ್ರೆಗೆ ಬಂದಿದ್ದೆ ಅಚ್ಚರಿ! : ಮೂಲತಃ ಕುರುಬ ಸಾಮಾಜದ ಹಾಲುಮತದವರಾಗಿರುವ ಸಿದ್ದರಾಮಯ್ಯನವರು ಕಳೆದ ವರ್ಷ ಹಾಲು ಮತ ಸಮುದಾಯಕ್ಕೆ ಸಂಬಂಧಿಸಿದ ದೇವಸ್ಥಾನವೊಂದಕ್ಕೆ ಭೇಟಿ ಕೊಟ್ಟಾಗ ಅಲ್ಲಿನ ಗೊರವಯ್ಯನವರು ಬಂದು ಭಂಡಾರವನ್ನು ಹಣೆಗೆ ಹಚ್ಚಲು ಬಂದಾಗ ತಿರಸ್ಕರಿಸಿ ಹೋಗಿದ್ದರು. ಹೀಗಿರುವಾಗ ಜಾತ್ರೆಗೆ ಅವರು ಬಂದಿದ್ದೇ ಅಚ್ಚರಿ.

ಜನಸಾಮಾನ್ಯರು ಚುನಾವಣೆ ಹತ್ತಿರ ಬರುತ್ತಿದ್ದ ಹಾಗೆ ಹಿಂದೂಗಳು ಹಾಗೂ ಹಿಂದೂಗಳ ದೇವರು ನೆನಪಾಗುತ್ತಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ದೇವರ ಮೇಲೆ – ಅಥವಾ ಧರ್ಮದ ಮೇಲೆ ನಂಬಿಕೆ ಇರಲಾರದವರು ಅದ್ಯಾಬ ಕಾರಣಕ್ಕೆ ಬನಶಂಕರಿ ತಾಯಿಯ ಜಾತ್ರೆಗೆ ಬರುತ್ತೀರಿ ಎಂದು ಪ್ರಶ್ನಿಸುತ್ತಿದ್ದಾರೆ. ಆ ಕ್ಷೇತ್ರದ ಶಾಸಕರಾದ್ದರಿಂದ ಶಿಷ್ಟಾಚಾರದ ಪ್ರಕಾರ ಆಮಂತ್ರಣ ನೀಡುತ್ತಾರೆ, ನೀವು ಅದನ್ನು ತಿರಸ್ಕರಿಸಬೇಕಿತ್ತು ಎನ್ನುವುದು ಹಲವರ ವಾದ.

ಕೇಸರಿ ಪೇಟ ಬೇಡವೆಂದು ಬಿಸಾಡಿದ್ದ ಸಿದ್ದರಾಮಯ್ಯ! : ಈ ಹಿಂದೆ ಯಾವುದೋ ಒಂದು ಸಭೆಯಲ್ಲಿ ಸಿದ್ದರಾಮಯ್ಯನವರಿಗೆ ಸ್ವತಃ ಅವರದ್ದೇ ಅಭಿಮಾನಿಗಳು ಕೇಸರಿ ಬಣ್ಣದ ಪೇಟವೊಂದನ್ನು ತೋಡಿಸಲು ಬಂದಾಗ ಅದನ್ನು ಕಿತ್ತೆಸೆದು ಕಿರುಚಾಡಿ ರಂಪ ರಾಮಾಯಣ ಮಾಡಿದ್ದು ಉಂಟು, ಅಲ್ಲದೇ ಹಣೆಗೆ ಕುಂಕುಮ ಹಚ್ಚಿದವರನ್ನು ಕಂಡರೆ ನನಗೆ ಭಯವಾಗುತ್ತದೆ ಎಂಬ ಹೇಳಿಕೆಯನ್ನು ಸಹ ಕೊಟ್ಟು ಭಾರೀ ಸುದ್ದಿಯಲ್ಲಿದ್ದರು.

ಇಂಥ ಘಟನೆಗಳೆಲ್ಲ ಜನಸಾಮಾನ್ಯರ ಅದರಲ್ಲೂ ಬನಶಂಕರಿ ತಾಯಿಯನ್ನು ಆರಾಧಿಸುವ ಬಾದಾಮಿ ಜನರ ಮನಸ್ಸಲ್ಲಿ ಅಚ್ಚಳಿಯದೇ ಕುಳಿತಿವೆ. ಇದಕ್ಕೆಲ್ಲ ಅವರು ಬರುವ ಚುನಾವಣೆಯಲ್ಲಿ ಉತ್ತರ ನೀಡುತ್ತಾರೆ ಎಂಬುದು ತುಂಬಾ ಜನರ ಅನಿಸಿಕೆ. ಅಲ್ಲಿಯವರು ಏನನ್ನಾದರೂ ಸಹಿಸಿಕೊಂಡಾರು, ಆದರೆ ಶಕ್ತಿಮಾತೆ ಬನಶಂಕರಿ ಮುಂದೆ ದರ್ಪ ತೋರಿದೆ ಸಹಿಸಿಕೊಳ್ಳಲಾರರು, ಅಲ್ಲಿನ ಪೂಜಾರಿಗಳು ಕುಂಕುಮ ಹಚ್ಚಲು ಬಂದಾಗ ಇವರು ಹಿಂದೆ ಸರಿದು ಬೇಡ ಅಂದ ವಿಡಿಯೊ ವೈರಲ್ ಆಗಿತ್ತು.

ಮೀನು ತಿಂದು ಧರ್ಮಸ್ಥಳ ಮಂಜುನಾಥನ ಸನ್ನಿಧಿಗೆ ಬಂದಿದ್ದ ಸಿದ್ದರಾಮಯ್ಯ! : ಕೆಲವು ವರ್ಷಗಳ ಹಿಂದೆ ಕರ್ನಾಟಕದ ಪ್ರಸಿದ್ದ ಹಾಗೂ ಶಕ್ತಿಶಾಲಿ ದೇವಸ್ಥಾನಗಳಲ್ಲಿ ಒಂದಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಪುಣ್ಯ ಕ್ಷೇತ್ರಕ್ಕೆ ಹಿಂದೂಗಳು ಅತ್ಯಂತ ಭಕ್ತಿ ಭಾವದಿಂದ ಹೋಗಿ ಬರುತ್ತಾರೆ, ಆದರೆ ಅಂತಹ ಅದ್ಭುತ ಸ್ಥಳಕ್ಕೆ ತಾನು ಮೀನು ತಿಂದು ಹೋಗಿದ್ದಾಗಿ ಹೇಳಿಕೊಂಡಿದ್ದ ಸಿದ್ದರಾಮಯ್ಯನವರು ಹಿಂದೂಗಳ ಭಾವನೆಗಳನ್ನು ಕೆರಳಿಸಿದ್ದರು.

ಇಷ್ಟೆಲ್ಲ ಹಿಂದೂಗಳ ಜಾತ್ರೆ ದಿಬ್ಬಣಗಳನ್ನು ವಿರೋಧಿಸುತ್ತ ಬಂದಿರುವ ಸಿದ್ದರಾಮಯ್ಯನವರು ಉತ್ತರ ಕರ್ನಾಟಕದ ಶಕ್ತಿ ದೇವತೆಗಳಲ್ಲೊಂದಾದ ಬಾದಾಮಿ ಬನಶಂಕರಿ ಜಾತ್ರೆಗೆ ಬಂದಿದ್ದು ಎಲ್ಲರಲ್ಲಿಯೂ ಅಚ್ಚರಿ ಮೂಡಿಸಿದ್ದು, ಅದಕ್ಕಾಗಿಯೇ ಅಲ್ಲಿನ ಜನರು ಸಹ ಇವರನ್ನು ಕಂಡು ಮೋದಿಯವರ ಹೆಸರು ಘೋಷಣೆ ಕೂಗಿರಬಹುದು. ಯಾರೇ ಆಗಿರಲಿ ತಮಗೆ ಇಷ್ಟವಿರುವ ಧರ್ಮ ಆರಾಧನೆ ಮಾಡಬಹುದು, ಆದರೆ ಇನ್ನೊಂದು ಧರ್ಮದ ಆಚರಣೆಗಳನ್ನು ನಿಂದಿಸಬಾರದು.

ವಿಜಯವಾಣಿ ತನ್ನ ಯೂಟ್ಯೂಬ್ ಚಾನೆಲ್ ನಲ್ಲಿ ಹಂಚಿಕೊಂಡಿರುವ ಈ ವಿಡಿಯೋ ಸೇರಿದಂತೆ ಇನ್ನೂ ಎರಡು ವಿಡಿಯೊ ತುಣುಕು ಇಲ್ಲಿದ್ದು ಎಲ್ಲ ಕಡೆ ಅವರಿಗೆ ಮೋದಿ ಮೋದಿ ಅಂತಲೇ ಸ್ವಾಗತ ಸಿಕ್ಕಿದೆ. ಸಿದ್ದರಾಮಯ್ಯ ಜನದಟ್ಟಣೆ ಇರುವ ಕಡೆ ತನ್ನ ಬೆಂಬಲಿಗರು ಹಾಗೂ ಪೊಲೀಸ್ ಕಾವಲಿನಲ್ಲಿ ಬರುತ್ತಿದ್ದಾಗ ಜನರು ಮೋದಿ ಮೋದಿ ಎಂಬ ಘೋಷಣೆ ಕೂಗುತ್ತಿದ್ದರು.

ಹಲವು ಕಡೆ ಯಾವುದೇ ಪ್ರತಿಕ್ರಿಯೆ ನೀಡದೆ ಸಿದ್ದರಾಮಯ್ಯನವರು ಅಲ್ಲಿಂದ ಹೊರಟು ಹೋಗುತ್ತಾರೆ, ಮತ್ತೆ ಕೆಲವು ಕಡೆ ಮೋದಿ ಅಂದವರಿಗೇ ಕೈ ಬೀಸುತ್ತಾರೆ! ಆದರೆ ಅವರ ಬೆಂಬಲಿಗರು ಮೋದಿ ಘೋಷಣೆ ಕೂಗಿದ ಜನರನ್ನು ಗುರಿಯಾಗಿಸಿಕೊಂಡು ಅವಾಚ್ಯ ಶಬ್ದ ಬಳಸಿ ನಿಂದನೆ ಮಾಡುತ್ತಿರುವುದು ಸಹ ಈ ವಿಡಿಯೋದಲ್ಲಿ ರೆಕಾರ್ಡ್ ಆಗಿದೆ.

ಮೂರು ವಿಡಿಯೊ ಕೆಳಗಿವೆ ನೋಡಿ…

You might also like

Comments are closed.